For Quick Alerts
ALLOW NOTIFICATIONS  
For Daily Alerts

ಮಗು ನಿಮ್ಮ ಮಾತು ಕೇಳುವಂತೆ ಮಾಡೋದು ಹೇಗೆ?

|

ಮಕ್ಕಳು ತಮ್ಮ ಮಾತು ಕೇಳುವುದಿಲ್ಲ ಅನ್ನೋ ತಲೆನೋವು ಹಲವು ಮಂದಿ ಅಪ್ಪ ಅಮ್ಮಂದಿರಿಗೆ ಇದ್ದೇಇದೆ. ಇಂದಿನ ಮಕ್ಕಳು ಬಹಳ ಹಠಮಾರಿಗಳು. ಅಪ್ಪಅಮ್ಮಂದಿರಿಗೆ ಅವರು ತಮ್ಮ ಮಾತು ಕೇಳುವಂತೆ ಮಾಡುವುದು ಹೇಗೆ ಎನ್ನುವುದು ತಿಳಿಯುತ್ತಿಲ್ಲ. ನೀವು ಬಹಳ ಕಟ್ಟುನಿಟ್ಟು ಮಾಡಿದರೂ ಮಗುವಿಗೆ ಸಮಸ್ಯೆಯಾಗುತ್ತದೆ. ಅದು ಬಹಳ ಹಠಮಾರಿಯಾಗಿಬಿಡುವ ಸಾಧ್ಯತೆಯಿರುತ್ತದೆ.

ಈವತ್ತು ಬೋಲ್ಡ್ ಸ್ಕೈ ಮಕ್ಕಳನ್ನು ಹೇಗೆ ಅಪ್ಪಅಮ್ಮನ ಮಾತು ಕೇಳೋ ಹಾಗೆ ಮಾಡೋದು ಅನ್ನೋದಕ್ಕೆ ಕೆಲವು ಟಿಪ್ಸ್ ಗಳನ್ನು ಹೊತ್ತು ತಂದಿದೆ. ಅವರನ್ನು ಹೆಚ್ಚು ಮುದ್ದು ಮಾಡಬೇಕಿಲ್ಲ ಅಥವ ಅವರನ್ನು ಹೆದರಿಸಬೇಕಾಗಿಲ್ಲ. ನೀವು ಮಾಡಬೇಕಾದದ್ದು ಮಗುವಿಗೆ ನಿಮ್ಮ ಮಾತನ್ನು ಅರ್ಥಮಾಡಿಸಲು ನೀವು ಅವರಂತೆ ಮಗುವಾಗಿ ಮಾತಾಡಿ.

ಹಠಮಾರಿ ಮಗುವಿನೊಂದಿಗೆ ವ್ಯವಹರಿಸಲು ಯಾವಾಗಲೂ ಬಹಳ ತಾಳ್ಮೆ ಬೇಕಾಗುತ್ತದೆ. ನಿಮ್ಮ ಮಗು ನಿಮ್ಮ ಮಾತು ಕೇಳುವಂತೆ ಮಾಡಲು ಇಲ್ಲಿವೆ ಕೆಲವು ಟಿಪ್ಸ್. ಓದಿ ನೋಡಿ:

ಕಿರುಚಬೇಡಿ

ಕಿರುಚಬೇಡಿ

ನಿಮ್ಮ ಮಗು ಮಾತು ಕೇಳುವಂತೆ ಮಾಡಲು ಅವರ ಮೇಲೆ ಕಿರುಚಾಡುವ ಅಗತ್ಯವಿಲ್ಲ. ನೀವು ಕಿರುಚುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ಅವರನ್ನು ಮತ್ತಷ್ಟು ಹಠಮಾರಿಯಾಗಿಸುತ್ತದೆ. ನಿಮ್ಮ ಸಿಟ್ಟನ್ನು ಬಿಟ್ಟು ಶಾಂತರಾಗಿ ಮತ್ತು ಅವರ ಮನಮುಟ್ಟುವಂತೆ ಆತ್ಮೀಯವಾಗಿ ತಿಳಿಹೇಳಿ.

ಮನಸಿನಲ್ಲಿರುವುದನ್ನು ವ್ಯಕ್ತಪಡಿಸಿ

ಮನಸಿನಲ್ಲಿರುವುದನ್ನು ವ್ಯಕ್ತಪಡಿಸಿ

ನಿಮ್ಮ ಮನಸಿನಲ್ಲಿರುವುದನ್ನು ವ್ಯಕ್ತಪಡಿಸುವುದರಿಂದ ಮಗು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತದೆ. ನೀವು ವ್ಯಕ್ತಪಡಿಸದೆ ಹೋದರೆ ಅವರು ನಿಮ್ಮ ಮಾತು ಕೇಳುವುದಿಲ್ಲ ಮತ್ತು ತಮಗೆ ಇಷ್ಟವಾದದ್ದನ್ನೇ ಮಾಡುತ್ತಾರೆ.

ಹೋಲಿಕೆ ಬೇಡ

ಹೋಲಿಕೆ ಬೇಡ

ಯಾವತ್ತೂ ಕೂಡ ಮಕ್ಕಳನ್ನು ಅವರ ಸ್ನೇಹಿತರೊಂದಿಗೆ ಹೋಲಿಸಬೇಡಿ. ಪ್ರತಿ ಮಗುವೂ ಭಿನ್ನ ಎಂಬುದನ್ನು ಅರ್ಥಮಾಡಿಕೊಳ್ಳಿ. ಪ್ರತಿ ಮಗುವಿಗೂ ಅದರದೇ ಆದ ಸಾಮರ್ಥ್ಯ, ಪ್ರತಿಭೆಗಳಿರುತ್ತವೆ. ತಂದೆತಾಯಿಗಳು ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು.

ಕೆಲಸ ಮಾಡುವಂತೆ ನೀಡುವ ಆದೇಶ ಸರಳವಾಗಿರಲಿ

ಕೆಲಸ ಮಾಡುವಂತೆ ನೀಡುವ ಆದೇಶ ಸರಳವಾಗಿರಲಿ

ನೀವು ಸರಳವಾಗಿ ಹೇಳಿದರೆ ಮಕ್ಕಳಿಗೆ ಅದು ಸ್ಪಷ್ಟವಾಗಿ ಅರ್ಥವಾಗುತ್ತದೆ. ನಿಮ್ಮ ಮಗು ಹಠಮಾರಿಯಾಗಿದ್ದರೆ ನೀವು ಉದ್ದುದ್ದ ಭಾಷಣ ಬಿಗಿದಷ್ಟು ನಿಮ್ಮ ಮಾತಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತದೆ. ಆದ್ದರಿಂದ ಚಿಕ್ಕದಾಗಿ ಆದರೆ ಪರಿಣಾಮಕಾರಿಯಾಗಿ ಆದೇಶ ನೀಡಿ.

ಅವರಂತೆ ನೀವಾಗಿ

ಅವರಂತೆ ನೀವಾಗಿ

ನೀವು ಅವರ ಯೋಚನೆಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅವರಂತಾಗಬೇಕು. ನಿಮ್ಮ ಆಲೋಚನೆಗಳನ್ನು ಅವರ ಮಟ್ಟಕ್ಕೆ ಇಳಿಸಿಕೊಳ್ಳುವುದರಿಂದ ಅವರನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ.

ಇಲ್ಲ ಎನ್ನಬೇಡಿ

ಇಲ್ಲ ಎನ್ನಬೇಡಿ

ನಿಮ್ಮ ಮಗು ನಿಮ್ಮ ಮಾತು ಕೇಳುವಂತೆ ಮಾಡುವ ಅತ್ಯುತ್ತಮ ವಿಧಾನವೆಂದರೆ ಇಲ್ಲ ಎಂದು ಹೇಳುವುದನ್ನು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಹಠಮಾರಿ ಮಗು ನೀವು ಅದನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅರ್ಥಮಾಡಿಕೊಳ್ಳುತ್ತದೆ. ನೀವು ಅದು ಕೇಳಿದ್ದನ್ನು ಕೊಡುತ್ತೀರಿ ಎಂದು ಅರ್ಥಮಾಡಿಕೊಳ್ಳುತ್ತದೆ.

ಸಂವಹನದ ದಾರಿಗಳು

ಸಂವಹನದ ದಾರಿಗಳು

ಸರಳವಾಗಿ ಸಂವಹನ ಮಾಡುವುದು ಬಹಳ ಮುಖ್ಯ. ಮಗುವಿಗೆ ವಿಷಯವನ್ನು ಅರ್ಥಮಾಡಿಸಬೇಕೆಂದರೆ ಉದ್ದುದ್ದ ಮಾತುಗಳು ನಿಷ್ಪ್ರಯೋಜಕ. ಬದಲಿಗೆ ಅವರ ಮನಮುಟ್ಟುವಂತೆ ನೀವು ಹೇಳಬೇಕೆಂದಿರುವುದನ್ನು ಹೇಳಿ.

ಸತ್ಯ ಸಂಗತಿಗಳನ್ನು ಅವರಿಗೆ ತಿಳಿಸಿ

ಸತ್ಯ ಸಂಗತಿಗಳನ್ನು ಅವರಿಗೆ ತಿಳಿಸಿ

ಮಕ್ಕಳಿಗೆ ಪ್ರತಿಯೊಂದರ ಬಗ್ಗೆಯೂ ಹೇಗೆ? ಯಾಕೆ? ಏನು ಎಂಬ ಕುತೂಹಲವಿರುತ್ತದೆ. ಅವರ ಪ್ರಶ್ನೆಗಳಿಗೆ ಯಾವಾಗಲೂ ಸತ್ಯಧಾರಿತವಾದ ಮಾಹಿತಿ ನೀಡಿ.

ಹೊಗಳಿಕೆ

ಹೊಗಳಿಕೆ

ಮಗು ಏನಾದರೂ ಒಳ್ಳೆಯದನ್ನು ಮಾಡಿದಾಗ ಹೊಗಳುವುದನ್ನು ಮರೆಯಬೇಡಿ. ಹೊಗಳಿಕೆ ಅವರಿಗೆ ನಿಮ್ಮ ಪ್ರೀತಿಯನ್ನು ತೋರಿಸುವ ಒಂದು ವಿಧಾನ. ಇದರಿಂದ ಅವರು ನಿಮ್ಮ ಮಾತು ಕೇಳುವಂತಾಗುತ್ತದೆ.

ಅವರ ಮಾತಿಗೆ ಕಿವಿಕೊಡಿ

ಅವರ ಮಾತಿಗೆ ಕಿವಿಕೊಡಿ

ಮಕ್ಕಳು ಮಾತಾಡುವಾಗ ಅವರ ಮಾತಿಗೆ ಗಮನಕೊಡಿ. ಅವರು ನಿಮ್ಮಂತೆ ಮನುಷ್ಯರು ಮತ್ತು ಅವರಿಗೂ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ನೀವು ಅವರ ಮಾತನ್ನು ಕೇಳಿಸಿಕೊಂಡರೆ ಅವರು ನಿಮ್ಮ ಮಾತನ್ನು ಕೇಳುವರು.

English summary

How To Make Your Child Listen To You: Parenting Tips

There are tons of parents who often find it difficult to deal with a child who doesn't listen. Today, children have become very stubborn in all their ways and parents have no idea how to deal with this mess.
Story first published: Tuesday, December 17, 2013, 12:52 [IST]
X
Desktop Bottom Promotion