For Quick Alerts
ALLOW NOTIFICATIONS  
For Daily Alerts

ಗರ್ಭಪಾತದ ಬಳಿಕ ಫಲವತ್ತತೆಯನ್ನು ನಿರೀಕ್ಷಿಸಬಹುದೇ?

By Super
|

ಗರ್ಭಪಾತದ ಬಳಿಕವೂ ಮಹಿಳೆ ಫಲವತ್ತತೆ ಸುಧಾರಿಸಬಹುದು ಮತ್ತು ಗರ್ಭಪಾತದ ಕೆಲವು ತಿಂಗಳ ಬಳಿಕ ಮಹಿಳೆ ಹೆಚ್ಚು ಫಲವತ್ತತೆ ಪಡೆಯುತ್ತಾಳೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಗರ್ಭಪಾತದ ಬಳಿಕ ಮಹಿಳೆ ಸಾಮಾನ್ಯ ಸ್ಥಿತಿಗೆ ಮರಳುವ ಸಮಯವಾಗಿದೆ.

ಹೆಚ್ಚಿನ ಸಮಯದಲ್ಲಿ ಗರ್ಭಪಾತವಾಗುವುದಕ್ಕೆ ಕಾರಣಗಳು ತಿಳಿದಿರುವುದಿಲ್ಲ. ಮೊದಲ 12 ವಾರಗಳಲ್ಲಿ ಉಂಟಾಗುವ ಗರ್ಭಪಾತವು ವರ್ಣತಂತು ವೈಫರೀತ್ಯದಿಂದಾಗಿ. ಇದಕ್ಕೆ ಯಾವುದೇ ವಿಶೇಷ ಕಾರಣವಿಲ್ಲ ಮತ್ತು ಮಹಿಳೆಯ ಗರ್ಭಧಾರಣೆ ಮಾಡುವ ಸಾಮರ್ಥ್ಯ ಕುಂದುತ್ತದೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಆದಾಗ್ಯೂ ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಗರ್ಭಪಾತವಾಗಬಹುದು ಮತ್ತು ಇದು ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು.

ಮುಂದಿನ ಸಲ ಗರ್ಭಪಾತವಾಗುವ ಸಾಧ್ಯತೆ
ಒಂದು ಗರ್ಭಪಾತವು ಮುಂದಿನದನ್ನು ಊಹಿಸಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಗರ್ಭಪಾತವಾದ ಆರೋಗ್ಯವಂತ ಮಹಿಳೆಯರು ಮುಂದಿನ ಸಲ ಗರ್ಭಧರಿಸುವ ಸಾಧ್ಯತೆ ಶೇ. 85ರಷ್ಟಿದೆ. ಮಹಿಳೆ 35ರ ಹರೆಯದ ಮೇಲ್ಪಟ್ಟವಳಾಗಿರದಿದ್ದರೆ ಮತ್ತು ಎರಡಕ್ಕಿಂತ ಹೆಚ್ಚು ಸಲ ಗರ್ಭಪಾತವಾಗದಿದ್ದರೆ ಅಪಾಯ ತುಂಬಾ ಕಡಿಮೆ.

Fertility After Miscarriage

ನಿಮ್ಮ ಫಲವತ್ತತೆಯನ್ನು ಪರಿಶೀಲಿಸುವುದು ಹೇಗೆ?

ಆರಂಭದ ಗರ್ಭಪಾತ ಬಳಿಕ ಫಲವತ್ತತೆ
ಗರ್ಭಪಾತವಾದ ಬಳಿಕ ಮಹಿಳೆಯ ಫಲವತ್ತತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಇದು ತುಂಬಾ ದೀರ್ಘಕಾಲ ಉಳಿಯುವುದಿಲ್ಲ. ಗರ್ಭಪಾತವಾದ ಬಳಿಕ ಮತ್ತೆ ಅಂಡೋತ್ಪತ್ತಿ ಆರಂಭವಾದ ಮತ್ತು ಸಾಮಾನ್ಯವಾಗಿ ಋತುಚಕ್ರ ಆರಂಭವಾದ ನಾಲ್ಕರಿಂದ ಆರು ವಾರಗಳ ಬಳಿಕ ಮಹಿಳೆಯು ಫಲವತ್ತತೆ ಪಡೆಯುತ್ತಾಳೆ.

ಮತ್ತೆ ಪ್ರಯತ್ನಿಸುವ ಸಮಯ
ಗರ್ಭಪಾತವಾದ ಬಳಿಕ ವೈದ್ಯರು ಮಹಿಳೆಯ ವೈದ್ಯಕೀಯ ಇತಿಹಾಸ ಮತ್ತು ಆಕೆಯ ದೇಹ ಮತ್ತೆ ಮಗುವನ್ನು ಪಡೆಯಲು ಸಂಪೂರ್ಣವಾಗಿ ಚೇತರಿಸಿಕೊಂಡಿದೆಯಾ ಎನ್ನುವುದನ್ನು ಪರಿಶೀಲಿಸುತ್ತಾರೆ. ಕೆಲವು ಮಹಿಳೆಯರ ದೇಹವು ನಾಲ್ಕರಿಂದ ಆರು ವಾರಗಳಲ್ಲಿ ತಯಾರಾಗುತ್ತದೆ. ಮತ್ತೆ ಕೆಲವು ಮಹಿಳೆಯರ ದೇಹವು ದೈಹಿಕವಾಗಿ ಸಜ್ಜಾಗಲು ಆರು ವಾರ ಬೇಕಾಗಬಹುದು.

ಫಲವತ್ತತೆ ಹೆಚ್ಚಿಸುವ ವಿಧಾನಗಳು
ಮತ್ತೆ ಗರ್ಭಧಾರಣೆಯಾಗಬೇಕೆಂದು ದಂಪತಿ ಬಯಸಿದರೆ ಗರ್ಭಧರಿಸಲು ಮಹಿಳೆ ಮಾಡಬಹುದಾದ ಕೆಲವೊಂದು ವಿಷಯಗಳು ಇಲ್ಲಿವೆ. ಮೊದಲನೇಯದಾಗಿ ಎಲ್ಲಾ ರೀತಿಯ ಅನಾರೋಗ್ಯಕರ ಹವ್ಯಾಸ ತ್ಯಜಿಸಬೇಕು. ಇದರಲ್ಲಿ ಧೂಮಪಾಸ, ಡ್ರಗ್ಸ್ ಮತ್ತು ಆಲ್ಕೋಹಾಲ್ ಸೇರಿದೆ. ಅತಿಯಾದ ಕೆಫಿನ್ ಸೇವನೆ ಗರ್ಭಧಾರಣೆಗೆ ಅಡ್ಡಿಯಾಗಬಹುದು. ಇದರಿಂದ ಇದು ಮಿತಿಯಲ್ಲಿರಲಿ.

ಆರೋಗ್ಯಕರ ಆಹಾರ ಸೇವಿಸಿ
ಗರ್ಭಪಾತದಿಂದಾಗಿ ನಿಮಗೆ ಖಿನ್ನತೆಯ ಅನುಭವಾಗುತ್ತಿದ್ದರೆ ಆಗ ಮಹಿಳೆಯ ಆಹಾರ ಕ್ರಮವು ಆರೋಗ್ಯಕರವಾಗಿಲ್ಲವೆಂದರ್ಥ. ಹಸಿವು ಕಡಿಮೆಯಾಗುವುದು, ಹೆಚ್ಚು ತಿನ್ನದೆ ಇರುವುದು, ಅಳುತ್ತಾ ತಿನ್ನುವುದು ಮತ್ತು ಅತಿಯಾಗಿ ತಿನ್ನುವಂತಹ ಮಹಿಳೆಯರಿಗೆ ಗರ್ಭಪಾತದ ಅನುಭವವಾಗಿರಬಹುದು. ಆಹಾರ ಕ್ರಮದ ಬಗ್ಗೆ ಹೆಚ್ಚು ಗಮನಹರಿಸಬೇಕು ಮತ್ತು ಆರೋಗ್ಯಕರ ಆಹಾರವನ್ನು ಆಹಾರ ಕ್ರಮಕ್ಕೆ ಸೇರಿಸಬೇಕು.

ವೈದ್ಯರೊಂದಿಗೆ ಮಾತನಾಡಿ
ಬೇಗನೆ ಗರ್ಭಪಾತವಾದ ಬಳಿಕ ದಂಪತಿಯಲ್ಲಿ ಫಲವತ್ತತೆ ಸಮಸ್ಯೆ ಕಾಡುತ್ತಿದ್ದರೆ ಆಗ ವೈದ್ಯರ ಸಲಹೆ ಪಡೆಯಿರಿ. ಹಲವಾರು ರೀತಿಯ ಆಯ್ಕೆಗಳು ಲಭ್ಯವಿದೆ. ವೈದ್ಯರು ಮಾಡುವಂತಹ ಮೊದಲ ಕೆಲಸವೆಂದರೆ ಪುರುಷ ಮತ್ತು ಮಹಿಳೆಯ ಫಲವತ್ತತೆಯ ಪರೀಕ್ಷೆ ಮಾಡುವುದು. ನಿಮಗೆ ವೈದ್ಯರ ಸಲಹೆ ಪಡೆಯಲು ಇಷ್ಟವಿಲ್ಲವೆಂದಾದರೆ ಆಗ ನೀವು ಫರ್ಟೆಲ್ ಎನ್ನುವ ಸಾಧನವನ್ನು ಬಳಸಿ ಮನೆಯಲ್ಲೇ ಪರೀಕ್ಷಿಸಿಕೊಳ್ಳಬಹುದು. ಇದು ಸುಮಾರು ಏಳು ಸಾವಿರ ರೂ,ವರೆಗೆ ಲಭ್ಯವಿದೆ. ಇದರಿಂದ ಮಹಿಳೆ ಮತ್ತು ಪುರುಷನ ಫಲವತ್ತತೆ ಮಟ್ಟ ಪರೀಕ್ಷಿಸಬಹುದು. ಗರ್ಭಪಾತದ ಬಳಿಕ ಫಲವತ್ತತೆ ಮಟ್ಟ ಕಡಿಮೆಯಾಗಿದೆಯೆಂದು ಕಂಡುಬಂದರೆ ಆಗ ಫಲವತ್ತತೆ ಪಡೆಯಲು ಔಷಧ ಅಥವಾ ಥೆರಪಿ ಕೆಲವು ಸಮಯದವರೆಗೆ ಮಾಡಬೇಕಾಗುತ್ತದೆ.

ಜನನ ನಿಯಂತ್ರಣದ ಬಳಿಕ ಗರ್ಭಧರಿಸಬಹುದೇ?

ಬಾಟಮ್ ಲೈನ್
ಗರ್ಭಪಾತದ ಬಳಿಕ ಸಾಮಾನ್ಯವಾಗಿ ಫಲವತ್ತತೆ ಕಡಿಮೆಯಾಗಲ್ಲ. ಮಹಿಳೆ ಗರ್ಭಪಾತದ ಬಳಿಕ ಋತುಚಕ್ರವಾದಾಗ ಫಲವತ್ತತೆ ಮಟ್ಟವು ಸಾಮಾನ್ಯವಾಗಿ ಮರಳುತ್ತದೆ. ಭಾವನಾತ್ಮಕ ಸಮಸ್ಯೆಯಿಂದಾಗಿ ಫಲವತ್ತತೆ ಕಡಿಮೆಯಾಗಬಹುದು. ಆದಾಗ್ಯೂ ದಂಪತಿ ದೈಹಿಕ ಹಾಗೂ ಮಾನಸಿವಾಗಿ ತಯಾರಾದರೆ ಗರ್ಭಧಾರಣೆಗೆ ಯಾವುದೇ ರೀತಿಯ ದೈಹಿಕ ಅಡ್ಡಿಯಿರುವುದಿಲ್ಲ.

English summary

Fertility After Miscarriage

Fertility may be improved after miscarriage and there is some scientific evidence that you are a little more fertile for a couple of months after a miscarriage. However, there are cases where miscarriages occur due to other health issues that would affect a woman's reproductive system.
Story first published: Tuesday, June 17, 2014, 15:05 [IST]
X
Desktop Bottom Promotion