For Quick Alerts
ALLOW NOTIFICATIONS  
For Daily Alerts

ಒಬ್ಬನೇ ಮಗ/ಮಗಳಿದ್ದರೆ ಅವರ ಸ್ವಭಾವ ಹೀಗಿರುವುದೇ?

By Super
|

ಮಕ್ಕಳ ಮನಸ್ಥಿತಿ ಸದಾ ದೊಡ್ದವರಗಿಂತ ಬೇರೆಯೇ. ಅವರು ಯೋಚಿಸುವ ರೀತಿ, ಅವರ ವರ್ತನೆ ಇವೆಲ್ಲವೂ ದೊಡ್ದವರ ಯೋಚನೆಗಳಿಗಿಂತ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಯಾವುದೇ ಮಗು ಅದರ ಒಡಹುಟ್ಟಿದವರ ಸ್ವಭಾವವನ್ನು ಹೋಲುತ್ತದೆ ಮತ್ತು ಅವರನ್ನೇ ಅನುಸರಿಸುತ್ತದೆ. ಆದರೆ ಒಡಹುಟ್ಟಿದವರಿಲ್ಲದೇ ಒಬ್ಬಂಟಿಯಾಗಿ ಬೆಳೆಯುವ ಮಗುವಿನ ವರ್ತನೆ ??

ಹೌದು. ಇಂದು ಹಲವು ದಂಪತಿಗಳು ತಮಗೆ ಒಂದೇ ಮಗು ಸಾಕು ಎಂದು ಬಯಸುತ್ತಾರೆ. ಆದರೆ ಹೀಗೆ ಒಂಟಿಯಾಗಿ ಬೆಳೆಯುವ ಮಗುವಿನ ಬಗ್ಗೆ ಹಲವರಲ್ಲಿ ಹಲವು ಅಭಿಪ್ರಾಯಗಳಿವೆ. ಇಂತಹ ಮಕ್ಕಳು ಒಡಹುಟ್ಟಿದವರ ಜೊತೆ ಬೆಳೆಯುವ ಮಕ್ಕಳಿಗಿಂತ ಸ್ವಲ್ಪ ಭಿನ್ನವಾಗಿರುತ್ತಾರೆ ಎಂಬುದು ಕೆಲವು ವಿಷಯಗಳಲ್ಲಿ ನಿಜವೇ ಆಗಿದ್ದರೂ, ಅವರ ವರ್ತನೆಗಳ ಬಗ್ಗೆಯೇ ತಪ್ಪುಕಲ್ಪನೆಗಳನ್ನು ಬೆಳೆಸಿಕೊಳ್ಳುವುದು ಸರಿಯಲ್ಲ. ಏಕೆಂದರೆ ಒಂಟಿಯಾಗಿ ಬೆಳೆಯುವ ಮಗು ತಪ್ಪು ದಾರಿಯನ್ನೇ ತುಳಿಯುತ್ತದೆ ಎನ್ನುವ ಭಾವನೆ ಅಕ್ಷರಶಃ ತಪ್ಪು.

ಮಕ್ಕಳ ಬಗ್ಗೆ ಇರುವ ಕೆಲವು ತಪ್ಪು ಗ್ರಹಿಕೆಗಳನ್ನು ಇಲ್ಲಿ ಹೇಳಲಾಗಿದೆ.

1. ಅವರು ಸ್ವಾರ್ಥಿಗಳು

1. ಅವರು ಸ್ವಾರ್ಥಿಗಳು

ಸಾಮಾನ್ಯವಾಗಿ ಮನೆಯಲ್ಲಿ ಒಂದೇ ಮಗು ಇದ್ದರೆ ಅಂತಹ ಮಗು ತನ್ನ ವಯಕ್ತಿಕ ವಸ್ತುಗಳ ಬಗ್ಗೆ, ಸಮಯದ ಬಗ್ಗೆ ಅವರ ಮೇಲೆ ಅವರ ಪಾಲಕರ ಗಮನದ ಬಗ್ಗೆ ಸಾಲಷ್ಟು ಒಲವು / ಪೊಸೆಸಿವ್ ನೆಸ್ ಬೆಳೆಸಿಕೊಂಡಿರುತ್ತಾರೆ ಎಂದೇ ಎಲ್ಲರೂ ಊಹಿಸುತ್ತಾರೆ. ಆದರೆ ಇಂತಹ ಸಾಮಾನ್ಯೀಕರಣ ಹಾಗೂ ಅವರು ಸ್ವಾರ್ಥಿಗಳು ಎಂಬ ಭಾವನೆ ತಪ್ಪು. ಯಾವುದೇ ಮಗು ತನ್ನತೆ ಆದ ಮೌಲ್ಯಗಳನ್ನು ಬೆಳೆಸಿಕೊಳ್ಳದಿದ್ದರೆ ಅದರ ಬೆಳವಣಿಗೆಯೂ ಪರಿಣಾಮಕಾರಿಯಾಗಿರುವುದಿಲ್ಲ.

2. ಒಬ್ಬಂಟಿ

2. ಒಬ್ಬಂಟಿ

ಒಂಟಿ ಮಗುವಿನ ಮೇಲಿರುವ ಸಾಮಾನ್ಯ ತಪ್ಪು ಕಲ್ಪನೆಯೆಂದರೆ ಒಂದೇ ಮಗುವಿದ್ದರೆ ಅದು ಜೊತೆಗಾರರಿಲ್ಲದೇ ಒಂಟಿಯಾಗಿರುತ್ತದೆ ಎಂಬುದು. ಇದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಒಬ್ಬಂಟಿಯಾಗಿರುವ ಮಗು ತನ್ನನ್ನು ತಾನು ತನ್ನದೇ ಆದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಚೆನ್ನಾಗಿ ಕಲಿತಿರುತ್ತದೆ. ಒಬ್ಬಂಟಿಯಾಗಿರುವ ಮಕ್ಕಳು ಸ್ವಯಂ ಮನೋರಂಜನೆ ಹಾಗೂ ತನ್ನದೇ ಒಡನಾಟದೊಂದಿಗೆ ಸಂತೋಷವಾಗಿರುವುದನ್ನು ಅತ್ಯಂತ ಚೆನ್ನಾಗಿ ರೂಢಿಸಿಕೊಂಡಿರುತ್ತಾರೆ.

3. ಸಾಮಾಜಿಕವಾಗಿ ಹೊಂದಿಕೊಳ್ಳದ ಸ್ವಭಾವ

3. ಸಾಮಾಜಿಕವಾಗಿ ಹೊಂದಿಕೊಳ್ಳದ ಸ್ವಭಾವ

ಒಬ್ಬಂಟಿಯಾಗಿರುವ ಮಗು ಸಾಮಾಜಿಕವಾಗಿ ವಿಚಿತ್ರ ಭಾವನೆಯನ್ನು ಬೆಳೆಸಿಕೊಳ್ಳುತ್ತದೆ ಅಥವಾ ಸಾಮಾಜದಿಂದ ದೂರವುಳಿಯುತ್ತದೆ ಎಂದೇ ಭಾವಿಸುತ್ತಾರೆ. ಆದರೆ ಇದು ಅಕ್ಷರಶ: ತಪ್ಪುಕಲ್ಪನೆ. ಅವರು ಯಾರೊಂದಿಗೆ ಸಮಯ ಕಳೆಯಬಹುದೆಂಬ ಆಯ್ಕೆಯನ್ನು ಅವರೇ ಮಾಡಬಹುದು. ಅವರು ಕುಟುಂಬ ಎಂಬ ಜಗತ್ತನ್ನು ಇಷ್ಟ ಪಟ್ಟು ತನಗೆ ಬೇಕಾದ ಸ್ನೇಹಿತರನ್ನು ಅದರಲ್ಲಿ ಆಯ್ಕೆ ಮಾಡಿಕೊಳ್ಳಬಹುದೇ ಹೊರತು ಸಮಾಜದಿಂದ ದೂರವುಳಿಯುವ ಚಿಟ್ಟೆಗಳಂತೆ ಅಲ್ಲ. ಏಕೆಂದರೆ ಅವರಿಗೆ ಸರಿಹೊಂದುವಂತಹ ಸ್ನೇಹಿತರನ್ನುನಾರಿಸಿಕೊಳ್ಳಲು ಬಯಸುತ್ತಾರೆಯೇ ಹೊರತು ಸಮಾಜದಿಂದ ದೂರವುಳಿಯುವ ಉದ್ದೇಶದಿಂದಲ್ಲ.

4. ಕೆಟ್ಟ ಸ್ವಭಾವ

4. ಕೆಟ್ಟ ಸ್ವಭಾವ

ಹೆಚ್ಚಿನ ಜನರು ಯೋಚಿಸುವುದೇನೆಂದರೆ ಒಬ್ಬಳೇ ಮಗಳು ಅಥವಾ ಮಗ, ತಂದೆತಾಯಿಯ ಮುದ್ದಿನಿಂದ ಹಾಳಾಗುತ್ತಾರೆ ಎಂದೇ ಭಾವಿಸುತ್ತಾರೆ. ಇದು ಸುಳ್ಳು. ಮಗು ಹಾಳಾಗುತ್ತಿದೆಯೋ ಇಲ್ಲವೂ ಎಂಬುದನ್ನು ಪಾಲಕರೇ ನಿರ್ಧರಿಸುತ್ತಾರೆ ಮತ್ತು ಸರಿಯಾದ ಮಾರ್ಗದಲ್ಲಿ ನಡೆಸುತ್ತಾರೆ. ಒಬ್ಬನೇ ಮಗುವಾಗಿ ಹುಟ್ಟುವುದರಿಂದ ಇಂತಹ ಸಮಸ್ಯೆಗಳೇನೂ ಉದ್ಭವಿಸುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮನೆಯಲ್ಲಿ ಎರಡು ಮಕ್ಕಳಿದ್ದರೆ ಅವರಲ್ಲಿ ಒಂದು ಮಗು ಇನ್ನೊಂದು ಮಗುವಿನಿಂದ ಭಿನ್ನವಾಗಿದ್ದು ಕೆಟ್ಟ ಸ್ವಭಾವವನ್ನು ಹೊಂದುವ ಸಾಧ್ಯತೆಗಳೂ ಇರಬಹುದು!

5. ಹೆಚ್ಚಿನ ಗಮನ

5. ಹೆಚ್ಚಿನ ಗಮನ

ತಂದೆ ತಾಯಿಗೆ ಒಂದೇ ಮಗುವಾಗಿದ್ದರೆ ಆ ಮಗು ಪಾಲಕರ ಸಂಪೂರ್ಣ ಗಮನ ಮತ್ತು ಪ್ರೀತಿಯನ್ನು ತನ್ನದಾಗಿಸಿಕೊಳ್ಳುತ್ತದೆ. ಆದಾಗ್ಯೂ ಇದು ಯಾವಾಗಲೂ ಅಥವಾ ಎಲ್ಲರ ವಿಷಯದಲ್ಲೂ ಸತ್ಯವೇ ಆಗಿರುವುದಿಲ್ಲ! ಒಬ್ಬಂಟಿಯಾಗಿರುವ ಸಾಕಷ್ಟು ಮಕ್ಕಳು ಪಾಲಕರ ಬಿಡುವಿಲ್ಲದ ಕೆಲಸಗಳಿಂದಾಗಿ ಅವರ ಪ್ರೀತಿ, ಗಮನದಿಂದ ದೂರವುಳಿಯಬೇಕಾಗುತ್ತದೆ. ಇನ್ನೂ ಹೆಚ್ಚಿನ ಸಂದರ್ಭದಲ್ಲಿ ಸಾಕಷ್ಟು ಮಕ್ಕಳು ಒಡಹುಟ್ಟಿದವರಿಲ್ಲದೇ ಅವರಿಲ್ಲದ ಕೊರತೆಯಿಂದ ಬಳಲಬೇಕಾಗುತ್ತದೆ.

6. ಹಂಬಲ / ಪಾಲಕರ ಗಮನಕ್ಕಾಗಿ ಹಂಬಲಿಸುವಿಕೆ

6. ಹಂಬಲ / ಪಾಲಕರ ಗಮನಕ್ಕಾಗಿ ಹಂಬಲಿಸುವಿಕೆ

ನೀವು ಈ ವಿಷಯವನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಒಂದು ವೇಳೆ ಮಗು ಹೆಚ್ಚಿನ ಗಮನವನ್ನು ಹಂಬಲಿಸಿದರೆ ಇದು ಅವರ ವಯಕ್ತಿಕ ಗುಣಕ್ಕೆ ಸಂಬಂಧಿಸಿದ್ದು. ಆದರೆ ಇದು ಅತ್ಯಂತ ವಿರಳ. ಹೆಚ್ಚಿನ ಸಂದರ್ಭದಲ್ಲಿ ಮೊದಲು ಹುಟ್ಟಿದ ಮಗು ತನ್ನ ನಂತರ ಹುಟ್ಟಿದ ಮಕ್ಕಳಿಗಿಂತ ಹೆಚ್ಚಿನ ಗಮನವನ್ನು, ಪಾಲಕರ ಪ್ರೀತಿಯನ್ನು ಬಯಸುತ್ತದೆ.

7. ಅವರು ಸ್ವತಂತ್ರರು!

7. ಅವರು ಸ್ವತಂತ್ರರು!

ಏಕೈಕ ಮಗುವಾಗಿ ಬೆಳೆಯುತ್ತಿರುವ ಮಕ್ಕಳ ಬಗ್ಗೆ ಮರು ಸ್ವಾವಲಂಬಿಗಳು ಎಂಬ ಭಾವನೆ ಸಾಮಾನ್ಯ. ಒಂಟಿಯಾಗಿ ಬೆಳೆದ ಮಗು ಒಡಹುಟ್ಟಿದವರು ಇರುವ ಮಕ್ಕಳಿಗಿಂತ ಹೆಚ್ಚು ಸ್ವತಂತ್ರರಾಗಿರುತ್ತಾರೆ. ಆದರೆ ಇದು ಎಲ್ಲಾ ಸಂದರ್ಭಗಳಲ್ಲಿಯೂ ನಿಜವೆಂದು ಹೇಳಲಾಗುವುದಿಲ್ಲ. ಏಕೆಂದರೆ ಇಂತಹ ಒಬ್ಬಂಟಿ ಮಕ್ಕಳು ತಮ್ಮ ಪ್ರತಿಯೊಂದು ಕೆಲಸಕ್ಕೂ ಪಾಲಕರನ್ನೇ ಅವಲಂಬಿಸುವ ಸಾಧ್ಯತೆಗಳೂ ಇರುತ್ತವೆ.

8. ಮೆಟಿರಿಯಾಲಿಸ್ಟಿಕ್ /ಭೌತಿಕತೆ

8. ಮೆಟಿರಿಯಾಲಿಸ್ಟಿಕ್ /ಭೌತಿಕತೆ

ಒಂದೇ ಮಗುವಾಗಿ ಬೆಳೆಯುವ ಮಕ್ಕಳು ತನ್ನ ಒಡಹುಟ್ಟಿದವರಿಗೆ ಕೊಡಬಹುದಾದಂತಹ, ಹಂಚಿಕೊಳ್ಳಬೇಕಾದಂತಹ ಅನಿವಾರ್ಯತೆ ಇಲ್ಲದೇ ಎಲ್ಲವನ್ನೂ ಸ್ವತಃ ತಾವೇ ಅನುಭವಿಸುತ್ತಾರೆ ಎಂಬುದು ಹಲವರ ಅಭಿಪ್ರಾಯ. ಆದರೆ ಮಕ್ಕಳನ್ನು ಹಾಳುಮಾಡುವಷ್ಟು ಸಿರಿವಂತಿಕೆ ಎಲ್ಲ ಪಾಲಕರಲ್ಲೂ ಇರುವುದಿಲ್ಲ. ಅಥವಾ ಶ್ರೀಮಂತ ಪಾಲಕರೆಲ್ಲರೂ ತಮ್ಮ ಶ್ರೀಮಂತಿಕೆಯಿಂದಾಗಿ ತಮ್ಮ ಒಂದೇ ಮಗುವನ್ನು ಅವರು ಕೇಳಿದ್ದನ್ನೆಲ್ಲಾ ಕೊಟ್ಟು ಮಗು ಹಾಳಾಗುವುದಕ್ಕೆ ಬಿಡುವುದಿಲ್ಲ.

English summary

8 Common Misconceptions About Only Children

Being an only child is not always as easy or as difficult as it is perceived to be. The fact is that the childhood of an only child is very similar to that of a kid who has siblings. We give you some of the misconceptions that people have about only children.
X
Desktop Bottom Promotion