For Quick Alerts
ALLOW NOTIFICATIONS  
For Daily Alerts

ಡೈಪರ್ ರಾಶಸ್ ಹೋಗಲಾಡಿಸಲು 12 ಮನೆಮದ್ದುಗಳು!

By Poornima hegde
|

ಮಕ್ಕಳಿಗೆ ಡೈಪರ್ ಹಾಕಿ ಅದರಿಂದ ರಾಶಸ್‌ಗಳು ಉಂಟಾಗಿ ಮಗು ನೋವಿನಿಂದ ವಿಪರೀತ ಅಳುವುದನ್ನು ಯಾವ ಪಾಲಕರು ತಾನೇ ಸಹಿಸಬಲ್ಲರು? ದಿನದಲ್ಲಿ ಅಧಿಕ ಹೊತ್ತು ಡೈಪರ್ ಹಾಕಿಡುವುದರಿಂದ ಅಥವಾ ಗಾಳಿಯಾಡದ ರೀತಿಯಲ್ಲಿ ಅತ್ಯಂತ ಬಿಗಿಯಾಗಿ ಹಾಕುವುದರಿಂದ ರಾಶಸ್ ಗಳು ಉಂಟಾಗಬಹುದು. ಮಗುವಿನ ಹಿಂಭಾಗದಲ್ಲಿ ಕೆಂಪಗಾಗುವುದು, ಡೈಪರ್ ಹಾಕಿರುವ ಜಾಗದಲ್ಲಿ ತೆರಚಿದಂತಾಗುವುದು ಇವೆಲ್ಲ ರಾಶಸ್‌ನ ಸಾಮಾನ್ಯ ಲಕ್ಷಣಗಳು.

ಇದರಿಂದ ಮಗುವಿನ ದಿನದ ಚಟುವಟಿಕೆಗೆ ಅಡ್ಡಿಯುಂಟುಮಾಡುವುದಲ್ಲದೆ ಮಗು ಇಡಿ ದಿನ ನೋವಿನಿಂದ ತೊಂದರೆಗೊಳಗಾಗುತ್ತದೆ. ಆದರೆ ಕೆಲವು ಮನೆಮದ್ದುಗಳು ನಿಮ್ಮ ಮಗುವಿನ ನೋವನ್ನು ನಿವಾರಿಸಿ ಅದರ ಮುಖದಲ್ಲಿ ನಗುವನ್ನರಳಿಸಬಲ್ಲದು!

ಡೈಪರ್ ರಾಶಸ್ ಹೋಗಲಾಡಿಸಲು ಕೆಲವು ಮನೆಮದ್ದುಗಳು ಇಲ್ಲಿವೆ:

ಅಲೋವೆರಾ

ಅಲೋವೆರಾ

ಅಲೋವೆರಾ ಎಲೆಯನ್ನು ತೆಗೆದುಕೊಳ್ಳಿ. ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ ಅದರಿಂದ ಜೆಲ್/ರಸವನ್ನು ತೆಗೆಯಿರಿ. ಡೈಪರ್ ರಾಶಸ್ ಆದ ಭಾಗವನ್ನು ಸ್ವಚ್ಛಗೊಳಿಸಿ ಆ ಭಾಗಕ್ಕೆ ಅಲೋವೆರಾ ಜೆಲ್ ಅನ್ನು ಹಚ್ಚಿ. ಇದು ವೇಗವಾಗಿ ಚರ್ಮದ ಮೇಲಿನ ಗಾಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಜೋಳದ ಗಂಜಿ

ಜೋಳದ ಗಂಜಿ

ಜೋಳದ ಗಂಜಿಯನ್ನು ನಿಮ್ಮ ಶಿಶುವಿನ ಕೆಳಭಾಗಕ್ಕೆ ಅಂದರೆ ಡೈಪರ್ ರಾಶಸ್ ಭಾಗಕ್ಕೆ ಲೇಪಿಸಿ. ಇದು ಮಗುವಿನ ಚರ್ಮದ ಮೇಲಿನ ಕೆಂಪುಗುಳ್ಳೆಗಳನ್ನು ಶೀರ್ಘವಾಗಿ ಹೋಗಲಾಡಿಸುತ್ತದೆ.

ತೆಂಗಿನ ಎಣ್ಣೆ/ಆಲಿವ್ ಎಣ್ಣೆ

ತೆಂಗಿನ ಎಣ್ಣೆ/ಆಲಿವ್ ಎಣ್ಣೆ

ಮಗುವಿನ ರಾಶಸ್ ಭಾಗಕ್ಕೆ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ, ಇದು ಮಗುವಿನ ರಾಶಸ್ ಉರಿಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ.

ಟಿ ಟ್ರೀ ಆಯಿಲ್

ಟಿ ಟ್ರೀ ಆಯಿಲ್

ನೀರನ್ನು ಸೇರಿಸುವುದರ ಮೂಲಕ ಈ ಎಣ್ಣೆಯನ್ನು ತೆಳ್ಳಗಾಗಿಸಿ ಮಗುವಿನ ರಾಶಸ್ ಭಾಗಕ್ಕೆ ಲೇಪಿಸಿ.

ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿ

ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿ

ಮಗುವಿನ ರಾಶಸ್ ಉಂಟಾದ ಭಾಗಕ್ಕೆ ನಿಧಾನವಾಗಿ ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ಇದು ನಿಮ್ಮ ಮಗುವಿಗೆ ನೋವಿನಿಂದ ಸುಲಭ ನಿವಾರಣೆಯನ್ನು ನೀಡುತ್ತದೆ. ಮತ್ತು ರಾಶಸ್ ಗಳು ವೇಗವಾಗಿ ಕಡಿಮೆಯಾಗುತ್ತವೆ.

ಅಡಿಗೆ ಸೋಡಾ

ಅಡಿಗೆ ಸೋಡಾ

ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಅಡಿಗೆ ಸೋಡಾವನ್ನು ಬೆರೆಸಿ. ಈ ನೀರನ್ನು ಡೈಪರ್ ರಾಶಸ್ ಭಾಗಕ್ಕೆ ಚಿಮುಕಿಸಿ ಒರೆಸಿ. ಇದರಿಂದ ರಾಶಸ್ ಕಲೆಗಳೂ ನಿವಾರಣೆಯಾಗುತ್ತವೆ.

ಮೊಸರು

ಮೊಸರು

ನಿಮ್ಮ ಮಗುವಿಗೆ ಗಾಯ, ಕಿಣ್ವಗಳಿಂದ ಉಂಟಾಗಿದದ್ರೆ ಅದನ್ನು ಹೋಗಲಾಡಿಸಲು ಮೊಸರನ್ನು ತಿನ್ನಿಸಿ. ಮೊಸರನ್ನು ರಾಶಸ್ ಗಳಿಗೆ ಹಚ್ಚುವುದರ ಮೂಲಕ ಕ್ರೀಮ್ ನಂತೆಯೂ ಬಳಸಬಹುದು.

ಕ್ಯಮೋಮೈಲ್ ಟೀ

ಕ್ಯಮೋಮೈಲ್ ಟೀ

ನಿಮ್ಮ ಮಗುವನ್ನು ಸ್ನಾನಮಾಡಿಸುವ ನೀರಿನಲ್ಲಿ ಕ್ಯಮೋಮೈಲ್ ಟೀ ಬ್ಯಾಗ್ ಅನ್ನು ಹಾಕಿ. ಈ ನೀರಿನಲ್ಲಿ ನಿಮ್ಮ ಮಗುವನ್ನು ಸ್ನಾನ ಮಾಡಿಸಿ. ನಂತರ ಅಡಿಗೆ ಸೋಡಾ, ಜೋಳದ ಗಂಜಿ ಅಥವಾ ಕ್ಯಮೋಮೈಲ್ ಟೀ ಬ್ಯಾಗ್ ನ್ನು ಡೈಪರ್ ನಲ್ಲಿಟ್ಟು ಮಗುವಿಗೆ ಡೈಪರ್ ಹಾಕಿ. ಈ ಮನೆಮದ್ದುಗಳು ನಿಮ್ಮ ಮಗುವಿನಲ್ಲಿ ಉಂಟಾದ ಡೈಪರ್ ರಾಶಸ್ ಹೋಗಲಾಡಿಸಲು ಮತ್ತು ರಾಶಸ್ ಉಂಟಾಗದಿರಲು ಸಹಾಯ ಮಾಡುತ್ತವೆ.

ಓಟ್ ಹಿಟ್ಟಿನ ಸ್ನಾನ

ಓಟ್ ಹಿಟ್ಟಿನ ಸ್ನಾನ

ನಿಮ್ಮ ಮಗುವನ್ನು ಸ್ನಾನ ಮಾಡಿಸುವ ನೀರಿಗೆ ಒಂದು ಕಪ್ ಓಟ್ ಹಿಟ್ಟನ್ನು ಬೆರೆಸಿ. ಈ ನೀರಿನಲ್ಲಿ ನಿಮ್ಮ ಮಗುವನ್ನು ಸ್ನಾನ ಮಾಡಿಸಿ. ಇದು ನಿಮ್ಮ ಮಗುವಿನ ರಾಶಸ್‌ನಿಂದ ಉಂಟಾದ ಗಾಯವನ್ನು ಗುಣಪಡಿಸುತ್ತದೆ.

ದ್ರಾಕ್ಷಿ ಹಣ್ಣಿನ ಬೀಜದ ಸಾರ

ದ್ರಾಕ್ಷಿ ಹಣ್ಣಿನ ಬೀಜದ ಸಾರ

ಇದನ್ನು ನೇರವಾಗಿ ಮಗುವಿನ ರಾಶಸ್ ಭಾಗಕ್ಕೆ ಹಚ್ಚಿದರೆ ಮಗುವಿನ ಉರಿಯನ್ನು ಕಡಿಮೆಗೊಳಿಸಿ ರಾಶಸ್ ನ್ನು ಕಡಿಮೆಗೊಳಿಸುತ್ತದೆ.

ಹಾಲು

ಹಾಲು

ಹಾಲಿನಲ್ಲಿ ಒಂದು ಸ್ವಚ್ಛವಾದ ಬಟ್ಟೆಯನ್ನು ಅದ್ದಿ. ಅದನ್ನು ಮಗುವಿನ ರಾಶಸ್ ಉಂಟಾದ ಭಾಗದಲ್ಲಿಡಿ. ಸ್ವಲ್ಚ ಸಮಯದವರೆಗೆ ಈ ಬಟ್ಟೆಯಿಂದ ಮಗುವಿನ ಗಾಯದ ಭಾಗವನ್ನು ಒರೆಸಿದರೆ ಮಗುವಿಗೆ ನೋವು ಕಡಿಮೆಯಾಗುತ್ತದೆ.

ಪ್ರಮುಖ ಸಲಹೆಗಳು:

ಪ್ರಮುಖ ಸಲಹೆಗಳು:

ಮಗುವಿನ ಗಾಯದ ಭಾಗಕ್ಕೆ ಮಂದವಾದ/ ಸೌಮ್ಯವಾದ ಸೋಪ್‌ ಅನ್ನು ಮಾತ್ರ ಬಳಸಿ.

ನೈಸರ್ಗಿಕ ಬೆಳಕು ಮತ್ತು ಗಾಳಿ ನಿಮ್ಮ ಮಗುವಿನ ಡೈಪರ್ ರಾಶಸ್ ನ್ನು ಹೋಗಲಾಡಿಸಲು ಸಹಾಯಕಾರಿ. ಆದ್ದದಿಂದ ನಿಮ್ಮ ಮಗುವಿಗೆ ದಿನವಿಡಿ ಡೈಪರ್ ಹಾಕುವುದನ್ನು ತಪ್ಪಿಸಿ.

ನೀವು ಮಗುವಿಗೆ ಬಟ್ಟೆಯ ಡೈಪರ್ ಬಳಸುವುದಾದರೆ ಅದನ್ನು ಒಗೆಯಲು ವಿಷಕಾರಿಯಲ್ಲದ ಸೌಮ್ಯವಾದ ಡಿಟರ್ಜಂಟ್ ನ್ನು ಬಳಸಿ

ಮಗುವಿನ ಗಾಯವಾದ ಭಾಗವನ್ನು ಆಗಾಗ ಸ್ವಚ್ಛಗೊಳಿಸಿ ಆದರೆ ಗಟ್ಟಿಯಾಗಿ ರಾಶಸ್ ಭಾಗವನ್ನು ಒರೆಸಬೇಡಿ.

ಮಗುವಿನ ಡೈಪರ್ ಕೊಳೆಯಾದ ತಕ್ಷಣವೇ ಬದಲಾಯಿಸಿ.

English summary

12 Home Remedies for Clearing Diaper Rash

As a parent, it’s heartbreaking to see your baby crying due to inflammation caused by diaper rashes. Diaper rashes can occur when the baby is left with a soiled diaper for a very long time, or when you diaper your tot very tightly
X
Desktop Bottom Promotion