For Quick Alerts
ALLOW NOTIFICATIONS  
For Daily Alerts

ಬೇಸಿಗೆ ಕಾಲದಲ್ಲಿ ಚಿಕನ್ ಪಾಕ್ಸ್ ಬಗ್ಗೆ ಎಚ್ಚರ

|
Symptoms Of Chicken Pox
ಚಿಕನ್ ಪಾಕ್ಸ್ ಅಥವಾ ಸಿಡುಬು ಸಾಮನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ್ಯೆ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಪರೀಕ್ಷೆಗಳು ಆಗುತ್ತಿರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ. ಚಿಕನ್ ಪಾಕ್ಸ್ ವೆರಿಸೆಲ್ಲಾ ಝೋಸ್ಟರ್ ವೈರಸ್ (VZV)ನಿಂದ ಉಂಟಾಗುತ್ತದೆ. ಚಿಕನ್ ಪಾಕ್ಸ್ ಕಾಯಿಲೆಯನ್ನು ಈ ಕೆಳಗಿನ ಲಕ್ಷಣಗಳಿಂದ ಗುರುತಿಸಬಹುದು.

ಲಕ್ಷಣಗಳು:

1. ಚಿಕನ್ ಪಾಕ್ಸ್ ಬಂದರೆ ಮೈಯಲ್ಲಿ ಕೆಂಪಾದ ಗುಳ್ಳೆಗಳು ಉಂಟಾಗುತ್ತದೆ.
2. ಈ ಗುಳ್ಳೆಗಳು ಮೊದಲು ಹೊಟ್ಟೆ ಅಥವಾ ಬೆನ್ನಿನಲ್ಲಿ ಬಂದು ನಂತರ ಮೈಯೆಲ್ಲಾ ಹರಡುವುದು.
3. ಈ ಗುಳ್ಳೆಗಳು ತುಂಬಾ ತುರಿಕೆಯನ್ನು ಹೊಂದಿರುತ್ತದೆ.
4. ಇದು ಕಾಣಿಸಿ ಕೊಂಡರೆ ಜ್ವರ, ತಲೆನೋವು, ಹೊಟ್ಟೆನೋವು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುವುದು.
5. ಚಿಕನ್ ಪಾಕ್ಸ್ ಕಾಣಿಸಿಕೊಂಡರೆ ಅದಕ್ಕೆ ಕೂಡಲೇ ಚಿಕಿತ್ಸೆಯನ್ನು ಮಾಡಬೇಕು (ಮನೆಯಲ್ಲಿಯೆ ಚಿಕಿತ್ಸೆ ಮಾಡಿಗುಣಪಡಿಸಬಹುದು).
6. ಇದು ಬಂದರೆ ಹೊರಗೆ ಸುತ್ತಾಡಬಾರದು. ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಎಣ್ಣೆ ಪದಾರ್ಥಗಳನ್ನು ಮುಟ್ಟಬಾರದು.

ಚಿಕನ್ ಪಾಕ್ಸ್ ದೊಡ್ಡವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಉಂಟಾಗುವುದು. ಬೇಸಿಗೆ ಕಾಲದಲ್ಲಿ ಅಧಿಕ ನೀರಿನಂಶವಿರುವ ಮತ್ತು ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

English summary

Symptoms Of Chicken Pox | Tips For Children Health | ಚಿಕನ್ ಪಾಕ್ಸ್ ಲಕ್ಷಣಗಳು | ಮಕ್ಕಳ ಆರೋಗ್ಯಕ್ಕೆ ಕೆಲ ಸಲಹೆಗಳು

Chickenpox is caused by the varicella-zoster virus (VZV). Chickenpox causes a red, itchy skin rash that usually appears first on the abdomen or back and face, and then spreads to almost everywhere.
Story first published: Friday, March 2, 2012, 14:44 [IST]
X
Desktop Bottom Promotion