For Quick Alerts
ALLOW NOTIFICATIONS  
For Daily Alerts

ಚಿಕ್ಕ ಮಗುವಿರುವ ಪೋಷಕರಿಗೆ ಟಿಪ್ಸ್

By Super
|

"ಮಕ್ಕಳ ಪೋಷಣೆ", ಹೊಸ ತಂದೆ-ತಾಯಂದಿರಿಗೆ ಇದೊಂದು ಅತಿ ದೊಡ್ಡ ಸವಾಲು. ಒಂಬತ್ತು ತಿಂಗಳು ಹೊತ್ತು, ನೋವನುಭವಿಸುತ್ತಾ ಹೆತ್ತು, ಅಂಬೆಗಾಲು ಹಾಕುವಾಗ - ತಪ್ಪು ಹೆಜ್ಜೆ ಹಾಕುವಾಗ ಅವರನ್ನು ಹಿಡಿಯುವುದು, ಊಟ ಮಾಡಿಸಲು ಅವರ ಹಿಂದೆ ಓಡುವುದು, ಪೊಟ್ಟಿ ತರಬೇತಿ, ಸ್ವಚ್ಛತೆಯ ತಿಳುವಳಿ............ಅಬ್ಬಾ! ಇದು ಹೇಳತೀರದ ಅನುಭವ.

ಆದರೆ ಮಗು ಮೊದಲ ಬಾರಿಗೆ, ತನ್ನ ತೊದಲು ನುಡಿಯಲ್ಲಿ ಅಮ್ಮ-ಅಪ್ಪ ಎಂದು ಕರೆದಾಗ, ಅಥವಾ ಸ್ವತಂತ್ರ ನಡಿಗೆಯ ಮೊದಲನೇ ಹೆಜ್ಜೆಯನ್ನಿಟ್ಟಾಗ, ಅಪ್ಪ-ಅಮ್ಮಂದಿರಿಗೆ ಆಸ್ಕರ್ ಗೆದ್ದಷ್ಟೇ ಸಂತೋಷವಾಗುವುದು. ಆಗ ಈ ಎಲ್ಲ ನೋವು, ಬೇಸರಗಳು ಅರೆ ಕ್ಷಣವೂ ನೆನಪಿಗೆ ಬಾರವು.

ನವಜಾತ ಶಿಶುವಿನ ಆರೈಕೆಗೆ ಅತಿ ಹೆಚ್ಚು ಸಮಯ, ತಾಳ್ಮೆ ಮತ್ತು ಶಕ್ತಿಬೇಕೆಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಆ ಮಗುವಿನ ಚಲನ-ವಲನಗಳನ್ನು ನೋಡುವಾಗ, ತೊದಲು ನುಡಿಗಳನ್ನು ಕೇಳಿದಾಗ ನಿಮಗಾಗುವ ಆನಂದಕ್ಕೂ ಬೆಲೆಕಟ್ಟುವಂತಿಲ್ಲ. ನಮ್ಮದೇ ಹೊಟ್ಟೆಯಲ್ಲಿ ಅಣುವಾಗಿ ಮೂಡಿ, ಭ್ರೂಣವಾಗಿ ಬೆಳೆದು, ನಮ್ಮದೇ ರೂಪ ತಳಿದು ಹುಟ್ಟಿ, ಈಗ ನಮ್ಮ ಕಣ್ಣು ಮುಂದೆ ಆಡುತ್ತಿದೆ ಎಂದು ನೆನಿಸಿಕೊಂಡರೆ ರೋಮಾಂಚನವಾಗುತ್ತದೆ ಅಲ್ಲವೇ ?

ಯೋಚನೆ ಬೇಡ. ಶಿಶುವನ್ನು ನೋಡಿಕೊಳ್ಳುವ ಬಗೆ, ಅದರ ಆಟ, ಪಾಠ, ಮಲ-ಮೂತ್ರ ವಿಸರ್ಜನಾ ತರಬೇತಿಗಳಂತಹ ಅನೇಕ ವಿಷಯಗಳ ಕುರಿತು ತಜ್ಞರ ಸಲಹೆಯ ಮೇರೆಗೆ ಈ ಲೇಖನದಲ್ಲಿ ಪ್ರಸ್ತಾಪಿಸಿದ್ದೇವೆ. ನಮ್ಮ ಈ ಪ್ರಯತ್ನದಿಂದ ನಿಮಗೆ ಸವಾಲೆನಿಸಿರುವ ಮಕ್ಕಳ ಪಾಲನಾ ಕಾರ್ಯದಲ್ಲಿ ಸಹಾಯವಾಗುವದೆಂದು ನಂಬಿದ್ದೇವೆ.

1) ಮಲ ವಿಸರ್ಜನೆಗೆ ಗಂಟೆಗಟ್ಟಲೇ ಕಾಯಿಸಬಹುದು

1) ಮಲ ವಿಸರ್ಜನೆಗೆ ಗಂಟೆಗಟ್ಟಲೇ ಕಾಯಿಸಬಹುದು

ಡಾ.ಶಿಲ್ಪಾ ಅವರು ಹೇಳುವಂತೆ, ಕೆಲವು ಮಕ್ಕಳು ಶೌಚಾಲಯಕ್ಕೆ ಕರೆದೊಯ್ದ ತಕ್ಷಣ ಮಲ-ಮೂತ್ರ ವಿಸರ್ಜನೆ ಮಾಡಿಬಿಡುವರು. ಆದರೆ ಎಲ್ಲಾ ಮಕ್ಕಳು ಹೀಗೇ ಎಂದು ಭಾವಿಸುವಂತಿಲ್ಲ. ನಿಮ್ಮ ಮಗು ಮಲ-ಮೂತ್ರ ವಿಸರ್ಜನೆಗೆ ಸಮಯ ತೆಗೆದು ಕೊಳ್ಳುತ್ತಿದ್ದರೆ ಅದನ್ನು ಹಾಗೆ ಮಾಡಲು ಬಿಡಿ. ಆದರೆ ಯಾವಾಗ ಮಲ-ಮೂತ್ರ ವಿಸರ್ಜನೆ ಮಾಡಿದರೂ ವಿಸರ್ಜಿಸುವಾಗ ಮಗು ಪ್ರಯಾಸ ಪಡದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹಾಗೆ ಮಾಡುತ್ತಿದ್ದರೆ, ಮಗುವಿಗೆ ದ್ರವಾಹಾರವನ್ನು ಹೆಚ್ಚಾಗಿ ನೀಡಬೇಕು.

2) ಸ್ವಾಭಾವಿಕವಾಗಿ ಹೀಚುವಂತಹ ಮೃದು ಬಟ್ಟೆಗಳು ಮಕ್ಕಳಿಗೆ ಇಷ್ಟ

2) ಸ್ವಾಭಾವಿಕವಾಗಿ ಹೀಚುವಂತಹ ಮೃದು ಬಟ್ಟೆಗಳು ಮಕ್ಕಳಿಗೆ ಇಷ್ಟ

ಮಕ್ಕಳು ಸಾಮಾನ್ಯವಾಗಿ ತಮಗೆ ಹಿತವೆನಿಸುವಂತಹ ಉಡುಪುಗಳನ್ನು ತೊಡಲು ಬಯಸುತ್ತಾರೆ. ಗುಂಡಿಗಳು, ಜಿಪ್ ಗಳು ನಿಮ್ಮ ಮಗುವಿಗೆ ಕಿರಿಕಿರಿ ಉಂಟುಮಾಡಬಹುದು. ನೀವು ಚಂದಕ್ಕೆ ಅಥವಾ ಪ್ರತಿಷ್ಟೆಗೆಂದು ಹಾಕುವ ಜರದೋಸಿ ವಸ್ತ್ರಗಳು, ನೈಲೆಕ್ಸ ಬಟ್ಟೆಗಳು ಅವುಗಳಿಗೆ ಅಹಿತಕರವಾಗಿರುವ ಕಾರಣ,ನಿಮ್ಮ ಮಗು ಹೊಸ ಬಟ್ಟೆಗೆ ಹೊಂದಿಕೊಳ್ಳುವವರೆಗೆ ಆದಷ್ಟು ನಯವಾದ ಬಟ್ಟೆಗಳನ್ನು ತೊಡಿಸಿರಿ. ಹಾಗು ಚಳಿ,ಮಳೆ, ಬೇಸಿಗೆ ಕಾಲಗಳಿಗೆ ತಕ್ಕಂತೆ ಬಟ್ಟೆಗಳನ್ನು ತೊಡಿಸಿರಿ.

3) ಅತಿಯಾದ ತಾಂತ್ರಿಕತೆಯನ್ನು ಮಕ್ಕಳ ಮೇಲೆ ಹೇರದಿರಿ

3) ಅತಿಯಾದ ತಾಂತ್ರಿಕತೆಯನ್ನು ಮಕ್ಕಳ ಮೇಲೆ ಹೇರದಿರಿ

ನಿಮ್ಮ ಅತಿಯಾದ ತಾಂತ್ರಿಕತೆ ಬಳಕೆಯಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಝಗ್ಗನೆ ಬೆಳಗುವ ದೀಪ, ದೊಡ್ಡ ಶಬ್ದದೊಂದಿಗೆ ಬರುವ ನೀರು, ಕೆಲವು ಕರ್ಕಶ ಶಬ್ದಗಳು ಮಗುವನ್ನು ಭಯಪಡಿಸಬಹುದು. ಉದಾಹರಣೆಗೆ - ಮಗು ಬಚ್ಚಲಮನೆಯಲ್ಲಿದ್ದಾಗ ಅಟೊಮೆಟಿಕ್ ಫ್ಲಶ್ಶರ್ ನಿಂದ ದೊಡ್ಡ ಶಬ್ದದೊಂದಿಗೆ ನೀರು ತಾನಾಗಿಯೇ ಹೋಗುತ್ತಿದ್ದರೆ ಇದರಿಂದ ಭಯಗೊಂಡ ಮಗು ಒಬ್ಬನೇ ಬಚ್ಚಲಿಗೆ ಹೊಗಲು ಹೆದರುವ ಸಾಧ್ಯತೆಗಳಿವೆ.

4) ಕೆಲಸದ ಸಮಯವನ್ನು ಕಡಿತಗೊಳಿಸಿ, ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ

4) ಕೆಲಸದ ಸಮಯವನ್ನು ಕಡಿತಗೊಳಿಸಿ, ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ

ನಿಮ್ಮ ಮಗು ನಿಮ್ಮತ್ತ ಗಮನ ಹರಿಸಬೇಕೆಂದು ನೀವು ಬಯಸುತ್ತಿದ್ದರೆ, ಮೊದಲು ನೀವು ಮಗುವಿನ ಜೊತೆ ಹೆಚ್ಚು ಸಮಯಕಳೆಯ ಬೇಕು. ನಿಮ್ಮ ಮಗುವಿಗೆ ಯಾವುದರಿಂದ ಸಂತೋಷವಾಗುವದೋ ಅಂತಹ ವಸ್ತು-ವಿಷಯಗಳ ಮೇಲೆ ಕೇಂದ್ರೀಕರಿಸಬೇಕು. ನೀವು ನಿಮ್ಮ ಮಗುವಿನೊಂದಿಗೆ ಇರುವಾಗ ಬೇರೆ ವಿಷಯಗಳ ಚಿಂತನೆ ಅಥವಾ ಬೇರೆ ಕೆಲಸಗಳಲ್ಲಿ ತೊಡಗುವದನ್ನು ಮಾಡಬೇಡಿ. ಇದರಿಂದ ನಿಮ್ಮ ಹಾಗು ಮಗುವಿನ ಸಂಬಂಧದಲ್ಲಿನ ಸುಲೀಲತೆ ನಾಶವಾಗುವುದು.

5) ಆಗಾಗ ಹಾಸಿಗೆ - ಹೊದಿಕೆಗಳನ್ನು ಬದಲಿಸಬೇಕಾಗಬಹುದು

5) ಆಗಾಗ ಹಾಸಿಗೆ - ಹೊದಿಕೆಗಳನ್ನು ಬದಲಿಸಬೇಕಾಗಬಹುದು

ಇಡೀ ರಾತ್ರಿ ಹಾಸಿಗೆಯನ್ನು ಒಣದಾಗಿರಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳುವಲ್ಲಿ ಕೆಲವು ಮಕ್ಕಳು ಹೆಚ್ಚು ಸಮಯವನ್ನು ತೆಗೆದುಕೊಳ್ಳುವರು. ನಿಮ್ಮ ಮಗುವೇನಾದರು ಪದೇ ಪದೇ ಹಾಸಿಗೆ ಒದ್ದೆಮಾಡಿಕೊಳ್ಳುತ್ತಿದ್ದರೆ, ಅದರ ಮೇಲೆ ರೇಗುವದಾಗಲೀ, ಅದನ್ನು ಹಿಯಾಳಿಸುವದಾಗಲೀ ಮಾಡದೇ ತಾಳ್ಮೆಯಿಂದ ವರ್ತಿಸಿ. ನಿಮ್ಮ ಮಗು ತುಂಬಾ ಆಳವಾಗಿ ನಿದ್ರಿಸುವ ಕಾರಣ ಹಾಸಿಗೆ ಒದ್ದೆಯಾಗುತ್ತಿದ್ದು, ಬೇರೆ ಹಾಸಿಗೆ-ಹೊದಿಕೆಗಳನ್ನು ಹಾಕುವ ಮೂಲಕ ನಿಮ್ಮ ಮಗುವಿನ ಪ್ರಶಾಂತವಾದ ನಿದ್ದೆಗೆ ಸಹಕರಿಸಿ.

7)ವರಾಂಡುದ ತುಂಬ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರಬಹುದು

7)ವರಾಂಡುದ ತುಂಬ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರಬಹುದು

ನಿಧಾನವಾಗಿ ನಿಮ್ಮ ಮಗು ಬೆಳೆದಂತೆ ಅದರ ಆಟ-ಪಾಠಗಳನ್ನು ಸವಿಯುತ್ತಾ ನೀವು ಸಂತಸದಲ್ಲಿ ತೇಲಾಡುತ್ತಿರುತ್ತೀರಿ. ಮಗು ಹುಟ್ಟಿ ಐದಾರು ತಿಂಗಳಲ್ಲಿ ತೆವಳಲು ಪ್ರಾರಂಭಿಸುತ್ತದೆ. ನಂತರ ಅಂಬೆಯಿಡುವುದು, ಎದ್ದು ನಿಲ್ಲುವುದು, ಮೆಲ್ಲಕೆ ನಡೆಯಲೂ ಪ್ರಾರಂಭಿಸುತ್ತದೆ. ಇದನ್ನೆಲ್ಲ ನೋಡುತ್ತಿದ್ದರೆ ನಿಮಗೆ ದಿನ ಕಳೆಯುವುದೇ ತಿಳಿಯುವದಿಲ್ಲ. ಅಷ್ಟು ಸಂತಸದಿಂದಿದ್ದ ದಿನಗಳಲ್ಲಿ ಹರಡಿದ ವರಾಂಡ, ಚಲ್ಲಾಪಿಲ್ಲಿಯಾಗಿ ಬಿದ್ದ ವಸ್ತುಗಳು ನಿಮಗೆ ದುಃಸ್ವಪ್ನವಾಗಬಹುದು.

ನಿಮ್ಮ ಮಗುವಿನ ಚಲನ ವಲನಗಳು ಚುರುಕುಗೊಂಡಂತೆ ಮಗುವಿನ ಕೈಗೆಟಕುವಂತಹ ಎಲ್ಲ ವಸ್ತುಗಳು ತಮ್ಮ ಸ್ಥಾನವನ್ನು ಕಳೆದುಕೊಂಡು ಎಲ್ಲೆಂದರಲ್ಲಿ ಬೀಳಲಾರಂಭಿಸುತ್ತವೆ.ಕೆಳಗಿಟ್ಟ ನೀರು ಕ್ಷಣಮಾತ್ರದಲ್ಲಿ ನೆಲದ ಪಾಲಾಗುತ್ತದೆ. ಆದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮಗುವಿನ ವಯಸ್ಸಿನ ಎಲ್ಲ ಮಕ್ಕಳೂ ಇಂತಹ ತುಂಟತನ ಮಾಡುವವು. ಇಂತಹ ಸಂದರ್ಭಗಳಲ್ಲಿ ತಾಳ್ಮೆಗೆಡದೆ ನಿಧಾನವಾಗಿ ಮಗುವಿನ ಭಾಷೆಯಲ್ಲೆ ಅದಕ್ಕೆ ತಿಳಿಹೇಳಿ. ಹಾಗು ಅಪಾಯಕಾರಿ ವಸ್ತುಗಳನ್ನು ಮಗುವಿಗೆ ಸಿಗುವಂತೆ ಇರಿಸಬೇಡಿ.

8) ನಿಮ್ಮ ಮಗು ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ರೇಗಬಹುದು

8) ನಿಮ್ಮ ಮಗು ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ರೇಗಬಹುದು

ಚಿಕ್ಕ ಮಕ್ಕಳೆ ಹಾಗೆ, ತಮಗಿಷ್ಟವಿಲ್ಲದಿದ್ದರೆ ತಮ್ಮ ಅಸಮಾಧಾನವನ್ನು ರೇಗುವುದು, ಚೀರುವುದು, ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುವುದರ ಮೂಲಕ ತೋರಿಸಿಕೊಳ್ಳುತ್ತಾರೆ. ಆದರೆ ಅವುಗಳನ್ನು ಪ್ರೀತಿಯಿಂದಲೇ ತಿದ್ದಿ ಬುದ್ದಿ ಹೇಳುವುದು, ಅಗತ್ಯ ಶಿಸ್ತನ್ನು ರೂಡಿಸಿಕೊಳ್ಳುವಂತೆ ಮಾಡುವುದು ಪಾಲಕರ ಕರ್ತವ್ಯ.

9) ನಿಮ್ಮ ಮಾತೃತ್ವದ ರಜಾ ದಿನಗಳು ಕಷ್ಟದ ದಿನಗಳೆನಿಸಬಹುದು

9) ನಿಮ್ಮ ಮಾತೃತ್ವದ ರಜಾ ದಿನಗಳು ಕಷ್ಟದ ದಿನಗಳೆನಿಸಬಹುದು

ಮಾತೃತ್ವದ ರಜೆಯನ್ನು ಪಡೆಯುವಾಗ ನೀವು ಈ ರಜೆಯನು ಮಜವಾಗಿ ಕಳೆಯಬೇಕೆಂದು ಯೋಚಿಸಿರಬಹುದು. ರಜೆಯ ಈ ಕಾಲವನ್ನು ಮಗುವಿನ ಸಾಂಗತ್ಯದಲ್ಲಿ ಕಳೆಯಲು, ಅದರ ಆಟಗಳನ್ನು ನೋಡಿ ಆನಂದಿಸಲು ನೀವು ತವಕಿಸುತ್ತಿರುತ್ತೀರಿ. ಆದರೆ ಈ ರಜೆ ನಿಮಗೆ ಕೇವಲ ಮಜವನ್ನಷ್ಟೇ ಅಲ್ಲದೆ ಸಜೆಯನ್ನೂ ತರುವುದೆಂದರೆ ನಿಮಗೆ ಆಶ್ಚರ್ಯವಾಗಬಹುದು. ಮಗುವಿನ ಆಹಾರ,ವಿಹಾರ, ಆಟ, ನಿದ್ದೆ ಮೊದಲಾದವು ನಿಮ್ಮ ದೈನಂದಿಗೆ ಹೊಂದಿಕೆಯಾಗದೆ ನಿಮಗೆ ಸ್ವಲ್ಪ ಕಷ್ಟವಾಗುವುದು. ಆದರೆ ಕಾಲಕ್ರಮೇಣ ಮಗುವಿಗೆ ನೀವು - ನಿಮ್ಮ ದೈನಂದಿಗೆ ಮಗು ಇಬ್ಬರೂ ಹೊಂದಿಕೊಳ್ಳುವಿರಿ.

10) ನೀವು ನಿಮ್ಮ ಮಗುವಿನೊಂದಿಗಿರುವಾಗ ಎಲ್ಲವೂ ಆನಂದಮಯವಾಗಿರುತ್ತದೆ

10) ನೀವು ನಿಮ್ಮ ಮಗುವಿನೊಂದಿಗಿರುವಾಗ ಎಲ್ಲವೂ ಆನಂದಮಯವಾಗಿರುತ್ತದೆ

ಮಗುವಿನ ಸಾಂಗತ್ಯವೆ ಹಾಗೆ. ಅದರೊಂದಿಗೆದ್ದರೆ ಎಲ್ಲವೂ ರುಚಿಸುವುದು. ಯಾವುದೊ ತಪ್ಪಿಗೆ ನಾವು ಅದರ ಮೇಲೆ ರೇಗಿದ್ದರೂ, ಕೆಲವೇ ಕ್ಷಣಗಳಲ್ಲಿ ಮಗು ಆ ಸಿಟ್ಟನ್ನು ಮರೆಸಿಬಿಡುವುದು. ಅದರ ಅಪ್ಪುಗೆ, ಮುತ್ತುಗಳ ಸುರಿಮಳೆ, ಕಿವಿಯಲ್ಲಿ ಹೇಳುವ "ನನ್ನ ಪ್ರೀತಿ ಅಮ್ಮ" ಅಥವಾ "ಮುದ್ದು ಅಪ್ಪ" ಅನ್ನುವ ತೊದಲು ನುಡಿಗಳು ಎಂತಹದ್ದೇ ಸಿಟ್ಟನ್ನಾದರು, ಕರಗಿಸಿ ಬಿಡಬಲ್ಲವು. ಇಂತಹ ಅಪೂರ್ವ ಕ್ಷಣಗಳನ್ನು ತಂದೆ-ತಾಯಂದಿರು ಸದಾ ಕಾಲ ಚಿರವಾಗಿಡಲು ಬಯಸುತ್ತಾರಲ್ಲವೆ.

ನೀವು ಮೊದಲ ಬಾರಿಗೆ ತಂದೆ/ತಾಯಿಯಾಗಿದ್ದೀರಿ ನಿಜ. ಆದರೆ ಮಗು ಕೂಡ ಇದೇ ಮೊದಲ ಬಾರಿಗೆ ಮಗುವಾಗಿದೆ. ಆದ್ದರಿಂದ ನಿಮಗೆ ಹಿತವೆನಿಸಿದ್ದು ಅದಕ್ಕೂ ಹಿತ. ಯಾವುದೆ ರೀತಿಯ ದುಗುಡವಿಲ್ಲದೆ ಸಂತಸದಿಂದ ನಿಮ್ಮ ಮಗುವಿನೊಂದಿಗೆ ನೀವೂ ಮಕ್ಕಳಾಗಿ ಬೆರೆಯಿರಿ.

English summary

10 things all brand new parents should know

We are here to help each and every new parent by presenting a few tips ranging from child potty training to baby care, so that parenting becomes an (ever so slightly) easier task for you.
Story first published: Saturday, September 7, 2013, 14:27 [IST]
X
Desktop Bottom Promotion