For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯ ಸಮಯದ ಬಾಯಿಯ ಕಾಳಜಿ

By Super
|

ಗರ್ಭಧಾರಣೆಯ ಅವಧಿ ಮಹಿಳೆಯ ಪಾಲಿನ ಅತ್ಯಂತ ನಾಜೂಕು ಅವಧಿ. ಹೊಸ ಜೀವಕ್ಕೆ ಜನ್ಮ ನೀಡುವ ಕಾತರದಲ್ಲಿರುವ ತಾಯಿ ತನ್ನ ಹಾಗೂ ತನ್ನ ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಇದರ ಜೊತೆಗೆ ಈ ಅವಧಿಯಲ್ಲಿ ಕಂಡುಬರುವ ಮಾನಸಿಕ ತುಮುಲಗಳು ಮತ್ತಷ್ಟು ಕಷ್ಟಕರ ಸನ್ನಿವೇಶಗಳನ್ನು ತಂದೊಡ್ಡುತ್ತದೆ.

ಗರ್ಭಧಾರಣೆಯ ಸಮಯದಲ್ಲಿ ಮಹಿಳೆ ಗಮನಿಸಬೇಕಾದ ಅಂಶಗಳು ಒಂದೆರಡಲ್ಲ. ಸಾಮಾನ್ಯ ಆರೋಗ್ಯದ ಜೊತೆಗೆ ಕೆಲವು ಅಂಶಗಳ ಕಡೆಗೆ ಮತ್ತಷ್ಟು ಗಮನ ಕೊಡಬೇಕಾದ ಅಗತ್ಯವಿದೆ. ಅವುಗಳಲ್ಲಿ ಬಾಯಿಯ ಆರೋಗ್ಯವೂ ಒಂದು. ಬಾಯಿಯ ಆರೋಗ್ಯ ಎಂಬುದು ನಮ್ಮ ಸುಂದರ ನಗುವಿಗಷ್ಟೆ ಸೀಮಿತವಾಗಿಲ್ಲ. ನಮ್ಮ ಬಾಯಿಯ ಬಗ್ಗೆ ನಾವು ಗಮನ ಹರಿಸದೇ ಹೋದರೆ ಇದರಿಂದ ಹಲ್ಲುಗಳ ಜೊತೆಗೆ ಒಸಡುಗಳೂ ಹಾಳಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಾಗುವ ಹಾರ್ಮೋನುಗಳ ಬದಲಾವಣೆ ಕಾರಣದಿಂದ ನಮ್ಮ ಹಲ್ಲಿನ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ.

Oral Care During Pregnancy

ಗರ್ಭಧಾರಣೆಗೆ ಮುನ್ನ ದಂತವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯುವುದು ಬಹಳ ಅಗತ್ಯವಾಗಿದೆ. ಇದರಿಂದ ನಿಮಗೆ ಮುಂದೆ ಹೇಗೆ ಎಚ್ಚರಿಕೆ ವಹಿಸಬೇಕೆಂಬ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ. ಈ ಅವಧಿಯಲ್ಲಿ ಬಾಯಿಯ ಬಗ್ಗೆ ಸಾಕಷ್ಟು ಕಾಳಜಿ ತೆಗೆದುಕೊಂಡಿದ್ದೇ ಆದಲ್ಲಿ ನಮ್ಮ ಒಸಡುಗಳು, ಹಲ್ಲುಗಳು ಮತ್ತು ಬಾಯಿಯಿಂದ ಬರುವ ದುರ್ವಾಸನೆಯಿಂದ ಮುಕ್ತಿ ಸಿಗುತ್ತದೆ.

ದಿನನಿತ್ಯ ಸರಿಯಾಗಿ ಬ್ರಷ್ ಮಾಡುವುದರ ಜೊತೆಗೆ ಫ್ಲೋಸಿಂಗ್ ಮಾಡುವುದು ಗರ್ಭಧಾರಣೆಯ ಸಮಯದಲ್ಲಿ ದಂತ ವೈದ್ಯರಲ್ಲಿ ಹೋಗುವುದನ್ನು ತಪ್ಪಿಸುತ್ತದೆ. ಬರಿ ಬ್ರಷ್ ಮಾಡುವುದು ಮತ್ತು ಫ್ಲಾಸಿಂಗ್ ಕೇವಲ ಸ್ವಚ್ಛ ಮಾಡುವ ಕೆಲಸ ಮಾಡಿದರೆ ಗರ್ಭಧಾರಣೆಯ ಸಂದರ್ಭದಲ್ಲಿ ಬಾಯಿಯ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಮಾಡಬೇಕಾದ ಕೆಲಸಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

ದಿನಕ್ಕೆರಡು ಬಾರಿ ಬ್ರಷ್ ಮಾಡಿ: ದಿನಕ್ಕೆರಡು ಬಾರಿ ಬ್ರಷ್ ಮಾಡುವುದನ್ನು ಎಂದೂ ತಪ್ಪಿಸಬೇಡಿ. ಇದರ ಜೊತೆಗೆ ಪ್ರತಿ ಬಾರಿ ಆಹಾರ ಸೇವಿಸಿದ ಬಳಿಕ ನಿಮ್ಮ ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸಲು ಮರೆಯದಿರಿ. ನಮ್ಮ ಬಾಯಿಯಲ್ಲಿ ಆಹಾರದ ಕಣಗಳು ಉಳಿದರೆ ಅವು ಅಲ್ಲೇ ಉಳಿದು ಸೋಂಕುಗಳು ಬರುವ ಸಾಧ್ಯತೆಗಳಿವೆ. ಬೆಳಗ್ಗೆ ಎದ್ದು ಹಲ್ಲುಜ್ಜುವುದು ಬೇಸರದ ಕೆಲಸವೆನ್ನಿಸಿದರೆ ನಿಮ್ಮ ಪೇಸ್ಟ್ ಅನ್ನು ಬದಲಾಯಿಸಿ ನೋಡಿ.

ನಾಲಗೆಯನ್ನು ಸ್ವಚ್ಛ ಮಾಡಿ: ಹಲ್ಲುಜ್ಜುವಷ್ಟೆ ಮಹತ್ವ ನಾಲಗೆಯನ್ನು ಸ್ವಚ್ಛ ಮಾಡಲು ಕೊಡಬೇಕು. ಹಲ್ಲುಜ್ಜುವಾಗ ನಿಮ್ಮ ನಾಲಗೆಯನ್ನು ಸ್ವಚ್ಛಗೊಳಿಸಲು ಮರೆಯದಿರಿ. ನೀವು ಹಲ್ಲುಜ್ಜಲು ಬಳಸುವ ಬ್ರಷ್ ಅನ್ನೇ ನಾಲಗೆಯನ್ನು ಸ್ವಚ್ಛ ಗೊಳಿಸಲು ಬಳಸಬಹುದು. ಟಂಗ್ ಕ್ಲೀನರ್ಸ್ ಹೆಚ್ಚಿನವರಲ್ಲಿ ಗಾಯ ಮಾಡಿ ರಕ್ತ ಬರುವಂತೆ ಮಾಡುವ ಕಾರಣ ನಾಲಗೆಯ ಸ್ವಚ್ಛತೆಗೆ ಆದಷ್ಟು ಹಲ್ಲಿನ ಬ್ರಷ್ ಅನ್ನೇ ಬಳಕೆ ಮಾಡಿ.

ಫ್ಲೋರೈಡ್ ಅನ್ನು ಮಿತವಾಗಿ ಬಳಸಿ: ಹಲ್ಲಿನ ಪೇಸ್ಟ್ ಮತ್ತು ಮೌತ್ ವಾಷಸ್ ಗಳಲ್ಲಿ ಫ್ಲೊರೈಡ್ ಪ್ರಮುಖ ಅಂಶವಾಗಿರುತ್ತದೆ. ಇದು ಹಲ್ಲು ಹುಳುಕಾಗುವುದನ್ನು ತಪ್ಪಿಸುವ ಕಾರಣ ಹಲ್ಲುಗಳ ಆರೋಗ್ಯಕ್ಕೆ ಸಹಕಾರಿ ಎಂದು ಬಳಸುತ್ತಾರೆ ಆದರೆ ಇದನ್ನು ಹೆಚ್ಚಾಗಿ ಬಳಸಿದರೆ ಹಲ್ಲುಗಳಲ್ಲಿ ಬಿಳಿಯ ಬಣ್ಣದ ಕಲೆಗಳು ಕಾಣಿಸಬಹುದು.

ಕ್ಯಾಲ್ಸಿಯಂ ಪ್ರಮಾಣದ ಮೇಲೆ ಗಮನವಿಡಿ: ನಿಮ್ಮ ಹಲ್ಲುಗಳು ಗಟ್ಟಿಯಾಗಿದ್ದರಷ್ಟೇ ನಿಮ್ಮ ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಗರ್ಭಧಾರಣೆಯ ಸಮಯದಲ್ಲಿ ದೇಹದಲ್ಲಿ ಕ್ಯಾಲ್ಸಿಯಂ ನ ಬಳಕೆ ಬಹಳ ಹೆಚ್ಚಾಗಿರುವ ಕಾರಣ ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಅಗತ್ಯವಾಗುತ್ತದೆ. ಇಲ್ಲದಿದ್ದಲ್ಲಿ ಇದು ನಿಮ್ಮಲ್ಲಿ ಸಮಸ್ಯೆಯನ್ನು ತರುವ ಸಾಧ್ಯತೆಗಳಿವೆ.

ಪ್ರತಿದಿನ ಫ್ಲಾಸ್ ಮಾಡಿ:
ಹಲ್ಲಿನ ಆರೋಗ್ಯ ಚೆನ್ನಾಗಿರಬೇಕಾದರೆ ಅದು ಫ್ಲಾಸಿಂಗ್ ನಿಂದ ಮಾತ್ರ ಸಾಧ್ಯ. ಹಲ್ಲುಗಳ ನಡುವಲ್ಲಿ ಸ್ವಚ್ಛಗೊಳಿಸಲು ಫ್ಲಾಸಿಂಗ್ ಅನ್ನು ಬಳಸಿ ಹಾಗೂ ಹಲ್ಲುಗಳು ಹುಳುಕಾಗುವುದರಿಂದ ದೂರವಿರಿ.

ಸಕ್ಕರೆ ಹೆಚ್ಚಾಗಿರುವ ತಿನಿಸುಗಳನ್ನು ದೂರವಿಡಿ: ಗರ್ಭಧಾರಣೆಯ ಸಮಯದಲ್ಲಿ ಸಿಹಿ ತಿನ್ನಬೇಕೆನ್ನುವ ಆಸೆ ಸಹಜ. ಆದರೆ ಹಲ್ಲುಗಳು ಮತ್ತು ಬಾಯಿಯ ಆರೋಗ್ಯ ದೃಷ್ಟಿಯಿಂದ ಸಕ್ಕರೆ ಹೆಚ್ಚಾದ ತಿನಿಸುಗಳನ್ನು ದೂರವಿಟ್ಟರೆ ಒಳಿತು. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ಕರೆಯ ಮೇಲೆ ಕ್ರಿಯೆ ನಡೆಸಿ ಹಲ್ಲುಗಳ ಆರೋಗ್ಯವನ್ನು ಕೆಡಿಸುತ್ತದೆ.

ಒಳ್ಳೆಯ ಅಭ್ಯಾಸಗಳಿರಲಿ: ಧೂಮಪಾನ ಸೇವನೆ ಹಾಗೂ ಡ್ರಗ್ಸ್ ಅನ್ನು ಗರ್ಭಧಾರಣೆಯ ಅವಧಿಯಲ್ಲಿ ಮಾಡಲೇ ಬಾರದು. ಇದು ಕೇವಲ ಬಾಯಿಯ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ತಾಯಿಯ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದಲೂ ಹೌದು.

ದಂತ ವೈದ್ಯರ ಭೇಟಿ:
ಹಲ್ಲಿನ ಆರೋಗ್ಯದ ಬಗ್ಗೆ ದಂತ ವೈದ್ಯರ ಸಲಹೆ ಪಡೆಯುವುದು ಸೂಕ್ತವಾಗಿದೆ. ಗರ್ಭಧಾರಣೆಯ ಸಮಯದಲ್ಲಿ ದಂತ ಚಿಕಿತ್ಸೆ ಪಡೆಯುವುದು ಸರಿಯಲ್ಲದ ಕಾರಣ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದು ಅಗತ್ಯ.

ಆರೋಗ್ಯಕರ ಆಹಾರ ಸೇವನೆ: ಗರ್ಭಧಾರಣೆಯ ಸಮಯದಲ್ಲಿ ಪೋಷಕಾಂಶ ಮತ್ತು ಜೀವಸತ್ವಗಳುಳ್ಳ ಆಹಾರ ಸೇವನೆ ಅಗತ್ಯ. ಹಾಲು, ಗಿಣ್ಣು, ಸಿಹಿಹಾಕದ ಮೊಸರು ಉತ್ತಮ ಆಯ್ಕೆಗಳು. ಸಕ್ಕರೆಯ ಸೇವನೆಯನ್ನಷ್ಟೆ ಕಡಿಮೆ ಮಾಡಿ. ಇದರ ಜೊತೆಗೆ ಕೋಲಾ ಮತ್ತಿತರ ಸಾಫ್ಟ್ ಡ್ರಿಂಕ್ಸ್ ಕೂಡ ಬೇಡ.

Story first published: Wednesday, December 18, 2013, 11:56 [IST]
X
Desktop Bottom Promotion