ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

By: Hemanth
Subscribe to Boldsky

ಮದುವೆಯಾದ ದಂಪತಿಯ ಮುಂದೆ ಆಗಾಗ ಬರುವ ಪ್ರಶ್ನೆಯೆಂದರೆ ಮಗು ಯಾವಾಗ ಎಂದು? ಸಮಾಜದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಸಂಪ್ರದಾಯವೆನ್ನಬಹುದು. ಮದುವೆಯಾದ ಕೆಲವೇ ತಿಂಗಳಲ್ಲಿ ಮಹಿಳೆ ಗರ್ಭಿಣಿಯಾಗಬೇಕು. ಇಲ್ಲವೆಂದಾದರೆ ಆಕೆಯಲ್ಲಿ ಏನಾದರೂ ಸಮಸ್ಯೆಯಿದೆ ಎನ್ನುವ ಮಾತುಗಳು ಬರುತ್ತದೆ. ಮಕ್ಕಳಾಗದಿರಲು ಪ್ರಮುಖ ಕಾರಣಗಳು

ಆದರೆ ಸಮಸ್ಯೆ ಮಹಿಳೆಯಲ್ಲಿ ಮಾತ್ರವಲ್ಲ ಪುರುಷನಲ್ಲೂ ಇರುತ್ತದೆ. ಇದನ್ನು ಸಮಾಜ ಒಪ್ಪಿಕೊಳ್ಳುವುದಿಲ್ಲ. ದಂಪತಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ಗರ್ಭನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸಿಯೂ ಅವರಿಗೆ ಮಕ್ಕಳಾಗದೆ ಇದ್ದರೆ ಆಗ ಬಂಜೆತನ ಕಾರಣವೆನ್ನಬಹುದು. ಕೆಲವೊಮ್ಮೆ ಮಹಿಳೆಯರು ಗರ್ಭ ಧರಿಸಿದರೂ ಕೆಲವೇ ತಿಂಗಳಲ್ಲಿ ಅವರಿಗೆ ಗರ್ಭಪಾತವಾಗುತ್ತದೆ.

ಪದೇ ಪದೇ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬಂಜೆತನ ನಿವಾರಣೆಗೆ ಕೆಲವೊಂದು ಔಷಧಿಗಳನ್ನು ಇಲ್ಲಿ ಸೂಚಿಸಲಾಗಿದೆ. ಆದರೆ ಈ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆಯಿರಿ. ಇಂತಹ ಔಷಧಿಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಪ್ರಸಕ್ತ ವೈದ್ಯಕೀಯ ಸ್ಥಿತಿ, ಆರೋಗ್ಯಗಳನ್ನು ಗಮನದಲ್ಲಿಡಬೇಕಾಗುತ್ತದೆ. ಬಂಜೆತನಕ್ಕೆ ಮಹಿಳೆಯರು ಮಾತ್ರವಲ್ಲ ಪುರುಷರೂ ಕಾರಣ..         

 

ಖರ್ಜೂರ

ಖರ್ಜೂರದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದರಲ್ಲಿ ಕಬ್ಬಿಣ, ವಿಟಮಿನ್ ಬಿ, ಎ ಮತ್ತು ಇ ಇದೆ. ಇದು ಗರ್ಭಧಾರಣೆಗೆ ಬೇಕಾಗಿರುವ ಕೆಲವೊಂದು ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ದಿನಲೂ 3-6 ಖರ್ಜೂರಗಳನ್ನು ಸೇವಿಸಿ. ದಿನಂಪ್ರತಿ ಸಿಹಿಸಿಹಿ ಖರ್ಜೂರ ಸೇವಿಸಿದರೆ, ಅಪಾರ ಲಾಭ!

ದಾಲ್ಚಿನ್ನಿ

ದಾಲ್ಚಿನ್ನಿ ಹುಡಿಯನ್ನು ಬಿಸಿ ನೀರಿಗೆ ಹಾಕಿಕೊಂಡು ದಿನದಲ್ಲಿ ಒಂದು ಸಲ ಕುಡಿಯಬಹುದು. ಇದು ಗರ್ಭಾಶಯದ ಕಾರ್ಯವನ್ನು ಉತ್ತೇಜಿಸಿ ಫಲವತ್ತತೆ ಹೆಚ್ಚು ಮಾಡುತ್ತದೆ. ಆದರೆ ಇದನ್ನು ಸೇವಿಸುವಾಗ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ದಿನದಲ್ಲಿ ಒಂದು ಚಮಚಕ್ಕಿಂತ ಹೆಚ್ಚು ಇದನ್ನು ಸೇವಿಸಬಾರದು.

ಅಶ್ವಗಂಧ

ಹಾರ್ಮೋನು ಸಮತೋಲನವನ್ನು ಕಾಪಾಡಿಕೊಳ್ಳಲು ಅಶ್ವಗಂಧವು ನೆರವಾಗುತ್ತದೆ. ಇದು ಸಂತಾನೋತ್ಪತ್ತಿಯ ವ್ಯವಸ್ಥೆಗೆ ನೆರವಾಗುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಅಶ್ವಗಂಧದ ಹುಡಿಯನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಎರಡು ಸಲ ಇದನ್ನು ಕುಡಿಯಿರಿ. ಆದರೆ ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಆಯುರ್ವೇದ ಔಷಧಿ ಅಶ್ವಗಂಧದಿಂದ ಲೈಂಗಿಕ ಆರೋಗ್ಯವನ್ನು ವೃದ್ಧಿಸಬಹುದೇ?

ಮಕಾ ರೂಟ್

ಬಂಜೆತನ ನಿವಾರಣೆಗೆ ಬೇಕಾದ ಹಾರ್ಮೋನುಗಳನ್ನು ಇದು ಬಿಡುಗಡೆ ಮಾಡುತ್ತದೆ. ಒಂದು ಲೋಟ ಬಿಸಿ ಹಾಲಿಗೆ ಮಕಾ ರೂಟ್‌ನ ಹುಡಿಯನ್ನು ಹಾಕಿಕೊಂಡು ಕುಡಿಯಿರಿ. ಆದರೆ ಗರ್ಭಿಣಿಯಾಗಿರುವಾಗ ಇದನ್ನು ಕುಡಿಯಬೇಡಿ.

ವಿಟಮಿನ್ ಡಿ

ವಿಟಮಿನ್ ಡಿ ಕೊರತೆಯಿಂದಾಗಿ ಬಂಜೆತನ ಅಥವಾ ಗರ್ಭಪಾತವಾಗಬಹುದು. ಇದರಿಂದ ಬೆಳಿಗ್ಗೆ ಹಾಗು ಸಂಜೆ ವೇಳೆ ಬಿಸಿಲಿಗೆ ಮೈಯೊಡ್ಡಿ. ಮೊಟ್ಟೆ, ಗಿಣ್ಣು ಮತ್ತು ಸಾಲ್ಮನ್ ನಂತಹ ಆಹಾರ ಸೇವನೆಯಿಂದ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.  ಆರೋಗ್ಯದ ಲವಲವಿಕೆಗೆ, ವಿಟಮಿನ್ ಡಿ ಅತ್ಯವಶ್ಯಕ

ದಾಳಿಂಬೆ

ಸಂತಾನೋತ್ಪತ್ತಿಯ ಭಾಗಗಳಿಗೆ ರಕ್ತದ ಪರಿಚಲನೆಯನ್ನು ಉತ್ತೇಜಿಸಲು ದಾಳಿಂಬೆ ನೆರವಾಗುತ್ತದೆ. ಇದು ಗರ್ಭಪಾತದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೂ ಇದು ಸಹಕಾರಿ. ಒಂದು ಲೋಟ ದಾಳಿಂಬೆ ಜ್ಯೂಸ್ ನ್ನು ಪ್ರತೀ ದಿನ ಸೇವಿಸಿ.   ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

Story first published: Friday, September 16, 2016, 13:56 [IST]
English summary

Home Remedies For Female Infertility

Here are some home remedies to boost fertility. But consult a doctor first before trying any of these remedies because your medical history, current health condition and various other factors need to be considered before trying any remedy.
Please Wait while comments are loading...
Subscribe Newsletter