For Quick Alerts
ALLOW NOTIFICATIONS  
For Daily Alerts

ಮಗುವನ್ನು ಬೇಸಿಗೆಯಲ್ಲಿ ತಂಪಾಗಿಡಲು ಟಿಪ್ಸ್

|

ಬೇಸಿಗೆಯಲ್ಲಿ ಮಗುವಿನ ಆರೋಗ್ಯದ ಬಗ್ಗೆ ಹಚ್ಚಿನ ಗಮನ ಕೊಡಬೇಕು. ಚಿಕನ್ ಪಾಕ್ಸ್, ಮೇಯಲ್ಲಿ ಕೆಂಪು ಗುಳ್ಳೆಗಳು ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಕಡಿಮೆ ಇರುವುದಿಂದ ಬೇಗನೆ ಕಾಯಿಲೆ ಉಂಟಾಗುತ್ತದೆ.

ಆದ್ದರಿಂದ ಬೇಸಿಗೆಯಲ್ಲಿ ಸೋಂಕಾಣುಗಳು ಹಾಗೂ ಬ್ಯಾಕ್ಟೀರಿಯಾಗಳು ಮಗುವಿನ ಹತ್ತಿರ ಸುಳಿಯದಂತೆ ಎಚ್ಚರವಹಿಸಬೇಕು. ಮಗುವಿಗೆ ತುಂಬಾ ಸೆಕೆಯಾಗದಂತೆ ಆರೈಕೆ ಮಾಡಬೇಕು. ಈ ಕೆಳಗಿನ ಸಲಹೆಗಳು ಮಗುವಿನ ಆರೈಕೆಗೆ ಸಹಕಾರಿಯಾಗಿವೆ.

Tips To Keep Your Baby Cool For This Summer

ಹತ್ತಿಯ ಬಟ್ಟೆ ಹಾಕಿ ಕೊಡಿ
ಬೇಸಿಗೆಯಲ್ಲಿ ಮಕ್ಕಳಿಗೆ ಸಡಿಲವಾದ ಹತ್ತಿಯ ಬಟ್ಟೆ ಹಾಕಿ ಕೊಡಿ. ಪ್ಯಾಂಪರ್ಸ್ ಅನ್ನು ತುಂಬಾ ಹೊತ್ತು ಇಡಬೇಡಿ. ಮಗು ಮೂತ್ರ, ಮಲ ವಿಸರ್ಜನೆ ಮಾಡಿದರೆ ತಕ್ಷಣ ಪ್ಯಾಂಪರ್ಸ್ ಬಿಚ್ಚಿ, ಮಗುವನ್ನು ಸ್ವಲ್ಪ ಹದ ಬಿಸಿ ನೀರಿನಿಂದ ತೊಳೆದು ಮೃದುವಾದ ಬಟ್ಟೆಯಿಂದ ಒರೆಸಿ.

ಹೊರಗಡೆ ಸುತ್ತಾಡಬೇಡಿ

ಮಗುವನ್ನು ಕರೆದುಕೊಂಡು ತುಂಬಾ ಹೊರಗಡೆ ಸುತ್ತಾಡಬೇಡಿ. ಬಿಸಿಲಿನಲ್ಲಿ ಹೊರಗಡೆ ಹೋದರೆ ಮಗು ಕಾಯಿಲೆ ಬೀಳುವ ಸಾದ್ಯತೆ ಹೆಚ್ಚು. ತಾಯಿ ಕೂಡ ತನ್ನ ಆಹಾರಕ್ರಮದ ಬಗ್ಗೆ ಎಚ್ಚರವಹಿಸಬೇಕು.

ಜನಸಂದಣೆಯಿಂದ ದೂರವಿರಿ
ತುಂಬಾ ಜನ ಸೇರಿರುವ ಕಡೆ ಉದಾಹರಣೆಗೆ ಮದುವೆಗೆ ಹೋದರೆ ಮಗುವನ್ನು ಕರೆದುಕೊಂಡು ಗಾಳಿಯಾಡುವ ಜಾಗದಲ್ಲಿ ಹೋಗಿ ಕೂರಿ. ತುಂಬಾ ಮಂದವಾದ ಬಟ್ಟೆ ಹಾಕಿ ಕೊಡಬೇಡಿ.

ಎದೆ ಹಾಲು
ಬೇಸಿಗೆಯಲ್ಲಿ ನಮ್ಮಂತೆ ಮಗುವಿನ ನೀರಿನಂಶ ಅಧಿಕಬೇಕು. ಮಗುವಿಗೆ ಬಾಯಾರಿಕೆಯಾದಾಗ ಹಾಲು ಕೊಡಿ. ಮಕ್ಕಳ ಆಹಾರ ಕೊಡಬಹುದಾದರೆ ಅದನ್ನು ಸ್ವಲ್ಪ ನೀರು-ನೀರಾಗಿ ಮಾಡಿ ಕೊಡಿ.

English summary

Tips To Keep Your Baby Cool For This Summer | ಮಗುವನ್ನು ಬೇಸಿಗೆಯಲ್ಲಿ ತಂಪಾಗಿಡಲು ಟಿಪ್ಸ್

If you have a baby and are perplexed about how to make your baby get adjusted to the summer. You need to understand the basic fact that your child has similar clothing needs to your own and dress your baby as you are dressing yourself.
X
Desktop Bottom Promotion