For Quick Alerts
ALLOW NOTIFICATIONS  
For Daily Alerts

ಮಕ್ಕಳ ಹಲ್ಲು ಹುಟ್ಟವಾಗಿನ ನೋವಿಗೆ ಪರಿಹಾರ

By Poornima Heggade
|

ನಿಮ್ಮ ಮಗುವಿನ ಹಂತ ಹತದ ಬೆಳವಣಿಗೆಯನ್ನು ನೋಡುವುದು ನಿಮಗೆ ಒಂದು ರೋಮಾಂಚಕಾರಿ ಅನುಭವವವನ್ನು ನೀಡುತ್ತದೆಯಲ್ಲವೇ? ಆದರೆ, ನಿಮ್ಮ ಅಂಬೆಗಾಲಿಡುವ ಮಗು ಬೆಳವಣಿಗೆಯ ಕೆಲವು ಹಂತಗಳಲ್ಲಿ ಸ್ವಲ್ಪ ದೈಹಿಕ ತೊಂದರೆಗಳನ್ನೂ ಅನುಭವಿಸಬಹುದು! ಹಲ್ಲು ಹುಟ್ಟುವುದು ನಿಮ್ಮ ಮಗುವಿಗೆ ನೋವು ಮತ್ತು ಕಿರಿಕಿರಿ ಉಂಟುಮಾಡುವ ಒಂದು ಬೆಳವಣಿಗೆಯ ಅವಧಿ.

ಹಲ್ಲು ಹುಟ್ಟುವುದು ನಿಮ್ಮ ಮಗುವಿನ ಜೀವನದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದೆ. ಕೆಲವು ಮಕ್ಕಳು ಈ ಹಂತದಲ್ಲಿ ಯಾವುದೇ ಸಮಸ್ಯೆಯಿಲ್ಲದೇ ದಾಟಿರಬಹುದು, ಆದರೆ ಕೆಲವರಲ್ಲಿ ಇದು ಈ ಹಂತದಲ್ಲಿ ಸಾಕಷ್ಟು ತೊಂದರೆಗಳನ್ನನುಭವಿಸಬಹುದು.

Safe Teething Remedies For Babies

ಇಲ್ಲಿ ಮಹುವಿನ ಹಲ್ಲು ಹುಟ್ಟುವಾಗಿನ ತೊಂದರೆಗಳುಗೆ ಪರಿಹಾರಗಳನ್ನು ಹೇಳಲಾಗಿದೆ. ಆ ಕಿರಿಚುವ ನಿದ್ದೆಯಿಲ್ಲದ ರಾತ್ರಿಯನ್ನು ಮರೆತುಬಿಡಿ. ಈ ಕೆಳಗಿನ ಪಟ್ಟಿಯಿಂದ ಶಿಶು ಮತ್ತು ಅಂಬೆಗಾಲಿಡುವ ಮಕ್ಕಳ ಹಲ್ಲು ಹುಟ್ಟುವಾಗಿನ ತೊಂದರೆಗಳಿಗೆ ಅತ್ಯುತ್ತಮ ಪರಿಹಾರಗಳನ್ನು ನೀವೆ ಆಯ್ದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಗುವಿನ ಕಿವಿಗಳನ್ನು ಶುಚಿಗೊಳಿಸುವ ಟಿಪ್ಸ್‌ಗಳು

ವಸಡುಗಳ ಮಸಾಜ್ : ವಸಡುಗಳ ಮಸಾಜ್ ಮಕ್ಕಳ ಹಲ್ಲು ಹುಟ್ಟುವಾಗಿನ ನೋವಿಗೆ ಸುರಕ್ಷಿತ ಪರಿಹಾರಗಳಲ್ಲಿ ಒಂದು. ಈ ಸಮಯದಲ್ಲಿ ನೀವು ನಿಮ್ಮ ಬೆರಳುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮೊದಲು ನೆನಪಿಡಿ. ಮೃದುವಾದ ಒತ್ತಡವನ್ನು ನೀಡಿ ಮತ್ತು ಮಕ್ಕಳ ವಸಡುಗಳಿಗೆ ಮಸಾಜ್ ಮಾಡಿ. ಇದರಿಂದ ನಿಮ್ಮ ಮಗುವಿನ ಹಲ್ಲು ನೋವಿಗೆ ಮುಕ್ತಯ ಪಡೆಯಲು ಸಹಾಯವಾಗುತ್ತದೆ.

ಕೊಲ್ಡ್ ಟೀಥರ್ (ಮಕ್ಕಳ ಬಾಯಲ್ಲಿಟ್ಟುಕೊಳ್ಳುವ ಆಟಿಕೆ) (Cold teether) : ಮಕ್ಕಳ ಬಾಯಲ್ಲಿ ಇರಿಸಿಕೊಳ್ಳಲು ನೀವು ಒಂದು ಕೊಲ್ಡ್ ಟೀಥರ್ ನೀಡಬಹುದು. ಆದರೆ ನೆನಪಿಡಿ ಕೊಲ್ಡ್ ಟೀಥರ್ ನ್ನು ಫ್ರೀಜರ್ ನಲ್ಲಿಡಬೇಡಿ. ಇದು ನಿಮ್ಮ ಮಗುವಿಗೆ ಕಿರಿಕಿರಿಯನ್ನುಂಟುಮಾಡಬಹುದು. ಟೀಥರ್ ನ ಪ್ರತಿ ಬಳಕೆಗೆ ಮೊದಲು ಸ್ವಚ್ಛಗೊಳಿಸಿ. ಇದು ಮಗುವಿನ ಹಲ್ಲು ನೋವಿಗೆ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ.

ತಂಪಾದ ನೀರಿನಲ್ಲಿ ಅದ್ದಿ ತೆಗೆದ ಬಟ್ಟೆ ಬಳಸಿ : ತಣ್ಣೀರಿನಲ್ಲಿ ಒದ್ದೆ ಮಾಡಿದ ಬಟ್ಟೆ ಪುಟ್ಟ ಮಗುವಿನ ಹಲ್ಲು ನೋವಿಗೆ ವಿಶ್ರಾಂತಿ ನೀಡಬಹುದು. ನಿಮ್ಮ ಮಗುವಿನಗೆ ಇದು ಹೆಚ್ಚು ಆರಾಮವನ್ನುಂಟುಮಾಡಬಹುದು. ತಂಪಾಗಿರುವ ಬಟ್ಟೆಯಿಂದ ಮಗುವಿನ ಬಾಯಿಗೆ ಮಸಾಜ್ ನೀಡಿದರೆ ಮಕ್ಕಳಲ್ಲಿ ನೀವು ಕಡಿಮೆಯಾಗಿ ಅವರು ಆರಾಮವಾಗಿ ನಿದ್ರಿಸಬಹುದು.

ತಂಪಾದ ಆಹಾರ: ತಂಪಾದ ಆಹಾರಗಳನ್ನು ನೀಡುವುದು ಕೂಡ ನಿಮ್ಮ ಪುಟ್ಟ ಮಗಿವಿನ ಹಲ್ಲು ಹುಟ್ಟುವಿಕೆಯ ನೋವನ್ನು ದೂರಮಾಡಬಹುದು. ಈಗಾಗಲೇ ಘನ/ಗಟ್ಟಿ ಆಹಾರವನ್ನು ಸೇವಿಸಲು ಆರಂಭಿಸದ ಮಗುವಿಗಂತೂ ತಂಪಾದ ಆಹಾರವನ್ನು ನೀಡಿದರೆ ಅವರಿಗೆ ಸಾಕಷ್ಟು ಆರಾಮದಾಯಕವೆನಿಸುತ್ತದೆ. ಆದರೆ ನಿಮ್ಮ ಮಗುವಿನ ವಸಡುಗಳಿಗೆ ನೋವನ್ನು ಹೆಚ್ಚುಮಾಡುವಂತಹ ಅತ್ಯಂತ ಶೀತವಾದ, ಫ್ರೀಜರ್ ನಲ್ಲಿಟ್ಟ ಆಹಾರವನ್ನು ಮಾತ್ರ ನೀಡದಿರಿ!

ಪ್ಲಶ್ ಟೀಥಿಂಗ್ ಟಾಯ್ಸ್ : ಮಾರುಕಟ್ಟೆಯಲ್ಲಿ ಲಭ್ಯವಿರುವ ಮೃದುವಾದ ಮಕ್ಕಳ ಬಾಯಲ್ಲಿಡುವಂತಹ ಆಟಿಕೆಗಳು ಹಲ್ಲು ಹುಟ್ಟುತ್ತಿರುವ ಮಗುವಿನ ನೋವನ್ನು ದೂರಮಾಡಲು ಸಹಾಯಮಾಡಬಹುದು. ಉತ್ತಮ ಗುಣಮಟ್ಟದ ಮೃದು ಗೊಂಬೆಗಳನ್ನು ಇದಕ್ಕಾಗಿ ಆಯ್ಕೆ ಮಾಡಿ.

ರಬ್ಬರ್ ಟೀಥರ್ಸ್: ಮಕ್ಕಳು ಯಾವಾಗಲೂ ಅವರ ಆಟಿಕೆಗಳನ್ನು ಬಾಯಲ್ಲಿ ಕಚ್ಚುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ದರಿಂದ ಮಕ್ಕಳಿಗೆ ರಬ್ಬರ್ ಆಟಿಕೆಗಳನ್ನು ಕೊಟ್ಟರೆ ಅವರು ಆಡುವುದರಲ್ಲಿಯೇ ಮಗ್ನರಾಗುತ್ತಾರೆ ಮತ್ತು ಇದರಿಂದ ತಮ್ಮ ನೋವನ್ನು ಮರೆಯುತ್ತಾರೆ. ಇದು ಮಕ್ಕಳ ಹಲ್ಲು ಹುಟ್ಟುವಾಗಿನ ನೋವನ್ನು ನಿವಾರಿಸಲು ಅತ್ಯುತ್ತಮ ಪರಿಹಾರವಾಗಿದೆ. ನೀವು ನಿಮ್ಮ ಮಗುವಿಗೆ ಹಲ್ಲು ನೋವಿಗೆ ಅತ್ಯುತ್ತಮ ಪರಿಹಾರಗಳನ್ನು ಹುಡುಕುತ್ತಿದ್ದರೆ ಇದೇ ನಿಮ್ಮ ಆಯ್ಕೆಯಾಗಿರಲಿ.

ನೀರು ತುಂಬಿದ ಟೀಥರ್ಸ್: ಮಗುವಿನ ಹಲ್ಲು ಹುಟ್ಟುವ ಹಂತದ ನೋವನ್ನು ನಿವಾರಿಸಲು ಸಹಾಯ ಮಾಡುವ ನೀರು ತುಂಬಿದ ಟೀಥರ್ಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದು ನಿಮ್ಮ ಮಗುವಿನ ವಸಡುಗಳಿಗೆ ಸಾಕಷ್ಟು ಮೃದು ಸ್ಪರ್ಶವನ್ನು ನೀಡುತ್ತದೆ. ಈ ರೀತಿಯ ಆಟಿಕೆಯಲ್ಲಿ ಹಲವಾರು ವಿಭಿನ್ನ ಬಗೆಯ ಆಟಿಕೆಗಳು ಲಭ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಡಯ್ಪರ್ ರಾಷಸ್ ನಿವಾರಣೆಗೆ ಸರಳ ಉಪಾಯಗಳು

ಸೂಕ್ತ ಔಷಧಿಗಳು : ಮಗುವಿನ ಹಲ್ಲು ಹುಟ್ಟುವಾಗಿನ ನೋವನ್ನು ನಿವಾರಿಸುವ ಔಷಧಿಗಳು ದೊರೆಯುತ್ತವೆ. ಆದರೆ, ನೀವು ಈ ಔಷಧಿಗಳನ್ನು ಆಯ್ಕೆ ಮಾಡುವ ಮೊದಲು ತಜ್ಞ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯ.

ಮಕ್ಕಳ ಬೆಳವಣಿಗೆಯ ಸಂತೋಷವನ್ನು ಅನುಭವಿಸುವುದರ ಜೊತೆಗೆ ಅವರ ರಕ್ಷಣೆಯನ್ನೂ ಮಾಡುವುದು ಪಾಲಕರ ಜವಾಬ್ದಾರಿ.

English summary

Safe Teething Remedies For Babies

Watching the stages of growth of your child will be an exciting experience for you. But, there are stages that can bring a little physical difficulty for babies and toddlers.
X
Desktop Bottom Promotion