For Quick Alerts
ALLOW NOTIFICATIONS  
For Daily Alerts

ಮಗು ಹಾಲು ಕುಡಿಯಲು ನಿರಾಕರಿಸಲು ಕಾರಣಗಳೇನು?

By Hemanth
|

ಮಗು ಹಾಲು ಕುಡಿಯಲು ನಿರಾಕರಿಸಿದರೆ ಅದಕ್ಕಿಂತ ದೊಡ್ಡ ಚಿಂತೆ ಮತ್ತೊಂದಿಲ್ಲ. ಎದೆಹಾಲು ಕುಡಿಯುವುದಕ್ಕೆ ಮಗು ಯಾಕೆ ನಿರಾಕರಿಸುತ್ತಿದೆ ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಮಗು ಹಾಲು ಕುಡಿಯದೆ ಇರಲು ಕಾರಣಗಳೇನು ಎಂದು ತಿಳಿಯಲು ನೀವು ಈ ಲೇಖನ ಓದಬೇಕು. ನಿಮ್ಮ ಮಗು ಕೇವಲ ಹಾಲು ಮಾತ್ರ ಕುಡಿಯುವಷ್ಟು ಸಣ್ಣದಿದ್ದು, ಅದು ಹಾಲು ಕುಡಿಯದೆ ಇದ್ದರೆ ನೀವು ವೈದ್ಯರನ್ನು ಭೇಟಿಯಾಗಬೇಕು.

ಹಸುಗೂಸು ಹಾಲು ಕುಡಿಯದೆ ಇರುವುದು ದೊಡ್ಡ ಸಮಸ್ಯೆ ಮತ್ತು ಹೆತ್ತವರಿಗೆ ಇದೊಂದು ಸವಾಲು. ಇದು ಹಠಾತ್ ಆಗಿ ಬಂದರೆ ಏನಾದರೂ ಸಮಸ್ಯೆಗಳಿರಬಹುದು ಅಥವಾ ನಿಮ್ಮ ಮಗುವಿಗೆ ಏನಾದರೂ ಅಹಿತಕರ ಭಾವನೆಯಾಗುತ್ತಿರಬಹುದು ಮತ್ತು ಇದರಿಂದಾಗಿ ಮಗು ಹಾಲು ಕುಡಿಯಲು ನಿರಾಕರಿಸುತ್ತಿರಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಗುವಿನ ಮಸಾಜ್‌ನಲ್ಲಿರುವ ಆರೋಗ್ಯಕರ ಲಾಭಗಳು

Why Baby Does Not Drink Milk

ಜನನದ ಸಮಯದಿಂದಲೇ ಈ ಸಮಸ್ಯೆ ಇದ್ದರೆ ಮಗುವಿಗೆ ಹಾಲು ಕುಡಿಯಲು ಏನೋ ಸಮಸ್ಯೆಯಿದೆ ಮತ್ತು ಇದು ಕೆಲವೊಂದು ಸಲ ನಿಗೂಢವಾಗಿರಬಹುದು.ಕೆಲವೊಂದು ಸಲ ಮಗುವಿಗೆ ಮೊಲೆಹಾಲು ಕುಡಿಯಲು ಜನನದ ಬಳಿಕ ಕಷ್ಟವಾಗಬಹುದು. ಮಗು ಆರಂಭದಲ್ಲಿ ಹಾಲು ಕುಡಿಯಲು ಕಲಿಯುವ ಕಾರಣ ಇದು ಸಾಮಾನ್ಯವಾಗಿರಬಹುದು.

ಮೊಲೆಹಾಲುಣಿಸಿದ ಕೆಲವು ದಿನಗಳ ಬಳಿಕ ಮಗು ಹಾಲು ಕುಡಿಯುವುದು ಸರಾಗವಾಗಬಹುದು. ಇದರ ಹಿಂದೆ ಹಲವಾರು ಕಾರಣಗಳಿವೆ ಮತ್ತು ಈ ಸಮಸ್ಯೆಯನ್ನು ನಿವಾರಿಸಲು ನಿಮ್ಮ ಮಗು ಹಾಲು ಕುಡಿಯಲು ನಿರಾಕರಿಸಲು ಕಾರಣವೇನೆಂದು ತಿಳಿದುಕೊಳ್ಳಬೇಕು. ಹಸುಗೂಸು ಹಾಲು ಕುಡಿಯಲು ನಿರಾಕರಿಸುವ ಕೆಲವೊಂದು ಸಾಧ್ಯತೆಯ ಕಾರಣಗಳು. ಮಗು ಹಾಲು ಕುಡಿಯಲು ನಿರಾಕರಿಸಲು ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಯಸ್ಸು ಮೂವತ್ತಾಯಿತೇ? ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರ!

ಜನನದ ವೇಳೆ ಗಾಯ:
ಅವಧಿ ಪೂರ್ವ ಜನನ ಅಥವಾ ಹೆರಿಗೆ ವೇಳೆ ಕಷ್ಟವಾಗಿದ್ದರೆ ಆಗ ಮಕ್ಕಳಲ್ಲಿ ಜನನ ಗಾಯಗಳಾಗುವುದು ಸಾಮಾನ್ಯ. ಮಗುವನ್ನು ಹಿಡಿದ ತಕ್ಷಣ ಅಳುತ್ತದೆಯಾ ಅಥವಾ ಹಾಲುಣಿಸುವಾಗ ಮಾತ್ರ ಅಳುತ್ತಿದೆಯಾ ಎಂದು ಗುರುತಿಸಬೇಕು.

ಉಸಿರಾಟದ ಸಮಸ್ಯೆ:
ಹಾಲುಣಿಸುವ ವೇಳೆ ಕೆಲವು ಸಲ ಮಗುವಿಗೆ ಉಸಿರಾಟದ ಸಮಸ್ಯೆಯಾಗುತ್ತದೆ ಮತ್ತು ಇದರಿಂದ ಅವುಗಳಿಗೆ ಹಾಲು ಹೀರಿಕೊಳ್ಳಲು ಮತ್ತು ನುಂಗಲು ಕಷ್ಟವಾಗುವ ಕಾರಣ ಇದಕ್ಕೆ ನಿರಾಕರಿಸುತ್ತಿರಬಹುದು.

ಬಾಯಿಗೆ ಇಷ್ಟವಾಗದಿರುವುದು:
ಕೆಲವು ಮಕ್ಕಳು ತಮ್ಮ ಬಾಯಿಯಲ್ಲಿ ಏನನ್ನೂ ತೆಗೆದುಕೊಳ್ಳುವುದಿಲ್ಲ ಮತ್ತು ಬಾಯಿಯ ಹೇವರಿಕೆಯಿಂದಾಗಿ ಹೀಗೆ ಆಗುತ್ತದೆ.

ಇತರ ಆಯ್ಕೆಗಳು:
ಮಕ್ಕಳು ಕೆಲವೊಂದು ವಿಶೇಷ ಮಾರ್ಗವನ್ನು ಅನುಸರಿಸುತ್ತವೆ ಎನ್ನುವುದನ್ನು ಗಮನಿಸಲಾಗಿದೆ ಮತ್ತು ಹಾಲುಣಿಸುವ ರೀತಿ ಬದಲಾವಣೆಯಾದಾಗ ಅವು ಹಾಲು ಕುಡಿಯಲು ನಿರಾಕರಿಸುತ್ತವೆ. ಮಕ್ಕಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿದ್ದರೆ ಅಥವಾ ಬೇರೆ ಯಾರಾದರೂ ಹಾಲುಣಿಸಿದರೆ ಹೀಗೆ ಆಗುತ್ತದೆ.

ನೋವು:
ಕಿವಿ ಸೋಂಕಿನಂತಹ ಸಮಸ್ಯೆಯಂತಹ ಯಾವುದೇ ರೀತಿಯ ನೋವು ಅಥವಾ ಇತರ ಯಾವುದೇ ಸಮಸ್ಯೆಯನ್ನು ಮಗು ಎದುರಿಸುತ್ತಿರಬಹುದು. ಹಸುಗೂಸುಗಳು ಅಳುವ ಅಥವಾ ಹಾಲು ಕುಡಿಯಲು ನಿರಾಕರಿಸುವ ಮೂಲಕ ಇದನ್ನು ವ್ಯಕ್ತಪಡಿಸುತ್ತವೆ.

ಹೊಟ್ಟೆನೋವು:
ಹೊಟ್ಟೆನೋವು ಸಾಮಾನ್ಯವಾಗಿ ಹೆಚ್ಚಿನ ಮಕ್ಕಳಲ್ಲಿ ಕಂಡುಬರುತ್ತದೆ. ಹೊಟ್ಟೆನೋವು ಆರಂಭವಾದಾಗ ಮಕ್ಕಳು ತುಂಬಾ ಅಳುತ್ತವೆ. ಈ ವೇಳೆ ಅವುಗಳನ್ನು ಸಮಾಧಾನಪಡಿಸುವುದು ತುಂಬಾ ಕಷ್ಟ. ಅಜೀರ್ಣ, ಆಹಾರದ ಸೂಕ್ಷ್ಮತೆ ಅಥವಾ ಇತರ ಯಾವುದೇ ಕಾರಣಗಳಿಂದ ಈ ಸಮಸ್ಯೆಯಾಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು

ಅಲರ್ಜಿ:
ನಿಮ್ಮ ಮಗು ಹಾಲು ಕುಡಿಯಲು ನಿರಾಕರಿಸುತ್ತಿದ್ದರೆ ಬೇರೆ ಕಾರಣಗಳನ್ನು ಹುಡುಕಬೇಕಾಗುತ್ತದೆ. ಮಗುವಿಗೆ ಹಾಲಿನ ಅಲರ್ಜಿ ಇದೆಯಾ ಅಥವಾ ಇಲ್ಲವಾ ಎಂದು ದೃಢಪಡಿಸಿಕೊಳ್ಳಿ. ಕೆಲವೊಮ್ಮೆ ಮಗುವಿಗೆ ಹಾಲಿನ ಅಲರ್ಜಿ ಇರಬಹುದು ಮತ್ತು ಈ ವೇಳೆ ಹಾಲು ಕುಡಿಯಲು ನಿರಾಕರಿಸಬಹುದು.

ಸಂವೇದನಾ ಸಮಸ್ಯೆ:
ಅತಿಯಾದ ಶಬ್ದ ಅಥವಾ ಬೆಳಕು ಅಥವಾ ಬೇರೆ ಯಾವುದೇ ವಿಷಯ ಸಂವೇದನಾ ಸೂಕ್ಷ್ಮವಾಗಿರುವ ಕಾರಣ ಮಗುವಿಗೆ ಸರಿಯಾಗಿ ಹಾಲು ಕುಡಿಯಲು ಸಾಧ್ಯವಾಗದೆ ಇರಬಹುದು.

ಅನಾರೋಗ್ಯ:
ಕೆಲವೊಮ್ಮೆ ಮಗುವಿಗೆ ಅನಾರೋಗ್ಯ ಉಂಟಾಗಿದ್ದರೆ ಅದು ಹಾಲು ಕುಡಿಯಲು ನಿರಾಕರಿಸಬಹುದು. ಇದರ ಸೂಚನೆಯೆಂದರೆ ಮಗು ಹಾಲು ಕುಡಿಯಲು ನಿರಾಕರಿಸಬಹುದು ಅಥವಾ ಹಾಲು ಸೇವನೆ ಪ್ರಮಾಣ ಕಡಿಮೆಯಾಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಿಳಿ ಈರುಳ್ಳಿಯಲ್ಲಿರುವ 4 ಪ್ರಮುಖ ಔಷಧೀಯ ಗುಣಗಳು

ಹಾಲಿನ ಹರಿವು:
ಕೆಲವೊಮ್ಮೆ ತಾಯಿಗೆ ಇದು ತಿಳಿಯದೆ ಇರಬಹುದು. ಹಾಲಿನ ಹರಿವಿನ ಪ್ರಮಾಣ ತುಂಬಾ ಹೆಚ್ಚು ಅಥವಾ ಕಡಿಮೆಯಾಗಿರಬಹುದು. ಇದರಿಂದಾಗಿ ಮಗು ಹಾಲು ಕುಡಿಯಲು ನಿರಾಕರಿಸಬಹುದು.
ಮಗು ಹಾಲು ಕುಡಿಯಲು ನಿರಾಕರಿಸುತ್ತಿದ್ದರೆ ಅದರ ಹಿಂದಿನ ಕಾರಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸಮಯಕ್ಕೆ ಸರಿಯಾಗಿ ಈ ಸಮಸ್ಯೆ ನಿವಾರಣೆಯಾಗದೆ ಇದ್ದರೆ ಮಕ್ಕಳ ತಜ್ಞರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಿ. ಮಗುವಿಗೆ ಕೆಲವೇ ತಿಂಗಳಾಗಿದ್ದರೆ ಮತ್ತು ಕೇವಲ ಹಾಲು ಮಾತ್ರ ಅದಕ್ಕೆ ಆಹಾರವಾಗಿದ್ದರೆ ನೀವು ವೈದ್ಯರನ್ನು ಭೇಟಿಯಾಗುವುದು ತುಂಬಾ ಮುಖ್ಯ.

English summary

Why Baby Does Not Drink Milk

It is a matter of great concern when baby refuses to drink milk. There are several reasons why your baby may refuse to drink milk. Read on to know more about the reasons
Story first published: Friday, February 14, 2014, 18:12 [IST]
X
Desktop Bottom Promotion