For Quick Alerts
ALLOW NOTIFICATIONS  
For Daily Alerts

3 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೊಡಬಾರದ ಆಹಾರಗಳು

|

ತಮ್ಮ ಮಗುವಿಗೆ ಒಂದು ವರ್ಷ ತುಂಬುತ್ತಿದ್ದಂತೆ ಹೆತ್ತವರು ತಾವು ತಿನ್ನುತ್ತಿರುವ ಆಹಾರದಲ್ಲಿ ಸ್ವಲ್ಪ- ಸ್ವಲ್ಪ ಆ ಮಗುವಿಗೂ ಕೊಡಲು ಪ್ರಾರಂಭಿಸುತ್ತಾರೆ. ಮಗು ತಾವು ಕೊಟ್ಟ ಆಹಾರವನ್ನು ಜಗಿಯುವುದನ್ನು ನೋಡಿ ತುಂಬಾ ಖುಷಿ ಪಡುತ್ತಾರೆ. ಒಂದು ವರ್ಷದ ಬಳಿಕ ಮಗುವಿಗೆ ಕೆಲವೊಂದು ಆಹಾರಗಳನ್ನು ಕೊಡಬಹುದು, ಕೆಲವೊಂದು ಆಹಾರವನ್ನು ಕೊಡಬಾರದು.

ಏಕೆಂದರೆ ಆ ಆಹಾರಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಆ ಮಕ್ಕಳಿಗೆ ಇರುವುದಿಲ್ಲ, ಮತ್ತೆ ಕೆಲವು ಆಹಾರಗಳು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು. ಇಲ್ಲಿ ನಾವು 1-3 ವಯಸ್ಸಿನ ಮಕ್ಕಳಿಗೆ ಕೊಡಬಾರದ ಆಹಾರಗಳ ಪಟ್ಟಿ ನೀಡಿದ್ಧೇವೆ.

 ಚಿಕ್ಕ ಗಾತ್ರದ ಹಾಲಿನ ಉತ್ಪನ್ನಗಳು

ಚಿಕ್ಕ ಗಾತ್ರದ ಹಾಲಿನ ಉತ್ಪನ್ನಗಳು

ಚಿಕ್ಕ ಗಾತ್ರದ ಗಟ್ಟಿಯಾದ ಆಹಾರಗಳನ್ನು ಕೊಡಬೇಡಿ . ಏಕೆಂದರೆ ಮಕ್ಕಳಿಗೆ ಜಗಿಯಲು ಬರುವುದಿಲ್ಲ, ಅವು ಅದನ್ನು ನುಂಗಿ ಬಿಡುತ್ತವೆ. ಮಿಠಾಯಿ, ಔಷಧಿ ಈ ರೀತಿಯ ವಸ್ತುಗಳನ್ನು ಮಕ್ಕಳಿಂದ ದೂರವಿಡಬೇಕು.

ಕೊಬ್ಬಿನಂಶವಿಲ್ಲದ ಹಾಲು

ಕೊಬ್ಬಿನಂಶವಿಲ್ಲದ ಹಾಲು

ಒಂದು ವೇಳೆ ಹಾಲು ಕೊಡುವುದಾದರೆ ತಾಜಾ ಕೊಬ್ಬಿನಂಶವಿರುವ ಹಾಲನ್ನು ಕೊಡಬೇಕು. ಮಗುವಿಗೆ ಹಸುವಿನ ಹಾಲು ಅಲರ್ಜಿ ಉಂಟಾದರೆ ಮತ್ತೆ ಅದನ್ನು ಕೊಡಬೇಡಿ.

ಕರಗದ ಆಹಾರಗಳು

ಕರಗದ ಆಹಾರಗಳು

ಕೆಲವು ಹಣ್ಣು ಹಾಗೂ ತರಕಾರಿಗಳನ್ನು ಬಾಯಲ್ಲಿ ಇಟ್ಟರೆ ಕರಗುವುದಿಲ್ಲ, ಜಗಿಯಬೇಕು. ಮಗು ಜಗಿಯುವುದಿಲ್ಲ, ಆದ್ದರಿಂದ ಹಸಿ ಕ್ಯಾರೆಟ್ ನಂತಹ ವಸ್ತುಗಳನ್ನು ಕೈಯಲ್ಲಿ ಕೊಡಬೇಡಿ.

ಅಂಟುವ ಆಹಾರಗಳು

ಅಂಟುವ ಆಹಾರಗಳು

ಚ್ಯೂಯಿಂಗ್ ಗಮ್ ಅಂತಹ ವಸ್ತುಗಳನ್ನು ಮಗುವಿಗೆ ಕೊಡಬೇಡಿ, ಅದಕ್ಕೆ ಸಿಗುವ ರೀತಿಯಲ್ಲಿ ಮನೆಯೊಳಗೆ ಹಾಕಬೇಡಿ.

ಜೇನು ಹಾಗೂ ಕಾರ್ನ್ ಸಿರಪ್

ಜೇನು ಹಾಗೂ ಕಾರ್ನ್ ಸಿರಪ್

ಇವೆರಡನ್ನು 2 ವರ್ಷದ ಕೆಳಗಿನ ಮಕ್ಕಳಿಗೆ ಕೊಡುವುದು ಒಳ್ಳೆಯದಲ್ಲ. ಇದನ್ನು ಕೊಡುವುದರಿಂದ ಮ್ಕಕಳ ಪ್ರಾಣಕ್ಕೆ ಅಪಾಯ ಉಂಟಾಗಬಹುದು ಜೋಕೆ.

ನಟ್ಸ್

ನಟ್ಸ್

2 ವರ್ಷದ ಕೆಳಗಿನ ಮಗುವಿಗೆ ನಟ್ಸ್ ಕೊಡಬಾರದು. ಏಕೆಂದರೆ ಅವುಗಳಿಗೆ ನಟ್ಸ್ ನಲ್ಲಿರುವ ಅಧಿಕ ಪ್ರೊಟೀನ್ ಗಳನ್ನು ಕರಗಿಸುವ ಸಾಮರ್ಥ್ಯವಿರುವುದಿಲ್ಲ.

English summary

Foods to Avoid for Toddlers | Tips For Parents | ಮಕ್ಕಳಿಗೆ ಕೊಡಬಾರದ ಆಹಾರಗಳು | ಪೋಷಕರಿಗೆ ಕೆಲ ಸಲಹೆಗಳು

There are certain foods that should be held off until later. Even when eating foods that are considered safe, small children should always be supervised by an adult and should eat sitting down.
Story first published: Tuesday, March 5, 2013, 16:54 [IST]
X
Desktop Bottom Promotion