ಪೋಷಕರೇ ನೆನಪಿರಲಿ ಬೇಬಿ ಪೌಡರ್ ತುಂಬಾ ಅಪಾಯಕಾರಿ!

ಮಕ್ಕಳಿಗೆ ಹಾಕುವ ಪೌಡರ್‌ನಿಂದ ಯಾವೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಮಕ್ಕಳ ಪೌಡರ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೆಲವೊಂದು ಮೂಲಗಳು ಹೇಳಿವೆ.

By: manu
Subscribe to Boldsky

ಮಗು ಜನಿಸಿದ ಬಳಿಕ ಅದರ ಆರೈಕೆ ಹೆತ್ತವರ ಮೊದಲ ಆದ್ಯತೆಯಾಗಿರುತ್ತದೆ. ಮಗುವನ್ನು ಸ್ನಾನ ಮಾಡಿಸಿ ಅದಕ್ಕೆ ಪೌಡರ್ ಹಚ್ಚುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಮಕ್ಕಳಿಗೆ ಹಚ್ಚುವಂತಹ ಪೌಡರ್ ಎಷ್ಟು ಸುರಕ್ಷಿತ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಟಾಲ್ಕಂ ಪೌಡರ್ ಎಂಬ ಸೈಲೆಂಟ್ ಕಿಲ್ಲರ್‌ ಬಗ್ಗೆ ಎಚ್ಚರವಿರಲಿ!  

Baby Powder Safe
 

ಮಕ್ಕಳಿಗೆ ಹಾಕುವ ಪೌಡರ್‌ನಿಂದ ಯಾವೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಮಕ್ಕಳ ಪೌಡರ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೆಲವೊಂದು ಮೂಲಗಳು ಹೇಳಿವೆ. ಆದರೆ ಇದು ಸಾಬೀತಾಗಿಲ್ಲ. ಮಕ್ಕಳ ಪೌಡರ್ ಯಾವ ರೀತಿಯ ಅಡ್ಡಪರಿಣಾಮಗಳು ಬೀರಬಲ್ಲದು ಎಂದು ತಿಳಿಯಲು ಮುಂದಕ್ಕೆ ಓದುತ್ತಾ ಹೋಗಿ........

Baby Powder Safe?
 

ಟಾಲ್ಕಂ ಪೌಡರ್ ಎನ್ನುವುದು ಟಾಲ್ಕ್‌ನ ಉತ್ಪನ್ನವಾಗಿದೆ. ಹಾಗಾದರೆ ಟಾಲ್ಕ್ ಎಂದರೇನು? ಅಸ್ಪೆಸ್ಪೋಸ್ ಎನ್ನುವ ಅಂಶವನ್ನು ಹೊಂದಿರುವ ಖನಿಜಾಂಶ ಇದಾಗಿದೆ. ಅಸ್ಪೆಸ್ಪೋಸ್ ನಲ್ಲಿ ಮೆಗ್ನಶಿಯಂ, ಆಕ್ಸಿಜನ್, ಸಿಲಿಕಾನ್ ಇತ್ಯಾದಿ ಇದೆ. ಕೆಲವೊಂದು ಮಕ್ಕಳ ಪೌಡರ್ ನಲ್ಲಿ ಜೋಳದ ಪಿಷ್ಠವನ್ನು ಬಳಸುತ್ತಾರೆ.

Baby Powder Safe
 

ಮಕ್ಕಳ ಚರ್ಮ ಒದ್ದೆಯಾಗಿರಬಾರದೆಂಬ ಕಾರಣಕ್ಕಾಗಿ ಪೌಡರ್ ಬಳಸಲಾಗುತ್ತದೆ. ಆದರೆ ಮಕ್ಕಳು ಅಥವಾ ದೊಡ್ಡವರ ಜನನಾಂಗದ ಭಾಗಕ್ಕೆ ಪೌಡರ್ ಅನ್ನು ಬಳಸುವುದು ತುಂಬಾ ಹಾನಿಕಾರಕ. ಮಕ್ಕಳಿಗೆ ಟಾಲ್ಕಂ ಪೌಡರ್ ಬಳಕೆ ಮಾಡುವುದನ್ನು ಕಡೆಗಣಿಸಬೇಕು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ದೊಡ್ಡವರಿಗೆ ಕೂಡ ಟಾಲ್ಕಂ ಪೌಡರ್ ಸುರಕ್ಷಿತವೆಂದು ಸಾಬೀತಾಗಿಲ್ಲ. ಆರೋಗ್ಯ ತಜ್ಞರ ಪ್ರಕಾರ ಟಾಲ್ಕಂ ಪೌಡರ್‌ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇವೆಯಂತೆ. ಕ್ಯಾನ್ಸರ್ ತರುವ ಕೆಮಿಕಲ್ ಬೇಬಿ ಪೌಡರ್ ನಲ್ಲಿದೆಯೇ?  

Baby Powder Safe?
 

ಮಕ್ಕಳಿಗಾಗಿ ತಯಾರಾಗುವಂತಹ ಎಲ್ಲಾ ಪೌಡರ್‌ಗಳು ಅಸುರಕ್ಷಿತವೇ ಎಂದು ಕೇಳಬಹುದು. ಅಸ್ಪೆಸೋಸ್ ಇರುವಂತಹ ಪೌಡರ್ ಗಳು ಮಾತ್ರ ಅಸುರಕ್ಷಿತ. ಅಸ್ಪೆಸೋಸ್ ಇಲ್ಲದೆ ಇರುಂತಹ ಪೌಡರ್ ಗಳ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. 

Baby
 

ಮಕ್ಕಳಿಗೆ ಪೌಡರ್ ಹಾಕದೆ ಇರಬಹುದೇ? ಖಂಡಿತವಾಗಿಯೂ ಮಕ್ಕಳಿಗೆ ಪೌಡರ್ ಹಾಕದೆ ಇರಬಹುದು. ಆದರೆ ಮಕ್ಕಳ ಚರ್ಮವನ್ನು ಸ್ವಚ್ಛ ಹಾಗೂ ಒಣವಾಗಿ ಇಟ್ಟುಕೊಳ್ಳಬೇಕು. ಡೈಪರ್ ನಿಂದಾಗಿ ಮಕ್ಕಳ ತೊಡೆಯಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದರೆ ಆಗ ಕ್ರೀಮ್ ಬಳಸಿ. ಮಕ್ಕಳ ಚರ್ಮಕ್ಕೆ ಸರಿಯಾಗಿ ಗಾಳಿ ಬರುತ್ತಾ ಇರಲಿ ಮತ್ತು ಯಾವಾಗಲು ಅದು ಒಣಗಿರಲಿ. ಫೇಸ್ ಪೌಡರ್ ಹಚ್ಚಿಕೊಳ್ಳಲು 5 ಸರಳ ವಿಧಾನಗಳು   

Baby
 

ಕೆಲವು ಪೌಡರ್‌ಗಳು ಚರ್ಮದ ರಂಧ್ರವನ್ನು ಮುಚ್ಚಿ ಹಾಕುವುದರಿಂದ ಚರ್ಮಕ್ಕೆ ಉಸಿರಾಡಲು ಕಷ್ಟವಾಗುತ್ತದೆ. ಪೌಡರ್ ನಲ್ಲಿ ಇರುವಂತಹ ಕೆಲವೊಂದು ಅಂಶಗಳು ಮಕ್ಕಳಲ್ಲಿ ಉಸಿರಾಟದ ಸಮಸ್ಯೆಯನ್ನು ಉಂಟು ಮಾಡಬಹುದು. ಇಷ್ಟು ತಿಳಿದ ಬಳಿಕವೂ ಮಕ್ಕಳಿಗೆ ಟಾಲ್ಕಂ ಪೌಡರ್ ಬಳಸಬೇಕೆಂದು ಬಯಸಿದ್ದರೆ ನಿಮ್ಮ ಕುಟುಂಬದ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

Story first published: Saturday, November 19, 2016, 13:11 [IST]
English summary

Is Baby Powder Safe?

Most of the mothers use baby powder on the skin of the newly born babies. Is it really safe? Or does it cause any side effects? Well, though there isn't enough evidence on this, some sources claim that baby powder isn't healthy? Read on to know more...
Please Wait while comments are loading...
Subscribe Newsletter