For Quick Alerts
ALLOW NOTIFICATIONS  
For Daily Alerts

ಎರಡನೇ ಮಗುವಿನ ಆಗಮನಕ್ಕೆ ತಯಾರಾಗಲು ಸಲಹೆಗಳು

|

ಕುಟುಂಬದಲ್ಲಿ ಹೊಸ ಸದಸ್ಯರ ಆಗಮನ ಯಾವಾಗಲೂ ಸಂತೋಷವನ್ನುಂಟು ಮಾಡುತ್ತದೆ. ಮೊದಲ ಮಗುವಿನಿಂದ ಮನೆಗೆ ಬಂದ ಅದೃಷ್ಟ, ಅದರ ಮುಗ್ದತೆ ಮತ್ತು ಇತರ ತುಂಟಾಟಗಳಿಂದ ಸಿಗುತ್ತಿರುವ ಆನಂದ ಸವಿಯುತ್ತಿರುವಾಗಲೇ ಎರಡನೇ ಮಗುವಿನ ಆಗಮನದ ಸುದ್ದಿ ನಿಮ್ಮನ್ನು ಮತ್ತಷ್ಟು ಸಂತಸ ಕಡಲಲ್ಲಿ ತೇಳುವಂತೆ ಮಾಡುತ್ತದೆ.

ಗರ್ಭಧಾರಣೆ ನಿಮಗೆ ಈಗ ಹೊಸತಲ್ಲ, ಇದಕ್ಕೆ ಮೊದಲು ಅದರ ಅನುಭವ ಪಡೆದಿದ್ದೀರಿ. ಆದಾಗ್ಯೂ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕೆಲವೊಂದು ಹೆಚ್ಚುವರಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಗುವಿನ ಜನ್ಮ ಆಸಕ್ತಿದಾಯಕ ತಯಾರಿ ಮತ್ತು ಆಯ್ಕೆಯ ಸಮಯ.

ಮನೆಯಲ್ಲಿರುವ ಪ್ರತಿಯೊಂದು ಬದಲಾವಣೆ ಕಾಣುತ್ತದೆ. ನಿಮ್ಮ ಮೊದಲ ಮಗುವಿಗೂ ಇದರ ಭಾವನೆಯಾಗಬಹುದು ಮತ್ತು ಆಕೆ ತನ್ನ ಸೋದರಿ ಅಥವಾ ಸೋದರನ ಬಗ್ಗೆ ಕೇಳಬಹುದು. ಮನೆಯಲ್ಲಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಠಿಣ ಕೆಲಸ. ಎರಡನೇ ಮಗುವಿಗೆ ಯೋಜನೆ ಹಾಕಿಕೊಳ್ಳುವಾಗ ಇದೆಲ್ಲದರ ಬಗ್ಗೆ ಯೋಚಿಸುವುದು ತುಂಬಾ ಒಳ್ಳೆಯದು.

Tips to get ready for second baby

ಎರಡನೇ ಸಲ ಗರ್ಭಧಾರಣೆ ಮಾಡುವಾಗ ನೀವು ತುಂಬಾ ಬೇಗನೆ ದಣಿಯಬಹುದು. ಯಾಕೆಂದರೆ ನಿಮಗೆ ಎರಡು ಹೆಚ್ಚುವರಿ ಕೆಲಸವನ್ನು ನಿಭಾಯಿಸಬೇಕಾಗುತ್ತದೆ. ನಿಮ್ಮ ಬಗ್ಗೆ ಕಾಳಜಿ ಮತ್ತು ಮೊದಲ ಮಗುವಿನ ಆರೈಕೆ. ಮೊದಲ ಮಗುವಿನ ಭಾವನೆಗಳಿಗೆ ಸ್ಪಂದಿಸಬೇಕು ಮತ್ತು ಅದರ ಬೇಡಿಕೆಗಳನ್ನು ಪೂರೈಸಬೇಕು. ಎರಡನೇ ಹೆರಿಗೆಯಾದ 6ರಿಂದ 8 ವಾರಗಳ ತನಕ ತುಂಬಾ ಕಠಿಣವಾಗಿರುತ್ತದೆ. ಈ ವೇಳೆ ಶಿಶುವಿನ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಎರಡನೇ ಮಗುವಿನ ಯೋಜನೆ ಹಾಕಿಕೊಂಡ ದಂಪತಿಗೆ ಪಾಲನೆಯ ಕೆಲವೊಂದು ಟಿಪ್ಸ್‌ಗಳು ಇಲ್ಲಿವೆ.]

ಮಗು ಸ್ತನ್ಯಪಾನ ತ್ಯಜಿಸಲು ಅನುಸರಿಸಬೇಕಾದ ವಿಧಾನಗಳು

ಮರುಬಳಕೆ
ಮೊದಲ ಮಗುವಿನ ಕೆಲವೊಂದು ವಸ್ತುಗಳನ್ನು ಮರುಬಳಕೆ ಮಾಡುವುದನ್ನು ಪಟ್ಟಿ ಮಾಡಿ, ಅದರಲ್ಲಿ ಪ್ರಮುಖವಾಗಿ ಬಟ್ಟೆ. ಮಗುವನ್ನು ಹೊರಗಡೆ ಕರೆದುಕೊಂಡು ಹೋಗುವಾಗ ಅದರ ಲಿಂಗಕ್ಕೆ ಅನುಗುಣವಾದ ಬಟ್ಟೆ ಹಾಕಬೇಕಾಗುತ್ತದೆ. ಆದರೆ ಮನೆಯಲ್ಲಿ ಇರುವಾಗ ಇದರ ಅಗತ್ಯವಿಲ್ಲ. ಮೊದಲ ಮಗುವಿನ ಹಾಲಿನ ಬಾಟಲಿ ಮತ್ತು ಇತರ ಕೆಲವೊಂದು ವಸ್ತುಗಳನ್ನು ಬಳಸಿಕೊಳ್ಳಬಹುದು. ಎರಡನೇ ಮಗುವಿನ ಯೋಜನೆ ಮಾಡುವಾಗ ಇದನ್ನು ಮಾಡಬೇಕಾಗುತ್ತದೆ.

ಅತ್ಯುತ್ತಮ ವ್ಯವಹಾರ
ಒಳ್ಳೆಯ ಡೈಪರ್ಸ್ ಗಳು ಸ್ವಲ್ಪ ಕಡಿಮೆ ಬೆಲೆಗೆ ಸಿಗುವುದನ್ನು ನೋಡಿಕೊಳ್ಳಿ. ಇದು ನಿಮ್ಮ ಹೊಸ ಮಗುವಿಗೆ ಅಗತ್ಯ. ಸೈಜ್ 1ರ ಡೈಪರ್ಸ್ ನ್ನು ತೆಗೆದಿಡಿ. ಇದನ್ನು ನಿಮ್ಮ ಹೊಸ ಮಗುವಿಗೆ ಬಳಸಿಕೊಳ್ಳಬಹುದು. ಎರಡನೇ ಮಗುವಿನ ಆಗಮನಕ್ಕೆ ಹೆಚ್ಚಿನ ತಯಾರಿ ಬೇಕಾಗುತ್ತದೆ ಮತ್ತು ಇದು ಅದರಲ್ಲಿ ಒಂದು.

ಶೀಘ್ರ ಆಹಾರ
ಎರಡನೇ ಮಗುವಿನ ಯೋಜನೆ ಹಾಕಿಕೊಂಡಾಗ ಇದು ತುಂಬಾ ಮುಖ್ಯ. ಮನೆಯಲ್ಲಿ ಹೆಚ್ಚಿನ ಶೈತ್ಯೀಕರಿಸಿದ ಮತ್ತು ಒಣ ಆಹಾರ ಸಂಗ್ರಹಿಸಿಡಿ. ಇದರಿಂದ ಎರಡನೇ ಮಗುವಿನ ಆಗಮನದ ಬಳಿಕ ನಿಮ್ಮ ಸಮಯ ಉಳಿಯುತ್ತದೆ ಮತ್ತು ಹೆಚ್ಚಿನ ಸಮಯ ಶಿಶುವಿನೊಂದಿಗೆ ಕಳೆಯಲು ನೆರವಾಗುತ್ತದೆ. ಇದು ದಂಪತಿ ಪಾಲಿಸಬೇಕಾದ ಅತ್ಯುತ್ತಮ ಸಲಹೆ.

ಆಟಿಕೆ ಬುಟ್ಟಿ
ನಿಮ್ಮ ಬೆಡ್ ರೂಮ್ ಅಥವಾ ಕೋಣೆಯಲ್ಲಿ ಕೆಲವು ಆಟಿಕೆ ಬುಟ್ಟಿಯನ್ನು ಇಡಿ. ಎರಡನೇ ಮಗುವಿನ ಹಾಲುಣಿಸಿ ಆರೈಕೆ ಮಾಡುತ್ತಿರುವಾಗ ಮೊದಲ ಮಗು ಗಲಾಟೆ ಮಾಡದಿರಲು ಆಟಿಕೆಗಳನ್ನು ನೀಡಿ. ಎರಡನೇ ಮಗುವಿನ ಯೋಜನೆ ಮಾಡುತ್ತಿರುವಾಗ ದಂಪತಿ ಪಾಲಿಸಬೇಕಾದ ಕೆಲವೊಂದು ಟಿಪ್ಸ್ ಗಳು ತುಂಬಾ ಕಠಿಣವಾಗಿರಬಹುದು. ಆದರೆ ತಯಾರಿಯಿಂದ ಇದನ್ನು ಸರಿದೂಗಿಸಬಹುದು.

ವಸ್ತುಗಳನ್ನು ಸ್ವಚ್ಛವಾಗಿಡುವುದು
ಶಿಶುವಿನ ಕೋಣೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಮಗು ಆಗಮನಕ್ಕೆ ಮೊದಲೇ ಸ್ವಚ್ಛವಾಗಿಡಬೇಕು. ಇದರಿಂದ ಮಗುವನ್ನು ಬ್ಯಾಕ್ಟೀರಿಯಾ ಮತ್ತು ಇತರ ಸೋಂಕುವಿನಿಂದ ತಪ್ಪಿಸಬಹುದು. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಇದನ್ನು ತಕ್ಷಣ ಮತ್ತು ನಿಯಮಿತವಾಗಿ ಮಾಡುತ್ತಿರಬೇಕು.

ಆಹ್ವಾನ
ನಿಮ್ಮ ಕುಟುಂಬದವರ ನೆರವು ಪಡೆಯಿರಿ. ಗರ್ಭಿಣಿಯಾಗಿರುವ ಮತ್ತು ಹೆರಿಗೆ ವೇಳೆ ಅವರು ನಿಮ್ಮೊಂದಿಗಿರುವಂತೆ ಮನವಿ ಮಾಡಿ. ಇದರಿಂದ ನಿಮ್ಮ ಮೊದಲ ಮಗುವಿನ ಆರೈಕೆಗೆ ನೆರವಾಗುತ್ತದೆ ಮತ್ತು ನಿಮ್ಮ ಬಗ್ಗೆ ನೀವು ಸುಲಭವಾಗಿ ಕಾಳಜಿ ವಹಿಸಿಕೊಳ್ಳಬಹುದು.

ಗರ್ಭಪಾತದ ಬಳಿಕ ಫಲವತ್ತತೆಯನ್ನು ನಿರೀಕ್ಷಿಸಬಹುದೇ?

ನಿಮ್ಮ ಹಿಂದಿನ ಮಗುವನ್ನು ತಯಾರು ಮಾಡಿ
ಪಾಲನೆಯ ಈ ಸಲಹೆಯನ್ನು ದಂಪತಿ ಪಾಲಿಸಬೇಕಾಗುತ್ತದೆ. ಎರಡನೇ ಮಗುವಿನ ಆಗಮನದ ವೇಳೆ ಮೊದಲ ಮಗುವಿನ ಭಾವನೆಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ನಿಮ್ಮ ವರ್ತನೆಯಿಂದ ಆಕೆಯ ಮನಸ್ಸಿಗೆ ಘಾಸಿಯಾಗಬಾರದು. ಸೋದರ ಅಥವಾ ಸೋದರಿ ಬರುತ್ತಿರುವ ಬಗ್ಗೆ ಮೊದಲ ಮಗುವಿಗೆ ತಿಳಿಸಿ. ಇದರ ಬಗ್ಗೆ ಸಂತೋಷ ಪಡುವಂತೆ ಮಾಡಿ. ಸೋದರ ಅಥವಾ ಸೋದರಿ ನಿನಗೆ ಜೊತೆ ನೀಡಲಿದ್ದಾನೆಂದು ಹೇಳಿ.

English summary

Tips to get ready for second baby

Your second pregnancy can be a time when you tire more easily. It is because you have two tasks to handle- to take care of yourself and also your older child. Here are a few parenting tips couples can follow while planning second baby.
Story first published: Tuesday, June 24, 2014, 16:33 [IST]
X
Desktop Bottom Promotion