ಚಳಿಗಾಲದಲ್ಲಿ ಪುಟ್ಟ ಕಂದಮ್ಮನ ಆರೋಗ್ಯ ಕಾಳಜಿ....

By: Hemanth
Subscribe to Boldsky

ಚಳಿಗಾಲವೆಂದರೆ ಭಾರೀ ಸವಾಲಿನದ್ದಾಗಿರುತ್ತದೆ. ಯಾಕೆಂದರೆ ನಮ್ಮ ಆರೋಗ್ಯ ಹಾಗೂ ತ್ವಚೆಯನ್ನು ಕಾಪಾಡಿಕೊಳ್ಳುವುದು ತುಂಬಾ ಕಠಿಣ ಸವಾಲು. ಸಣ್ಣ ಮಕ್ಕಳು ಇದ್ದರೆ ಅವರ ಆರೈಕೆ ಮಾಡುವುದು ಕಷ್ಟ.

ಅದರಲ್ಲೂ ಒಂದು ವರ್ಷಕ್ಕಿಂತ ಸಣ್ಣ ಮಕ್ಕಳು ಇದ್ದರೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಮಕ್ಕಳಲ್ಲಿನ ಪ್ರತಿರೋಧಕ ವ್ಯವಸ್ಥೆಯು ಚಳಿಗಾಲದಲ್ಲಿ ಕಾಡುವಂತಹ ಸೋಂಕುಗಳನ್ನು ನಿವಾರಿಸುವಷ್ಟು ಬಲಿಷ್ಠವಾಗಿರುವುದಿಲ್ಲ. ಶಿಶುಗಳಿಗೆ ಈ ಹವಾಮಾನವು ತುಂಬಾ ಅಹಿತಕರವಾಗಿರುತ್ತದೆ ಮತ್ತು ಮೊದಲ ಸಲ ಇಂತಹ ಹವಾಮಾನಕ್ಕೆ ಅವುಗಳು ಹೊಂದಿಕೊಳ್ಳಲು ಪ್ರಯತ್ನಿಸುತ್ತವೆ. ಕಂದಮ್ಮನ ನಿದ್ದೆಯ ಅವಧಿ ಹೇಗಿರಬೇಕು? ಇತ್ತ ಗಮನಿಸಿ...   

1-Year-Old Babies
 

ಅದರಲ್ಲೂ ಸಣ್ಣ ಮಕ್ಕಳ ಚರ್ಮ ಕೂಡ ಚಳಿಗೆ ಹೊಂದಿಕೊಳ್ಳಲು ಕಷ್ಟಪಡುತ್ತದೆ. ಇದರಿಂದ ಶಿಶುಗಳನ್ನು ಚಳಿಗಾಲದಲ್ಲಿ ಯಾವ ರೀತಿ ಆರೈಕೆ ಮಾಡಬಹುದು ಎನ್ನುವ ಬಗ್ಗೆ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಇದನ್ನು ಪಾಲಿಸಿಕೊಂಡು ಹೋಗಿ. ಚಳಿಗಾಲದಲ್ಲಿ ಶಿಶುಗಳ ಆರೈಕೆ ಮಾಡಿ. 

1-Year-Old Babies
 

ಬಿಸಿ ಬಟ್ಟೆ
ದೊಡ್ಡವರಿಗಿಂತ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಇದಕ್ಕೆ ಮಕ್ಕಳನ್ನು ಹೆಚ್ಚಿನ ಬಟ್ಟೆಯಿಂದ ಸುತ್ತಿಡಬೇಕು. ಕೋಣೆಯಲ್ಲಿ ತಾಪಮಾನವನ್ನು ಪರೀಕ್ಷಿಸಿ ಅದಕ್ಕೆ ತಕ್ಕಂತೆ ಮಗುವಿಗೆ ಬಟ್ಟೆ ಧರಿಸಿ. ಮನೆಯಿಂದ ಹೊರಗಡೆ ಮಗುವನ್ನು ಕರೆದುಕೊಂಡು ಹೋಗುವಾಗ ಹೆಚ್ಚಿನ ಬಟ್ಟೆಯಿಂದ ಮಗುವನ್ನು ಮುಚ್ಚಿಕೊಳ್ಳಿ. ಇದರಿಂದ ಮಗುವಿಗೆ ಚಳಿಯಾಗುವುದು ತಪ್ಪುತ್ತದೆ. ಚಳಿಗಾಲದಲ್ಲಿ ಕಾಲ್ಚೀಲ ಮತ್ತು ಕೈಗವಸು ಧರಿಸುವುದು ಅತ್ಯಗತ್ಯ.       ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು   

1-Year-Old Babies
 

ಭಾರವಾದ ಕಂಬಳಿ ಬೇಡ
ಹೆಚ್ಚಾಗಿ ಪೋಷಕರು ಸಣ್ಣ ಮಗುವಿಗೆ ರಾತ್ರಿ ವೇಳೆ ಭಾರವಾದ ಕಂಬಳಿಯನ್ನು ಹೊದಿಸುತ್ತಾರೆ. ಅದಾಗ್ಯೂ ಹೀಗೆ ಮಾಡುವುದರಿಂದ ಮಗು ಹಠಾತ್ ಆಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಬಿಸಿ ಬಟ್ಟೆಯನ್ನು ಮಗುವಿಗೆ ಸುತ್ತಿ. ಭಾರವಾದ ಕಂಬಳಿ ಮಗುವಿನ ಮೇಲೆ ಹಾಕಬೇಡಿ.

ಕೋಣೆಯ ತಾಪಮಾನ
ಮನೆಯ ಹೊರಗಡೆ ತಾಪಮಾನವು ಕಡಿಮೆಯಾಗುತ್ತಿರುವಾಗ ಕೋಣೆಯಲ್ಲಿ ಮಗುವಿಗೆ ಬೇಕಾದಂತೆ ತಾಪಮಾನವನ್ನು ಕಾಪಾಡುವುದು ತುಂಬಾ ಮುಖ್ಯ. ರಾತ್ರಿ ವೇಳೆ ಕೋಣೆಯ ಎಲ್ಲಾ ಕಿಟಕಿ ಬಾಗಿಲು ಹಾಗೂ ಬಾಗಿಲು ಮುಚ್ಚಿ ತಣ್ಣಗಿನ ಗಾಳಿ ಒಳಗೆ ಬರದಂತೆ ನೋಡಿಕೊಳ್ಳಬೇಕು.   

1-Year-Old Babies oil massage
 

ಮಸಾಜ್
ಹಿಂದಿನಿಂದಲೂ ಚಳಿಗಾಲದಲ್ಲಿ ಮಕ್ಕಳಿಗೆ ಮಸಾಜ್ ಮಾಡಿಕೊಂಡು ಬರುವುದು ರೂಢಿಯಾಗಿದೆ. ಒಳ್ಳೆಯ ಮಸಾಜ್ ಮಾಡಿದರೆ ಮಕ್ಕಳ ದೇಹವು ಬಿಸಿಯಾಗಿರುತ್ತದೆ. ಬಾದಾಮಿ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸಿ. ಇದರಿಂದ ಚರ್ಮವು ಆರೋಗ್ಯಕರವಾಗಿರುವುದು. ಮಗುವಿಗೆ ಮಸಾಜ್ ಮಾಡಲು ಸೂಕ್ತವಾದ ಎಣ್ಣೆ ಯಾವುದು?  

1-Year-Old Babies
 

ಅತಿಯಾಗಿ ಮಕ್ಕಳ ಉತ್ಪನ್ನಗಳ ಬಳಕೆ ಮಾಡಬೇಡಿ
ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅತಿಯಾಗಿ ಮಕ್ಕಳ ಉತ್ಪನ್ನಗಳನ್ನು ಬಳಕೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಕೆಲವರು ಶಾಂಪೂ, ಸೋಪು, ಲೋಷನ್ ಇತ್ಯಾದಿಗಳನ್ನು ಬಳಸುತ್ತಾರೆ. ಇದು ಮಕ್ಕಳಿಗೆ ತುಂಬಾ ಅಪಾಯಕಾರಿ. ಮಕ್ಕಳಿಗೆ ಹಗುರ ಸೋಪು ಅಥವಾ ಶಾಂಪೂ ಬಳಸಿದರೆ ಒಳ್ಳೆಯದು. ಪೋಷಕರೇ ನೆನಪಿರಲಿ ಬೇಬಿ ಪೌಡರ್ ತುಂಬಾ ಅಪಾಯಕಾರಿ!

Story first published: Thursday, December 1, 2016, 23:14 [IST]
English summary

Winter Care Tips For Less Than 1-Year-Old Babies

Winter is a challenging time whenever we consider our health and beauty. It is more or less the same with your children as well. Parents have to go through many challenges, as winter hits the corner, especially those who have children less than one year of age.
Please Wait while comments are loading...
Subscribe Newsletter