For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವಿನ ಬಗ್ಗೆ ಅರಿತುಕೊಳ್ಳುವುದು ಹೇಗೆ ?

By Super
|

ನೀವು ಗರ್ಭಿಣಿಯಾದರೂ ನಿಮಗೆ ಮಗುವಿನ ಬಗ್ಗೆ ಏನಾದರೂ ಗೊತ್ತಿದೆಯೇ? ನಮ್ಮ ಮಗುವಿನ ಬಗ್ಗೆ ಕೇವಲ ಕೆಲವೇ ವಿಷಯಗಳು ಮಾತ್ರ ಗೊತ್ತಿರುತ್ತದೆ! ಈ ಲೇಖನದ ಮೂಲಕ ಮಕ್ಕಳ ಬಗ್ಗೆ ಅರಿಯುವುದು ಹೇಗೆ ಎಂದು ತಿಳಿಯಬಹುದು. ಮಕ್ಕಳು ಮಲಗಿರುವಾಗ ಹಾಗೂ ಅವರು ಅಳುವಾಗಿನ ಸಂದರ್ಭಗಳನ್ನು ಬಿಟ್ಟು, ನಿಮ್ಮ ಮಗುವಿನ ಆಟ ಹಾಗೂ ಹಾವ ಭಾವಗಳನ್ನು ನೀವು ಖಂಡಿತವಾಗಿಯೂ ಖುಷಿಯಿಂದ ಅನುಭವಿಸುತ್ತೀರಿ.

ಹಂತಗಳು :

1. ನಿಮ್ಮಲ್ಲಿ ನಿಮ್ಮ ಮಗುವಿನ ಬಗ್ಗೆ ಏನೇ ಪ್ರಶ್ನೆಗಳಿದ್ದರೂ ಆತಂಕಗಳಿದ್ದರೂ ಅದನ್ನು ಕೇಳಿ ಬಗೆಹರಿಸಿಕೊಳ್ಳಿ. ಎಲ್ಲಾ ಮಕ್ಕಳು ಒಬ್ಬರಿಗಿಂತ ಒಬ್ಬರು ಬೇರೆಯಾಗಿಯೇ ಇರುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೇ ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಇಂಟರ್ ನೆಟ್ / ಅಂತರ್ಜಾಲದ ಮೂಲಕವೂ ಪಡೆಯಬಹುದು .

How to Learn About Babies

2. ಮಕ್ಕಳಿಗೆ ಸಂಬಧಿಸಿದ ಪುಸ್ತಕಗಳನ್ನು ಓದಿ. ಇಂತಹ ಪುಸ್ತಕಗಳನ್ನು ಲೈಬ್ರರಿ / ಗ್ರಂಥಾಲಯಗಳಲ್ಲಿ ಅಥವಾ ಪುಸ್ತಕದ ಅಂಗಡಿಗಳಲ್ಲಿ ದೊರೆಯುತ್ತದೆ. ಈ ಪುಸ್ತಕದಲ್ಲಿ ನೀವು ಕೆಳಗಿನ ಪ್ರಾಥಮಿಕ ಅಂಶಗಳನ್ನು ಕಾಣಬಹುದು.

ಮಗುವಿಗೆ ಹೇಗೆ ಬಾಟಲ್ (ಹಾಲಿನ ಬಾಟಲ್) ಸಿದ್ಧಗೊಳಿಸುವುದು?

ಮಗುವನ್ನು ಮಲಗುವಂತೆ ಮಾಡುವುದು ಹೇಗೆ ?

ಮಗು ಅಳುವುದನ್ನು ನಿಲ್ಲಿಸುವುದು ಹೇಗೆ ?

ಹೀಗೆ ತಾಯಿಯಾಗುತ್ತಿರುವ ನಿಮಗೆ ಉಪಯೋಗವಾಗುವಂತಹ ಹಲವಾರು ಅಂಶಗಳು ಇದರಲ್ಲಿ ಇರುವುದರಿಂದ ನೀವು ಲೈಬ್ರರಿಗಳಿಂದ ಇಂತಹ ನೂತನ ಪುಸ್ತಕಗಳನ್ನು ತಂದು ಓದಬಹುದು.

3. ಮಕ್ಕಳನ್ನು ಬೆಳೆಸುವುದರ ಬಗ್ಗೆ ಸ್ಥಳೀಯ ಶಾಲಾ ಕಾಲೇಜುಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಿ. ಇದರಿಂದ ಮಕ್ಕಳನ್ನು ನಿಯಂತ್ರಿಸುವುದಕ್ಕೆ ನಿಮಗೆ ಸಹಾಯವಾಗುತ್ತದೆ.

4. ನಿಮ್ಮ ಸ್ನೇಹಿತರನ್ನು ಈ ಬಗ್ಗೆ ಕೇಳಿ ಅವರಿಗೆ ಗೊತ್ತಿರುವ ವಿಷಯಗಳನ್ನು ತಿಳಿದುಕೊಳ್ಳಿ. ಆದರೆ ನಿಮ್ಮ ಆ ಸ್ನೇಹಿತರು ಮಗುವನ್ನು ಹೆತ್ತು ಅನುಭವವಿದ್ದವರಾದರೆ ನಿಮಗೆ ಸಹಾಯವಾಗುತ್ತದೆ.

5. ನಿಮ್ಮ ಸ್ವಂತ ಆನುಭವದಿಂದಲೂ ಕಲಿಯಿರಿ. ಇದು ಬಹಳ ಮುಖ್ಯವಾದುದು. ಎಲ್ಲಾ ಮಕ್ಕಳಿ ಒಬ್ಬರಿಗಿಂತ ಒಬ್ಬರು ಬೇರೆಯೇ ಆಗಿರುವುದರಿಂದ ನಿಮ್ಮೆಲ್ಲ ಪ್ರಶ್ನೆಗಳಿಗೆ ಪುಸ್ತಕ ಅಥವಾ ಇಂಟರ್ ನೆಟ್ ನಿಂದಲೇ ಸಂಪೂರ್ಣ ಉತ್ತರಗಳು ದೊರೆಯುತ್ತವೆ ಎಂದು ಹೇಳಲಾಗುವುದಿಲ್ಲ. ನೀವು ನೀವು ಮಾಡುವ ತಪ್ಪುಗಳಿಂದಲೇ ಮಗುವನ್ನು ಬೆಳೆಸುವುದನ್ನು ಕಲಿತರೆ ನೀವು ಅತ್ಯಂತ ಸಂತೋಷದ ಪೋಷಕರಾಗುತ್ತೀರಿ ಜೊತೆಗೆ ನಿಮ್ಮ ಮಗುವಿನ ಅಳುವನ್ನೂ ನೀವಾಗಿಯೇ ನಿಲ್ಲಿಸಬಲ್ಲಿರಿ !

ಸಲಹೆಗಳು :

ನಿಮಗೆ ಏನು ಮಾಡಬೇಕು ಎಂದು ಗೊತ್ತಿಲ್ಲದಿದ್ದರೆ ಅದನ್ನು ತಿಳಿಯುವವರೆಗೂ ಮಾಡಬೇಡಿ. ಇದರಿಂದ ನೀವು ನಿಮ್ಮ ಮಗುವಿನೊಂದಿಗೆ ಸಂತೋಷದಿಂದ ಇರಲು ಸಾಧ್ಯವಿಲ್ಲ.

ನೀವು ನಿಮ್ಮ ಮಗುವಿಗೆ ಜನನ ಕೊಡುವುದಕ್ಕೆ ಮೊದಲೇ ಎಷ್ಟು ಕಲಿಯಲಾಗುತ್ತದೆಯೋ ಅಷ್ಟು ಅರಿತುಕೊಳ್ಳಿ. ಇದರಿಂದ ನಿಮ್ಮ ಮಗುವನ್ನು ಬೆಳಿಸುವುದರಲ್ಲಿ ನೀವು ಸಂಪೂರ್ಣ ತಯಾರಾಗಬಹುದು.

ಸಂತೋಷದಿಂದಿರಿ. ನಿಮಗೆ ಮಗುವಿನ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ನಿಮ್ಮ ಮಗು ತಮಾಷೆಯಾಗಿ, ಚುರುಕಾಗಿಯೇ ಇರುತ್ತದೆ. ಮಕ್ಕಳು ಕೀಟಲೆಗಳನ್ನು ಮಾಡುತ್ತಾರೆವಾದರೆ ನೀವು ನಿಮ್ಮ ಮಗುವನ್ನು ತುಂಬಾ ಪ್ರೀತಿಸಿತ್ತಿದ್ದರೆ ನಿಮಗೆ ಇದರಿಂದ ಬೇಸರವಾಗುವುದಿಲ್ಲ. ನಿಮ್ಮ ಮಗು ಬೆಳೆಯುವುದಕ್ಕಿಂತ ಮೊದಲು ಅದರ ಆಟಗಳೊಂದಿಗೆ ನೀವು ಆನಂದಿಸಿ.

ಒಟ್ಟಿನಲ್ಲಿ ಆರಂಭದಲ್ಲಿ ನೀವು ಮಗುವಿಮ ಬಗ್ಗೆ ಏನೆ ಅರಿತಿರದಿದ್ದರೂ ನಂತರ ನಿಮ್ಮ ಸ್ವಂತ ಅನುಭವ ಹಾಗೂ ಇನ್ನಿತರ ಕಾರಣಗಳಿಂದ ಮಗುವಿನ ಲಾಲನೆ ಪಾಲನೆ ಮಾಡುವುದನ್ನು ಚೆನ್ನಾಗಿಯೇ ಅರಿತುಕೊಳ್ಳುತ್ತೀರಿ. ಆದ್ದರಿಂದ ಹುಟ್ಟಿದ ಆ ಪುಟ್ಟ ಕಂದಮ್ಮನೊಂದಿಗೆ ನಿಮ್ಮ ಒಂದೊಂದು ಕ್ಷಣಗಳನ್ನು ಮಧುರವಾಗಿಸಿ!

Read more about: ಮಗು ತಾಯಿ baby mother
English summary

How to Learn About Babies | Tips For parents | ನಿಮ್ಮ ಮಗುವಿನ ಬಗ್ಗೆ ಅರಿತುಕೊಳ್ಳುವುದು ಹೇಗೆ ? | ಪೋಷಕರಿಗೆ ಕೆಲ ಸಲಹೆಗಳು

Are you pregnant but dont really know anything about babies? We all know babies can be a real handful! But if you read this article you can find out how to learn about Babies so that, apart from the sleepless nights and all the crying, you will be able to enjoy the baby and also see the good and REALLY cute sides of it!!
X
Desktop Bottom Promotion