For Quick Alerts
ALLOW NOTIFICATIONS  
For Daily Alerts

ಮಗು ಸ್ತನ್ಯಪಾನ ತ್ಯಜಿಸಲು ಅನುಸರಿಸಬೇಕಾದ ವಿಧಾನಗಳು

|

ನಿಮ್ಮ ಮಗು ಸ್ತನ್ಯಪಾನ ಮಾಡುತ್ತಿರುವಾಗ ಅದನ್ನು ತ್ಯಜಿಸುವಂತೆ ಮಾಡುವುದು ಕಷ್ಟದದ ಕೆಲಸವೇ. ಆರು ತಿಂಗಳವರೆಗೆ ನಿಮ್ಮ ಮಗು ಮೊಲೆಹಾಲು ಉಣ್ಣುತ್ತದೆ. ನಂತರವೂ ಕೂಡ ಮಕ್ಕಳು ತಾಯಿಯ ಹಾಲನ್ನು ಆಶ್ರಯಿಸುತ್ತವೆ.

ಅವರಿಗೆ ಹಸಿವಾಗಿರಲಿ ಆಗದೇ ಇರಲಿ ಎದೆ ಹಾಲು ಕುಡಿಯುವುದು ಅವರಿಗೆ ಒಂದು ಅಭ್ಯಾಸವಾಗಿಬಿಟ್ಟಿರುತ್ತದೆ. ಹಾಗಿದ್ದರೆ ನಿಮ್ಮ ಮಗು ಮೊಲೆ ಹಾಲನ್ನು ತ್ಯಜಿಸಿ ಬೇರೆ ಆಹಾರಗಳನ್ನು ತಿನ್ನುವಂತೆ ಮಾಡಲು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ಈ ಲೇಖನದಲ್ಲಿ ಅರಿಯೋಣ.

ಹೆರಿಗೆಯ ನಂತರ ಕಾಡುವ ಎಮೋಷನಲ್ ಪ್ರಾಬ್ಲಂ

ಬೇಯಿಸಿದ ಸೇಬು:

ಬೇಯಿಸಿದ ಸೇಬು:

ಸೇಬನ್ನು ಸ್ವಲ್ಪ ನೀರು ಹಾಕಿ ಕುಕ್ಕರ್‌ನಲ್ಲಿ 2-3 ವಿಶಲ್ ಬರುವವರೆಗೆ ಬೇಯಿಸಿ. ಸಿಪ್ಪೆ ತೆಗೆದು ಉಳಿದ ಬೆಂದ ಹಣ್ಣನ್ನು ಮಗುವಿಗೆ ನೀಡಿ. ಇದು ಸ್ವಲ್ಪ ಸಿಹಿ ಮತ್ತು ಸಪ್ಪೆಯಾಗಿರುತ್ತದೆ. ಖಂಡಿತ ಮಕ್ಕಳು ಇದನ್ನು ಇಷ್ಟಪಡುತ್ತಾರೆ.

ನುರಿದ ಅನ್ನ:

ನುರಿದ ಅನ್ನ:

ಅನ್ನವನ್ನು ಚೆನ್ನಾಗಿ ಬೇಯಿಸಿಕೊಳ್ಳಿ ಹಾಗೂ ಉಪ್ಪು ಹಾಕದ ಮೊಸರಿನೊಂದಿಗೆ ಮಿಶ್ರ ಮಾಡಿ. ಮಗುವಿಗೆ ನೀಡುವ ಅನ್ನವು ಚೆನ್ನಾಗಿ ಮ್ಯಾಶ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ ಕೊಳ್ಳಬಹುದು. ದಿನಾ ಇದನ್ನು ಮಗುವಿಗೆ ನೀಡಿದರೆ ಅವರು ಆರೋಗ್ಯವಂತರಾಗಿರುತ್ತಾರೆ.

ಬೇಯಿಸಿದ ಆಲೂಗಡ್ಡೆ:

ಬೇಯಿಸಿದ ಆಲೂಗಡ್ಡೆ:

ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ ಕೂಡ ಮಗುವಿಗೆ ಉತ್ತಮ ಆಹಾರವಾಗಿದೆ. ಇದಕ್ಕೆ ಸ್ವಲ್ಪ ಹಾಲನ್ನು ಹಾಕಿ ಕೂಡ ನೀವು ಅವರಿಗೆ ನೀಡಬಹುದು.

ಮ್ಯಾಶ್ ಮಾಡಲಾಗಿರುವ ಬಾಳೆಹಣ್ಣು:

ಮ್ಯಾಶ್ ಮಾಡಲಾಗಿರುವ ಬಾಳೆಹಣ್ಣು:

ಬೀಜವಿಲ್ಲದ ಬಾಳೆಹಣ್ಣನ್ನು ನಿಮ್ಮ ಮಗುವಿಗೆ ನೀಡಿ ಮತ್ತು ಇದನ್ನು ಬೇಯಿಸಿ ಹಿಸುಕಿ ನಿಮ್ಮ ಕೈಯಿಂದಲೇ ಮಗುವಿಗೆ ತಿನ್ನಿಸಿ.

ಬೇಯಿಸಿದ ಬೇಳೆ ನೀರು:

ಬೇಯಿಸಿದ ಬೇಳೆ ನೀರು:

ಬೇಯಿಸಿದ ಬೇಳೆಯ ನೀರು ನಿಮ್ಮ ಮಗುವಿಗೆ ಬೇಕಾದ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಇದನ್ನು ಬಾಟಲಿಯಲ್ಲಿ ಹಾಕಿ ಮಗುವಿಗೆ ನೀವು ಸುಲಭವಾಗಿ ನೀಡಬಹುದು.

ಗ್ರೈಂಡ್ ಮಾಡಿದ ಕಿಚಿಡಿ:

ಗ್ರೈಂಡ್ ಮಾಡಿದ ಕಿಚಿಡಿ:

ಅನ್ನ ಮತ್ತು ದಾಲನ್ನು ಚೆನ್ನಾಗಿ ಬೇಯಿಸಿ ನಂತರ ಇದನ್ನು ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿ. ಇದು ನುಣ್ಣನೆ ಜ್ಯೂಸ್ ಆದ ನಂತರ ಮಗುವಿಗೆ ಇದನ್ನು ನೀಡಿ.

ನೀರು:

ನೀರು:

ನಿಮ್ಮ ಮಗುವಿಗೆ ನಿಮ್ಮ ಎದೆಹಾಲು ಕೊಡುವುದನ್ನು ನೀವು ನಿಲ್ಲಿಸುವಾಗ ಮುಖ್ಯವಾಗಿ ಗಮನ ಕೊಡಬೇಕಾಗಿರುವುದು ಮಗು ಕುಡಿಯುವ ನೀರಿಗೆ. ಎದೆಹಾಲಿನಿಂದ ಅದು ಸಾಕಷ್ಟು ನೀರನ್ನು ಕುಡಿಯುತ್ತಿತ್ತು. ನೀವು ಹಾಲು ನಿಲ್ಲಿಸಿದಾಗ ಅದಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ.

English summary

7 Foods To Wean Baby From Breast Milk

Weaning your baby from breast milk is a difficult period for any mother. Not only this is difficult for you, it is also a troubled time for your baby. Ideally, you should breastfeed your baby for 6 months before you consider weaning.
Story first published: Wednesday, May 14, 2014, 11:22 [IST]
X
Desktop Bottom Promotion