For Quick Alerts
ALLOW NOTIFICATIONS  
For Daily Alerts

ಡಯ್ಪರ್ ರಾಷಸ್ ನಿವಾರಣೆಗೆ ಸರಳ ಉಪಾಯಗಳು

By Poornima Hegde
|

ಮಗುವಿನ ಆರೈಕೆ ತಂದೆ ತಾಯಿಯ ಅತ್ಯಂತ ಆದ್ಯತೆಯ ಕೆಲಸಗಳಲ್ಲಿ ಒಂದು. ತಮ್ಮ ಮಗುವಿನ ಬಗ್ಗೆ ಎಷ್ಟೇ ಕಾಳಜಿ ವಹಿಸಿದರು ಕಡಿಮೆ ಎಂಬ ಭಾವನೆ ತಂದೆ ತಾಯಿಗಳಲ್ಲಿ ಇರುತ್ತದೆ. ಇದಕ್ಕಾಗಿಯೇ ಹೆಚ್ಚಿನ ತಂದೆ ತಾಯಿಗಳು ಡಿಸ್ಪೋಸಲ್ ಡಾಯ್ಪರ್ ಗಳನ್ನು ಬಳಸುತ್ತಾರೆ. ರಾತ್ರಿಯ ವೇಳೆ ಮತ್ತು ಹೊರಗಡೆ ಹೋಗುವಾಗ ಇಂತಹ ಡಯ್ಪರ್ ಗಳು ಬಹಳವೇ ಸಹಕಾರಿ. ಇಂತಹ ಹೆಚ್ಚು ತೇವಾಂಶವನ್ನು ಹಿರಿಕೊಳ್ಳುವ ಡಯ್ಪರ್ ಗಳನ್ನು ಬಳಸುವಾಗಿನ ಒಂದು ದೊಡ್ಡ ಸಮಸ್ಯೆ ಎಂದರೆ ರಾಷಸ್. ಡಯ್ಪರ್ ಗಳನ್ನು ನಿಯಮಿತವಾಗಿ ಬಳಸುವವರಲ್ಲಿ ಇಂತಹ ಸಮಸ್ಯೆಗಳು ಬರಬಹುದು.

ಸ್ವಾಭಾವಿಕವಾಗಿ ದೊರೆಯುವ ಉಪಶಮನವನ್ನು ಬಳಸುವುದು ಬಹಳ ಉತ್ತಮ. ರಾಷಸ್ ಕಂಡ ಕೂಡಲೆ ಇದನ್ನು ಗುಣ ಮಾಡುವುದು ಬಹಳ ಅಗತ್ಯ. ಹೀಗೆ ರಾಷಸ್ ಆದ ಬಳಿಕ ಅಂತಹ ಜಾಗದಲ್ಲಿ ಮತ್ತಷ್ಟು ಒತ್ತಡ ಬಿದ್ದರೆ ಅಥವಾ ಮೂತ್ರದ ಸಂಪರ್ಕದಲ್ಲಿ ಬಂದರೆ ಆಗ ಅಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಒಂದು ಬಾರಿ ರಾಷಸ್ ಕಂಡ ಕೂಡಲೆ ಮೊದಲು ಮಾಡಬೇಕಾದ ಕೆಲಸ ಎಂದರೆ ಆ ಜಾಗವನ್ನು ಒಣಗಿರುವಂತೆ ನೋಡಿಕೊಳ್ಳುವುದು.

Simple Remedies For Diaper Rashes

ನಿಮ್ಮ ಮಗುವಿನ ನಾಜೂಕಾದ ತ್ವಚೆಗೆ ಸ್ವಾಭಾವಿಕವಾದ ರಾಷಸ್ ಗುಣ ಮಾಡುವ ವಿಧಾನಗಳು ಸೂಕ್ತ. ಸಿಂಥೆಟಿಕ್ ಉತ್ಪನ್ನಗಳು ನಿಮ್ಮ ಮಗುವಿನ ಚರ್ಮವನ್ನು ಮತ್ತಷ್ಟು ಹಾಳು ಮಾಡಬಹುದು. ರಾಷಸ್ ಬಂದಾಗ ನೀವು ಮಾಡಬಹುದಾದ ಕೆಲವು ಕೆಲಸಗಳು ಇಲ್ಲಿವೆ.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಹೆಚ್ಚಿನ ಗಾಯಗಳಿಗೆ ರಾಮಬಾಣವಾಗಿದೆ. ರಾಷಸ್ ಇರುವ ಜಾಗದಲ್ಲಿ ತೆಂಗಿನ ಎಣ್ಣೆಯನ್ನು ಹಚ್ಚುವ ಮೂಲಕ ರಾಷಸ್ ಹೆಚ್ಚು ತೊಂದರೆ ನೀಡದಂತೆ ಮಾಡಬಹುದು. ಇದು ಸ್ವಾಭಾವಿಕ ಆಂಟಿಸೆಪ್ಟಿಕ್ ಗುಣವನ್ನು ಹೊಂದಿರುವ ಕಾರಣ ಬೇಗ ಕೆಲಸ ಮಾಡುತ್ತದೆ. ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ತೆಗೆದುಕೊಂಡು ಬೆರಳುಗಳ ಸಹಾಯದಿಂದ ಅದನ್ನು ಎಲ್ಲಾ ಕಡೆ ಹಚ್ಚಬೇಕು.

ಬಟ್ಟೆ ಡಯ್ಪರ್ ಗಳನ್ನು ಬಳಸಿ
: ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುವ ಡಯ್ಪರ್ ಗಳ ಬದಲಿಗೆ ನುಣ್ಣಗಿನ ಬಟ್ಟೆಯನ್ನು ಡಯ್ಪರ್ ನಂತೆ ಬಳಸಿ. ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ ಆದರೆ ಹೆಚ್ಚಾಗಿ ಹೀರಿಕೊಳ್ಳದೆ ಮಗುವಿಗೆ ರಾಷಸ್ ಆಗುವುದನ್ನು ತಡೆಯುತ್ತದೆ.

ಆಲೀವ್ ಎಣ್ಣೆ: ತೆಂಗಿನ ಎಣ್ಣೆಯಂತೆಯೇ ಆಲೀವ್ ಎಣ್ಣೆ ಕೂಡ ರಾಷಸ್ ಅನ್ನು ತಡೆಯಲು ಬಹಳ ಸಹಕಾರಿ. ತೆಂಗಿನ ಎಣ್ಣೆಯಲ್ಲಿ ಮಾಡಿದಂತೆಯೇ ಇದನ್ನೂ ಮಗುವಿನ ರಾಷಸ್ ಜಾಗದಲ್ಲಿ ಹಚ್ಚಿ ಬೆರಳುಗಳ ಸಹಾಯದಿಂದ ಅದನ್ನು ಎಲ್ಲಾ ಜಾಗಕ್ಕೆ ಹರಡಿ. ಇದು ನೀರು ಆ ಜಾಗದಲ್ಲಿ ಬರುವುದನ್ನು ತಡೆಯುತ್ತದೆ. ಹಾಗಾಗಿ ರಾಷಸ್ ಗೆ ನೀರಿನ ಸಂಪರ್ಕ ಬಾರದೇ ಬೇಗನೇ ಗಾಯಗಳು ಒಣಗುವಂತೆ ಮಾಡುತ್ತದೆ.

ಬೇಕಿಂಗ್ ಸೋಡಾ: ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರದ ಒಂದು ಔಷಧವಾಗಿರಬಹುದು. ನಿಮ್ಮ ಮಗುವಿನ ಸ್ನಾನದ ಟಬ್ ನಲ್ಲಿ ಎರಡು ಚಮಚದಷ್ಟು ಬೇಕಿಂಗ್ ಸೋಡಾವನ್ನು ಸೇರಿಸಿ. ಬಿಸಿ ನೀರು ಇದ್ದರೆ ಒಳ್ಳೆಯದು. ಆ ನೀರಿನಲ್ಲಿ ನಿಮ್ಮ ಮಗುವನ್ನು ಸ್ವಲ್ಪ ಸಮಯ ಬಿಡಿ.

ಜೋಳದ ಗಂಜಿ: ಜೋಳದ ಗಂಜಿ ರಾಷಸ್ ಗುಣ ಪಡಿಸುವಲ್ಲಿ ಇರುವ ಅತ್ಯಂತ ಪ್ರಖ್ಯಾತ ಔಷಧವಾಗಿದೆ. ಇದು ತೇವಾಂಶವನ್ನು ಬೇಗನೆ ಹೀರಿಕೊಳ್ಳುವುದೇ ಇದಕ್ಕೆ ಕಾರಣ. ಇದನ್ನು ಪೆಟ್ರೋಲಿಯಂ ಜೆಲ್ಲಿಯ ಜೊತೆಗೆ ಸೇರಿಸಿಯೂ ಬಳಸಬಹುದು. ಹೀಗೆ ಮಾಡಿದಲ್ಲಿ ತೇವಾಂಶವನ್ನು ಸಂಪೂರ್ಣವಾಗಿ ತಡೆಯಬಹುದು.

ಎದೆ ಹಾಲು: ಇದು ಕೂಡ ಹೆಚ್ಚಿನವರಿಗೆ ಗೊತ್ತಿರದ ಒಂದ ರಾಷಸ್ ನಿವಾರಕ ಔಷಧ. ಎದೆ ಹಾಲನ್ನು ಹಚ್ಚಿ ರಾಷಸ್ ಗುಣ ಪಡಿಸಿದಷ್ಟು ಸ್ವಾಭಾವಿಕವಾಗಿ ಮತ್ತು ಬೇಗನೇ ಮತ್ಯಾವ ಔಷಧವೂ ಕೆಲಸ ಮಾಡದು.

ಗಾಳಿಯ ಸಹಾಯದಿಂದ ಒಣಗಿಸಿ: ಮಗುವನ್ನು ಎಲ್ಲಾ ಸಮಯದಲ್ಲೂ ಡಯ್ಪರ್ ನಲ್ಲಿಡಬೇಡಿ. ಸ್ವಲ್ಪ ಹೊತ್ತು ಡಯ್ಪರ್ ಇರದೆಯೂ ಮಗುವನ್ನು ಬಿಡಿ. ಹೀಗೆ ಮಾಡಿದಾಗ ಒದ್ದೆಯಾದ ಚರ್ಮ ಮತ್ತೆ ಒಣಗಲು ನೆರವಾಗುತ್ತದೆ. ಒಣಗಿದ ಮತ್ತು ಸ್ವಚ್ಛವಾದ ಮ್ಯಾಟ್ ಇದ್ದರೆ ಅದರ ಮೇಲೆ ಮಗುವನ್ನು ಸ್ವಲ್ಪ ಕಾಲ ಇಡಿ.

English summary

Simple Remedies For Diaper Rashes

Many parents find it easier to use disposable diapers for their babies. Using highly absorbent diapers are very comfortable during outings and in the night. But, along with the benefits,
Story first published: Monday, January 6, 2014, 11:00 [IST]
X
Desktop Bottom Promotion