For Quick Alerts
ALLOW NOTIFICATIONS  
For Daily Alerts

ಕಟ್ಟುಪಾಡಿಲ್ಲದ ಪೋಷಕರ ಐದು ಗುಣಲಕ್ಷಣಗಳು

By Super
|

ತಮ್ಮ ಮಕ್ಕಳನ್ನು ಯಾವುದೇ ನಿಯಮ, ನೀತಿ, ವಸ್ತ್ರಸಂಹಿತೆ, ಶಿಷ್ಟಾಚಾರವಿಲ್ಲದೆ ಬೆಳೆಸಿದ ಪೋಷಕರನ್ನು ಮಾತ್ರ ಉದಾರ ಪೋಷಕರು ಎನ್ನಲಾಗದು. ಕೆಲವು ಅಭ್ಯಾಸಗಳು ನಮ್ಮನ್ನು ಕೂಡ ಉದಾರ ಪೋಷಕರ ಪಟ್ಟಿಗೆ ಸೇರಿಸಬಲ್ಲದು ಎನ್ನುತ್ತಾರೆ ತಜ್ಞರು.

ಗರ್ಲ್ಸ್ ಆನ್ ದ ಎಡ್ಜ್ ಆ್ಯಂಡ್ ಬಾಯ್ಸ್ ಎಡ್ರಿಫ್ಟ್ ಪುಸ್ತಕದ ಲೇಖಕ ಚೆಸ್ಟರ್ ಕೌಂಟಿಯ ಕೌಟುಂಬಿಕ ವೈದ್ಯ ಲಿಯೊನಾರ್ಡ್ ಸ್ಯಾಕ್ಸ್ ಅವರ ಪ್ರಕಾರ, ಪೋಷಕರು ತಮ್ಮ ಮಗ ಅಥವಾ ಮಗಳನ್ನು ಅಗ್ರ ಕಾಲೇಜಿಗೆ ಸೇರಿಸುವುದೇ ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ. ಇದರಿಂದ ಅವರು ಮಕ್ಕಳು ನಿರಾಶರಾಗದಂತೆ ಮಾಡುತ್ತಾರೆ. ಅದು ಮಕ್ಕಳು ಪರಿಸ್ಥಿತಿಯ ಅನುಭವ ಪಡೆಯಬಹುದೆಂಬ ಬುದ್ದಿವಂತಿಕೆಯಾಗಿರಬಹುದು.

ಪೋಷಕರು ಅತೀ ಉದಾರಿಗಳಾಗುವ ಐದು ವಿಧಾನಗಳು ಮತ್ತು ಅದನ್ನು ಹೇಗೆ ಬದಲಾಯಿಸಬೇಕೆನ್ನುವ ದಾರಿಗಳು.

5 Signs Of Pushover Parents

1. ಮಕ್ಕಳಿಗಾಗಿ ಸಮಯ ನೀಡದಿರುವುದು: ಪೋಷಕರ ಜವಾಬ್ದಾರಿಯನ್ನು ನಿಭಾಯಿಸಲು ಕೆಲವು ಮಂದಿಗೆ ಸಮಯವೇ ಸಿಗುವುದಿಲ್ಲ. ಮಕ್ಕಳನ್ನು ಸರಿದಾರಿಯಲ್ಲಿಡಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಇಂತಹ ಕುಟುಂಬಗಳು ಶಿಸ್ತನ್ನು ಕಳಕೊಳ್ಳುತ್ತವೆ. ಅಂತಹ ಕುಟುಂಬಗಳ ಮಕ್ಕಳು ಯಾವುದೇ ದಿನಚರಿ ಹಾಗೂ ಜವಾಬ್ದಾರಿಗಳಿಲ್ಲದೆ ಬೆಳೆಯುತ್ತದೆ.

2. ಮಕ್ಕಳ ಬೇಡಿಕೆಗೆ ಮಾರುಮಾತಿಲ್ಲದೆ ಒಪ್ಪುವುದು: ತಮ್ಮ ಹದಿಹರೆಯದ ಮಕ್ಕಳು ಯಾವುದೇ ಬೇಡಿಕೆ ಸಲ್ಲಿಸಿದರೆ ಅದಕ್ಕೆ ಮರುಮಾತನಾಡದೆ ಒಪ್ಪಿಕೊಳ್ಳುವುದು. ಇದು ಅತಿ ಸಹಿಷ್ಣುವಾಗುತ್ತದೆ. ಇಂತಹ ಪೋಷಕರು ಮಕ್ಕಳನ್ನು ಶಿಸ್ತಾಗಿ ಇಟ್ಟುಕೊಳ್ಳುವ ಬದಲು ಮುಕ್ತವಾಗಿರಲು ಅವಕಾಶ ನೀಡುತ್ತಾರೆ.

3. ಜವಾಬ್ದಾರಿಯಿಂದ ನುಣುಚಿಕೊಳ್ಳುವುದು: ಕೆಲವು ಮಕ್ಕಳು ತುಂಬಾ ಜಾಣರಾಗಿರುತ್ತಾರೆ. ಮನೆಯಲ್ಲಿನ ಜವಾಬ್ದಾರಿ ತಪ್ಪಿಸಲು ಅವರು ಓದಿನಲ್ಲೇ ಮುಳುಗಿರುವಂತೆ ತೋರಿಸುತ್ತಾರೆ. ಇದನ್ನು ಕಂಡು ಪೋಷಕರು ಮಾತೆತ್ತುವುದಿಲ್ಲ.

4. ಮಕ್ಕಳಿಗೆ ಗೆಳೆಯರಾಗುವುದು: ಕೆಲವು ಪೋಷಕರು ತಮ್ಮ ಮಕ್ಕಳು ಅಜ್ಞೆಯನ್ನು ಪಾಲಿಸುವವರಿಗಿಂತ ಸ್ನೇಹಿತರಂತೆ ಇರಬೇಕೆಂದು ಬಯಸುತ್ತಾರೆ.

5. ಮಕ್ಕಳಿಗೆ ಅತ್ಯಾಧುನಿಕ ತಂತ್ರಜ್ಞಾನ ನೀಡುವುದು: ಮಕ್ಕಳು ತಮ್ಮ ಪೋಷಕರಿಂದ ಹೇಗಾದರೂ ಮಾಡಿ ಅತ್ಯಾಧುನಿಕ ಮೊಬೈಲ್ ಗಳನ್ನು ಪಡೆಯುತ್ತಿದ್ದಾರೆ. ಆದರೆ ಇದು ತಪ್ಪೆಂದಲ್ಲ, ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ಇಂತಹ ಸಾಧನಗಳನ್ನು ಉಪಯೋಗಿಸಿದರೆ ಉತ್ತಮ. ದುರ್ಬಳಕೆ ಸಲ್ಲ.

X
Desktop Bottom Promotion