For Quick Alerts
ALLOW NOTIFICATIONS  
For Daily Alerts

ಒಂದೇ ಮಗು ಸಾಕು ಎನ್ನಲು ಒತ್ತಡವೇ ಕಾರಣವಂತೆ!

By Hemanth
|

ಮಕ್ಕಳಿರಲವ್ವ ಮನೆ ತುಂಬಾ ಎಂದು ಮನೆಯ ಹಿರಿಯರು ಹೇಳಿರುವುದನ್ನು ನಾವು ಕೇಳಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಮಗುವನ್ನು ಸಾಕುವ ಜವಾಬ್ದಾರಿ ತುಂಬಾ ತ್ರಾಸದಾಯಕವಾಗಿದೆ. ಇದಕ್ಕೆ ಹಲವಾರು ಕಾರಣಗಳಿದ್ದರೂ ಮೊದಲನೇಯದ್ದಾಗಿ ಆರ್ಥಿಕ ಮುಗ್ಗಟ್ಟು ಪ್ರತಿಯೊಬ್ಬರನ್ನು ಒಂದು ಮಗು ಸಾಕೆನ್ನುವಂತೆ ಮಾಡುತ್ತಿದೆ. ಪತಿ-ಪತ್ನಿ ಇಬ್ಬರು ದುಡಿದರೂ ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದೆ. ಇಂತಹ ಸಮಯದಲ್ಲಿ ಒಂದು ಮಗುವಾದರೆ ಆಗ ಜವಾಬ್ದಾರಿಯ ಜತೆಗೆ ಒತ್ತಡವು ಹೆಚ್ಚುತ್ತಾ ಹೋಗುತ್ತದೆ.

ಅದರಲ್ಲೂ ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಆಗ ಹೆಚ್ಚಿನ ಗಮನ ಹಾಗೂ ಆರೈಕೆ ಬೇಕಾಗುತ್ತದೆ. ಮಗುವನ್ನು ಪಡೆಯುವ ಪೋಷಕರು ಇದಕ್ಕಾಗಿ ಹೆಚ್ಚಿನ ಸಮಯ ಹಾಗೂ ಶಕ್ತಿಯನ್ನು ಮೀಸಲಿಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಅವರ ಜೀವನಶೈಲಿಯೇ ಬದಲಾಗಿ ಹೋಗುತ್ತದೆ. ಅದರಲ್ಲೂ ಉದ್ಯೋಗಸ್ಥ ಪೋಷಕರಿದ್ದರೆ ಅವರ ಪಾಡು ಹೇಳತೀರದು.

How To Deal With Stress When You Have A Newborn?

ಸಣ್ಣ ಮಗುವಿನ ಆಗಮನದೊಂದಿಗೆ ಹೊಸ ಜವಾಬ್ದಾರಿಯೊಂದಿಗೆ ಆರ್ಥಿಕ ಪರಿಸ್ಥಿತಿಯ ಕಡೆ ಕೂಡ ಗಮನಹರಿಸಬೇಕಾಗುತ್ತದೆ. ಸಣ್ಣ ಮಗುವಿನಿಂದಾಗಿ ನೀವು ಒತ್ತಡಕ್ಕೆ ಒಳಗಾಗಿದ್ದರೆ ಅದನ್ನು ಹೇಗೆ ಹೋಗಲಾಡಿಸಬೇಕು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ. ಮುಂದಕ್ಕೆ ಓದಿಕೊಳ್ಳಿ. ಮಾನಸಿಕ ಒತ್ತಡ, ಮಗುವಿನ ಮೇಲೆ ಪರಿಣಾಮ ಬೀರಬಹುದು..

*ಮಗುವಿನ ಮೊದಲ ವರ್ಷದಲ್ಲಿ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳದಿರುವುದು ಉತ್ತಮ. ಉದ್ಯೋಗ ಬದಲಾವಣೆ, ಪ್ರವಾಸ ಮುಂತಾದವುಗಳಿಂದ ದೂರವಿರಿ. ಇವುಗಳಿಂದ ನಿಮ್ಮ ಒತ್ತಡ ಹೆಚ್ಚಾಗುವುದು.

*ಮಗುವಿನ ಜನನದ ಬಳಿಕ ಕೆಲಸ ಹಾಗೂ ಇತರ ಚಟುವಟಿಕೆಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂದು ಸಣ್ಣಮಟ್ಟದ ನೀಲಿನಕ್ಷೆ ಮಾಡಿಕೊಳ್ಳಿ. ಇದರಿಂದ ಸಮಯ ಹಾಗೂ ಶಕ್ತಿ ಉಳಿತಾಯವಾಗಿ ಒತ್ತಡ ಕಡಿಮೆಯಾಗುವುದು.

*ಮಗುವಿನ ತಿನಿಸು, ನಿದ್ರೆ ಮತ್ತು ಬದಲಾಗುವ ಸಮಯದ ಬಗ್ಗೆ ಒಂದು ದಾಖಲೆ ಅಥವಾ ಪಟ್ಟಿಯನ್ನು ಇಟ್ಟುಕೊಳ್ಳಿ. ಇದರಿಂದ ಮಗುವಿನ ಆರೈಕೆ ಬಗ್ಗೆ ನಿಮಗೆ ಆಗುವ ಸಮಸ್ಯೆ ನಿವಾರಣೆಯಾಗುವುದು.

*ಮನೆಕೆಲಸಕ್ಕೆ ಅಥವಾ ಅಡುಗೆಗೆ ಯಾರನ್ನಾದರೂ ನೇಮಿಸಿ. ಇದರಿಂದ ನಿಮ್ಮ ಸಮಯ ಉಳಿತಾಯವಾಗುತ್ತದೆ ಮತ್ತು ನೀವು ಮಗುವಿನ ಲಾಲನೆ ಪಾಲನೆಯಲ್ಲಿ ಹೆಚ್ಚಿನ ಸಮಯ ಕಳೆಯಬಹುದು. ಮೊದಲ ವರ್ಷ ಮಗುವಿಗೆ ತಾಯಿಯ ಅಗತ್ಯ ಅನಿವಾರ್ಯವಾಗಿರುತ್ತದೆ. ಗರ್ಭಿಣಿಯರಿಗೂ ಬೆನ್ನೇರಿ ಕಾಡುವ ಒತ್ತಡದ ಸಮಸ್ಯೆ....

*ಸಣ್ಣ ಮಗುವಿನಿಂದಾಗಿ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ನಿಮಗನಿಸುತ್ತಿದ್ದರೆ ಆಗ ನೀವು ಕುಟುಂಬ ಹಾಗೂ ಸ್ನೇಹಿತರ ನೆರವನ್ನು ಪಡೆಯಬಹುದಾಗಿದೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ನಿಮ್ಮ ಕಷ್ಟ ಹಂಚಿಕೊಂಡರೆ ಮನಸ್ಸು ಹಗುರವಾಗಿ ಒತ್ತಡ ಕಮ್ಮಿಯಾಗುತ್ತದೆ.

English summary

How To Deal With Stress When You Have A Newborn?

Do you remember the amount of stress you had to go through when you were given a new responsibility at work? It was a lot, right? Well, any new responsibility comes with a certain amount of stress. Having a newborn is also a responsibility and a huge one at that. So, naturally, the parents tend to get stressed out when they have a newborn, be it their first or second. So, if you are a new parent, dealing with stress, here are some expert tips to help you through that, have a look.
X
Desktop Bottom Promotion