For Quick Alerts
ALLOW NOTIFICATIONS  
For Daily Alerts

ಮಕ್ಕಳ ಸಾಮಾನ್ಯ ಆಹಾರ ಸೇವಿಸುವ ಅವಧಿಗಳು

By Poornima heggade
|

ಮಕ್ಕಳು ವಿಶೇಷವಾಗಿ ಮೊದಲ ಕೆಲವು ತಿಂಗಳುಗಳಲ್ಲಿ, ಯಂತ್ರಗಳಂತೆ ತಿನ್ನುವ ಮತ್ತು ಮಲಗುವ ಕೆಲಸವನ್ನಷ್ಟೇ ಮಾಡುತ್ತವೆ. ನಿಮ್ಮ ಮಗುವಿನ ಹಸಿವಿನ ಬೇಡಿಕೆಗಳಿಗಳಿಗನುವಾಗಿ ಸ್ತನ್ಯಪಾನ ಅಥವಾ ಬಾಟಲ್ ಹಾಲು ಕುಡಿಸುತ್ತೀರಿ. ನಿಮ್ಮ ಮಗುವಿನ ಆಹಾರ ಸೇವಿಸುವ ಪ್ರಮಾಣ ಮತ್ತು ಪ್ರತಿ ಆಹಾರ ಸೇವಿಸುವ ಸಮಯ ಇವುಗಳನ್ನು ನೋಡಿ, ಅವರ ಆಹಾರ ಸೇವಿಸುವ ಕ್ರಮ ಸಾಮಾನ್ಯವಾಗಿದೆಯೋ ಅಥವಾ ಯಾವುದಾದರೂ ಸಮಸ್ಯೆಯಿದೆಯೋ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಾಕಲೇಟಿನಿಂದಾಗಿ ಮಕ್ಕಳ ಮೇಲಾಗುವ ಪರಿಣಾಮವೇನು?

ಬೇಡಿಕೆಗೆ ತಕ್ಕಂತೆ ಆಹಾರ ನೀಡುವುದು:
ಬೇಡಿಕೆಯಂತೆ ಆಹಾರ ನೀಡುವುದು ಎಂದರೆ ನಿಮ್ಮ ಮಗುವಿನ ಹಸಿವನ್ನು ಹೇಳುವ ಚಿಹ್ನೆಯನ್ನು ನೋಡಿಯೇ ಅರ್ಥ ಮಾಡಿಕೊಂಡು ಅವರಿಗೆ ಆಹಾರವನ್ನು ನೀಡುವುದು. ಆದರೆ ನಿಮ್ಮ ಮಗು ಅತಿಯಾಗಿ ಹಸಿವಿನಿಂದ ಅಳುವವರೆಗೆ ಅವರಿಗೆ ಆಹಾರವನ್ನು ನೀಡದೆ ಇರುವುದಿಲ್ಲ. ಆದರೆ ಅವರು ಹಸಿವಾದ ಚಿಹ್ನೆಯನ್ನು ತೋರಿಸುವವರೆಗೂ ಅವರಿಗೆ ಆಹಾರ ನೀಡುವ ಪ್ರಯತ್ನವನ್ನು ಮಾಡುವುದಿಲ್ಲ. ನಿಮ್ಮ ಮಗು ಹಸಿವಾಗಲು ಪ್ರಾರಂಭವಾದಾಗ ತನ್ನ ಬಾಯಿ ಚಲನೆಯನ್ನು ಆರಂಭಿಸುತ್ತದೆ.

Normal Eating Schedule for Babies

ಮಗು ಸುತ್ತಲೂ ಸ್ತನ ಅಥವಾ ಬಾಟಲ್‌ನ್ನು ಹುಡುಕಲು ಆರಂಭಿಸುತ್ತದೆ. ಅಂತಿಮವಾಗಿ ಅಳುವುದಕ್ಕೆ ಶುರು ಮಾಡುತ್ತದೆ. ನಿಮ್ಮ ಮಗು ಅಸಾಮಾಧಾನದಿಂದ ಜೋರಾಗಿ ಅಳುವದಕ್ಕೆ ಆರಂಭಿಸುವುದಕ್ಕೆ ಮೊದಲು ಅವರ ಹಸಿವನ್ನು ನೀಗಿಸಲು ಆಹಾರವನ್ನು ನೀಡಿದರೆ ಅವರನ್ನು ಸಮಾಧಾನ ಪಡಿಸುವುದು ಸುಲಭ. ಮತ್ತು ಅವರು ಆರಾಮಾಗಿ ಆಹಾರವನ್ನು ಸೇವಿಸುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಭಾರತದಲ್ಲಿರುವ ಸಾಮಾನ್ಯ ಗರ್ಭಾವಸ್ಥೆಯ ನಂಬಿಕೆಗಳು

ಆವರ್ತನಗಳು:
ನಿಮ್ಮ ಮಗುವಿನ ವಯಸಿಗೆ ಅನುಗುಣವಾಗಿ ಅದು ಆಹಾರ ಸೇವಿಸುತ್ತದೆ. ಹೊಸದಾಗಿ ಜನಿಸಿದ ಮಗು ಹುಟ್ಟಿ ಸ್ವಲ್ಪ ಸಮಯವಾದ ಮಗುವಿಗಿಂತ ಹೆಚ್ಚು ಆಹಾರ ಸೇವಿಸುತ್ತದೆ. ಸಣ್ಣ ಮಗುವಿಗೆ ಎರಡು ಮೂರು ಗಂಟೆಗಳಿಗೆ ಎರಡು ಬಾರಿ ಅಂದರೆ ಸುಮಾರು ದಿನದ 24 ಗಂಟೆಗಳಲ್ಲಿ 12 ಬಾರಿ ಆಹಾರ ನೀಡಿ. ಎದೆ ಹಾಲು ಬಿಟ್ಟು ಬೇರೆ ಆಹಾರ ಕುಡಿಯುವ ಮಗುವಿಗೆ ಕೊಡುವ ಆವರ್ತನಗಳು ಸ್ವಲ್ಪ ಹೆಚ್ಚಾಗಿರಲಿ ಕಾರಣ ಇದು ಬೇಗನೆ ಕರಗುವುದಿಲ್ಲ. ಆರು ತಿಂಗಳುಗಳಾಗುವ ಹೊತ್ತಿಗೆ ದಿನಕ್ಕೆ ಆರು ಬಾರಿ ಮಾತ್ರ ಆಹಾರ ಸೇವಿಸುವ ಹಂತಕ್ಕೆ ನಿಮ್ಮ ಮಗು ಬಂದಿರುತ್ತದೆ.

ಪ್ರಮಾಣ:
ಆಗ ತಾನೆ ಹುಟ್ಟಿದ ಮಗು ಎರಡರಿಂದ ಮೂರು ಔನ್ಸ್ ಅಷ್ಟೇ ಹಾಲು ಸೇವಿಸುತ್ತದೆ. ಒಂದು ತಿಂಗಳಾಗುವ ಹೊತ್ತಿಗೆ ಇದು ನಾಲ್ಕರಿಂದ ಆರು ಒನ್ಸ್ ಆಗಿರುತ್ತದೆ. ಆರು ತಿಂಗಳುಗಳಾಗುವಾಗ ಈ ಪ್ರಮಾಣ ಸುಮಾರು 24 ರಿಂದ 30 ಔನ್ಸ್ ನಷ್ಟಾಗಿರುತ್ತದೆ. ಆದರೆ ನೀವು ಎದೆ ಹಾಲು ಕುಡಿಸುತ್ತಿರುವಷ್ಟು ದಿನ ಈ ಪ್ರಮಾಣ ಅಳತೆಗೆ ಸಿಗುವುದಿಲ್ಲ. ಹಾಗಾಗಿ ಹಾಲು ಸೇವಿಸುವುದನ್ನು ನಿಲ್ಲಿಸುವ ತನಕ ಹಾಲು ಕುಡಿಯಲು ಬಿಡಿ. ಆಗ ತಾನೆ ಹುಟ್ಟಿದ ಮಗು ಹೀಗೆ 20 ನಿಮಿಷಗಳ ಕಾಲ ಹಾಲು ಸೇವಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಕ್ಕಳು ಕೆಟ್ಟ ಪದ ಬಳಸಿದಾಗ ಹೊಡೆಯಬೇಡಿ!

ಸಲಹೆಗಳು:
ನಿಮ್ಮ ಮಗುವಿನ ಕೆಲವು ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಹಾಗೂ ಇದು ವರ್ಷವಿಡೀ ಬದಲಾಗುತ್ತಾ ಇರುತ್ತದೆ ಹಾಗಾಗಿ ಅದಕ್ಕೆ ತಕ್ಕಂತೆ ಹಾಲುಣಿಸುವ ಸಮಯಗಳನ್ನು ಬದಲಾಯಿಸಿ. ಹೀಗೆ ಗಮನಿಸಿ ಕಾಳಜಿ ವಹಿಸಿ ಹಾಲುಣಿಸಿದ್ದೇ ಆದಲ್ಲಿ ಬೇಕಾದಷ್ಟು ಹಾಲು ಬೇಕಾದ ಸಮಯಕ್ಕೆ ದೊರಕುತ್ತಾ ಹೋಗುತ್ತದೆ. ಒಂದು ವೇಳೆ ಇದರಲ್ಲಿ ಬಹಳ ಏರಿಳಿತಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

English summary

Normal Eating Schedule for Babies

Babies seem like eating and sleeping machines, especially in the first few months. Feeding your baby on demand is often the best way to ensure she gets the amount of food she needs,whether you breastfeed or bottle feed. General guidelines on frequency and amount for each feeding help you decide if your baby's eating habits are normal or if there is a potential problem.
Story first published: Friday, March 7, 2014, 15:12 [IST]
X
Desktop Bottom Promotion