For Quick Alerts
ALLOW NOTIFICATIONS  
For Daily Alerts

ಸಣ್ಣ ಪುಟ್ಟ ತಪ್ಪುಗಳು 'ತಾಯ್ತನದ ಸುಖಕ್ಕೆ' ಮಾರಕವಾಗಬಹುದು!

By Jaya subramanya
|

ತಾಯ್ತನವೆಂಬುದು ಹೆಣ್ಣಿನ ಜೀವನದ ಪ್ರಮುಖ ಕನಸಾಗಿರುತ್ತದೆ. ತಾನು ಹೊತ್ತು ಹೆತ್ತು ಹೆಣ್ಣು ಜನ್ಮವನ್ನು ಸಾರ್ಥಪಡಿಸಿಕೊಳ್ಳಬೇಕೆಂಬ ಮಹದಾಸೆ ಆಕೆಗಿರುತ್ತದೆ. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ, ಆಧುನಿಕ ಜೀವನದ ಒತ್ತಡದ ಕಾರಣದಿಂದಾಗಿ ತಾಯ್ತನವೆಂಬುದು ಎಲ್ಲಾ ಮಹಿಳೆಯರ ಕನಸಾಗಿ ಉಳಿದಿದೆ. 40ರ ನಂತರ ಫಲವಂತಿಕೆ ಹೆಚ್ಚಿಸಿಕೊಳ್ಳುವ ಮಾರ್ಗ

ಒಮ್ಮೆಮ್ಮೊ ತಮ್ಮ ವೃತ್ತಿ ರಂಗದಲ್ಲಿ ಮುಂದಕ್ಕೆ ಬರಬೇಕು ಈ ಸಮಯದಲ್ಲಿ ಮಕ್ಕಳು ಅಡ್ಡಿಯಾಗಬಹುದೆಂಬ ಕಾರಣಕ್ಕೆ ಆ ಸಮಯದಲ್ಲಿ ತಾಯ್ತನದ ಸುಖದಿಂದ ವಂಚಿತರಾದರೂ ನಂತರ ಆ ಬೇಸರ ಅವರನ್ನು ಕಾಡುತ್ತಿರುತ್ತದೆ.

ಇದೊಂದೇ ಕಾರಣವಲ್ಲದೆ ಹೆಣ್ಣಿನ ತಾಯ್ತನವನ್ನು ಕಸಿದುಕೊಳ್ಳುವ ಹಲವಾರು ಅಂಶಗಳು ಆಕೆಯನ್ನು ಈ ಕನಸಿನಿಂದ ವಂಚಿತಗೊಳಿಸುತ್ತವೆ. ತಾಯಿಯಾಗಲು ಹೆಣ್ಣಿನಲ್ಲಿ ಫಲವತ್ತತೆಯ ಅಂಶವೂ ಬೇಕಾಗಿದ್ದು, ಮಗುವನ್ನು ಗರ್ಭದಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಹೆರುವ ಶಕ್ತಿಯನ್ನು ಇದು ನಿರ್ಧರಿಸುತ್ತದೆ. ವಯಸ್ಸು ದಂಪತಿಗಳ ಫಲವತ್ತತೆಯ ಮೇಲೆ ಪ್ರಭಾವ ಬೀರಬಹುದೇ?

ಮಗುವನ್ನು ಪಡೆದುಕೊಳ್ಳಲು ಈ ಫಲವತ್ತತೆ ಅತಿಮುಖ್ಯವಾಗಿರುವುದರಿಂದ ಆಕೆಯ ನಿತ್ಯದ ಚಟುವಟಿಕೆಗಳು ಈ ಫಲವತ್ತತೆಗೆ ತೊಡಕನ್ನು ಉಂಟುಮಾಡುತ್ತಿರಬಹುದು. ಹಾಗಿದ್ದರೆ ಆಕೆಯನ್ನು ಫಲವತ್ತತೆಯಿಂದ ವಂಚಿಸುವ ಸಂಗತಿಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಬೊಜ್ಜು

ಬೊಜ್ಜು

ಹೆಣ್ಣಿನ ಫಲವತ್ತತೆಯನ್ನು ಪ್ರತೀಕೂಲಗೊಳಿಸುವ ಅಂಶಗಳಲ್ಲಿ ಬೊಜ್ಜು ಕೂಡ ಒಂದು. ಮಾನವನ ದೇಹದಲ್ಲಿ ಅಧಿಕ ತೂಕವನ್ನು ಸೂಚಿಸುವ ಅಪಾಯಕಾರಿ ಅಂಶವಾಗಿದೆ ಬೊಜ್ಜು. ಸಾಮಾನ್ಯ ಜೀವನ ಶೈಲಿಗೆ ಇದೊಂದು ಅಡಚಣೆ ಎಂದೆನಿಸಿದ್ದು, ಮಹಿಳೆಗೆ ಇದು ಹಾನಿಕರವಾಗಿದೆ. ಇದು ಸಾಮಾನ್ಯ ಗರ್ಭಾವಸ್ಥೆಯನ್ನು ಆಕೆಗೆ ದೊರೆಯುವಂತೆ ಮಾಡುವುದಿಲ್ಲ. ಡಿಜಿಓಗಳು ಹೇಳುವಂತೆ ಗರ್ಭಿಣೆಯಾಗುವ ಮಹಿಳೆಯರು ಬೊಜ್ಜು ಇಳಿಸುವತ್ತ ಗಮನ ಹರಿಸಲೇಬೇಕು ಎಂದಾಗಿದೆ.

ವಯಸ್ಸು

ವಯಸ್ಸು

ಹೆಚ್ಚುತ್ತಿರುವ ವಯಸ್ಸು ಕೂಡ ತಾಯ್ತನಕ್ಕೆ ತೊಡಕನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ, 23 ರಿಂದ 40 ವರ್ಷ ವಯಸ್ಸು ಗರ್ಭಧಾರಣೆಗೆ ಸೂಕ್ತವಾಗಿದೆ. ಈ ವಯಸ್ಸಿನಲ್ಲಿಯೇ ಮಕ್ಕಳಾಗುವ ಯೋಜನೆಯನ್ನು ಪ್ರತಿಯೊಬ್ಬ ದಂಪತಿಗಳು ನಿರ್ಧರಿಸಬೇಕು.

ಲೈಂಗಿಕ ಚಟುವಟಿಕೆಗಳಲ್ಲಿ ನಿರಾಸಕ್ತಿ

ಲೈಂಗಿಕ ಚಟುವಟಿಕೆಗಳಲ್ಲಿ ನಿರಾಸಕ್ತಿ

ತಮ್ಮ ಸಂಗಾತಿಗಳೊಂದಿಗೆ ಲೈಂಗಿಕ ಚಟುವಟಿಕೆಗಳನ್ನು ಹೊಂದುವತ್ತ ಹೆಚ್ಚಿನ ಮಹಿಳೆಯರು ಆಸಕ್ತರಾಗಿರುವುದಿಲ್ಲ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳುವುದೂ ಕೂಡ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ಇದು ಜೈವಿಕ ಸತ್ಯ ಎಂದೆನಿಸಿದ್ದು ಸಾಬೀತಾಗಿದೆ.

ಪತಿಯ ಆರೋಗ್ಯ

ಪತಿಯ ಆರೋಗ್ಯ

ಪತಿಯು ಒಮ್ಮೊಮ್ಮೆ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಅನಾರೋಗ್ಯವನ್ನು ಮುಚ್ಚಿಡುತ್ತಾರೆ. ಅಸಮರ್ಥ ಪುರುಷರು ತಮ್ಮ ಪತ್ನಿಯ ಲೈಂಗಿಕ ತೃಷೆಯನ್ನು ತೀರಿಸುವಲ್ಲಿ ಅಸಮರ್ಥರಾಗಿರುತ್ತಾರೆ. ಇದು ಅವರನ್ನು ಅಸಂಪೂರ್ಣರನ್ನಾಗಿಸುತ್ತದೆ. ಸಂಭೋಗದ ಪೂರ್ಣತೆಗೆ ಇದು ತೊಡಕನ್ನುಂಟುಮಾಡುತ್ತದೆ.

ಮನೆಯಲ್ಲಿ ಬಳಸುವ ರಾಸಾಯನಿಕಗಳು

ಮನೆಯಲ್ಲಿ ಬಳಸುವ ರಾಸಾಯನಿಕಗಳು

ಸ್ತ್ರೀಯ ಫಲವತ್ತತೆಗೆ ತೊಡಕನ್ನುಂಟುಮಾಡುವಲ್ಲಿ ಮನೆಯಲ್ಲಿ ಬಳಸುವ ರಾಸಾಯನಿಕಗಳ ಪಾಲೂ ಇದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಮನೆಯ ಬಚ್ಚಲು ಮನೆ ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು, ಮನೆಯನ್ನು ಒರೆಸಲು ಬಳಸುವ ರಾಸಾಯನಿಕಗಳು ಕೂಡ ಅಡ್ಡಪರಿಣಾಮವನ್ನುಂಟು ಮಾಡುತ್ತದೆ.

ಧೂಮಪಾನ/ಮದ್ಯಪಾನ

ಧೂಮಪಾನ/ಮದ್ಯಪಾನ

ಮಗುವನ್ನು ಹೊಂದುವಲ್ಲಿ ಈ ಚಟಗಳು ಆರೋಗ್ಯಕ್ಕೆ ದುಷ್ಪರಿಣಾಮವನ್ನು ಬೀರಲಿದೆ. ಸಿಗರೇಟಿನಲ್ಲಿರುವ ನಿಕೋಟಿನ್ ಡಿಎನ್ಎ ಅಂಶಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತಿದ್ದು ಮಹಿಳೆಯ ಫಲವತ್ತತೆಯ ಮೇಲೆ ಇದು ಮಾರಕವಾಗಿ ಪರಿಣಮಿಸಲಿದೆ. ಮಹಿಳೆಯರ ಮೇಲೆ ಚಟಗಳು ಆಕರ್ಷಣೆಯನ್ನು ಉಂಟುಮಾಡಿದರೂ ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ. ಸ್ತ್ರೀಯ ಫಲವತ್ತತೆಗೆ ಇದು ಕೆಟ್ಟದ್ದಾಗಿದ್ದು ಅವರುಗಳು ಇದರ ಬಗ್ಗೆ ಕಾಳಜಿಯನ್ನು ವಹಿಸಲೇಬೇಕು. ತಾಯಿಯಾಗುವ ಕನಸನ್ನು ನನಸು ಮಾಡಿಕೊಳ್ಳಬೇಕೆಂಬ ಇಚ್ಛೆ ನಿಮ್ಮಲ್ಲಿದೆ ಎಂದಾದಲ್ಲಿ ನಿಮ್ಮ ತಲೆಯಲ್ಲಿ ಈ ಅಂಶಗಳನ್ನು ಇರಿಸಿಕೊಂಡು ಅವುಗಳ ಮೇಲೆ ನಿಯಂತ್ರಣವನ್ನು ಸಾಧಿಸಬೇಕು.

English summary

Factors That Affect Female Fertility

Becoming a mother is probably the most powerful dream of every woman. She wants to give birth to at least one child in her lifetime. As per the opinion of the elderly people, becoming a mother completes the cycle of womanhood. This achievement keeps the families alive, as the generations proceed further.
X
Desktop Bottom Promotion