For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಮಕ್ಕಳ ಸ್ನೇಹಿ ಆಹಾರ

By Hemanth P
|

ತಿನ್ನುವ ವಿಷಯಕ್ಕೆ ಬಂದರೆ ನಿಮ್ಮ ಮಗು ನಿಮಗೆ ತುಂಬಾ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಬಲ್ಲದು. ಮಗುವಿಗೆ ಉಣಿಸುವುದು ನಿಮಗೆ ಅಷ್ಟೇ ಕಷ್ಟವಾಗಬಹುದು. ಅಂಬೆಗಾಲಿಡುವ ಮಕ್ಕಳ ಭಾವಗಳು ಬದಲಾಗುತ್ತಿರುತ್ತದೆ ಹಾಗೂ ಅವರಿಗೆ ಪ್ರತೀ ಸಲ ಭಿನ್ನ ರೀತಿಯ ಆಹಾರ ಬೇಕಾಗುತ್ತದೆ. ಮಗುವಿಗೆ ಉಣಿಸಲು ನೀವು ಆಹಾರವನ್ನು ಆಕರ್ಷಕವಾಗಿಸಬೇಕು. ಮಗುವಿಗೆ ಚಳಿಗಾಲದ ಆಹಾರವನ್ನು ಪ್ರಯತ್ನಿಸಬಹುದು. ನಿಮ್ಮ ಮಗು ತಿನ್ನಬಹುದಾದ ಕೆಲವೊಂದು ಆಸಕ್ತಿದಾಯಕ ಆಹಾರವನ್ನು ಪ್ರಯತ್ನಿಸಿ. ಆರೋಗ್ಯಕವಾಗಿರುವುದನ್ನು ತಿನ್ನಲು ನೀವು ಮಗುವನ್ನು ಪ್ರೇರೇಪಿಸಬೇಕು. ಆದಾಗ್ಯೂ ಕೆಲವೊಂದು ವಿಷಯಗಳನ್ನು ನಿಮ್ಮ ಮಗುವಿಗೆ ಹೇಳಬಾರದು. ಕೆಲವೊಂದು ಸಲ ನೀವು ಧನಾತ್ಮಕವಾಗಿ ಹೇಳಿದ ವಿಷಯಗಳು ಋಣಾತ್ಮಕವಾಗಬಹುದು. ಇದರಿಂದ ಎಚ್ಚರಿಕೆ ಅಗತ್ಯ.

ಅಂಬೆಗಾಲಿಡುತ್ತಿರುವ ಮಕ್ಕಳು ತಿನ್ನುವಂತೆ ಮಾಡಲು ಮಕ್ಕಳಿಗೆ ಇಷ್ಟವಾಗುವ ಆಹಾರಗಳನ್ನು ತಯಾರಿಸಬೇಕು. ಮಗು ಆರಂಭದಲ್ಲಿ ತಿನ್ನಲು ಹಿಂಜರಿದರೆ ಆಗ ಮಗುವಿಗೆ ಜೋರು ಮಾಡಬೇಡಿ. ಸಮಯದೊಂದಿಗೆ ನೀವು ಸರಿಯಾಗುತ್ತಿ ಮತ್ತು ಇದೇ ಆಹಾರವನ್ನು ಇಷ್ಟಪಡುತ್ತಿ ಎಂದು ಹೇಳಿ. ನಿಮ್ಮ ಮಗು ಸುಲಭವಾಗಿ ಯಾವುದೇ ಆಹಾರವನ್ನು ಮೆಚ್ಚದಿದ್ದರೆ ಆಗ ಅದಕ್ಕೆ ಇಷ್ಟವಾಗುವ ಆಹಾರ ತಯಾರಿಸಿ. ಆಹಾರವನ್ನು ಬಣ್ಣಯುತ ಮತ್ತು ಆಕರ್ಷವಾಗಿಸಿ, ಇದನ್ನು ನೋಡಿ ಅವರು ತಿನ್ನಬಹುದು. ಆಹಾರವನ್ನು ಸರಿಯಾಗಿ ತಿಂದರೆ ಆಟಿಕೆ ತಂದುಕೊಡುತ್ತೇನೆ ಅಥವಾ ಹೊರಗಡೆ ತಿರುಗಾಡಲು ಕರೆದುಕೊಂಡು ಹೋಗುತ್ತೇನೆಂದು ಹೇಳಿ. ಮಗುವನ್ನು ಆಕರ್ಷಿಸಲು ಪ್ರಯತ್ನಿಸಿ.

ಚಳಿಗಾಲದಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಕೆಲವೊಂದು ಆಹಾರಗಳನ್ನು ಪಟ್ಟಿ ಮಾಡಲಾಗಿದೆ. ಇದರ ಕಡೆ ಗಮನಹರಿಸಿ.

ಚೀಸ್ ಇರುವ ಪಾಸ್ತಾ

ಚೀಸ್ ಇರುವ ಪಾಸ್ತಾ

ಇದು ಮಕ್ಕಳ ಸ್ನೇಹಿ ಆಹಾರ ಮತ್ತು ನಿಮ್ಮ ಮಗು ಇದನ್ನು ತಿನ್ನಲು ಇಷ್ಟಪಡಬಹುದು. ಇದನ್ನು ಮಾಡುವುದು ಸುಲಭ, ಅತ್ಯುತ್ತಮ ಕ್ಯಾಸ್ ರೋಲ್ ರೆಸಿಪಿ. ಕೇವಲ ಐದರಿಂದ ಹತ್ತು ನಿಮಿಷದಲ್ಲಿ ಇದನ್ನು ತಯಾರಿಸಬಹುದು. ಇದು ಚಳಿಗಾಲದಲ್ಲಿ ನೀಡಬಹುದಾದ ಒಳ್ಳೆಯ ಆಹಾರ.

ಫಿಂಗರ್ ಫುಡ್ ಪ್ರಯತ್ನಿಸಿ

ಫಿಂಗರ್ ಫುಡ್ ಪ್ರಯತ್ನಿಸಿ

ನಿಮ್ಮ ಮಗು ಫಿಂಗರ್ ಫುಡ್ ಇಷ್ಟಪಡಬಹುದು. ಅಕ್ಕಿಯ ರೋಲ್ ಅಪ್ ನೀವು ಮಕ್ಕಳಿಗೆ ಮಾಡಬಹುದಾದ ಒಂದು ಬಗೆಯ ಫಿಂಗರ್ ಫುಡ್. ಇದಕ್ಕಾಗಿ ಸ್ವಲ್ಪ ಕ್ಯಾರೆಟ್, ಸ್ವೀಟ್ ಅಂಡ್ ಸೌಅರ್ ಸಾಸ್, ಸ್ವಲ್ಪ ಉಪ್ಪು ಮತ್ತು ಕಂದು ಅಕ್ಕಿ. ಇದೆಲ್ಲವನ್ನು ಬೇಯಿಸಿ ಮತ್ತು ರೋಲ್ ಮಾಡಿ. ಇದು ಮಕ್ಕಳ ಸ್ನೇಹಿ ಆಹಾರ, ನಿಮ್ಮ ಮಗು ಇದನ್ನು ತಿನ್ನಲು ಇಷ್ಟಪಡಬಹುದು.

ಈ ಸೂಪ್ ಪ್ರಯತ್ನಿಸಿ

ಈ ಸೂಪ್ ಪ್ರಯತ್ನಿಸಿ

ನಿಮ್ಮ ಮಗು ಆಹಾರ ತಿನ್ನಲು ಹೆಚ್ಚಿನ ಸಮಯ ತೆಗೆದುಕೊಳ್ಳದಿದ್ದರೆ ಆಗ ಸೂಪ್ ಪ್ರಯತ್ನಿಸಿ. ಇದನ್ನು ಸೇವಿಸಲು ಅವರಿಗೆ ಸುಲಭವಾಗಬಹುದು. ಮಕ್ಕಳಿಗೆ ಸ್ನೇಹಿಯಾಗಿರುವ ಆಹಾರ ಮಾಡಲು ಸುಲಭ. ಕೆಲವೊಂದು ತರಕಾರಿಗಳಿಂದ ಅದ್ಭುತ ಸೂಪ್ ಮಾಡಬಹುದು. ಇದು ಅಂಬೆಗಾಲಿಡುತ್ತಿರುವ ಮಕ್ಕಳಿಗೆ ನೀಡಬಹುದಾದ ಚಳಿಗಾಲದ ಒಳ್ಳೆಯ ಆಹಾರ.

ಕುಂಬಳಕಾಯಿ ಬೆಣ್ಣೆ ಕೇಕ್

ಕುಂಬಳಕಾಯಿ ಬೆಣ್ಣೆ ಕೇಕ್

ಮಗುವಿಗೆ ಕೇಕ್ ಮಾಡಿ ಕೊಡಿ, ಅವರು ಇದನ್ನು ತುಂಬಾ ಇಷ್ಟಪಡಬಹುದು. ಇದು ಅಂಬೆಗಾಲಿಡುತ್ತಿರುವ ಮಗುವಿಗೆ ನೀಡಬಹುದಾದ ಒಳ್ಳೆಯ ಆಹಾರ. ಆತ ಕುಂಬಳಕಾಯಿ ಬೆಣ್ಣೆ ಕೇಕ್ ಇಷ್ಟಪಡಬಹುದು. ಮೃದುವಾಗಿರುವ ಕೇಕ್ ನ್ನು ಅವರು ಕೇಳಿಕೇಳಿ ತಿನ್ನಬಹುದು.

ಸ್ವಲ್ಪ ಕೋಳಿ ಮತ್ತು ತರಕಾರಿ

ಸ್ವಲ್ಪ ಕೋಳಿ ಮತ್ತು ತರಕಾರಿ

ಸಾಂಪ್ರದಾಯಿಕ ಆಹಾರಗಳನ್ನು ಇಷ್ಟಪಡದಿದ್ದರೆ, ಸ್ವಲ್ಪ ಕೋಳಿ ಮತ್ತು ತರಕಾರಿ ಹಾಕಿ ಬೇಯಿಸಿ. ಆದರೆ ಹೆಚ್ಚಿನ ಖಾರ ಬೇಡ. ಆತನಿಗೆ ಉಣಿಸಲು ಪ್ರಯತ್ನಿಸಿ. ಇದು ಮಕ್ಕಳ ಸ್ನೇಹಿ ರೆಸಿಪಿ. ಇದನ್ನು ಪ್ರಯತ್ನಿಸಿ, ಮಕ್ಕಳು ಇಷ್ಟಪಡಬಹುದು.

ಕಬಾಬ್ ಮಾಡಿ

ಕಬಾಬ್ ಮಾಡಿ

ನಿಮ್ಮ ಮಕ್ಕಳು ಕಬಾಬ್ ಕಡೆಗೆ ಹೆಚ್ಚು ಆಕರ್ಷಿತರಾಗಬಹುದು. ಸ್ವಲ್ಪ ತರಕಾರಿ ಹಾಕಿ ಬಣ್ಣದ ಕಬಾಬ್ ಮಾಡಿ. ಅವರು ಇದರ ಬಣ್ಣ ಮತ್ತು ಸುವಾಸನೆಯಿಂದ ತಿನ್ನಬಹುದು. ಇದು ಮಕ್ಕಳ ಸ್ನೇಹಿ ರೆಸಿಪಿ ಮತ್ತು ಚಳಿಗಾಲದಲ್ಲಿ ಪ್ರಯತ್ನಿಸಬಹುದಾದ ಒಳ್ಳೆಯ ಆಹಾರ.

ಚಿಕನ್ ಫಿಂಗರ್

ಚಿಕನ್ ಫಿಂಗರ್

ನಿಮ್ಮ ಮಗುವಿಗೆ ಗರಿಗರಿಯಾದ ಚಿಕನ್ ಫಿಂಗರ್ ಮಾಡಿಕೊಡಿ. ಇದು ಮಕ್ಕಳ ಸ್ನೇಹಿ ಆಹಾರ. ಇದನ್ನು ತಿನ್ನಲು ಆತ ಇಷ್ಟಪಡಬಹುದು. ನಿಮಗೆ ಕೂಡ ಉಣಿಸಲು ಹೆಚ್ಚು ಕಷ್ಟವಾಗದು. ನಿಮ್ಮ ಮನೆಯಲ್ಲಿ ಅಂಬೆಗಾಲಿಡುತ್ತಿರುವ ಮಕ್ಕಳು ತಿನ್ನಲು ನಿರಾಕರಿಸುತ್ತಿದ್ದರೆ ಈ ರೆಸಿಪಿಗಳನ್ನು ಪ್ರಯತ್ನಿಸಿ. ಚಿಕನ್ ಫಿಂಗರ್ ಅವರಿಗೆ ಖುಷಿ ನೀಡಬಹುದು. ಇದು ಚಳಿಗಾಲದಲ್ಲಿ ಪ್ರಯತ್ನಿಸಬಹುದಾದ ಒಂದು ಆಹಾರ.

English summary

Best Winter Kid-friendly Foods

Your kid can give you a tough time when it comes to eating. You may also find it very difficult to please. Toddlers have varying moods and they may want different foods at each time.
Story first published: Thursday, December 5, 2013, 14:24 [IST]
X
Desktop Bottom Promotion