For Quick Alerts
ALLOW NOTIFICATIONS  
For Daily Alerts

ನಿಮ್ಮ ಫಲವತ್ತತೆಯನ್ನು ಪರಿಶೀಲಿಸುವುದು ಹೇಗೆ?

By Manohar. V
|

ಮಹಿಳೆಯರು ತನ್ನ ಹೊಟ್ಟೆಯಲ್ಲಿ ಬೆಳೆಯಬೇಕಾಗಿರುವ ಮಗುವಿನ ಬಗ್ಗೆ ಆಲೋಚಿಸುವುದು ಸರ್ವೇ ಸಾಮಾನ್ಯ, ಆದರೆ ಕೆಲವೊಮ್ಮೆ ಇದು ಅವರನ್ನು ಇನ್ನೂ ಒತ್ತಡಕ್ಕೆ ತಂದು ನಿಲ್ಲಿಸುತ್ತದೆ. ತನ್ನ ಫಲವತ್ತತೆಯ ಕುರಿತ ಆಲೋಚನೆಗಳು ಅವಳನ್ನು ಇನ್ನಷ್ಟು ಗೊಂದಲಗೊಳ್ಳುವಂತೆ ಮಾಡುತ್ತದೆ. ಅನೇಕ ಮಹಿಳೆಯರು ತಮ್ಮ ಫಲವತ್ತತೆಯನ್ನು ಋತುಮತಿಯ ಲಕ್ಷಣದ ಮೂಲಕ ಮಾತ್ರ ಪರಿಶೀಲಿಸಬಹುದು ಎಂದು ಭಾವಿಸಿರುತ್ತಾರೆ.

ಸರಿ, ಆದರೆ ಆಶ್ಚರ್ಯಕರವಾದ ವಿಷಯ ಏನೆಂದರೆ ತಾನು ಗರ್ಭಧರಿಸ ಬಹುದಾದ ಅಥವಾ ತಮ್ಮ ಫಲವತ್ತತೆಯನ್ನು ಪರಿಶೀಲಿಸಿಕೊಳ್ಳಬಹುದಾದ ವಿವಿಧ ಲಕ್ಷಣಗಳಿದ್ದು, ಇದರಿಂದ ನೀವು ಫಲವತ್ತತೆಯನ್ನು ಹೊಂದಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದಾಗಿದೆ.

ಕ್ರಮಬದ್ಧವಾಗಿ ಋತುಚಕ್ರದ ಪ್ರಕ್ರಿಯೆಯು ಕೂಡ ನಿಮ್ಮ ಫಲವತ್ತತೆಯ ಕುರಿತು ಸ್ಪಷ್ಟ ಚಿತ್ರ ನೀಡುತ್ತದೆ. ಇಂತಹ ಸಮಯದಲ್ಲಿ ತನ್ನ ಫಲವತ್ತತೆಯ ಕುರಿತು ಗೊಂದಲವು ಮಹಿಳೆಯರನ್ನು ಆವರಿಸುವುದು ಸಾಮಾನ್ಯ. ಹಲವಾರು ವಿಧಾನಗಳಿಂದ ನಿಮ್ಮ ಗರ್ಭಧಾರಣೆಯನ್ನು ಅಥವಾ ಫಲವತ್ತತೆಯನ್ನು ಪರಿಶೀಲಿಸಿಕೊಳ್ಳಬಹುದು. ಉದಾಹರಣೆಗಾಗಿ ನಿಮ್ಮಲ್ಲಿ ಅಂಡಾಣುವಿನ ಉತ್ಪತ್ತಿಯು ಸರಿಯಾಗಿ ನಡೆಯುತ್ತಿದೆ ಎಂದು ನಿಮಗೆ ತಿಳಿದರೆ, ಖಂಡಿತವಾಗಿಯೂ ನೀವು ಗರ್ಭಧರಿಸಿರುವಿರಿ ಎಂದು ಖಚಿತಗೊಳ್ಳುತ್ತದೆ. ಆರೋಗ್ಯಕರವಾಗಿರುವ ಹಾಗೂ ಸಕ್ರಿಯ ಅಂಡಾಣು ನೀವು ಗರ್ಭ ಧರಿಸುವಲ್ಲಿ ಸಹಾಯಮಾಡುತ್ತದೆ.

ಹಾರ್ಮೋನುಗಳ ಸಮಸ್ಯೆ ಬಗ್ಗೆ ಕೂಡ ಮಹಿಳೆಯರು ತೊಂದರೆಯನ್ನು ಗುರುತಿಸಿ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅತಿ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಇದರ ಬಗ್ಗೆ ಎಚ್ಚೆತ್ತುಕೊಂಡು ಇದರ ಬಗ್ಗೆ ಗಮನ ಹರಿಸುತ್ತಿರುವುದು ಕಂಡು ಬರುತ್ತಿದೆ. ಆದಾಗ್ಯೂ ಕೂಡ ಮಹಿಳೆಯರ ದೇಹದ ಬಗ್ಗೆ ತಪ್ಪು ನಂಬಿಕೆಗಳು ಕಂಡು ಬರುತ್ತಿವೆ.

ನಿಮ್ಮ ಫಲವತ್ತತೆಯನ್ನು ಪರಿಶೀಲಿಸುವುದು ಹೇಗೆ? ಕೆಲವೊಂದು ಲಕ್ಷಣಗಳನ್ನು ಈ ಕೆಳಗೆ ನೀಡಲಾಗಿದೆ:

1) ಆರೋಗ್ಯಕರವಾದ ಋತುಚಕ್ರದ ಪ್ರಕ್ರಿಯೆ:

1) ಆರೋಗ್ಯಕರವಾದ ಋತುಚಕ್ರದ ಪ್ರಕ್ರಿಯೆ:

ನಿಮ್ಮ ಮುಟ್ಟಿನ ದಿನಾಂಕ ಹಾಗೂ ಪ್ರತಿ ತಿಂಗಳಿನ ಪ್ರಕ್ರಿಯು ಸರಿಯಾಗಿ ನಡೆಯುತ್ತಿದ್ದರೆ, ಖಂಡಿತವಾಗಿಯೂ ನಿಮ್ಮಲ್ಲಿ ಫಲವತ್ತತೆಯ ಲಕ್ಷಣವನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಮಹಿಳೆಯರಿಗೆ 24 ರಿಂದ 35 ದಿನಗಳ ಒಳಗೆ ಸರಿಯಾಗಿ ಋತುಚಕ್ರದ ಪ್ರಕ್ರಿಯೆಯು ನಡೆಯುತ್ತಿರಬೇಕು, ಹಾಗೂ ಅಂಡಾಣುವಿನ ಬಿಡುಗಡೆಯು ಕೂಡ ಸಾಮಾನ್ಯವಾಗಿ ನಡೆಯುತ್ತಿರಬೇಕು. ಜೊತೆಗೆ ಅವಳ ಹಾರ್ಮೋನ್‌ಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ, ಫಲವತ್ತತೆಯನ್ನು ಸುಲಭವಾಗಿ ಪತ್ತೆಹಚ್ಚಬಹುದು.

2) ಅಂಡಾಣುವಿನ ಬಿಡುಗಡೆ:

2) ಅಂಡಾಣುವಿನ ಬಿಡುಗಡೆ:

ಮಹಿಳೆಯುರಿಗೆ ತನ್ನ ಮುಟ್ಟಿನ ಅವಧಿಯಲ್ಲಿ ಸರಿಯಾಗಿ ಅಂಡಾಣು ಬಿಡುಗಡೆಗೊಳ್ಳುತ್ತಿದ್ದರೆ, ಖಂಡಿತವಾಗಿಯೂ ಗರ್ಭ ಧರಿಸುವಲ್ಲಿ ಅಥವಾ ಫಲವತ್ತತೆಗೆ ನಿಮಗೆ ಇದು ಸಹಾಯವಾಗಲಿದೆ. ನಿಮ್ಮ ಅಂಡಾಣು ಬಿಡುಗಡೆಯು ಸರಿಯಾಗಿ ನಡೆಯುತ್ತಿದೆ ಎಂದು ನಿಮಗೆ ತಿಳಿದಿದ್ದರೆ ಖಂಡಿತವಾಗಿಯೂ ನಿಮ್ಮ ಫಲವತ್ತತ್ತೆಯ ಕುರಿತು ನೀವು ಆಲೋಚಿಸಬೇಕಾಗಿಲ್ಲ.

3)ತೂಕ ಪರಿಶೀಲಿಸಿಕೊಳ್ಳಿ:

3)ತೂಕ ಪರಿಶೀಲಿಸಿಕೊಳ್ಳಿ:

ನಿಮ್ಮ ದೇಹದ ತೂಕವನ್ನು ಸೂಚಕದ ಮೂಲಕ ನೀವು ದಿನಾ ಪರಿಶೀಲಿಸುತ್ತಿರುವಿರಿ ಎಂದಾದರೆ, ಖಂಡಿತವಾಗಿಯೂ ಇದು ನಿಮಗೆ ಸಹಾಯವಾಗಲಿದೆ. ಅತಿಯಾದ ತೂಕ ಕೂಡ ನಿಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತದೆ .

4)ವೈದ್ಯರನ್ನು ಭೇಟಿ ಮಾಡಿ:

4)ವೈದ್ಯರನ್ನು ಭೇಟಿ ಮಾಡಿ:

ನಿಮ್ಮಲ್ಲಿ ಹಾರ್ಮೋನ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯಾ ಎಂಬುದನ್ನು ವೈದ್ಯರಲ್ಲಿ ಪರಿಶೀಲಿಸಿಕೊಳ್ಳಿ, ಇದರಿಂದ ನಿಮ್ಮ ಆರೋಗ್ಯಕ್ಕೆ ಹಾಗೂ ಫಲವತ್ತತಗೆ ಅನೂಕೂಲವಾಗಲಿದೆ. ಹಾರ್ಮೋನುಗಳ ಸಮಸ್ಯೆ ಬಗ್ಗೆ ಕೂಡ ಮಹಿಳೆಯರು ತೊಂದರೆಯನ್ನು ಗುರುತಿಸಿ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅತಿ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಇದರ ಬಗ್ಗೆ ಎಚ್ಚೆತ್ತುಕೊಂಡು ಇದರ ಬಗ್ಗೆ ಗಮನ ಹರಿಸುತ್ತಿರುವುದು ಕಂಡು ಬರುತ್ತಿದೆ. ಆದಾಗ್ಯೂ ಕೂಡ ಮಹಿಳೆಯರ ದೇಹದ ಬಗ್ಗೆ ತಪ್ಪು ನಂಬಿಕೆಗಳು ಕಂಡು ಬರುತ್ತಿವೆ.

5)ಧೂಮಪಾನ ಮಾಡಬೇಡಿ:

5)ಧೂಮಪಾನ ಮಾಡಬೇಡಿ:

ನೀವು ಧೂಮಪಾನ ಮಾಡುವುದರಿಂದ ಕೂಡ ನಿಮ್ಮ ದೇಹದಲ್ಲಿರುವ ಹಾರ್ಮೋನುಗಳಲ್ಲಿ ಹಲವಾರು ಏರುಪೇರು ಕಂಡುಬರುತ್ತದೆ. ನೀವು ಧೂಮಪಾನ ಮಾಡುತ್ತಿರುವಿರಾದರೆ, ದಯವಿಟ್ಟು ಅದನ್ನು ಇಂದೇ ನಿಲ್ಲಿಸಿ. ಏಕೆಂದರೆ ನಿಮ್ಮ ಮುಟ್ಟಿನ ಸಮಯದಲ್ಲಿ ಇದು ಅನೇಕ ರೀತಿಯ ತೊಂದರೆಗಳನ್ನು ತಂದೊಡ್ಡುತ್ತದೆ, ಅಲ್ಲದೆ ಅಂಡಾಣು ಬಿಡುಗಡೆಯ ಸಂದರ್ಭದಲ್ಲಿಯೂ ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ.

English summary

How To Know You Are Fertile? Signs

A woman often gets confused thinking if she is fertile or not. She gets tests done to know if she can conceive or not. There are a lot of women who thinks that menstruating is the only fertility sign which makes her know that she is fertile.
X
Desktop Bottom Promotion