For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವಿನ ಭಾವನೆಯನ್ನು ಗೌರವಿಸುತ್ತೀರಾ?

|

ಮಕ್ಕಳು ಅವರ ಭಾವನೆಗಳನ್ನು ವ್ಯಕ್ತ ಪಡಿಸುವ ವಿಷಯದಲ್ಲಿ ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರು ಕೆಲವೊಮ್ಮೆ ನಾವು ಹೇಳಿದ ಮಾತನ್ನು ಕೇಳುತ್ತಾರೆ, ಮತ್ತೆ ಕೆಲವೊಮ್ಮೆ ಹಠ ಹಿಡಿಯುವುದು, ನಮ್ಮ ಮಾತನ್ನು ಕೇಳದೆ ಇರುವುದು ಮಾಡುತ್ತವೆ.

ಆಗ ಕೋಪ ಬರುವುದು ಸಹಜ, ಆದರೂ ನಿಮ್ಮ ಕೋಪವನ್ನು ಬದಿಗೊತ್ತಿ. ಏಕೆಂದರೆ ಕೋಪದಿಂದ ನೀವು ಅವರನ್ನು ಬೈಯ್ಯುವುದು, ಹೊಡೆಯುವುದು ಮಾಡಿದರೆ ಅದು ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

Encourage Child To Express Emotions

ಮಕ್ಕಳ ವ್ಯಕ್ತಿತ್ವ ಬೆಳೆಯಲು ಅವರ ಭಾವನೆಗಳನ್ನು ವ್ಯಕ್ತ ಪಡಿಸಲು ಅವಕಾಶ ನಿಡಬೇಕು. ಕೆಲವು ಪೋಷಕರನ್ನು ನೋಡಿದ್ದೇನೆ, ನಾವು ಹೇಳಿದನ್ನು ಮಕ್ಕಳು ಕೇಳಬೇಕು, ಎದುರು ಒಂದೂ ಮಾತನಾಡಬಾರದು, ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರೂ ಅವರಿಗೆ ಮಕ್ಕಳು ನಮ್ಮ ಎದುರು ಮಾತನಾಡುತ್ತಿದ್ದಾರೆ ಎಂದು ಕೋಪ ಬರುತ್ತದೆ. ಈ ರೀತಿ ಕೋಪಕೊಳ್ಳುವುದರಿಂದ ಆ ಮಗು ಯಾವುದೇ ವಿಷಯವನ್ನು ತಂದೆ-ತಾಯಿ ಜೊತೆ ಹೇಳಲು ಇಷ್ಟ ಪಡುವುದಿಲ್ಲ, ಬೆಳೆದು ದೊಡ್ಡವನಾದ/ಳಾದ ಮೇಲೂ ಪೋಷಕರ ಜೊತೆ ತನ್ನ ಭಾವನೆಯನ್ನು ಹಂಚಿಕೊಳ್ಳುವುದಿಲ್ಲ.

ಆದ್ದರಿಂದ ಮಗು ಚಿಕ್ಕದಿರುವಾಗಲೇ ಅದರ ಭಾವನೆಗಳನ್ನು ವ್ಯಕ್ತಪಡಿಸುವಂತೆ ಪ್ರೋತ್ಸಾಹಿಸಬೇಕು. ನಿಮ್ಮ ಮಾತಿಗೆ ಅವರು ಗೌರವ ಕೊಡಬೇಕೆಂದು ಬಯಸಿದರೆ ಸಾಲದು, ಅವರ ಭಾವನೆಗೂ ಗೌರವ ನೀಡಬೇಕು. ನಿಮಗೆ ಎಷ್ಟೇ ಕೆಲಸವಿರಲಿ, ಮಕ್ಕಳ ಶಾಲೆ ವಿಷಯ, ತನ್ನ ಸ್ನೇಹಿತರ ವಿಷಯ ಹೇಳಲು ಬರುವಾಗ ಸ್ವಲ್ಪ ಸಮಧಾನದಿಂದ ಕೇಳಿ. ಅವರ ಭಾವನೆಗೆ ಸ್ಪಂದಿಸಿ. ಈ ರೀತಿ ಮಾಡಿದರೆ ಮಕ್ಕಳು ನಿಮ್ಮಿಂದ ಯಾವುದೇ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸುವುದಿಲ್ಲ.

ನಿಮ್ಮ ಮಗು ಬರೀ ಸಂತೋಷ ತಂದ ವಿಷಯವನ್ನು ಮಾತ್ರವಲ್ಲ, ತನಗೆ ದುಃಖ ತಂದ ವಿಷಯದ ಬಗ್ಗೆಯೂ ಹೇಳಬಹುದು. ಆಗ ಮಗುವಿಗೆ ಸಮಧಾನ ಹೇಳಬೇಕು, ಆ ವಿಷಯಗಳು ನಿಮಗೆ ಸಿಲ್ಲಿ ಅನಿಸಿದರೂ ಸಮಧಾನ ಮಾಡಲು ಮರೆಯಬಾರದು. ಅವರ ಹಿಂಜರಿಕೆಯನ್ನು ಧೈರ್ಯ ತುಂಬುತ್ತಾ ಹೋಗಕಲಾಡಿಸಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಇಷ್ಟು ಪ್ರಯತ್ನ ನೀವು ಮಾಡಿದರೆ ಸಾಕು, ನಿಮ್ಮ ಮಗು ಒಬ್ಬ ಆದರ್ಶ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

English summary

Encourage Child To Express Emotions | Tips For parents | ಮಗುವಿನ ಭಾವನೆಯನ್ನೂ ಗೌರವಿಸಿ | ಪೋಷಕರಿಗೆ ಕೆಲ ಸಲಹೆಗಳು

We can't constantly keep them under our protective wing. We can only help them understand and cope with their feelings involving unpleasant experiences. By using reflective listening, we can encourage our children to express and share feelings with us.
X
Desktop Bottom Promotion