For Quick Alerts
ALLOW NOTIFICATIONS  
For Daily Alerts

ಮಕ್ಕಳ ಬೆಳವಣಿಗೆಗೆ ಪೂರಕವಾದ 12 ಆಹಾರಗಳು

|

ಸರಿಯಾದ ಪೋಷಕಾಂಶಗಳು ದೊರೆಯದಿದ್ದರೆ ಮಕ್ಕಳ ಬೆಳವಣಿಗೆ ಕುಂಠಿತವಾಗುವುದು. ಮಕ್ಕಳು ಇಷ್ಟಪಟ್ಟು ತಿನ್ನುವ ಕ್ಯಾಂಡಿ, ಕುರುಕಲು ತಿಂಡಿಗಳು ಮತ್ತು ಫಾಸ್ಟ್ ಫುಡ್ ಗಳಲ್ಲಿ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುವ ಯಾವುದೇ ಪೋಷಕಾಂಶಗಳಿರುವುದಿಲ್ಲ ಅನ್ನುವುದು ನೆನಪಿರಲಿ. ಆದ್ದರಿಂದ ಪೋಷಕಾಂಶ ಇರುವ ಆಹಾರಗಳನ್ನು ಅವರ ಆಹಾರಕ್ರಮದಲ್ಲಿ ಸೇರಿಸಲು ಮರೆಯದಿರಿ.

ಅದರಲ್ಲೂ ಬೆಳೆಯುವ ಮಕ್ಕಳಿಗೆ ಕ್ಯಾಲ್ಸಿಯಂ ಅಂಶ ಸ್ವಲ್ಪ ಅಧಿಕವಾಗಿಯೇ ಬೇಕು. ಕ್ಯಾಲ್ಸಿಯಂ ಕೊರತೆ ಉಂಟಾದರೆ ಮಕ್ಕಳ ಬೆಳವಣಿಗೆ ಕುಂಠಿತವಾಗುವುದು, ಅವರ ಮೂಳೆಗಳು ಬಲವಾಗುವುದಿಲ್ಲ. ಕ್ಯಾಲ್ಸಿಯಂ ಅಂಶಕ್ಕಾಗಿ ಬರೀ ಹಾಲು ಮಾತ್ರ ಕೊಟ್ಟರೆ ಸಾಲದು, ಕ್ಯಾಲ್ಸಿಯಂ ಇರುವ ಇತರ ಆಹಾರಗಳನ್ನೂ ಅವರ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಇಲ್ಲಿ ನಾವು ಮಕ್ಕಳ ಮೂಳೆಗಳನ್ನು ಬಲವಾಗಿಸಿ, ಅವರ ಬೆಳವಣಿಗೆಗೆ ಸಹಕಾರಿಯಾಗುವ ಕ್ಯಾಲ್ಸಿಯಂ ಅಂಶವಿರುವ ಆಹಾರಗಳ ಪಟ್ಟಿ ನೀಡಿದ್ದೇವೆ ನೋಡಿ:

ಹಾಲು

ಹಾಲು

ಮಕ್ಕಳಿಗೆ ದಿನದಲ್ಲಿ ಎರಡು ಗ್ಲಾಸ್ ಹಾಲು ಕುಡಿಯಲು ಕೊಡಬೇಕು. ಅದರಲ್ಲೂ ಕೆನೆಸಹಿತ ಹಾಲು ಕೊಡುವುದರಿಂದ ಅಗತ್ಯವಾದ ಕೊಬ್ಬಿನಂಶ, ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಅಂಶ ದೊರೆಯುವುದು.

ಚೀಸ್

ಚೀಸ್

ಚೀಸ್ ನಲ್ಲಿ ಅಧಿಕ ಕ್ಯಾಲ್ಸಿಯಂ ಇರುವುದರಿಂದ ಮಕ್ಕಳಿಗೆ ಕೊಡಬೇಕಾದ ಪ್ರಮುಖ ಆಹಾರಗಳಲ್ಲಿ ಇದೂ ಕೂಡ ಒಂದಾಗಿದೆ.

 ಮೀನು

ಮೀನು

ಮೀನಿನಲ್ಲಿ ಅದರಲ್ಲೂ ಮತ್ತಿ ಮೀನಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ನೀವು ನಾನ್ ವೆಜ್ ತಿನ್ನುವವರಾದರೆ ನಿಮ್ಮ ಮಗುವಿನ ಆಹಾರಕ್ರಮದಲ್ಲಿ ಇದನ್ನು ಸೇರಿಸುವುದು ಒಳ್ಳೆಯದು.

 ಸೊಪ್ಪು

ಸೊಪ್ಪು

ಸೊಪ್ಪಿನಲ್ಲಿ ಕೂಡ ಕ್ಯಾಲ್ಸಿಯಂ ಅಂಶ ಅಧಿಕವಾಗಿದ್ದು, ಇದನ್ನು ಬಳಸಿ ಮಕ್ಕಳಿಗೆ ಇಷ್ಟವಾಗುವ ಖಾದ್ಯ ಮಾಡಿ ಕೊಡಿ.

ಮೊಸರು

ಮೊಸರು

ಮೊಸರು ನಿಮ್ಮ ಮಗುವಿಗೆ ಅಜೀರ್ಣ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ ಹಾಗೂ ದೇಹಕ್ಕೆ ಕ್ಯಾಲ್ಸಿಯಂ ಅನ್ನೂ ಒದಗಿಸುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲ, ಒಮೆಗಾ 3 ಕೊಬ್ಬಿನಂಶ, ವಿಟಮಿನ್ ಇ ಇರುವುದರಿಂದ ದಿನದಲ್ಲಿ 1-2 ಬಾದಾಮಿಯನ್ನು ತಿನ್ನಲು ಕೊಡಿ.

ಸೋಯಾ ಹಾಲು

ಸೋಯಾ ಹಾಲು

ಕೆಲವು ಮಕ್ಕಳಿಗೆ ಹಾಲು ಕುಡಿದರೆ ಅಜೀರ್ಣ ಉಂಟಾಗುತ್ತದೆ. ಅಂತಹ ಮಕ್ಕಳಿಗೆ ಹಾಲಿಗೆ ಪರ್ಯಾಯವಾಗಿ ಸೋಯಾ ಹಾಲನ್ನು ಕೊಡಿ.

ಟೋಫು

ಟೋಫು

ಟೋಫು ಸೋಯಾ ಉತ್ಪನ್ನವಾಗಿದ್ದು, ಇದರಲ್ಲಿ ವಿಟಮಿನ್ ಡಿ ಕೂಡ ಇದೆ. ಅಲ್ಲದೆ ಈ ರೀತಿಯ ಆಹಾರಗಳನ್ನು ಮಕ್ಕಳು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ ಕೂಡ.

ವೈಟ್ ಬೀನ್ಸ್

ವೈಟ್ ಬೀನ್ಸ್

ವೈಟ್ ಬೀನ್ಸ್ ನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಅರ್ಧ ಕಪ್ ವೈಟ್ ಬೀನ್ಸ್ ಅನ್ನು ನಿಮ್ಮ ಮಗು ತಿಂದರೆ 100 ಗ್ರಾಂ ಕ್ಯಾಲ್ಸಿಯಂ ನಿಮ್ಮ ಮಗುವಿನ ದೇಹವನ್ನು ಸೇರುತ್ತದೆ.

ಓಟ್ ಮೀಲ್ಸ್

ಓಟ್ ಮೀಲ್ಸ್

ಬರೀ ಓಟ್ಸ್ ಕೊಟ್ಟರೆ ಮಕ್ಕಳು ತಿನ್ನಲು ಇಷ್ಟ ಪಡುವುದಿಲ್ಲ, ಅದರ ಜೊತೆಗೆ ಫ್ರೂಟ್ಸ್ ಹಾಕಿ, ಅದರ ರುಚಿಯನ್ನು ಹೆಚ್ಚಿಸಿ ಕೊಡಿ. ಓಟ್ ಬಿಸ್ಕೆಟ್ ಕೊಡಿ.

ಹರ್ಬ್ಸ್

ಹರ್ಬ್ಸ್

ಹರ್ಬ್ಸ್ ಗಳಲ್ಲಿ ಪೋಷಕಾಂಶಗಳು ಹೆಚ್ಚಾಗಿ ಇರುತ್ತದೆ. ಅಡುಗೆ ಜೊತೆ ಹರ್ಬ್ಸ್ ಹಾಕಿ ಮಾಡಿ ಮಕ್ಕಳಿಗೆ ಕೊಡಿ. ಅದರಲ್ಲೂ ರೋಸ್ ಮೆರಿಯಂತಹ ಹರ್ಬ್ಸ್ ತುಂಬಾ ಒಳ್ಳೆಯದು.

ಕಿತ್ತಳೆ

ಕಿತ್ತಳೆ

ಪ್ರತೀದಿನ ಒಂದು ಕಿತ್ತಳೆ ತಿನ್ನಲು ಕೊಡಿ. ಕಿತ್ತಳೆ ನಿಮ್ಮ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

English summary

Calcium Rich Foods For Growing Kids

If your kids have to grow taller and broader, they need calcium rich foods in their diet.Here are some of the most suitable calcium rich foods that growing kids must have.
X
Desktop Bottom Promotion