For Quick Alerts
ALLOW NOTIFICATIONS  
For Daily Alerts

ಎಚ್ಚರ: ಗರ್ಭಾವಸ್ಥೆಯಲ್ಲಿರುವಾಗ ಇಂತಹ ಅಭ್ಯಾಸದಿಂದ ದೂರವಿರಿ!

|

ಪ್ರಸ್ತುತ ದಿನಗಳಲ್ಲಿ ಜೀವನ ಶೈಲಿಯ ಬದಲಾವಣೆ ಮತ್ತು ಅನಾರೋಗ್ಯಕರ ಆಹಾರಗಳ ಸೇವನೆಯ ಅಭ್ಯಾಸಗಳು ನಿಮ್ಮ ಪ್ರತಿಯೊಂದು ಸಂಭವನೀಯ ಕಾಯಿಲೆಗಳಿಗೆ ಮೂಲ ಕಾರಣವಾಗಿವೆ. ಇಂತಹ ನಡವಳಿಕೆಗಳಿಂದ ಹುಟ್ಟುವ ಮಗುವಿಗೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಮಹಿಳೆಯರು ಮುಂದಾಗುವ ಪರಿಣಾಮವನ್ನು ಲೆಕ್ಕಿಸದೆ ಹುಟ್ಟುವ ಮಗುವಿನ ಮಿದುಳಿಗೆ ತೀವ್ರತೆಯ ಪ್ರಭಾವಗಳು ಬೀರುವ ಅನೇಕ ಕೆಲಸಗಳನ್ನು ಮಾಡುತ್ತಾರೆ.

ಕೆಲವು ಆಹಾರಗಳ ಸೇವನೆಯಿಂದ, ಉದಾಹರಣೆಗೆ ಹುಟ್ಟುವ ಮಗುವಿನ ಮಿದುಳಿನ ಆರಂಭಿಕ ಹಂತಗಳ ಅವಧಿಯಲ್ಲಿ ಪ್ರಭಾವ ಬೀಳುತ್ತವೆ. ಈ ಲೇಖನದಲ್ಲಿ ನಾವು ನಿಮ್ಮ ಮಗುವಿನ ಮಿದುಳಿಗೆ ಪ್ರಭಾವ ಬೀಳುವ ನಡವಳಿಕೆಗಳ ಬಗ್ಗೆ ತಿಳಿದುಕೊಳ್ಳೋಣ. ನಿಮ್ಮ ಮಗುವಿನ ಮಿದುಳಿಗೆ ಹಾನಿಯುಂಟು ಮಾಡಬಹುದಾದ ಪದ್ಧತಿಗಳ ಕಡೆ ಗಮನ ಹರಿಸೋಣ. ನಿಮ್ಮ ಮಗುವಿನ ಮಿದುಳಿನ ಮೇಲೆ ಪ್ರಭಾವ ಬೀರುವ 4 ನಡವಳಿಕೆಗಳ ಬಗ್ಗೆ ಮುಂದೆ ಓದಿ:

Habits That Affect Your Baby's Brain

ಕೆಲವು ಗ್ಲಾಸ್‌ಗಳ ವೈನ್
ಗರ್ಭಾವಸ್ಥೆಯಲ್ಲಿ ಯಾವುದೇ ಮದ್ಯವು ಪೂರ್ತಿಯಾಗಿ ನಿಷೇಧ. ಮದ್ಯವು ನಿಮ್ಮ ಮಗುವಿನ, ಅದರಲ್ಲು ಅದರ ಮಿದುಳಿನ ಬೆಳೆವಣಿಗೆಗೆ ತೀವ್ರ ಕೆಟ್ಟ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿದೆ. ಗರ್ಭಾವಸ್ಥೆಯಲ್ಲಿರುವ ಮಹಿಳೆಯು ಸುರಕ್ಷಿತವಾಗಿ ಎಷ್ಟು ಮದ್ಯವನ್ನು ಸೇವಿಸಬಹುದೆಂಬ ಮಾಹಿತಿಯನ್ನು ಇದುವರೆಗೆ ವೈದ್ಯಕೀಯ ಸಂಶೋಧನೆಗಳು ಖಚಿತಪಡಿಸಿಕೊಳ್ಳುವುದರಲ್ಲಿ ವಿಫಲಗೊಂಡಿದೆ.

ಧೂಮಪಾನ
ನಿಮಗೆ ತಿಳಿದಿರಲಿಲ್ಲವಾದರೆ ನೀವು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಧೂಮಪಾನ ಮಾಡುವುದು ಬೆಳೆಯುವ ಮಗುವಿಗೆ ಅತ್ಯಂತ ಹಾನಿಯುಂಟುಮಾಡುತ್ತದೆ ಎಂದು ತಿಳಿದುಕೊಳ್ಳಿ. ಧೂಮಪಾನವು ಶಿಶುಗಳ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಿಣಿಯಾಗಿರುವಾಗ ಧೂಮಪಾನ ಮಾಡಿದರೆ ಮಗುವಿನ ಮಿದುಳಿನ ಬೆಳವಣಿಗೆಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹೀಗೆ ಧೂಮಪಾನವು ಗರ್ಭಾವಸ್ಥೆಯಲ್ಲಿದ್ದಾಗ ಅತ್ಯಂತ ಕೆಟ್ಟ ನಡವಳಿಕೆಗಳಲ್ಲೊಂದಾಗಿದೆ.

ಸ್ತನ್ಯಪಾನ ಅವಧಿಯಲ್ಲಿ ಮಹಿಳೆಯರಿಗೆ ಅಗತ್ಯವಿರುವ ಜೀವಸತ್ವಗಳು

ನಿಮ್ಮ ಭಾವಪರವಶತೆ
ನಕಾರಾತ್ಮಕ ಭಾವನೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು. ಮುಖ್ಯವಾಗಿ ನೀವು ನಕಾರಾತ್ಮಕ ಭಾವನೆಗಳನ್ನು ಹೊಂದಿರುವ ಸಮಯದಲ್ಲಿ ನಿಮ್ಮ ರಕ್ತ ಸಂಚಾರದ ಮೇಲೆ ಪರಿಣಾಮ ಬೀಳುತ್ತದೆ. ಹಾಗೆ ಪರಿಣಾಮ ಬಿದ್ದ ರಕ್ತವು ಮಗುವಿಗೂ ಹರಿಯುತ್ತದೆ. ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಮಗುವಿನ ಮಿದುಳು ಬೆಳೆಯುತ್ತಿರುವಾಗ ಹೀಗೆ ನಕಾರಾತ್ಮಕ ಭಾವನೆಗಳೊಂದಿದ್ದರೆ ಗಂಭೀರ ಪರಿಣಾಮವಾಗುವುದು ಸಹಜ.

ವ್ಯಾಯಾಮದ ಕೊರತೆ
ಒಂದು ನಿರ್ದಿಷ್ಟ ಅರ್ಥದಲ್ಲಿ ಇದು ಸತ್ಯ. ಸಾಕಷ್ಟು ವ್ಯಾಯಾಮ ಮಾಡದಿದ್ದಲ್ಲಿ ಮಗುವಿನ ಅರೋಗ್ಯದ ಮೇಲೆ ಅಷ್ಟೊಂದು ಪರಿಣಾಮ ಬೀಳದಿದ್ದರೂ ವ್ಯಾಯಾಮಮಾಡಿದಲ್ಲಿ ನಿಮ್ಮ ಮಗುವಿನ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಆದ್ದರಿಂದ ನೀವು ವ್ಯಾಯಾಮ ಮಾಡದಿದ್ದಲ್ಲಿ ಈಗಲಾದರೂ ಆರಂಭ ಮಾಡಿದರೆ ನಿಮ್ಮ ಮಗುವಿನ ಆರೋಗ್ಯದ ಪ್ರಮಾಣದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ.

English summary

Habits That Affect Your Baby's Brain

In the present day, lifestyle changes and unhealthy habits are the root cause for almost every possible illness you can think of. What can be worse is that if your habits end up affecting the birth of your newborn. Let us look at these habits that can affect your baby's brain. Here are 4 habits that affect your baby's brain. Read on...
X
Desktop Bottom Promotion