For Quick Alerts
ALLOW NOTIFICATIONS  
For Daily Alerts

ಅಸಹಜ ಗರ್ಭಕೋಶ ಇದ್ದರೆ ಗರ್ಭಧರಿಸಬಹುದೇ?

By Hemanth
|

ದೇವರು ಮಹಿಳೆಗೆ ವಿಶೇಷವಾದ ಶಕ್ತಿ ಮತ್ತು ಸೌಂದರ್ಯವನ್ನು ನೀಡಿದ್ದಾನೆ. ಸೃಷ್ಟಿ ಮೇಲೆ ಆಕೆ ಸಂತಾನವನ್ನು ಬೆಳೆಸುವುದಕ್ಕಾಗಿಯೇ ಈ ಎರಡು ಗುಣಗಳನ್ನು ದೇವರು ಆಕೆಗೆ ನೀಡಿರಬಹುದು. ಅದೇನೇ ಇರಲಿ, ಮಹಿಳೆಗೆ ತನ್ನ ಜನ್ಮ ಸಾರ್ಥಕವೆನ್ನುವ ಭಾವನೆ ಬರುವುದೇ ಮಗುವಿಗೆ ಜನ್ಮ ನೀಡಿದಾಗ. ಮಗುವಿಗೆ ಜನ್ಮ ನೀಡುವುದು ತನ್ನ ಪಾಲಿನ ಸೌಭಾಗ್ಯವೆಂದು ಆಕೆ ಭಾವಿಸಿರುತ್ತಾಳೆ. ಆದರೆ ಇಂದಿನ ದಿನಗಳಲ್ಲಿ ವಾತಾವರಣ ಹಾಗೂ ಅನ್ಯ ಕೆಲವು ಕಾರಣಗಳಿಂದಾಗಿ ಮಹಿಳೆಯಲ್ಲಿ ಬಂಜೆತನವೆನ್ನುವುದು ಸಾಮಾನ್ಯವಾಗುತ್ತಿದೆ.

ಮಹಿಳೆ ಮಗುವಿಗೆ ಜನ್ಮ ನೀಡದೆ ಇರಲು ಬಂಜೆತನ, ಅನಾರೋಗ್ಯಕರ ದೇಹದ ತೂಕ, ರಕ್ತದಲ್ಲಿ ಸೋಂಕು, ಧೂಮಪಾನ, ಅತಿಯಾದ ಮದ್ಯಪಾನ, ಜನನಾಂಗದ ವಿಕಾರ, ಅನಾರೋಗ್ಯಕರ ಜೀವನಶೈಲಿ ಇತ್ಯಾದಿ ಕಾರಣಗಳು. ಏನೇ ಇರಲಿ ಮಹಿಳೆ ಗರ್ಭ ಧರಿಸಬೇಕಾದರೆ ಆಕೆ ಆರೋಗ್ಯವಾಗಿರಬೇಕು. ಆರೋಗ್ಯವಾಗಿದ್ದರೆ ಮಾತ್ರ ಆಕೆ ಇನ್ನೊಂದು ಜೀವವನ್ನು ಭೂಮಿ ಮೇಲೆ ತರಲು ಸಾಧ್ಯ. ಇಂತಹ ಅನಾರೋಗ್ಯಗಳಲ್ಲಿ ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಯೆಂದರೆ ಅಸಹಜ ಗರ್ಭಕೋಶ. ಈ ಸಮಸ್ಯೆಯು ಮಹಿಳೆಗೆ ಹಾಗೂ ಹುಟ್ಟುವ ಮಗುವಿಗೆ ಸಮಸ್ಯೆಯನ್ನು ಉಂಟು ಮಾಡಬಹುದು.

How Will I Know If I Have An Abnormal Uterus?

ಅಸಹಜ ಗರ್ಭಕೋಶವೆಂದರೇನು?
ಶ್ರೋಣೆಯ ಪ್ರದೇಶದ ಬಳಿ ಇರುವ ಪೇರಳೆ ಆಕಾರದ ಸಂತಾನೋತ್ಪತ್ತಿಯ ಅಂಗವನ್ನು ಗರ್ಭಕೋಶವೆಂದು ಕರೆಯಲಾಗುತ್ತದೆ. ಎಲ್ಲಾ ಮಹಿಳೆಯರ ಗರ್ಭಕೋಶವು ಸಾಮಾನ್ಯವಾಗಿ ಒಂದೇ ಗಾತ್ರದಲ್ಲಿರುತ್ತದೆ ಎಂದು ನಾವೆಲ್ಲರೂ ಭಾವಿಸಿರುತ್ತೇವೆ. ಆದರೆ ಕೆಲವೊಂದು ಮಹಿಳೆಯರಲ್ಲಿ ಇದರ ಗಾತ್ರ ಭಿನ್ನವಾಗಿರುತ್ತದೆ. ಇಂತಹ ಸ್ಥಿತಿಯನ್ನು ಗರ್ಭಕೋಶದ ವಿರೂಪತೆ ಎನ್ನಲಾಗುತ್ತದೆ.

ಮಹಿಳೆಯರಲ್ಲಿ ಸಾಮಾನ್ಯವಾಗಿ ತಿಂಗಳ ಮುಟ್ಟಿನ ವೇಳೆ ಅತೀವ ರಕ್ತಸ್ರಾವ, ನೋವು, ಬಂಜೆತನ, ಆಗಾಗ ಗರ್ಭಪಾತವಾಗುವುದು, ಇತ್ಯಾದಿ ಅಸಹಜ ಗರ್ಭಕೋಶ ಲಕ್ಷಣಗಳಾಗಿವೆ. ಇಂತಹ ಸಮಸ್ಯೆಗಳನ್ನು ಎದುರಿಸುವ ಮಹಿಳೆಯರಿಗೆ ತನಗೆ ಅಸಹಜ ಗರ್ಭಕೋಶವಿದೆ ಎನ್ನುವುದು ತಿಳಿದಿರುವುದೇ ಇಲ್ಲ. ಸಾಮಾನ್ಯ ಗರ್ಭಕೋಶಕ್ಕೆ ಹೋಲಿಸಿದರೆ ತುಂಬಾ ಸಣ್ಣ ಮತ್ತು ಒಂದೇ ಡಿಂಬನಾಳವಿದ್ದರೆ ಅದನ್ನು ಯುನಿಕಾರ್ನ್ಯೂಯೆಟ್ ಗರ್ಭಕೋಶವೆನ್ನುತ್ತಾರೆ. ಇನ್ನು ಗರ್ಭಕೋಶವು ಪೇರಳೆ ಹಣ್ಣಿನ ಆಕಾರದಲ್ಲಿ ಇರದೆ ಹೃದಯದ ಆಕಾರದಲ್ಲಿದ್ದರೆ ಅದನ್ನು ಬಯೋಕಾರ್ನ್ಯೂಯೆಟ್ ಗರ್ಭಕೋಶ ಎನ್ನಲಾಗುವುದು.

ಅಸಹಜ ಗರ್ಭಕೋಶವಿದ್ದರೆ ಗರ್ಭಧರಿಸಬಹುದೇ?
ನಿಮಗೆ ಅಸಹಜ ಗರ್ಭಕೋಶವಿದ್ದರೆ ಅದರ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಯಾಕೆಂದರೆ ತಜ್ಞರ ಪ್ರಕಾರ ಗರ್ಭಕೋಶದ ವಿರೂಪತೆಯು ಹೆಚ್ಚು ಇರದಿದ್ದರೆ ಗರ್ಭಧರಿಸುವುದು ಅಸಾಧ್ಯವೇನಲ್ಲ. ಆದರೆ ಗರ್ಭಧರಿಸುವ ಸಂದರ್ಭದಲ್ಲಿ ಮಹಿಳೆಯು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇದರಲ್ಲಿ ಪ್ರಮುಖವಾಗಿ ಕೆಲವರಲ್ಲಿ ಬಂಜೆತನ, ಗರ್ಭಪಾತ, ಅವಧಿಪೂರ್ವ ಹೆರಿಗೆ ಮತ್ತು ಆ್ಯಮಿನೊಟಿಕ್ ನೀರು ಬೇಗನೆ ಹೊರಬರುವುದು.

ಅಸಹಜತೆ ಇರುವ ಮಹಿಳೆಯರು ಗರ್ಭ ಧರಿಸಿದಾಗ ಕಂಡುಬರುವ ಸಾಮಾನ್ಯವಾದ ಸಮಸ್ಯೆಯೆಂದರೆ ಗರ್ಭಕೋಶವು ತುಂಬಾ ದುರ್ಬಲವಾಗಿರುತ್ತದೆ. ಇದರಿಂದ 9 ತಿಂಗಳ ಕಾಲ ಅದು ಮಗುವನ್ನು ಹೊರಲು ಸಾಧ್ಯವಾಗದು. ಇಂತಹ ಸಂದರ್ಭಗಳಲ್ಲಿ ವೈದ್ಯರು ಕೆಲವೊಂದು ಪ್ರಮುಖ ಸಲಹೆಗಳನ್ನು ನೀಡುತ್ತಾರೆ. ಅಸಹಜತೆ ಹೊಂದಿರುವ ಮಹಿಳೆಯರು ಗರ್ಭಧಾರಣೆ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೊಂದಿದ್ದರೆ ಎಲ್ಲವೂ ಸುಗಮವಾಗಲಿದೆ. ಇಂತಹ ಸಂದರ್ಭಗಲ್ಲಿ ಮಹಿಳೆಯರು ಆಗಾಗ ವೈದ್ಯರನ್ನು ಕಂಡು ಸಲಹೆಗಳನ್ನು ಪಡೆಯುತ್ತಿರಬೇಕು.

English summary

How Will I Know If I Have An Abnormal Uterus?

Most women consider bringing another life into this world as one of the greatest moments of their lives. So, as soon as they are ready, women are very keen to conceive and start a family. In these times, where infertility issues are on the rise, the process of waiting to get pregnant is usually filled with a lot of fear and anxiety. Optimum health of the mother is one of the main requirements that is needed to conceive a baby.
Story first published: Thursday, April 28, 2016, 20:24 [IST]
X
Desktop Bottom Promotion