For Quick Alerts
ALLOW NOTIFICATIONS  
For Daily Alerts

ಮಗುವಿಗೆ ಬಲವಂತವಾಗಿ ಊಟ ಮಾಡಿಸುವುದು ಸರಿಯೇ?

|

ಮಗು ಎಂದರೆ ಆನಂದಕ್ಕೆ ಒಂದು ಪರ್ಯಾಯ ಪದ. ಅದು ಕುಳಿತರು ಆನಂದ, ನಿಂತರು ಆನಂದ, ಓಡಾಡಿಕೊಂಡು, ಆಟವಾಡಿದರೆ ಆನಂದವೋ, ಆನಂದ. ಆದರೂ ಸಹ ಅವರ ಊಟ ತಿಂಡಿಯ ಬಗೆಗೆ ಸ್ವಲ್ಪ ಮುತುವರ್ಜಿಯನ್ನು ವಹಿಸುವುದು ಅತ್ಯಗತ್ಯ.

ಇನ್ನು ಮಗುವಿಗೆ ಎದೆಹಾಲನ್ನು ಕುಡಿಸಲು ಎದೆಗಾರಿಕೆಯೇ ಇರಬೇಕು. ಕಾಲ ಕ್ರಮೇಣ ಅವರಿಗೆ ವಯಸ್ಸಾದಂತೆ ಅವರಿಗು ಆಹಾರದ ರುಚಿಯನ್ನು ಕಂಡು ಹಿಡಿಯುವ ಪ್ರವೃತ್ತಿ ಬೆಳೆಯುತ್ತದೆ. ಕೆಲವೊಮ್ಮೆ ತಕ್ಷಣ ಮಕ್ಕಳಲ್ಲಿ ತಿನ್ನುವ ಚಪಲಗಳು ಮೂಡುವುದನ್ನು ನಾವು ಗಮನಿಸಬಹುದು.

Forceful feeding is it a good idea?

ಮಕ್ಕಳಿಗೆ ಊಟ ಮಾಡಿಸುವುದು ದಿನೇ ದಿನೇ ಕಷ್ಟವಾಗುತ್ತ ಸಾಗುವುದನ್ನು ನೀವು ಗಮನಿಸಬಹುದು. ಆದಾಗಿಯೂ ಈ ಹಸು ಗೂಸುಗಳಿಗೆ ತುತ್ತು ತಿನ್ನಿಸದೆ ಬೇರೆ ವಿಧಿಯೇ ಇಲ್ಲ. ಕೆಲವೊಮ್ಮೆ ಹಠಮಾರಿ ಮಕ್ಕಳಿಗೆ ಬಲವಂತವಾಗಿ ಊಟ ಮಾಡಿಸಬೇಕಾಗುತ್ತದೆ. ಬಲವಂತವಾಗಿ ಊಟ ಮಾಡಿಸುವುದು ಎಂಬುದು ಒಂದು ಏಕ ಮುಖವಾದ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ತಾಯಿ ಅಥವಾ ಪೋಷಕರು, ತಮ್ಮ ಕೈಯಲ್ಲಿ ಒಂದು ತುತ್ತು ಹಿಡಿದುಕೊಂಡು ಮಗುವಿನ ಬಾಯಿಯನ್ನು ಬೆರಳಿನಲ್ಲಿ ತೆರೆದು, ತುತ್ತನ್ನು ಬಾಯಿಯಲ್ಲಿ ಇಟ್ಟು ಬೆರಳಿನಿಂದ ಅದನ್ನು ಒಳಗೆ ತಳ್ಳುವುದು.

ಮಕ್ಕಳಿಗೆ ಕೊಡಬಾರದ ಏಳು ಆಹಾರಗಳು

ನಂತರ ಸ್ವಲ್ಪ ನೀರನ್ನು ಕುಡಿಸುವುದು ಮಾಡಲಾಗುತ್ತದೆ. ಇದಕ್ಕಾಗಿ ಒಂದು ಮಗ್ ನೀರನ್ನು ಸಹ ಬಳಸಲಾಗುತ್ತದೆ. ಇಷ್ಟು ಶ್ರಮ ಪಡುವುದು ಮಗುವಿನ ಹೊಟ್ಟೆ ತುಂಬಿಸಲು ಮತ್ತು ಅದಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಹೊಟ್ಟೆಗೆ ಸೇರಿಸಲು. ಆ ವಿಚಾರದಲ್ಲಿ ಇದು ಒಳ್ಳೆಯದೇ, ಆದರೆ ಅತಿರೇಕಕ್ಕೆ ಹೋದರೆ ಇದರಿಂದಲು ಸಹ ದುಷ್ಪರಿಣಾಮಗಳು ಉಂಟಾಗುತ್ತವೆ.

ಮಗುವಿಗೆ ನಿಶ್ಶಕ್ತಿ ಮತ್ತು ಅಪೌಷ್ಟಿಕತೆ ಕಾಡದಿರಲಿ ಎಂದು ಬಲವಂತವಾಗಿ ತಿನ್ನಿಸುವುದು ಸರಿ ಆದರೆ ಕೆಲವೊಮ್ಮೆ ಇದೇ ವಿಚಾರವಾಗಿ ಮಕ್ಕಳ ಸಾವು ಸಹ ಸಂಭವಿಸಿರುವ ವಿಚಾರ ಬೆಳಕಿಗೆ ಬಂದಿದೆ. ಅದಕ್ಕಾಗಿ ನಾವು ಇಲ್ಲಿ ಬಲವಂತವಾಗಿ ತಿನ್ನಿಸುವ ಪ್ರಕ್ರಿಯೆಯ ಇನ್ನೊಂದು ಮುಖದ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ ಓದಿ ತಿಳಿದುಕೊಳ್ಳಿ.

ಬಲವಂತವಾಗಿ ತಿನ್ನಿಸಿದರೆ ಏನಾಗಬಹುದು?
ನಿಮ್ಮ ಮಗು ತನಗೆ ಇಷ್ಟವಾದ ಆಹಾರವನ್ನು ನಿಧಾನವಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಮಗುವಿಗೆ ಕೆಲವು ಆಹಾರಗಳು ಹಿಡಿಸಬಹುದು, ಇನ್ನು ಕೆಲವು ಹಿಡಿಸದೆಯೇ ಇರಬಹುದು. ಊಟದ ಸಮಯವೆಂದರೆ ಮಗುವಿಗೆ ಭಯ ಹುಟ್ಟಬಹುದು. ಅಥವಾ ಅದಕ್ಕು ನಿಮಗು ಯುದ್ಧವೇ ನಡೆಯಬಹುದು. ಒಂದು ವೇಳೆ ಮಗು ಊಟ ಮಾಡದಿದ್ದರೆ, ನೀವು ಬಲವಂತವಾಗಿ ಅದಕ್ಕೆ ತಿನ್ನಿಸಬಹುದು. ಆದರೆ ಇದು ನೀವು ಅಂದುಕೊಂಡಷ್ಟು ಸುಲಭವಲ್ಲ. ಮಗುವಿಗೆ ಊಟ ಮಾಡಿಸುವ ಮೊದಲು ಅದರ ಇಷ್ಟಾನಿಷ್ಟಗಳ ಬಗ್ಗೆ ನಿಮಗೆ ತಿಳುವಳಿಕೆ ಇರಬೇಕು. ನಂತರ ಅದಕ್ಕೆ ನೀವು ಊಟ ಮಾಡಿಸಬಹುದು.

ಬಲವಂತವಾಗಿ ಊಟ ಮಾಡಿಸುವುದು ಒಮ್ಮೊಮ್ಮೆ ಮಾರಕವಾಗಬಲ್ಲದು. ಏಕೆಂದರೆ ನೀವು ತಿನ್ನಿಸುವ ಊಟದ ಮೇಲೆ ಮಗುವಿಗೆ ಆಸೆ ಹುಟ್ಟುವ ಬದಲು ಅಸಹ್ಯ ಹುಟ್ಟಬಹುದು. ಅವರಿಗೆ ಊಟವೆಂದರೆ ಕಿರಿಕಿರಿಯಾಗಬಹುದು. ಒಂದು ವೇಳೆ ನಿಮ್ಮ ಮಗು ಕುರುಕಲು ತಿಂಡಿಗಳ ಬಗೆಗೆ ಒಲವು ಮೂಡಿಸಿಕೊಂಡರೆ ಕೆಲವು ತಿಂಗಳು ಅದನ್ನು ತಿನ್ನಲು ಬಿಡಿ. ಹಾಗಾದರು ಸರಿ ಸ್ವಲ್ಪ ಊಟ ಮಾಡುವುದನ್ನು ಅದು ಮಗು ಸ್ವತಃ ರೂಢಿಸಿಕೊಳ್ಳಲಿ. ಸ್ವಲ್ಪ ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು. ಆದರೆ ಮುಂದೊಂದು ದಿನ ಅವರೇ ಊಟ ಮಾಡುತ್ತಾರೆ. ಹಾಗಾಗಿ ಬಲವಂತವಾಗಿ ತಿನ್ನಿಸುವುದನ್ನು ಆದಷ್ಟು ಕಡಿಮೆ ಮಾಡಿ.

ಅಸಮರ್ಪಕವಾದ ಆಹಾರದಿಂದ ನಿಮ್ಮ ಮಗುವು ಸುಸ್ತಾಗಬಹುದು. ಜೊತೆಗೆ ಮಗುವಿಗೆ ಕೆಲವು ಕಾಯಿಲೆಗಳು ಬಂದು ಅದನ್ನು ಪರಿಹರಿಸಲು ಕಷ್ಟವಾಗಬಹುದು. ಏಕೆಂದರೆ ಮಗುವಿಗೆ ಔಷಧಿಯನ್ನು ನೀಡಿದರು ಸಮತೋಲನ ಹೊಂದಿರುವ ಆಹಾರವನ್ನು ನೀಡಿದರೆ ತಾನೇ ಔಷಧಿ ಕೆಲಸ ಮಾಡುವುದು. ಅದಕ್ಕಾಗಿ ಬಲವಂತವಾಗಿ ಊಟ ಮಾಡಿಸುವುದನ್ನು ನಿಲ್ಲಿಸಿ. ಬದಲಿಗೆ ನಿಮ್ಮ ಮಗುವಿಗೆ ಹಿಡಿಸುವಂತೆ ಊಟವನ್ನು ಆಕರ್ಷಕಗೊಳಿಸಿ. ಊಟದ ಅಂದ ಚಂದವನ್ನು ನೋಡಿಯೇ ಮಗು ತಿನ್ನಲು ಆಸೆ ಪಡಬೇಕು.

ಹೀಗೆ ಕೆಲವು ತಿಂಗಳು ನಿಮ್ಮ ಮಗು ಇಷ್ಟ ಪಡುವ ಆಹಾರಗಳನ್ನು ನೀಡುತ್ತಿರಿ. ನಂತರ ಹಂತ ಹಂತವಾಗಿ ಪೋಷಕಾಂಶಭರಿತ ಆಹಾರಗಳನ್ನು ಮಗುವಿಗೆ ತಿನ್ನಲು ನೀಡಿ. ಮಗುವನ್ನು ಬದಲಾಯಿಸಲು ಅದರ ಹಾದಿಯಲ್ಲಿಯೇ ಸಾಗುವುದು ಉತ್ತಮ. ನಿಮ್ಮ ಮಗುವಿಗೆ ಹೊಸ ತಿಂಡಿಯನ್ನು ಪರಿಚಯ ಮಾಡಿಸಬೇಕು ಎಂದರೆ, ಅದನ್ನು ಅವರ ಲಂಚ್ ಬಾಕ್ಸಿನಲ್ಲಿ ಹಾಕಿ. ಆಗ ಮಗುವಿಗೆ ಬೇರೆ ಯಾವುದೇ ಆಯ್ಕೆ ಇರುವುದಿಲ್ಲ.

ಮಗುವಿಗೆ ಊಟ ತಿಂಡಿಯನ್ನು ರೂಢಿ ಮಾಡುವಾಗ ಬಲವಂತಕ್ಕಿಂತ, ಮೃದು ಧೋರಣೆಯನ್ನು ತಳೆಯುವುದು ಉತ್ತಮ. ಏಕೆಂದರೆ ಬಲವಂತ ಮಾಡಿದಷ್ಟು ನಿಮಗೆ ತ್ರಾಸ ಹೆಚ್ಚು, ಈ ವಿಚಾರದಲ್ಲಿ ಕಾದು ನೋಡುವ ತೀರ್ಮಾನ ಒಳ್ಳೆಯದು.

ಮಗು ಮಾತನಾಡುವಂತೆ ಮಾಡಲು ಸುಲಭದ ದಾರಿಗಳು

ನಿಮಗೆ ನಿಮ್ಮ ಮಗು ಗುಬ್ಬಚ್ಚಿಗಳು ತಿಂದಷ್ಟು ತಿನ್ನುತ್ತಿದ್ದರೆ, ಬಲವಂತವಾಗಿ ತಿನ್ನಿಸಲು ಆರಂಭಿಸಿ. ಏಕೆಂದರೆ ಇಂತಹ ಪರಿಸ್ಥಿತಿಯಲ್ಲಿ ನೀವು ಹೀಗೆ ಮಾಡದೆ ವಿಧಿ ಇರುವುದಿಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ಮಕ್ಕಳು ಬಲವಂತವಾಗಿ ತಿನ್ನಿಸಿದರೆ ಮಾತ್ರ ತಿನ್ನುವ ಅಭ್ಯಾಸವನ್ನು ಇರಿಸಿಕೊಂಡಿರುತ್ತಾರೆ. ಆದರೆ ಯಾವುದಕ್ಕು ಬಲವಂತವಾಗಿ ಊಟ ಮಾಡಿಸುವಾಗ ಎಚ್ಚರವಿರಲಿ.

ಏಕೆಂದರೆ ಬಲವಂತವಾಗಿ ಊಟ ತಿನ್ನಿಸುವಾಗ ಕೆಲವು ಮಕ್ಕಳು ಸಾವಿಗೀಡಾದ ಪ್ರಕರಣಗಳು ವರದಿಯಾಗಿವೆ. ಮಕ್ಕಳಿಗೆ ಊಟ ಮಾಡಿಸುವುದು ಒಂದು ಕಲೆ! ಅದಕ್ಕೆ ವಿಶೇಷ ಆಸಕ್ತಿ ಮತ್ತು ಜಾಣ್ಮೆ ಅವಶ್ಯಕ. ಮಕ್ಕಳಿಗೆ ಊಟ ಮಾಡಿಸುವ ಪ್ರತಿ ತಾಯಂದಿರು ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾದುದು ಅತ್ಯಾವಶ್ಯಕ.

Story first published: Wednesday, July 9, 2014, 17:33 [IST]
X
Desktop Bottom Promotion