For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಅಧಿಕ ಉಪ್ಪಿನ ಆಹಾರ ಕೊಡಬೇಡಿ

|

ಮಕ್ಕಳ ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರಿಕೆವಹಿಸಬೇಕು. ಅದರಲ್ಲೂ ಮಕ್ಕಳ ದೇಹಕ್ಕೆ ಸೇರುವ ಉಪ್ಪಿನಂಶದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಮಕ್ಕಳ ಆರೋಗ್ಯಕ್ಕೆ ಉಪ್ಪಿನಂಶ ಅಗತ್ಯ. ಹಾಗಂತ ತುಂಬಾ ಉಪ್ಪನ್ನು ತಿಂದರೆ ಅನಾರೋಗ್ಯ ಉಂಟಾಗುತ್ತದೆ. ಕಡಿಮೆಯಾದರೂ ಸೋಡಿಯಂ ಕೊರತೆಯಿಂದ ತಲೆನೋವು, ತಲೆಸುತ್ತು, ದೇಹದ ತೂಕ ಹೆಚ್ಚಾಗುವುದು, ಸ್ನಾಯುಗಳು ಸಡಿಲವಾಗುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ.

ಅದೇ ಸೋಡಿಯಂ ಕೊರತೆ ಉಂಟಾದರೆ ಸುಸ್ತು, ತುಂಬಾ ತೆಳ್ಳಗಾಗುವುದು ಈ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ. ಆದ್ದರಿಂದ ಮಕ್ಕಳಿಗೆ ಉಪ್ಪಿನ ಬದಲು ಸೋಡಿಯಂ ಇರುವ ಆಹಾರಗಳನ್ನು ಕೊಡಿ, ಉಪ್ಪನ್ನು ಮಿತವಾಗಿ ನೀಡಿ.

ಉಪ್ಪು ಮಕ್ಕಳಿಗೆ ಎಷ್ಟು ಕೊಡಬೇಕು? ಹೆಚ್ಚುಕೊಟ್ಟರೆ ಏನಾಗುತ್ತದೆ, ಕಡಿಮೆ ಕೊಟ್ಟರೆ ಏನಾಗುತ್ತದೆ ಎಂಬ ಮಾಹಿತಿ ಈ ಕೆಳಗೆ ನೀಡಲಾಗಿದೆ ನೋಡಿ:

Can Excess Salt Harm Your Kids?

ಸಮೀಕ್ಷೆ ಪ್ರಕಾರ ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಒಂದು ಗ್ರಾಂ ಉಪ್ಪು ಮಾತ್ರ ದಿನದಲ್ಲಿ ಕೊಡಬೇಕು. 1-3 ವರ್ಷದ ಮಕ್ಕಳಿಗೆ 3 ಗ್ರಾಂ ಉಪ್ಪ 2 ಗ್ರಾಂ, 4-6 ವರ್ಷದ ಮಕ್ಕಳಿಗೆ 3 ಗ್ರಾಂ, 7-10 ವರ್ಷದ ಮಕ್ಕಳಿಗೆ 5 ಗ್ರಾಂ ಉಪ್ಪು ನೀಡಬೇಕು. ಮಾಂಸದಲ್ಲಿ ಸೋಡಿಯಂ ಇರುವುದರಿಂದ ನಿಮ್ಮ ಮಕ್ಕಳು ಅದನ್ನು ತಿನ್ನುವುದಾದರೆ ಉಪ್ಪನ್ನು ಸ್ವಲ್ಪ ಕಮ್ಮಿ ಹಾಕಿ.

ಉಪ್ಪು ಹೆಚ್ಚು ತಿಂದರೆ ಕಂಡು ಬರುವ ಸಮಸ್ಯೆಗಳು
ಮಕ್ಕಳ ಕಿಡ್ನಿಯ ಆರೋಗ್ಯ ಹಾಳಾಗುತ್ತದೆ. ಕಿಡ್ನಿಯಲ್ಲಿ ಕಲ್ಲು, ಅಸ್ತಮಾದಂತಹ ಕಾಯಿಲೆಗಳೂ ಬರಬಹುದು.

ಏನು ಮಾಡಬೇಕು?
ಮಕ್ಕಳಿಗೆ ಅಗ್ಯತದ ಸೋಡಿಯಂ ದೊರೆಯಲು ಸೋಡಿಯಂ ಇರುವ ಆಹಾರಗಳನ್ನು ನೀಡಿ. ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಉಪ್ಪು ಕೊಡಬೇಡಿ. ಚಿಕ್ಕ ಮಗುವಿಗೆ ಬೇಕಾದ ಪೋಷಕಾಂಶಗಳು ಎದೆ ಹಾಲಿನಲ್ಲಿ ದೊರೆಯುತ್ತದೆ. ದೊಡ್ಡ ಮಕ್ಕಳಿಗೆ ಉಪ್ಪು ಕಡಿಮೆ ಪ್ರಮಾಣದಲ್ಲಿ ಹಾಕಿ ಕೊಡಿ. ಕೆಲವರಿಗೆ ಹಣ್ಣುಗಳಿಗೆ ಉಪ್ಪು ಹಾಕಿ ತಿನ್ನುವ ಅಭ್ಯಾಸವಿರುತ್ತದೆ. ಮಕ್ಕಳಿಗೆ ಹಣ್ಣುಗಳಿಗೆ ಉಪ್ಪು ಹಾಕಿ ತಿನ್ನಲು ಕೊಡಬೇಡಿ. ಕುರುಕಲು ತಿಂಡಿಗಳನ್ನು ಕೊಡುವುದನ್ನು ಕಮ್ಮಿ ಮಾಡಿ.

English summary

Can Excess Salt Harm Your Kids? | Tips For Children Health | ಮಕ್ಕಳಿಗೆ ಅಧಿಕ ಉಪ್ಪಿನ ಆಹಾರ ಕೊಡಬೇಡಿ | ಮಕ್ಕಳ ಆರೋಗ್ಯಕ್ಕಾಗಿ ಕೆಲ ಸಲಹೆಗಳು

It is very essential for maintaining the right balance of fluids in the body, transmitting nerve impulses, relaxation and contraction of muscles. But to fully attain the health benefits of sodium you have to regulate the right proportion of salt intake of your child.
X
Desktop Bottom Promotion