For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಗ್ಯಾಡ್ಜೆಟ್ಸ್ ಕೊಡಿಸುವಾಗ ಎಚ್ಚರ!

|

ಚಿಕ್ಕ ಮಕ್ಕಳು ಆಟದ ಸಾಮಾನುಗಳಿಗಿಂತ, ಗ್ಯಾಡ್ಜೆಟ್ ಬೇಕು ಎಂದು ಹೇಳುತ್ತವೆ. ಅಪ್ಪ-ಅಮ್ಮನ ಬಳಿ ಇರುವ ಸ್ಮಾರ್ಟ್ ಫೋನ್ ಬಳಕೆ ಆಪರೇಟ್ ಮಾಡುವುದು ಹೇಗೆ ಎಂದು ಹೆಚ್ಚಿನ ಮಕ್ಕಳಿಗೆ ಗೊತ್ತಿರುತ್ತದೆ. ಇತ್ತೀಚಿಗೆ ನಮ್ಮ ಸಹೋದ್ಯೋಗಿ ಅವರ ಮಗನನ್ನು ಕರೆದುಕೊಂಡು ಬಂದಿದ್ದರು. ಮಗುವಿಗೆ 3 ವರ್ಷ. ಆದರೆ ಆ ಮಗು ಅಮ್ಮನ ಕೈಯಲ್ಲಿರುವ ಸ್ಮಾರ್ಟ್ ಫೋನ್ ತೆಗೆದುಕೊಂಡು ಅದರಲ್ಲಿ ಗ್ಯಾಲರಿಯನ್ನು ಓಪನ್ ಮಾಡಿ ಅವನ ಫೋಟೊವನ್ನು ತೋರಿಸಿದ, ಫೋಟೊ ಕೂಡ ಕ್ಲಿಕ್ ಮಾಡುತ್ತಿದ್ದ.

ಆ ಮಗು ಮಾತ್ರವಲ್ಲ ಹೆಚ್ಚಿನ ಮಕ್ಕಳಿಗೆ ಫೋನ್ ಆಪರೇಟ್, ಲ್ಪಾಪ್ ಟಾಪ್ ಬಳಸುವ ವಿಧಾನ ಗೊತ್ತಿರುತ್ತದೆ. ಕೆಲ ಮಕ್ಕಳಿಗೆ ಮಕ್ಕಳು ಪ್ರೈಮರಿಯಲ್ಲಿರುವಾಗಲೇ ಲ್ಯಾಪ್ ಟಾಪ್, ಮೊಬೈಲ್ ಹಾಗೂ ಇಂಟರ್ ನೆಟ್ ಕನೆಕ್ಷೆನ್ ಕೊಟ್ಟು ಬಿಡುತ್ತಾರೆ. ನಮ್ಮ ಮಗುವಿಗೆ ಗ್ಯಾಡ್ಜೆಟ್ಸ್ ಬಳಕೆ ಮಾಡಲು ಬರುತ್ತದೆ ಎಂದು ಹೇಳಿಕೊಳ್ಳಲು ಪೋಷಕರಿಗೆ ಹೆಮ್ಮೆಯ ವಿಷಯವಾಗಿರಬಹುದು, ಆದರೆ ಈ ರೀತಿ ಮಾಡುವುದು ಮಕ್ಕಳ ಸರ್ವತೋಮಕ ಬೆಳವಣಿಗೆಗೆ ಒಳ್ಳೆಯದಲ್ಲ! ಹಾಗಾದರೆ ಅವರಿಗೆ ಕೊಡಿಸುವ ಗ್ಯಾಡ್ಜೆಟ್ ಹೇಗಿರಬೇಕು?

ಮಕ್ಕಳಿಗೆ ಗ್ಯಾಡ್ಜೆಟ್ಸ್ ಕೊಡಿಸುವುದಾದರೆ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು:

Kids & Gadgets: How Much Is Too Much?

ಫೋನ್ ನಲ್ಲಿ ಕಳೆಯುವ ಸಮಯ ಕಮ್ಮಿ ಮಾಡಿ
ಕೆಲ ಪೋಷಕರು ಮಕ್ಕಳ ಜೊತೆ ಆಗಾಗ ಮಾತನಾಡಿ ಅದರ ಯೋಗಕ್ಷೇಮ ವಿಚಾರಿಸಲು ಮೊಬೈಲ್ ಕೊಟ್ಟಿರುತ್ತಾರೆ. ಮಕ್ಕಳಿಗೆ ಫೋನ್ ಕೊಡಿಸಿದರೆ ಅವರು ಅದರಲ್ಲಿ ಎಷ್ಟು ಸಮಯ ಕಳೆಯುತ್ತಿದ್ದಾರೆ ಎಂದು ಗಮನಿಸಬೇಕು. ಓದುವ ಸಮಯದಲ್ಲಿ ಮೊಬೈಲ್ ಬಳಸದಿರಲು ಅದನ್ನು ತೆಗೆದು ನಿಮ್ಮ ಬಳಿ ಇಟ್ಟಿರಿ. ಹೀಗೆ ತೆಗೆದಿಡುವಾಗ ಓದಿ ಆದ ಮೇಲೆ ಕೊಡುತ್ತೇನೆ ಎಂದು ಹೇಳಿ.

ಕ್ಯಾಮೆರಾ ಸೆಲ್ ಅಗತ್ಯವಿಲ್ಲ
ಮಕ್ಕಳಿಗೆ ಕ್ಯಾಮೆರಾ ಸೆಲ್ ಕೊಡಿಸಲೇಬಾರದು. ನಿಮ್ಮ ಮಗುವಿಗೆ ಪೋಟೊಗ್ರಫಿ ಇಷ್ಟವಿದ್ದರೆ ಅದಕ್ಕೆ ಕ್ಯಾಮೆರಾ ಕೊಡಿಸಿ, ಆದರೆ ಕ್ಯಾಮೆರಾ ಸೆಲ್ ಮಾತ್ರ ಕೊಡಿಸಬೇಡಿ.

ಚೈಲ್ಡ್ ಲಾಕ್ ಇರುವ ಟ್ಯಾಬ್ಲೆಟ್
ಮಕ್ಕಳಿಗೆ ಟ್ಯಾಬ್ಲೆಟ್ ಕೊಡಿಸುವುದಾದರೆ ಚೈಲ್ಡ್ ಲಾಕ್ ಇರುವ ಲ್ಯಾಬ್ಲೆಟ್ ಕೊಡಿಸಿ. ಇದರಿಂದ ಅವರು ಅದನ್ನು ಕೆಟ್ಟ ರೀತಿಯಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ.

ಟ್ರ್ಯಾಕ್ ಇಂಟರ್ ನೆಟ್
ಕೆಲವೊಮ್ಮೆ ಮಾಹಿತಿ ಕಲೆ ಹಾಕಲು ಮಕ್ಕಳಿಗೆ ಇಂಟರ್ ನೆಟ್ ಕೂಡ ಅವಶ್ಯಕ. ಆದರೆ ಅವರ ಇಂಟರ್ ಬಳಕೆಯನ್ನು ಟ್ರ್ಯಾಕ್ ಮಾಡಿ, ಇಂಟರ್ ನೆಟ್ ಅನ್ನು ಯಾವ ರೀತಿಯಲ್ಲಿ ಬಳಸುತ್ತಿದ್ದಾರೆ ಎಂದು ತಿಳಿಯಲು ಮರೆಯಬೇಡಿ.

ಪ್ಲೇ ಸ್ಟೇಷನ್
ಮಕ್ಕಳಿಗೆ ಪ್ಲೇ ಸ್ಟೇಷನ್ ಕೊಡಿಸುವುದರಲ್ಲಿ ತಪ್ಪಿಲ್ಲ. ಆದರೆ ಅದನ್ನು ಅವರು ಓದುವ ಸಮಯದಲ್ಲಿ ಬಳಸದಂತೆ ಗಮನಹರಿಸಿ.

English summary

Kids & Gadgets: How Much Is Too Much? | Tips For Parents | ಮಕ್ಕಳಿಗೆ ಗ್ಯಾಡ್ಜೆಟ್ಸ್ ಕೊಡಿಸುವಾಗ ಎಚ್ಚರ! | ಪೋಷಕರಿಗೆ ಕೆಲ ಸಲಹೆಗಳು

Attitude towards kids using gadgets is constantly changing. This leaves the parents in a precarious position. They do not know how much of gadgets is too much for the kids. So there is no solid ground on which they can base their parenting techniques.
X
Desktop Bottom Promotion