For Quick Alerts
ALLOW NOTIFICATIONS  
For Daily Alerts

ಮಕ್ಕಳ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಬೇಕೆ?

|

ನಿಮ್ಮ ಮಗು ಮೊದಲಿಗಿಂತಲೂ ಈಗ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದೆ ಹಾಗೂ ಕೆಲವೊಮ್ಮೆ ಹೇಳಿದ್ದನ್ನೇಲ್ಲಾ ಮರೆಯುತ್ತಿದೆ ಎಂಬಿತ್ಯಾದಿ ಅಂಶಗಳು ನಿಮ್ಮಗಮನಕ್ಕೆ ಬಂದಿವೆಯೇ? ಹಾಗಾದರೆ ನಿಮ್ಮ ಮಗು ಸ್ಮರಣಶಕ್ತಿ ಸಮಸ್ಯೆಯನ್ನು ಎದುರಿಸುತ್ತಿದೆ ಎಂದೇ ಅರ್ಥ!

ಮಕ್ಕಳು ತುಂಬಾ ಮಾರ್ಕ್ಸ್ ತೆಗೆಯಬೇಕಾದರೆ ಅವರನ್ನು ಸದಾ ಓದಿ ಅನ್ನುವ ಬದಲು ಅವರ ಜ್ಞಾಪಕ ಶಕ್ತಿ ಹೆಚ್ಚಲು ಏನು ಅಗತ್ಯವಿದೆಯೋ ಅದನ್ನು ಕೊಡಿ, ಬನ್ನಿ ಅವರ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಶಕ್ತಿ ಹೆಚ್ಚಿಸಲು ಏನು ಮಾಡಬೇಕೆಂಬುವುದನ್ನು ನೋಡೋಣ:

ಪ್ರಮುಖ ಅಂಶ

ಪ್ರಮುಖ ಅಂಶ

ಮಿದುಳಿಗೆ ಚೆನ್ನಾಗಿ ಕೆಲಸ ಮಾಡಲು ಸಾಕಷ್ಟು ಶಕ್ತಿಯ ಅಗತ್ಯವಿದೆ ಮತ್ತು ಒಳ್ಳೆಯ ಆಹಾರ ಸೇವನೆ ಮತ್ತು ನಿಯಮಿತವಾಗಿ ದೈಹಿಕ ಚಟುವಟಿಕೆಗಳ ಮೂಲಕ ಉತ್ತಮ ಪೋಷಣೆಯನ್ನು ಒದಗಿಸಬಹುದು. ನಿಮ್ಮ ಮಕ್ಕಳು, ಪಠ್ಯೇತರ ಚಟುವಟಿಕೆಗಳು, ಪರೀಕ್ಷೆಗಳ ಸಿದ್ಧತೆಗಳಂಥ ಶ್ರಮದಾಯಕ ಮಾನಸಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ, ಅವರಿಗೆ ಹೆಚ್ಚುವರಿ ಶಕ್ತಿಯ ಅಗತ್ಯವಿರುತ್ತದೆ .

ಆಹಾರ

ಆಹಾರ

ಆರೋಗ್ಯಕರ ಆಹಾರದ ನಿಯಮಿತ ಸೇವನೆಯ ಜೊತೆಗೆ , ನೀವು ಸತು, ಮ್ಯಾಂಗನೀಸ್, ಒಮೆಗಾ 3 ಕೊಬ್ಬಿನ ಆಮ್ಲಗಳು ಮತ್ತು ವಿಟಮಿನ್ ಇ ಯಂತಹ ಜೀವಸತ್ವಗಳನ್ನು ಹೊಂದಿರುವ ಆಹಾರಗಳನ್ನು ಒದಗಿಸಬೇಕಾಗುತ್ತದೆ.

ಬೇಕಾದ ಪೋಷಕಾಂಶಗಳು

ಬೇಕಾದ ಪೋಷಕಾಂಶಗಳು

ಈ ಪೋಷಕಾಂಶಗಳ ಉತ್ತಮ ಮೂಲಗಳಾದ ಗೋಧಿಯ ಉತ್ಪನ್ನಗಳನ್ನು, ಕಂದು ಅಕ್ಕಿ, ಓಟ್ಸ್, ಸೋಯಾಬೀನ್ ಗಳು ಮತ್ತು ಕಾಳುಗಳು,/ ಧಾನ್ಯಗಳು, ಮೊಟ್ಟೆಗಳು, ಹಾಲು, ಮೊಸರು, ಚೀಸ್ ( ಲಘು ಚೀಸ್ ನೀಡಿದರೆ ಸುರಕ್ಷಿತ ), ಬೀಜಗಳು, ಸಂಸ್ಕರಿಸದ ಸಸ್ಯದ ಎಣ್ಣೆಗಳು ಮಕ್ಕಳ ಆರೋಗ್ಯಕ್ಕೆ ಅಗತ್ಯ. ಅಗಸೆ ಬೀಜಗಳು ಮತ್ತು ಮೀನು ಒಮೆಗಾ 3 ಮೇದಾಮ್ಲಗಳ ಉತ್ತಮ ಮೂಲಗಳಾಗಿವೆ.

ವ್ಯಾಯಾಮ

ವ್ಯಾಯಾಮ

ಈ ಪೋಷಕಾಂಶಗಳಷ್ಟೇ ಅಲ್ಲದೆ, ಮಕ್ಕಳಿಗೆ ಸಾಕಷ್ಟು ನಿದ್ರೆ ಮತ್ತು ವ್ಯಾಯಾಮದ ಅಗತ್ಯವಿದೆ. ವ್ಯಾಯಾಮ ಮಿದುಳಿಗೆ ತಾಜಾ ಆಮ್ಲಜನಕ ಉತ್ತೇಜಿಸಲು ಮತ್ತು ನಿದ್ರೆ ಮಿದುಳಿನ ವಿಶ್ರಾಂತಿ ನೀಡಲು ಸಹಾಯ ಮಾಡುತ್ತವೆ.

ಚೆಸ್

ಚೆಸ್

ನಿಮ್ಮ ಮಗುವಿನ ಮೆದುಳಿಗೆ ಕೆಲಸ ನೀಡುವಂತಹ ಚೆಸ್, ಪದಬಂಧ, ಮತ್ತು ಸ್ಮರಣ ಆಟಗಳನ್ನು ಹೆಚ್ಚೆಚ್ಚು ಆಡುವಂತೆ ಪ್ರೇರೇಪಿಸಿ. ಇದರಿಂದ ಮಕ್ಕಳ ಮಿದುಳು ಸದಾ ಕಾರ್ಯಚಟುವಟಿಕೆಯಿಂದಿರಲು ಸಹಾಯವಾಗುತ್ತದೆ.

English summary

How Can You Increase Your Child’s Memory

Have you seen your child losing concentration quite often, forgetting trivial things very easily? Then your child’s memory must be suffering.
X
Desktop Bottom Promotion