For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹೇಗೆ?

By ಲೇಖಕ
|

ಈಗಿನ ಪ್ರಪಂಚದ ಸ್ಪರ್ಧಾತ್ಮಕ ಮತ್ತು ಅಪಾಯಕಾರಿ ಮನೋಭಾವವು ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಹಾಗು ಒತ್ತಡವನ್ನುಂಟು ಮಾಡುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳು ಇದೇ ಸ್ಥಾನ ಪಡೆಯಬೇಕೆಂದು ಮೊದಲೆ ನಿರ್ಧರಿಸುವ ಪೋಷಕರು , ಮಕ್ಕಳ ಯಶಸ್ಸಿಗೆ ಆತ್ಮ ವಿಶ್ವಾಸದ ಅವಶ್ಯಕತೆಯಿದೆ ಎಂದು ಮನಗಾಣಬೇಕು.

ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಆತಂಕ ರಹಿತ ಜೀವನದ ಕುರಿತಾದ ಜಾಗೃತಿ ಮೂಡಿಸುವುದರಿಂದಾಗಿ ಭವಿಷ್ಯದಲ್ಲಿ ಅವರಿಗೆ ಎದುರಾಗುವ ಆತಂಕ ಮತ್ತು ತಮ್ಮ ವೈಯುಕ್ತಿಕ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಸುಲಭವಾಗುತ್ತದೆ. ಪೋಷಕರು ತಮ್ಮ ಮಕ್ಕಳ ಭಾವನಾತ್ಮಕ ಬೆಳವಣಿಗೆಗೆ ಅನುಕೂಲವಾಗುವಂತೆ ದೈನಂದಿನ ಘಟನೆಗಳ ಉದಾಹರಣೆಗಳಿಂದ ಆತ್ಮವಿಶ್ವಾಸವನ್ನು ಬೆಳೆಸಬಹುದು. ಮಕ್ಕಳು ಎಳೆಯ ಪ್ರಾಯದಲ್ಲಿರುವಾಗ ಆತ್ಮವಿಶ್ವಾಸವನ್ನು ಬೆಳೆಸುವುದರಿಂದಾಗಿ ಮುಂದೆ ಅವರು ಆರೋಗ್ಯಕರವಾದ ಜೀವನ ನಡೆಸಲು ಹಾಗು ಸಮಾಜಕ್ಕೆ ಇನ್ನಷ್ಟು ಪ್ರಯೋಜನಶೀಲರಾಗುವಂತಾಗಲು ನೆರವಾಗುತ್ತದೆ.

How to Make Your Child Confident

ಆತ್ಮವಿಶ್ವಾಸವನ್ನು ಬೆಳೆಸುವ ಬಗೆ:

1. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ದೈಹಿಕ ಪರಿಭಾಷೆ ಮತ್ತು ಸಮಾಜಕ್ಕೆ ನೀಡಬೇಕಾದ ಕೊಡುಗೆ ಕುರಿತಾಗಿ ಹೇಗೆ ಆತ್ಮವಿಶ್ವಾಸ ಪ್ರಮುಖ ಪಾತ್ರವಹಿಸುತ್ತದೆ ಎಂಬ ಬಗ್ಗೆ ಒಂದು ಪ್ರಾತ್ಯಕ್ಷಿಕೆಯನ್ನು ನೀಡಿ. ಸ್ವತಃ ನೀವು ನಿಮ್ಮ ಮಗುವಿನ ಮುಂದೆ ಆತ್ಮವಿಶ್ವಾಸದ ಕೊರತೆಯಿಂದ ತಲೆತಗ್ಗಿಸುವ ಸಂದರ್ಭಗಳನ್ನು ತಡೆ ಹಿಡಿಯಿರಿ. ನೀವು ವಿವಾದಗಳಿಗೆ ಮತ್ತು ಸಮಸ್ಯೆಗಳಿಗೆ ಸಂಕೋಚದಿಂದ ಪಲಾಯನ ಮಾಡುವ ಬದಲಿಗೆ ಆತ್ಮವಿಶ್ವಾಸದಿಂದ ಬಗೆಹರಿಸಿ ನಿಮ್ಮ ಮಗುವಿಗೆ ಒಂದು ಮಾದರಿಯನ್ನು ಒದಗಿಸಿ.

2. ನಿಮ್ಮ ಮಗುವಿನ ಪ್ರತಿಭೆಯನ್ನು ಅಥವಾ ಸಾಮರ್ಥ್ಯವನ್ನು ಹೊಗಳುವ ಬದಲಿಗೆ ಆತನ ವಿವಿಧ ಧನಾತ್ಮಕ ನಡುವಳಿಕೆಗಳ ಬಗ್ಗೆ ನಿಮ್ಮ ತೃಪ್ತಿಯನ್ನು ವ್ಯಕ್ತಪಡಿಸಿ. " ನೀನು ತುಂಬಾ ಬುದ್ದಿವಂತ" ," ನೀನು ಶಾಲೆಯಲ್ಲಿ ಪಡುತ್ತಿರುವ ಪರಿಶ್ರಮಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತಿದೆ" ಎಂದು ಹೇಳುವ ಬದಲಿಗೆ, ಆ ಹೆಮ್ಮೆಯನ್ನು ನಿಮ್ಮ ಕ್ರಿಯೆ ಮತ್ತು ಆಯ್ಕೆಗಳಲ್ಲಿ ತೋರಿಸಿ. ಅಲ್ಲದೆ ಆತನ ಪ್ರಯತ್ನಗಳಿಗೆ ಪ್ರೋತ್ಸಾಹಿಸಿ ಆತ್ಮವಿಶ್ವಾಸವನ್ನು ತುಂಬಿ.

3. ನಿಮ್ಮ ಮಗುವಿನ ಪ್ರಯತ್ನಗಳಿಗೆ ಹೆಮ್ಮೆ ಸೂಚಿಸಲು ದೊರೆಯುವ ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಳ್ಳಿ. ನಿಮ್ಮ ಮಗುವಿನ ಶಾಲೆಯ ನಿಯೋಜಿತ ಕಾರ್ಯ ಅಥವಾ ಚಿತ್ರಕಲೆಯ ಕಾರ್ಯಗಳಲ್ಲಿ ಉತ್ತಮವಾದುದನ್ನು ನಿಮ್ಮ ಮನೆಯ ಅಲಂಕಾರಕ್ಕಾಗಿ ಬಳಸಿ. ಆ ಮೂಲಕ ನಿಮ್ಮ ಮಗುವಿನ ಕೆಲಸವನ್ನು ಗೌರವಿಸಿ. ಆಕೆಯ ಸಾಧನೆಗಳನ್ನು ಆಕೆಯನ್ನು ಹೊಗಳುವಂತಹ ನಿಮ್ಮ ಸ್ನೇಹಿತರ ಮತ್ತು ನೆಂಟರಿಷ್ಟರ ಮುಂದೆ ಹಂಚಿಕೊಳ್ಳಿ. ಆಕೆಯ ಪಾಂಡಿತ್ಯವನ್ನು ಒಂದು ದಿನಚರಿಯಲ್ಲಿ ಅಥವಾ ಒಂದು ಪುಸ್ತಕದಲ್ಲಿ ನಮೂದಿಸಿ. ಮುಂದೊಮ್ಮೆ ಆಕೆಯೊಂದಿಗೆ ಇದನ್ನು ಹಂಚಿಕೊಳ್ಳಬಹುದು.
ಚಿಂತೆಗಳನ್ನು ಶಾಂತಗೊಳಿಸುವ ಬಗೆ

4. ನಿಮ್ಮ ಮಗುವಿನ ವಿಚಾರಗಳಿಗೆ ಮುಕ್ತ ಮನಸ್ಸಿನಿಂದ ಕಾಳಜಿ ವ್ಯಕ್ತಪಡಿಸಿ. ಆತ ಸುಖಾಸುಮ್ಮನೆ ಮೂರ್ಖನಂತೆ ಅವಾಸ್ತವಿಕವಾದ ಚಿಂತೆಗಳಲ್ಲಿ ಮುಳುಗಿ ಹೋಗದಂತೆ ತಡೆಯಿರಿ. ಆದರೆ ಆತನ ಚಿಂತೆಗಳಿಗೆ ಸಕಾರಣವಿದೆಯೆ ಪರಿಶೀಲಿಸಿ ಮತ್ತು ಅದಕ್ಕೆ ಅವನಿಗೆ ಚಿಂತೆ ಮಾಡುವ ಸ್ವಾತಂತ್ರ್ಯವನ್ನು ನೀಡಿ. ಆ ಚಿಂತೆಗಳನ್ನು ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಅವನನ್ನು ಪ್ರೊತ್ಸಾಹಿಸಿ. ಹಾಗೆ ಮಾಡುವ ಮೂಲಕ ಅವನ ಜೀವನದಲ್ಲಿ ಮುಂದೆ ಎದುರಾಗುವ ಚಿಂತೆಗಳನ್ನು ಕೇವಲ ಕೇಳುವ ಮೂಲಕ ಅವನಿಗೆ ನಿರಾಳತೆಯನ್ನು ಒದಗಿಸಬಹುದು.

5. ನಿಮ್ಮ ಮಗುವಿಗೆ ಸಂಬಂಧಿಸಿದ ದರ್ಜೆ, ಸ್ನೇಹಿತರು ಮತ್ತು ತನ್ನ ದೇಹದ ಕುರಿತು ಆಕೆ ಹೊಂದಿರುವ ಅಭಿಪ್ರಾಯಗಳಂತಹ ಗುರುತರವಾದ ವಿಚಾರಗಳಿಗೆ ಪ್ರಾಯೋಗಿಕವಾದ ಪರಿಹಾರವನ್ನು ಸೂಚಿಸಿ. ನಿಮ್ಮ ಮಗುವಿನ ಜೊತೆಗೆ ಆಕೆಯ ಚಿಂತೆ ಪರಿಹಾರ ಮಾಡಲು ಒಂದು ಮಾತುಕತೆ ನಡೆಸಿ ತೀರ್ಮಾನಕ್ಕೆ ಬನ್ನಿ. ಒಂದು ವೇಳೆ ಆಕೆ ಜಾಗತಿಕ ಸಮಸ್ಯೆಗಳಾದ ಯುದ್ಧ ಅಥವಾ ಕ್ಷಾಮಗಳಂತಹ ಸಮಸ್ಯೆಗಳ ಕುರಿತಾಗಿ ಚಿಂತಿಸುತ್ತಿದ್ದರೆ, ಆ ಸಮಸ್ಯೆಯನ್ನು ಅಧ್ಯಯನ ಮಾಡಿ ಆಕೆಗೆ ಅದರ ಕುರಿತಾದ ಒಳನೋಟವನ್ನು ಒದಗಿಸಿ. ಆ ಮೂಲಕ ಆಕೆಗೆ ಅದು ಹೇಗೆ ವೈಯುಕ್ತಿಕವಾಗಿ ಅನ್ವಯಿಸುತ್ತದೆ ಎಂದು ತಿಳಿಸಿ.

6. ನಿಮ್ಮ ಮಗುವಿಗೆ ನೀವೊಬ್ಬ ಪ್ರಭಾವಶಾಲಿ ನಾಯಕನಾಗಿ ನಿಮ್ಮ ಪಾತ್ರವನ್ನು ಪೂರೈಸಿ. ನಿಮ್ಮ ಮಗು ಚಿಂತೆಗಳ ಕಾರಣದಿಂದಾಗಿ ಉದ್ವೇಗ ಅಥವಾ ಆವೇಶಕ್ಕೆ ಒಳಗಾಗುವ ಅವಕಾಶಗಳನ್ನು ತಡೆಯಿರಿ. ಸ್ವತಃ ನೀವೆ ನಿಮ್ಮ ಮಗುವಿನ ಮುಂದೆ ಭಯ ಮತ್ತು ಸಂಶಯಗಳನ್ನು ವ್ಯಕ್ತಪಡಿಸುವಾಗ ಜಾಗರೂಕತೆವಹಿಸಿ ಅವುಗಳನ್ನು ತಡೆಯಿರಿ. ಧೈರ್ಯಯುತವಾದ ಒಂದು ಚಿತ್ರಣವನ್ನು ಅವನ ಮುಂದೆ ನೀಡಿ, ಸಕಾರಾತ್ಮಕವಾದ ಉದಾಹರಣೆಗಳನ್ನು ನೀಡಿ ಅವನನ್ನು ಚಿಂತೆಗಳಿಂದ ಮುಕ್ತ ಮಾಡಿ.

English summary

How to Make Your Child Confident | ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹೇಗೆ ?

With the competitive and sometimes dangerous state of the world, children tend to lack confidence and feel anxious. As parents push children toward their academic and extra-curricular goals, they must remember to give them the confidence needed for true success.
X
Desktop Bottom Promotion