For Quick Alerts
ALLOW NOTIFICATIONS  
For Daily Alerts

ಮಹಿಳೆಯರಲ್ಲಿ ಕಂಡುಬರುವ ಬಂಜೆತನಕ್ಕೆ ಕಾರಣಗಳೇನು?

By Super
|

ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ ಎಂದು ಕವಿಗಳು ಹಾಡಿ ಹೊಗಳಿದ್ದಾರೆ. ಹೌದು, ಒಂದು ಹೆಣ್ಣು ಪರಿಪೂರ್ಣಳೆಂದು ಭಾವಿಸುವುದು ತಾನು ತಾಯಿಯಾದಾಗ ಮಾತ್ರ. ಇಂದಿನ ದಿನಗಳಲ್ಲಿ ಈ ಬಯಕೆ ಈಡೇರದಿರುವ ಬಹಳಷ್ಟು ಪ್ರಕರಣಗಳು ಕಂಡುಬರುತ್ತವೆ.

ತಾಯಿಯಾಗಲು ಪತಿ, ಪತ್ನಿ ಇಬ್ಬರ ಪಾತ್ರವೂ ಸಮಾನವಾಗಿದೆ. ಆದರೂ ಸಮಾಜ ಈ ವೈಫಲ್ಯತೆಗೆ ಹೆಣ್ಣನ್ನೇ ದೂಷಿಸುತ್ತದೆ. ಅಕ್ಕಪಕ್ಕದವರ ಚುಚ್ಚುನುಡಿಗಳಿಂದ ಮೊದಲೇ ಮಗುವಾಗದ ಸಂಕಟ ನೂರ್ಮಡಿಗೊಂಡು ಜೀವನದ ಸಂತಸವನ್ನೇ ನುಂಗಿಹಾಕುತ್ತದೆ.

ಇಂದು ವೈದ್ಯವಿಜ್ಞಾನ ಬಹಳಷ್ಟು ಮುಂದುವರೆದಿದೆ. ಬಂಜೆತನಕ್ಕೆ ಕಾರಣಗಳನ್ನು ಹುಡುಕಿ ಹಲವು ಪರಿಹಾರಗಳನ್ನೂ ನೀಡಿದೆ. ಸಂಶೋಧನೆಗಳ ಪ್ರಕಾರ ಈ ವೈಫಲ್ಯಕ್ಕೆ ಪ್ರಮುಖ ಕಾರಣ ಮಾನಸಿಕ ಒತ್ತಡ! ಇಂದು ತಾರುಣ್ಯದಲ್ಲಿರುವ ಹೆಚ್ಚುಕಡಿಮೆ ಎಲ್ಲರೂ ಉದ್ಯೋಗದಲ್ಲಿದ್ದಾರೆ. ಸ್ವಾಭಾವಿಕವಾಗಿ ಹೆಗಲ ಮೇಲೆ ಬಿದ್ದಿರುವ ಕೆಲಸದ ಭಾರ ಬೇಡವೆಂದರೂ ಕೆಲವು ಒತ್ತಡಗಳನ್ನು ನೀಡುತ್ತದೆ.

ಪರಿಣಾಮವಾಗಿ ದೇಹದ ಸೂಕ್ಷ್ಮ ಅಂಗಗಳು ತಮ್ಮ ವೇಳಾಪಟ್ಟಿಗನುಸಾರವಾಗಿ ಸ್ಪಂದಿಸದೇ ಬಸಿರಾಗಲು ನಿರಾಕರಿಸುತ್ತವೆ. ತಿಂಗಳ ರಜಾದಿನಗಳು ಮೇಲೆ ಕೆಳಗಾಗುತ್ತವೆ. ಬಸಿರಾಗದಿರಲು ನೀವು ಹುಡುಕಬೇಕಾದ ಮೊದಲ ಕಾರಣವೆಂದರೆ ನಿಮ್ಮ ಮೇಲಿನ ಒತ್ತಡ. ಇದರ ಹೊರತಾಗಿ ಸಾಫಲ್ಯಕ್ಕೆ ಅಡ್ಡಗಾಲು ಹಾಕುವ ಇನ್ನಿತರ ಕಾರಣಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಮಹಿಳೆಯರಲ್ಲಿ ಬಂಜೆತನ ತಡೆಯುವ ವಿಧಾನಗಳು

ಏರುಪೇರಾದ ನಿದ್ದೆ
ಅಂಡಾಶಯದಿಂದ ಬಿಡುಗಡೆಯಾಗುವ ಅಂಡಾಣು, ಗರ್ಭಾಶಯವನ್ನು ಸಿದ್ಧಗೊಳಿಸುವುದು, ಫೆಲೋಪಿಯನ್ ನಾಳವನ್ನು ವೀರ್ಯದ ಸ್ವಾಗತಕ್ಕೆ ಅಣಿಯಾಗಿಸುವುದು ಮೊದಲಾದವೆಲ್ಲಾ ರಾತ್ರಿ, ಶರೀರ ಪೂರ್ಣ ವಿಶ್ರಾಂತಿಯಲ್ಲಿದ್ದಾಗ ನಡೆಯುವ ಅನೈಚ್ಛಿಕ ಕಾರ್ಯಗಳು. ಈ ವೇಳೆಯಲ್ಲಿ ನಿದ್ದೆಯಿಲ್ಲದಿದ್ದರೆ, ಆ ಕಾರ್ಯ ನಡೆಯುವುದಾದರೂ ಹೇಗೆ? ಬಸಿರಾಗುವ ಮುನ್ನ ಬಸಿರಿಗೆ ಅಗತ್ಯವಾದ ಪೂರ್ವತಯಾರಿಗಳು ಮುಖ್ಯ. ಅದಕ್ಕೆ ಸಾಕಷ್ಟು ನಿದ್ದೆ, ಅದರಲ್ಲೂ ಗಾಢನಿದ್ದೆ ತುಂಬಾ ಅಗತ್ಯ.


ಒಂದು ವೇಳೆ ನಿಮ್ಮ ನಿದ್ದೆ ತುಂಡುತುಂಡಾಗಿ ಅರ್ಧಂಬರ್ಧವಾಗಿದ್ದರೆ ಈ ತಯಾರಿಗಳೂ ಅರ್ಧಂಬರ್ಧವಾಗಿ ನಡೆದು ಸೋಂಕು ಉಂಟಾಗುತ್ತದೆ. ಪರಿಣಾಮವಾಗಿ ತಿಂಗಳ ವೇಳಾಪಟ್ಟಿಯ ದಿನ ಬಿಡುಗಡೆಯಾಗಬೇಕಿದ್ದ ಅಂಡಾಣು ಸರಿಯಾಗಿ ಬಿಡುಗಡೆಯಾಗದೇ ದೇಹದಿಂದ ಹೊರಹೋಗುತ್ತದೆ. ಆದ್ದರಿಂದ ಮೊದಲು - "ಪೂರ್ಣವಾದ ನಿದ್ದೆ ಮಾಡಿ".

ಅತಿಕಡಿಮೆ ಅಥವಾ ಅತಿಹೆಚ್ಚು ತೂಕ
ನಿಮ್ಮ ದೇಹದ ತೂಕ ಅತಿಕಡಿಮೆಯೂ ಇರಬಾರದು ಮತ್ತು ಅತಿಹೆಚ್ಚೂ ಇರಬಾರದು. ಬಸಿರಾಗದಿರಲು ಈ ಎರಡೂ ಕಾರಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಡಿಮೆ ತೂಕ ಎಂದರೆ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ದೊರಕದೇ ಇರುವುದು. ಆಗ ದೇಹ ಲಭ್ಯವಿರುವ ಪೌಷ್ಟಿಕಾಂಶಗಳನ್ನು ಅಗತ್ಯ ಅಂಗಗಳಿಗೆ ಹೆಚ್ಚಾಗಿ ನೀಡಿ ಕಡಿಮೆ ಅಗತ್ಯದ ಅಂಗಗಳಿಗೆ ಕಡಿಮೆ ಒದಗಿಸುತ್ತದೆ. ವಿಪರ್ಯಾಸವೆಂದರೆ ಬಸಿರಾಗಲು ಅಗತ್ಯವಿರುವ ಅಂಗಗಳನ್ನು ಈ ಸಮಯದಲ್ಲಿ ದೇಹ ಕಡಿಮೆ ಅಗತ್ಯದ ಅಂಗ ಎಂದೇ ಪರಿಗಣಿಸುತ್ತದೆ.


ಸೂಕ್ತ ಪೋಷಣೆಯಿಲ್ಲದೆ ಅಂಡಾಶಯ ಅಂಡಾಣುವನ್ನು ಬಿಡುಗಡೆ ಮಾಡಲು ಸೋಲುತ್ತದೆ. ಆಗ ಬಸಿರು ಕನಸಾಗುತ್ತದೆ. ಅದೇ ಸ್ಥೂಲಕಾಯದಲ್ಲಿಯೂ ಇದಕ್ಕೆ ಸಮಾನವಾದ ಪ್ರಕ್ರಿಯೆಯನ್ನು ಕಾಣಬಹುದು. ಹೇಗೆಂದರೆ ದೇಹದಲ್ಲಿ ಶೇಖರವಾದ ಭಾರೀ ಕೊಬ್ಬಿನ ಕಾರಣ ಪ್ರತಿ ಚಟುವಟಿಕೆಗೂ ದೇಹದ ಸ್ನಾಯುಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಆ ಕಾರಣ ದೇಹ ಪೌಷ್ಟಿಕಾಂಶಗಳನ್ನು ಇಲ್ಲಿ ದಹಿಸಬೇಕಾಗುತ್ತದೆ. ಕಡಿಮೆ ಅಗತ್ಯದ ಅಂಡಾಶಯಕ್ಕೆ ಸಾಕಷ್ಟು ಪೌಷ್ಟಿಕಾಂಶಗಳು ಲಭ್ಯವಾಗದೇ ಬಸಿರಾಗುವ ಸಂಭವವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಮೊದಲು ನಿಮ್ಮ ಎತ್ತರಕ್ಕೆ ಸರಿಯಾದ ತೂಕವನ್ನು ಪಡೆದುಕೊಳ್ಳಿ. ಇದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿ ನಿಮ್ಮ ದೈಹಿಹ ಚಟುವಟಿಕೆಗಳನ್ನು ಹೆಚ್ಚಿಸಿ, ತೂಕ ಹೆಚ್ಚಿಸುವ ಆಹಾರಗಳನ್ನು ತಿರಸ್ಕರಿಸಿ.

ಆಧುನಿಕ ತಂತ್ರಜ್ಞಾನದ ಪರಿಣಾಮಗಳು
ಇಂದು ಮೊಬೈಲ್, ಲ್ಯಾಪ್ ಟಾಪ್ ಇಲ್ಲದ ಜನರಿಲ್ಲ. ನಿಮ್ಮ ಪತಿ ತಮ್ಮ ಮೊಬೈಲು ಮತ್ತು ಲ್ಯಾಪ್ ಟಾಪ್ ಗಳನ್ನು ಹೇಗೆ ಉಪಯೋಗಿಸುತ್ತಾರೆ ಎಂದು ಕೊಂಚ ಗಮನಿಸಿ. ದಿನವಿಡೀ ಮೊಬೈಲು ಜೇಬಿನಲ್ಲಿರುವ ಕಾರಣ ಮೊಬೈಲು ಸತತವಾಗಿ ಕಳುಹಿಸುವ ಮತ್ತು ಸ್ವೀಕರಿಸುವ ವಿದ್ಯುದಾಯಸ್ಕಾಂತ (electromagnetic radiation) ಕಿರಣಗಳು ವೃಷಣಗಳ ಕಾರ್ಯಕ್ಷಮತೆಗೆ ಅಡ್ಡಿಪಡಿಸುತ್ತವೆ. ಇದರಿಂದಾಗಿ ಉತ್ಪತ್ತಿಯಾದ ವೀರ್ಯಾಣುಗಳು ಸದೃಢವಾಗಿರುವುದಿಲ್ಲ ಅಥವಾ ಸಂಖ್ಯೆಯಲ್ಲಿ ಕಡಿಮೆಯಾಗುತ್ತದೆ. ಗರ್ಭಾಂಕುರಕ್ಕೆ ಕೇವಲ ಒಂದೇ ವೀರ್ಯಾಣು ಸಾಕಾದರೂ ಕನಿಷ್ಟ ಒಂದು ಮಿಲಿಲೀಟರಿನಲ್ಲಿ ಇಪ್ಪತ್ತು ಮಿಲಿಯನ್ ವೀರ್ಯಾಣುಗಳು ಏಕೆ ಬೇಕು ಎಂಬುದು ಇನ್ನೂ ವಿವರಿಸಲಾಗದ ರಹಸ್ಯವಾಗಿದೆ.


ಖಚಿತವಾದ ಗರ್ಭಾಂಕುರಕ್ಕೆ ನೂರು ಮಿಲಿಯನ್ ಇದ್ದರೆ ಒಳ್ಳೆಯದು. ಪುರುಷರಲ್ಲಿ ಈ ಸಂಖ್ಯೆ ಏರಿಳಿತವಾಗಲು ಆಧುನಿಕ ತಂತ್ರಜ್ಞಾನ ಪರೋಕ್ಷವಾಗಿ ಕಾರಣವಾಗಿದೆ. ಅಷ್ಟೇ ಅಲ್ಲದೇ ಆಹಾರ, ಮದ್ಯಪಾನ, ಧೂಮಪಾನ, ಇಡಿಯ ದಿನ ಕುಳಿತಿರುವುದು, ಡ್ರೈವಿಂಗ್ ಮೊದಲಾದವು ತಮ್ಮ ಪಾಲಿನ ದೇಣಿಗೆ ನೀಡುತ್ತವೆ. ಆದ್ದರಿಂದ ಗರ್ಭ ಧರಿಸದಿರಲು ನಿಮ್ಮ ಮೇಲೆ ಪೂರ್ಣವಾಗಿ ಹೊರೆ ಹೇರದಿರಲು ಮೊದಲು ನಿಮ್ಮ ಪತಿಯ ವೀರ್ಯಾಣುಗಳನ್ನು ಪ್ರಯೋಗಾಲಯದಲ್ಲಿ ತಪಾಸಿಸಿ ವಿವರಗಳನ್ನು ಪಡೆದು ತಜ್ಞವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಿರಿ. ಋತುಚಕ್ರದ ವೇಳೆ ಆಗುವ ಬದಲಾವಣೆಗಳು

ಒಸಡುಗಳಲ್ಲಿ ರಕ್ತ ಒಸರುವುದು
ಪ್ರತಿಬಾರಿ ಹಲ್ಲುಜ್ಜಿದ ಬಳಿಕ ಹಲ್ಲು ಮತ್ತು ಒಸಡುಗಳು ಕೂಡುವಲ್ಲಿ ರಕ್ತ ಒಸರುತ್ತಿದೆಯೇ ಗಮನಿಸಿ. ಹಾಗೂ ಒಸಡುಗಳು ಗುಲಾಬಿ ಬಣ್ಣದಲ್ಲಿಲ್ಲದೇ ಕೆಂಪಗಾಗಿ ಊದಿಕೊಂಡಿದ್ದರೆ ಅದಕ್ಕೆ "periodontal disease" ಎಂದು ಕರೆಯುತ್ತಾರೆ.

ವಾಸ್ತವವಾಗಿ ಇದು ದೇಹದ ಒಳಭಾಗಲ್ಲಿ ಆಗಿರುವ ತೊಂದರೆಯ ಪಾರ್ಶ್ವ ಪರಿಣಾಮ. ಈ ಕಾಯಿಲೆಯಿಂದಾಗಿ ಬಸಿರಾಗುವ ಸಂಭವ ಕನಿಷ್ಟ ಎರಡು ತಿಂಗಳಿಗೆ ಮುಂದೆ ಹೋಗುತ್ತದೆ. ಒಂದು ವೇಳೆ ಎಲ್ಲಾ ಸರಿ ಇದ್ದು ಬಸಿರಾಗದೇ ಇದ್ದರೆ ಈ ಕಾಯಿಲೆಯ ಲಕ್ಷಣಗಳನ್ನು ಗಮನಿಸಿ ಸೂಕ್ತ ಚಿಕಿತ್ಸೆಗಳನ್ನು ಪಡೆಯಿರಿ. ತಾಯ್ತನದ ಸಂತಸಕ್ಕೆ ಅಡ್ಡಿಯಾಗದಿರಲಿ ನಿಮ್ಮ ದಿನಚರಿ!

ಪಿಸಿಓಎಸ್ (PCOS)
Polycystic Ovarian Syndrome ಅಥವಾ PCOS ಎಂದು ಕರೆಯಲಾಗುವ ಈ ಸ್ಥಿತಿ ತುಂಬಾ ಕ್ಲಿಷ್ಟಕರ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಅಂಡಾಶಯದಲ್ಲಿರುವ ಅಂಡವನ್ನು ಚಿಕ್ಕ ಚಿಕ್ಕ ನೀರುತುಂಬಿದ ಗುಳ್ಳೆಗಳು ಸುತ್ತುವರೆದಿರುವುದು. ಇದಕ್ಕೆ Polycystic ovaries ಎಂದು ಕರೆಯುತ್ತಾರೆ. ಆಗ ಅಂಡಾಶಯಕ್ಕೆ ಈ ಅಂಡವನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಅಂಡಾಶಯ ಪ್ರತಿತಿಂಗಳ ಅಂಡಾಣುವನ್ನು ಬಿಡುಗಡೆ ಮಾಡದೇ ತಿಂಗಳ ಸ್ರಾವ ಏರುಪೇರಾಗುತ್ತದೆ.ಪಾರ್ಶ್ವ ಪರಿಣಾಮಗಳಾಗಿ ಮುಖದ ಮೇಲೆ ಕೂದಲು ಬೆಳೆಯುವುದು, ಕೆಂಪಾದ ಮತ್ತು ದೊಡ್ಡ ದೊಡ್ಡ ಮೊಡವೆ, ಕೂದಲು ಉದುರಿ ತಲೆ ಬೊಕ್ಕವಾಗುವುದು, ಧ್ವನಿ ಗಡುಸಾಗುವುದು ಮೊದಲಾದ ಪುರುಷ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂಡ್ರೋಜೆನ್ ಎಂಬ ಹಾರ್ಮೋನು ಹೆಚ್ಚಾಗಿ ಸ್ರಾವವಾಗುವುದು ಇದಕ್ಕೆ ಕಾರಣ. ಒಂದು ವೇಳೆ ಇದರಲ್ಲಿ ಯಾವುದೊಂದಾದರೂ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ತಪಾಸಿಸಿಕೊಳ್ಳಿ. ಸೂಕ್ತವಾದ ಔಷಧಿ, ಆಹಾರ ಮತ್ತು ವ್ಯಾಯಾಮಗಳಿಂದ ಈ ಸ್ಥಿತಿಯಿಂದ ಖಂಡಿತಾ ಹೊರಬರಬಹುದು.


ಅಷ್ಟೇ ಅಲ್ಲದೇ ನೀವು ಸೇವಿಸುವ ಆಹಾರದಲ್ಲಿ ಬಸಿರನ್ನು ಕೊಲ್ಲುವ ವಿಷಾಹಾರಗಳಿವೆಯೇ ಎಂದು ಗಮನಿಸಿ. ಹಸಿ ಪೊಪ್ಪಾಯಿ, ಸೋಯಾ ಅವರೆಯ ಹಾಲು, ಹಾಗೂ ಸೋಯಾ ಆಧಾರಿತ ಆಹಾರಗಳು, ಹೆಚ್ಚಿನ ಕೆಫೀನ್ ಇರುವ ಕಾಫಿ ಮತ್ತು ಇತರ ಪಾನೀಯಗಳು, ಪಾದರಸ ಇರುವ ಮೀನು (ಎಣ್ಣೆಯಂಶ ಜಾಸ್ತಿ ಇರುವ, ಕೊಂಚ ಕಿತ್ತಳೆ ಬಣ್ಣ ಇರುವ ಮೀನುಗಳು, ಉದಾಹರಣೆಗೆ ಶಾರ್ಕ್, ಕಿಂಗ್ ಫಿಶ್, ಬಂಗಡೆ, ಟ್ಯೂನಾ ಮೊದಲಾದವು), ಮದ್ಯಪಾನ, ಧೂಮಪಾನ, ಎಲ್ಲವೂ ನಿಮ್ಮ ಬಸಿರಿನ ಕನಸನ್ನು ಭಗ್ನಗೊಳಿಸುತ್ತವೆ. ಬಿಸಿನೀರಿನ ಟಬ್ ನಲ್ಲಿ ಮುಳುಗಿ ಸ್ನಾನ ಮಾಡುವುದೂ ನಿಮಗೆ ಸೂಕ್ತವಲ್ಲ. ಗಾಳಿಗುಳ್ಳೆ ಬರುವ ಪಾನೀಯಗಳು, ಉದಾಹರಣೆಗೆ ಸೋಡಾ, ಸಾಫ್ಟ್ ಡ್ರಿಂಕ್ ಮೊದಲಾದವು ನಿಯಮಿತ ಪ್ರಮಾಣ ಮೀರಿದರೆ ಬಸಿರಿಗೆ ಮಾರಕ. ನಿಮ್ಮ ಸುರಕ್ಷತೆಗೆ ಕೊಂಚವೂ ಕುಡಿಯದೇ ಇರುವುದು ಮೇಲು.
Read more about: infertility ಬಂಜೆತನ
English summary

Why You Are Not Getting Pregnant?

Trying to get pregnant is not at all easy although it may seem like a piece of cake. To get pregnant, you have to be ready emotionally and physically. With stress and work pressures creating havoc in life,there are many reasons why you are not getting pregnant. Popular perception always put woman at fault.
X
Desktop Bottom Promotion