ಪುರುಷರೇ ಕೇಳಿ ಇಲ್ಲಿ, ಈ ಸಂಗತಿಗಳು ನಿಮಗೂ ತಿಳಿದಿರಲಿ!

By: Hemanth
Subscribe to Boldsky

ಸಂತಾನ ಪ್ರಾಪ್ತಿಯಾಗಬೇಕಾದರೆ ಪುರುಷರಲ್ಲಿ ವೀರ್ಯವು ತುಂಬಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪುರುಷರಲ್ಲಿ ವೀರ್ಯವು ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದೆ ಇದ್ದರೆ ಅದರಿಂದ ಬಂಜೆತನ ಉಂಟಾಗಬಹುದು. ಅದರಲ್ಲೂ ಕೆಲವರಲ್ಲಿ ತೆಳುವಾದ ವೀರ್ಯವು ಅವರಲ್ಲಿ ಭೀತಿಯನ್ನು ಉಂಟು ಮಾಡುತ್ತದೆ ವೀರ್ಯವು ತುಂಬಾ ನೀರಾಗಿದ್ದರೆ ಅದರಲ್ಲಿ ಏನಾದರೂ ಸಮಸ್ಯೆ ಇದೆ ಎಂದು ಕೆಲವು ಪುರುಷರು ಭಾವಿಸುತ್ತಾರೆ. ಪುರುಷರ ಫಲವತ್ತತೆ ಹೆಚ್ಚಿಸುವ ವಿಟಮಿನ್‌ಗಳು

ವೀರ್ಯವು ದಪ್ಪವಾಗಿರಲು ಅಥವಾ ತೆಳುವಾಗಿರಲು ಹಲವಾರು ಕಾರಣಗಳು ಇದೆ. ವೀರ್ಯಕ್ಕಿಂತ ಮೊದಲು ಬರುವಂತಹ ಅಂಟಿಕೊಳ್ಳುವಂತಹ ದ್ರವವು ವೀರ್ಯ ಎಂದು ಹೆಚ್ಚಿನ ಪುರುಷರು ಭಾವಿಸಿದ್ದಾರೆ. ಆದರೆ ಇದು ವೀರ್ಯವಲ್ಲ. ಇದು ಕೇವಲ ಲೂಬ್ರಿಕೆಂಟ್ ನಂತೆ ಕೆಲಸ ಮಾಡುತ್ತದೆ. ವೀರ್ಯಾಣುಗಳ ಸಂಖ್ಯೆ ವೃದ್ಧಿಸುವ ವಿಧಾನಗಳು

ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ ನೀರಿನಂತಿರುವ ವೀರ್ಯವು ಬಂಜೆತನದ ಲಕ್ಷಣವಲ್ಲ. ಇದಕ್ಕೆ ನಿಖರ ಕಾರಣ ತಿಳಿದುಕೊಳ್ಳಲು ವೈದ್ಯರನ್ನು ಭೇಟಿಯಾಗಿ ಅವರಿಂದ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಇದರ ಹಿಂದಿರುವ ಸತ್ಯವನ್ನು ತಿಳಿದುಕೊಳ್ಳುವ.....

ವಾಸ್ತವ #1

ವೀರ್ಯದ ಸಂಖ್ಯೆ ಕಡಿಮೆ ಇರುವಂತಹ ಪುರುಷರಲ್ಲಿ ನೀರಿನಂತಹ ವೀರ್ಯವು ಸಾಮಾನ್ಯವಾಗಿರುತ್ತದೆ. ಆದರೆ ನೀರಿನಂತಹ ವೀರ್ಯವು ಯಾವಾಗಲೂ ಬಂಜೆತನವನ್ನು ಉಂಟುಮಾಡುತ್ತದೆ ಎಂದಲ್ಲ.

ವಾಸ್ತವ #2

ಆಹಾರ ಕ್ರಮವು ವೀರ್ಯವು ದಪ್ಪಗಿರಲು ಕಾರಣವಾಗಿರುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆಯಾಗಿದ್ದರೆ ನೀರಿನಂತಹ ವೀರ್ಯವು ಬರುವುದು. ಪ್ರೋಟೀನ್ ವೀರ್ಯವನ್ನು ದಪ್ಪಗಾಗಿಸುತ್ತದೆ.

ವಾಸ್ತವ #3

ಮಧುಮೇಹ, ವೃಷಣದಲ್ಲಿ ಕಾಣಿಸುವಂತಹ ಸೋಂಕು ಮತ್ತು ಕೆಲವೊಂದು ಮಾತ್ರೆಗಳು ವೀರ್ಯದ ಸಂಖ್ಯೆ ಕುಂಠಿತವಾಗಲು ಕಾರಣವಾಗಬಹುದು.  ಪುರುಷರೇ, ಮದುವೆಯ ನಂತರ ಕಾಫಿಯ ಚಟದಿಂದ ದೂರವಿರಿ!

ವಾಸ್ತವ #4

ಕೆಲವೊಂದು ಸಂದರ್ಭದಲ್ಲಿ ವೀರ್ಯನಾಳಗಳಲ್ಲಿ ಉಂಟಾಗಿರುವ ತಡೆಯಿಂದ ವೀರ್ಯದ ಸಂಖ್ಯೆಯು ಕಡಿಮೆಯಾಗಲು ಕಾರಣವಿರಬಹುದು.

ವಾಸ್ತವ #5

ವೀರ್ಯದ ದಪ್ಪಗಿಂತ ಅದರ ವಾಸನೆಯು ಎಚ್ಚರಿಕೆಯ ಕರೆಗಂಟೆಯಾಗಿದೆ. ವೀರ್ಯವು ಕೆಟ್ಟ ವಾಸನೆ ಉಂಟು ಮಾಡುತ್ತಾ ಇದ್ದರೆ ಅದು ಸೋಂಕಿನ ಪರಿಣಾಮವೆಂದು ತಿಳಿದುಕೊಳ್ಳಬಹುದು.

ವಾಸ್ತವ #6

ವೀರ್ಯವು ನೀರಿನಂತೆ ಆಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಆಗಾಗ ವೀರ್ಯವು ಹೊರಬರುವುದು. ಅತಿಯಾಗಿ ವೀರ್ಯವು ಹೊರಬಂದರೆ ಆಗ ಅದು ದಪ್ಪಗಾಗಿ ಇರುವುದಿಲ್ಲ. ದೇಹವು ವೀರ್ಯವನ್ನು ತಯಾರಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.

 

Story first published: Saturday, September 10, 2016, 23:19 [IST]
English summary

Is Your Semen Watery? Worried?

Many men do have some hidden fears about their semen. Sometimes, even the thickness of the semen may be a cause of concern. When it is too watery, men often think that there is something wrong with their reproductive capacity.
Please Wait while comments are loading...
Subscribe Newsletter