For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಸೈಲೆಂಟ್ ಆಗಿ ಕಾಡುತ್ತಿದೆ 'ನಪುಂಸಕ' ತೊಂದರೆ!

By Arshad
|

ಇತ್ತೀಚಿನ ಒಂದು ಸಂಶೋಧನೆಯಲ್ಲಿ ಈ ಆಘಾತಕಾರಿ ಸುದ್ದಿ ಪ್ರಕಟಗೊಂಡಿದೆ. ಅಂದೆಂದರೆ ಪ್ರತಿ ಹತ್ತರಲ್ಲಿ ಒಬ್ಬ ಪುರುಷರಲ್ಲಿ ನಪುಂಸಕತ್ವದ ತೊಂದರೆ ಇದೆ. ಅಷ್ಟೇ ಅಲ್ಲ, ಪ್ರತಿ ಎಂಟು ಯುವತಿಯರಲ್ಲಿ ಒಬ್ಬರಿಗೆ ಗರ್ಭಧರಿಸಲು ಅತಿ ಹೆಚ್ಚಿನ ಕಷ್ಟವಾಗುತ್ತಿದೆ. ಆದರೆ ಆತಂಕಕಾರಿ ಬೆಳವಣಿಗೆ ಎಂದರೆ ನಿಜವಾಗಿಯೂ ಈ ತೊಂದರೆ ಇರುವ ವ್ಯಕ್ತಿಗಳಿಗೆ ತಮ್ಮ ದೇಹದ ಈ ಕೊರತೆಯ ಬಗ್ಗೆ ಅರಿವೇ ಇಲ್ಲದೇ ವೈದ್ಯಕೀಯ ನೆರವು ಪಡೆಯಲು ಮುಂದಾಗದಿರುವುದು.

One In 10 Men Infertile?

ಈ ಸಂಶೋಧನೆಯ ಪ್ರಕಾರ ಮೂವತ್ತೈದು ದಾಟಿದ ಮಹಿಳೆಯರು ಮತ್ತು ಮೂವತ್ತೈದರಿಂದ ಐವತ್ತನಾಲ್ಕು ವರ್ಷದ ನಡುವಿನ ವಯಸ್ಸಿನ ಪುರುಷರಲ್ಲಿ ಈ ತೊಂದರೆ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ತಮ್ಮ ಮೂವತ್ತೈದನೆಯ ವಯಸ್ಸಿನ ಬಳಿಕ ಗರ್ಭ ಧರಿಸಲು ಯತ್ನಿಸುವ ಮಹಿಳಯರು ಅಸಫಲತೆಯನ್ನು ಹೆಚ್ಚು ಎದುರಿಸಬೇಕಾಗುತ್ತದೆ.

ಫಲಿತದ ಪರಿಣಾಮ ಮಹಿಳೆಯರಲ್ಲಿ ಇಪ್ಪತ್ತೈದನೆಯ ವಯಸ್ಸಿನಿಂದ ಮೂವತ್ತೈದನೆಯ ವಯಸ್ಸಿನವರೆಗೆ ಗರಿಷ್ಠವಾಗಿದ್ದು ಬಳಿಕ ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಂಶೋಧನೆಯ ನಿಟ್ಟಿನಲ್ಲಿ ಸಂಗ್ರಹಿಸಲಾದ ಇನ್ನೊಂದು ಸಮೀಕ್ಷೆಯ ಪ್ರಕಾರ ಉನ್ನತ ಹುದ್ದೆಗಳಲ್ಲಿರುವ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚು ಕಾಣಿಸಿಕೊಳ್ಳುತ್ತದೆ.

ಆದರೆ ಕೆಳವರ್ಗ ಮತ್ತು ಹೆಚ್ಚಿನ ದೈಹಿಕ ಶ್ರಮವನ್ನು ಅನುಸರಿಸುವ ಮಹಿಳೆಯರಲ್ಲಿ ಈ ಪ್ರಮಾಣ ಕೊಂಚ ಕಡಿಮೆ. ಮಾನಸಿಕ ಒತ್ತಡ, ಜೀವನದಲ್ಲಿ ಅತೃಪ್ತಿ ಇರುವ ಮಹಿಳೆಯರೂ ಗರ್ಭ ಧರಿಸಲು ಸೋಲುತ್ತಾರೆ ಎಂದು ಈ ಸಮೀಕ್ಷೆ ತಿಳಿಸಿದೆ.

ಸಂಶೋಧನೆಯಲ್ಲಿ ಕಂಡುಬಂದ ಇನ್ನೊಂದು ಆತಂಕಕಾರಿ ಅಂಶವೆಂದರೆ ಈ ತೊಂದರೆ ಇರುವ ವ್ಯಕ್ತಿಗಳಿಗೆ ಈ ಬಗ್ಗೆ ಅರಿವೇ ಇಲ್ಲದಿದ್ದು ವೈದ್ಯಕೀಯ ನೆರವು ಪಡೆಯಲು ಮುಂದಾಗದೇ ಇರುವುದು. ಪುರುಷರೇ, ಮದುವೆಯ ನಂತರ ಕಾಫಿಯ ಚಟದಿಂದ ದೂರವಿರಿ!

ಒಂದು ವೇಳೆ ಸೂಕ್ತ ಕಾಲದಲ್ಲಿ ಈ ಬಗ್ಗೆ ಅರಿವು ಪಡೆದು ವೈದ್ಯಕೀಯ ನೆರವು ಪಡೆದರೆ ಹೆಚ್ಚಿನ ಫಲ ಸಿಗಬಹುದು. ಆದರೆ ಇನ್ನೂ ಕೆಲವರು ವೈದ್ಯಕೀಯ ವೆಚ್ಚದ ಮೊತ್ತ ನೋಡಿದ ಬಳಿಕ ಇದರ ಸಹವಾಸ ಬೇಡವೆಂದು ಹಿಂದೆ ಸರಿದಿರುವುದನ್ನೂ ಸಮೀಕ್ಷೆ ವಿವರಿಸಿದೆ.

English summary

One In 10 Men Infertile?

A new study claims that at least one out of every ten men tend to suffer infertility issues. And at least one among every eight women may experience trouble conceiving. Health estimates suggest that most of such people aren't seeking proper medical help.
Story first published: Thursday, July 7, 2016, 20:09 [IST]
X
Desktop Bottom Promotion