For Quick Alerts
ALLOW NOTIFICATIONS  
For Daily Alerts

ಟೀನೇಜ್ ನವರಿಗೆ ಪೋಷಕರು ಹೇಳಬೇಕಾದ 7 ವಿಷಯಗಳು

By Super
|

ಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಿರುದಂತೆ ತಮ್ಮದೇ ಲೋಕದಲ್ಲಿ ವಿಹರಿಸಲು ಆರಂಭಿಸುತ್ತಾರೆ. ತಮ್ಮ ಮಾತೇ ನಡೆಯಬೇಕು, ನಾವು ನಡೆದದ್ದೇ ದಾರಿ ಎನ್ನುವಂತಹ ವರ್ತನೆ ಹದಿಹರೆಯದವರಲ್ಲಿ ಕಂಡುಬರುತ್ತದೆ. ಹಿರಿಯರು ಎಷ್ಟೇ ಬುದ್ದಿವಾದ ಹೇಳಿದರೂ ಕಿವಿಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿ ಹದಿಹರೆಯದವರು ಇರುವುದಿಲ್ಲ. ಈ ಹರೆಯದಲ್ಲಿ ದೇಹದ ಮೇಲಾಗುವ ಬದಲಾವಣೆಗಳು ಕೂಡ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಹೆತ್ತವರಿಗೆ ತಮ್ಮ ಮಕ್ಕಳೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸಬೇಕೆಂದೇ ತಿಳಿಯುವುದಿಲ್ಲ. ಹದಿಹರೆಯದ ಮಕ್ಕಳು ಹೆತ್ತವರಿಗೆ ದೊಡ್ಡ ಸವಾಲಾಗಿರುತ್ತಾರೆ. ಹದಿಹರೆಯದ ಮಕ್ಕಳ ವರ್ತನೆ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲಿ ಹೆತ್ತವರು ಸ್ವಲ್ಪ ಎಡವಿದರೂ ದೊಡ್ಡ ಅನಾಹುತಗಳು ಸಂಭವಿಸಬಹುದು. ಹದಿಹರೆಯದ ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ ಅವರ ಮನಸ್ಸಿನಲ್ಲಿರುವುದನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು. ಹದಿಹರೆಯದ ಮಕ್ಕಳೊಂದಿಗೆ ಸಾಮಾನ್ಯವಾಗಿ ಚರ್ಚಿಸಬಹುದಾದ ಏಳು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಸಂಭೋಗ ಮತ್ತು ಲೈಂಗಿಕತೆ

1. ಸಂಭೋಗ ಮತ್ತು ಲೈಂಗಿಕತೆ

ನಿಮ್ಮ ಹದಿಹರೆಯದ ಮಕ್ಕಳು ಸಂಭೋಗ ಅಥವಾ ಲೈಂಗಿಕತೆ ಬಗ್ಗೆ ಯಾವುದೇ ಮಾಧ್ಯಮ ಅಥವಾ ಆತನ/ಆಕೆಯ ವೈಯಕ್ತಿಕ ಅನುಭವದಿಂದ ತಿಳಿದುಕೊಳ್ಳಬಹುದು. ಇಂತಹ ಸಮಯದಲ್ಲಿ ಗರ್ಭನಿರೋಧಕ, ಬೇಡವಾದ ಗರ್ಭ ಮತ್ತು ಗರ್ಭಪಾತದ ಬಗ್ಗೆ ಚರ್ಚಿಸಿ. ಹೇಗೆ ವಿವೇಚನೆಯಿಂದ ಇರಬೇಕು ಮತ್ತು ಯಾರೊಂದಿಗೆ ಹೇಗೆ ವರ್ತಿಸಬೇಕೆನ್ನುವುದನ್ನು ಕಲಿಸಿ.

2. ಡ್ರಗ್ಸ್, ಮದ್ಯ ಮತ್ತು ಇತರ ದುಶ್ಚಟಗಳು

2. ಡ್ರಗ್ಸ್, ಮದ್ಯ ಮತ್ತು ಇತರ ದುಶ್ಚಟಗಳು

ಹೈಸ್ಕೂಲ್ ನಲ್ಲಿರುವಾಗಲೇ ಮಕ್ಕಳು ಪಾರ್ಟಿ ಮಾಡುವುದನ್ನು ಇಷ್ಟಪಡುತ್ತಾರೆ. ಹದಿಹರೆಯಕ್ಕೆ ಕಾಲಿಟ್ಟಂತೆ ಇದರ ಆಸೆ ಮತ್ತಷ್ಟು ಹೆಚ್ಚುತ್ತದೆ. ಪಾರ್ಟಿಗಳಲ್ಲಿ ವಿವಿಧ ಸಾಮಾಜಿಕ ಹಿನ್ನೆಲೆಯುಳ್ಳವರನ್ನು ಭೇಟಿಯಾಗುವ ಕಾರಣ ಡ್ರಗ್ಸ್, ಮದ್ಯ ಮತ್ತು ಇತರ ಕೆಲವು ಚಟಗಳಿಗೆ ದಾಸರಾಗುವ ಸಾಧ್ಯತೆ ಹೆಚ್ಚು. ಸರಿಯಾದ ಮಾರ್ಗದರ್ಶನ ನೀಡದಿದ್ದರೆ ಅವರು ಒತ್ತಡಕ್ಕೆ ಬಿದ್ದು ದುರಾಭ್ಯಾಸಗಳಿಗೆ ಬಲಿಬೀಳಬಹುದು. ಇದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಸೂಕ್ತ ಮಾರ್ಗದರ್ಶನ ನೀಡಬೇಕು.

3. ಹಣದೊಂದಿಗೆ ವ್ಯವಹಾರ

3. ಹಣದೊಂದಿಗೆ ವ್ಯವಹಾರ

ನಿಮ್ಮ ಮಗ ಅಥವಾ ಮಗಳು ಸಂಪಾದನೆ ಮಾಡುತ್ತಿದ್ದರೆ ಆಕೆಗೆ ಹಣದ ಮೌಲ್ಯ ಮತ್ತು ಅದನ್ನು ಉಳಿತಾಯ ಮಾಡುವ ಬಗ್ಗೆ ತಿಳಿದಿರಬೇಕು. ಒಂದು ವೇಳೆ ಆಕೆ/ಆತನಿಗೆ ಇದೆಲ್ಲಾ ತಿಳಿದಿಲ್ಲವೆಂದಾದರೆ ಖರ್ಚು ಮತ್ತು ಉಳಿತಾಯದ ಬಗ್ಗೆ ಹೆತ್ತವರು ಕಲಿಸಿಕೊಡಬೇಕು.

4. ಕುಟುಂಬದ ಪ್ರಾಮುಖ್ಯತೆ

4. ಕುಟುಂಬದ ಪ್ರಾಮುಖ್ಯತೆ

ಹದಿಹರೆಯದವರು ಮನೆ ಹೊರಗೆ ಹೆಚ್ಚು ಸಮಯ ಕಳೆಯುವ ಕಾರಣ ಕುಟುಂಬದವರೊಂದಿಗೆ ಇರುವುದು ಕಡಿಮೆ ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯುವುದು ತುಂಬಾ ಬೋರಿಂಗ್ ಎಂದು ಭಾವಿಸಿರುತ್ತಾರೆ. ಕುಟುಂಬದ ಪ್ರಾಮುಖ್ಯತೆ ಬಗ್ಗೆ ತಿಳಿಹೇಳಿ ಮತ್ತು ಹದಿಹರೆಯದವರು ಮನೆಯ ಪ್ರತಿಯೊಬ್ಬರೊಂದಿಗೆ ಬೆರೆಯುವಂತೆ ನೋಡಿಕೊಳ್ಳಿ.

5. ಡೇಟಿಂಗ್ ಮತ್ತು ಸಂಬಂಧ

5. ಡೇಟಿಂಗ್ ಮತ್ತು ಸಂಬಂಧ

ಜೊತೆಗಾರರನ್ನು ಸತತವಾಗಿ ಬದಲಾವಣೆ ಮಾಡುವುದು ಸಾಮಾನ್ಯ ಸಂಗತಿಯೆಂದು ಹದಿಹರೆಯದವರು ಭಾವಿಸುತ್ತಾರೆ. ಸಂಗಾತಿಯ ಮನಸ್ಸು ಮುರಿಯುವುದು ಮತ್ತು ವಂಚನೆ ಮಾಡುವುದು ದೊಡ್ಡ ವಿಷಯವಲ್ಲವೆಂದು ತಿಳಿಯುತ್ತಾರೆ. ಇಂತಹ ತಪ್ಪು ಕಲ್ಪನೆಯೊಂದಿಗೆ ಹದಿಹರೆಯದವರನ್ನು ಬೆಳೆಯಲು ಬಿಡಬೇಡಿ. ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ ಡೇಟಿಂಗ್ ಮತ್ತು ಸಂಬಂಧದ ಮೌಲ್ಯಗಳ ಬಗ್ಗೆ ವಿವರಿಸಿ.

6. ಸದಾ ಇಂಟರ್ನೆಟ್ ಸಂಗ

6. ಸದಾ ಇಂಟರ್ನೆಟ್ ಸಂಗ

ಇಂದಿನ ಹದಿಹರೆಯದವರು ಸಾಮಾಜಿಕ ತಾಣಗಳಲ್ಲೇ ದಿನದ ಹೆಚ್ಚಿನ ಸಮಯ ಕಳೆಯುತ್ತಾರೆ. ಇದು ಅವರ ಭವಿಷ್ಯ ಹಾಗೂ ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಮರೆತಿರುತ್ತಾರೆ. ಹದಿಹರೆಯದ ಮಕ್ಕಳ ಆನ್ ಲೈನ್ ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾ ಇಡಲು ಸಾಧ್ಯವಾಗದಿದ್ದರೆ ಇದರಿಂದ ಆಗುವ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಬುದ್ದಿಮಾತು ಹೇಳಿ.

7. ಯಶಸ್ಸಿನ ಅರ್ಥ

7. ಯಶಸ್ಸಿನ ಅರ್ಥ

ನಿಮ್ಮ ಮಗ/ಮಗಳಿಗೆ ಯಶಸ್ಸಿನ ಸಿಹಿ ಹೇಗಿರುತ್ತದೆ ಎನ್ನುವುದನ್ನು ಹೇಳಿ. ಯಶಸ್ಸು ಪಡೆಯಲು ಜೀವನದಲ್ಲಿ ಏನೆಲ್ಲಾ ಮಾಡಬೇಕೆಂದು ಅವರಿಗೆ ಮಾರ್ಗದರ್ಶನ ನೀಡಿ. ಇದು ಶಿಕ್ಷಣ, ಕ್ರೀಡೆ ಅಥವಾ ಇನ್ಯಾವುದರಲ್ಲೂ ಆಗಿರಬಹುದು. ನೀವು ನೀಡಿರುವಂತಹ ಸಲಹೆ ಆಕೆ/ಆತನಿಗೆ ಜೀವನಪೂರ್ತಿ ನೆನಪಲ್ಲಿ ಉಳಿಯಬೇಕು.


English summary

7 Things Parents Should Talk About With Their Teenage Children

As a parent it is natural to get anxiety attacks about your growing kid who is entering the teenage. There are so many influences to deal with, so many problems to encounter and so many issues to be careful about. Where should you start from? Here are 7 basic things you should start discussing with your teenage child.
X
Desktop Bottom Promotion