For Quick Alerts
ALLOW NOTIFICATIONS  
For Daily Alerts

ಮಗುವಿಗೆ ಬಾಟಲಿ ಹಾಲನ್ನು ಕುಡಿಸಲು ಟಿಪ್ಸ್

|

ಮಕ್ಕಳಿಗೆ ಎದೆ ಹಾಲು ಕೊಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಾಗಂತ ಮಗು ಸ್ವಲ್ಪ ದೊಡ್ಡದಾದ ಮೇಲೆ ಎಲ್ಲಾ ಸಮಯದಲ್ಲೂ ಎದೆ ಹಾಲನ್ನು ಕೊಡಲು ಸಾಧ್ಯವಿಲ್ಲ. ಆಗ ಮಗುವಿಗೆ ಬಾಟಲಿ ಹಾಲನ್ನು ಕೊಡಬೇಕಾಗುತ್ತದೆ. ಇದರಿಂದ ಮಗುವನ್ನು ಹೊರಗಡೆ ಕರೆದುಕೊಂಡು ಹೋದಾಗ ತಾಯಿಗೆ ಸ್ವಲ್ಪ ಸಹಾಯವಾಗುತ್ತದೆ.

ಮಗು ಮೊದಲಿಗೆ ಬಾಟಲಿ ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ. ರುಚಿಯಲ್ಲಿ ವ್ಯತ್ಯಾಸ ಕಂಡು ಹಿಡಿದು ಬಿಡುತ್ತದೆ. ಮಗುವಿಗೆ ಬಾಟಲಿ ಹಾಲನ್ನು ಕೊಡುವುದಾದರೆ ಈ ಕೆಳಗಿನ ಟಿಪ್ಸ್ ಪಾಲಿಸಬಹುದು.

Weaning Tips For Breastfeeding Mothers

ನಿಧಾನಕ್ಕೆ ಕೊಡಿ
ಸಂಪೂರ್ಣವಾಗಿ ಎದೆ ಹಾಲು ಕುಡಿಯುವುದನ್ನು ನಿಲ್ಲಿಸಿ, ಬಾಟಲಿ ಹಾಲು ಕೊಟ್ಟರೆ ಮಗು ಕುಡಿಯುವುದಿಲ್ಲ. ನಿಧಾನಕ್ಕೆ ಅದಕ್ಕೆ ಬಾಟಲಿ ಹಾಲನ್ನು ಅಭ್ಯಾಸ ಮಾಡಿಸಬೇಕು. ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಕೆಂದು ಬಯಸುವುದಾದರೆ ಮಗು ಬಾಟಲಿ ಹಾಲಿಗೆ ಸಂಪೂರ್ಣ ಒಗ್ಗಿಕೊಳ್ಳುವವರೆಗೆ ನಿಲ್ಲಿಸಬೇಡಿ.

ನಿಪ್ಪಲ್
ಹಾಲು ಬಾಟಲಿನ ನಿಪ್ಪಲ್ ಕೊಳ್ಳುವಾಗ ನೋಡಿಕೊಳ್ಳಿ. ತುಂಬಾ ಮೃದುವಾದ ನಿಪ್ಪಲ್ ಬಾಟಲಿಗೆ ಹಾಕಿ. ನಿಪ್ಪಲ್ ನ ಗಾತ್ರರ ಚಿಕ್ಕದಾಗಿದ್ದರೆ ಒಳ್ಳೆಯದು.

ಟೈಮ್ ಗೆ ಸರಿಯಾಗಿ ಕೊಡುವುದು
ಎದೆ ಹಾಲು ಕೊಡುವುದನ್ನು ನಿಲ್ಲಿಸದೆ, ಬಾಟಲಿ ಹಾಲನ್ನು ಕೊಡುತ್ತಿದ್ದಾರೆ ಮುಂಜಾನೆ ಹಾಗೂ ರಾತ್ರಿ ಹೊತ್ತಿನಲ್ಲಿ ಎದೆ ಹಾಲನ್ನೇ ಕುಡಿಸಿ.

ಮಗುವಿಗೆ ಹಾಲು ಬೇಕೆಂದಾಗ ಕೊಡಿ
ನಿಮ್ಮ ಅನುಕೂಲತೆಗೆ ತಕ್ಕ ಹಾಲು ಕೊಡುವ ಬದಲು ಮಗುವಿಗೆ ಬೇಕೆನಿಸಿದಾಗ ಕೊಡಿ. ಇಲ್ಲದಿದ್ದರೆ ಮಗು ಹಾಲನ್ನು ಕುಡಿಯದೆ ಹಠ ಮಾಡಬಹುದು.

ಮಗುವಿನ ಗಮನವನ್ನು ಬೇರೆ ಕಡೆಗೆ ಸರಿಸಿ
ಮಗುವಿಗೆ ಬಾಟಲಿ ಹಾಲು ಕೊಡುವಾಗ ಕುಡಿಯದಿದ್ದರೆ ಗೊಂಬೆ, ಮತ್ತಿತರ ಆಟ ಸಾಮಾಗ್ರಿಗಳನ್ನು ಕೊಟ್ಟು ಮಗುವಿನ ಗಮನವನ್ನು ಬೇರೆ ಕಡೆಗೆ ಸರಿಸಿ ಹಾಲನ್ನು ಕುಡಿಸಿ. ಈ ರೀತಿ ಮಾಡುತ್ತಾ ಬಂದರೆ ಮಗು ನಿಧಾನಕ್ಕೆ ಬಾಟಲಿ ಹಾಲನ್ನು ಕುಡಿಯಲಾರಂಭಿಸುತ್ತದೆ.

Read more about: ಮಗು ತಾಯಿ baby mother
English summary

Weaning Tips For Breastfeeding Mothers | Tips For New Mother | ಮಗುವಿಗೆ ಬಾಟಲಿ ಹಾಲನ್ನು ಕುಡಿಸಲು ಟಿಪ್ಸ್ | ಚಿಕ್ಕ ಮಗುವಿರುವ ತಾಯಿಂದಿರಿಗೆ ಟಿಪ್ಸ್

If you want to wean your baby and get him/her used to bottle feeding, here are few simple and effective tips for you. Follow these weaning tips so that you can swiftly take transition from breastfeeding to bottle or cup.
X
Desktop Bottom Promotion