For Quick Alerts
ALLOW NOTIFICATIONS  
For Daily Alerts

ಹಾಲು ಹಲ್ಲಿನ ಬಗ್ಗೆ ನೀವು ತಿಳಿದರಬೇಕಾದ ಅಂಶಗಳು

By Super
|

ಮಗುವಿನ ಬೊಚ್ಚು ಬಾಯಿ ನಗೆ ನೋಡಲು ಚೆಂದ ಅದೇ ರೀತಿ ಮೊದಲಿಗೆ ಕಾಣಿಸಿಕೊಳ್ಳುವ ಮುತ್ತಿನಂತಹ ಹಲ್ಲಿನ ನೋಟ ಕೂಡ ಸುಂದರ. ನಿಮ್ಮ ಮಗುವಿಗೆ ಹಾಲುಹಲ್ಲುಗಳು ಬರುವುದಕ್ಕೆ ಮುಂಚೆ ನಿಮಗಿದು ತಿಳಿದಿರಲಿ. ಪೋಷಕರು ಸಾಮಾನ್ಯವಾಗಿ ಈ ಹಾಲುಹಲ್ಲುಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. ಅವರ ನಿರ್ಲಕ್ಷಕ್ಕೆ ಕಾರಣವೆಂದರೆ ಇವು ಶಾಶ್ವತ ಹಲ್ಲುಗಳಲ್ಲ ಮತ್ತು ಇವು ಬಿದ್ದು ಹೋಗುತ್ತವೆ ಎನ್ನುವುದು.

ಆದ್ದರಿಂದ ನೀವು ಈ ಹಾಲುಹಲ್ಲುಗಳ ಬಗ್ಗೆ ತಿಳಿಯಬೇಕಾದ ಕೆಲವು ಸತ್ಯಗಳಿವೆ. ಇವು ಪೋಷಕರಿಗೆ ತಮ್ಮ ಮಗುವಿನ ಬಗೆಗೆ ಹೆಚ್ಚು ತಿಳಿಯಲು ನೆರವಾಗುತ್ತದೆ.

ಸತ್ಯ 1

ಸತ್ಯ 1

ಮಕ್ಕಳು 20 ಹಾಲುಹಲ್ಲುಗಳನ್ನು ಹೊಂದಿರುತ್ತಾರೆ. ಇವು 6 ತಿಂಗಳಿನಿಂದ ವರ್ಷದೊಳಗೆ ಯಾವಾಗ ಬೇಕಾದರೂ ಬರಲು ಶುರುವಾಗಬಹುದು. ಇವು ಮಗುವಿಗೆ 3 ರಿಂದ 4 ವರ್ಷ ವಯಸ್ಸಾಗುವವರೆಗೂ ಬರುತ್ತವೆ.

ಸತ್ಯ 2

ಸತ್ಯ 2

ಹಾಲು ಹಲ್ಲುಗಳು ಅವುಗಳ ಕೆಳಗಿರುವ ಶಾಶ್ವತ ಹಲ್ಲುಗಳು ಬರಲು ಆರಂಭಿಸಿದ ತಕ್ಷಣ ಬೀಳಲಾರಂಭಿಸುತ್ತದೆ. ಕೇವಲ ಮುಂದಿನ ಎರಡು ಹಲ್ಲುಗಳು 6 ವರ್ಷದ ನಂತರ ಬೀಳುತ್ತವೆ. ಇಲ್ಲಿಂದ ಮುಂದಕ್ಕೆ ಪ್ರತಿ ವರ್ಷ ಮಗುವು 2 ಅಥವ 4 ಹಾಲುಹಲ್ಲುಗಳನ್ನು ಕಳೆದುಕೊಳ್ಳುತ್ತದೆ. ಈ ಎಲ್ಲ ಹಾಲು ಹಲ್ಲುಗಳು 10 ಮತ್ತು 13 ವರ್ಷದೊಳಗೆ ಬೀಳುತ್ತವೆ.

ಸತ್ಯ 3

ಸತ್ಯ 3

ಮೊದಲನೇ ಹಲ್ಲು ಬಂದ ತಕ್ಷಣ ದಂತ ವೈದ್ಯರನ್ನು ಭೇಟಿ ಮಾಡಬೇಕು ಅಥವ ಮಗುವಿಗೆ ಒಂದು ವರ್ಷ ತುಂಬಿದ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ನಿಮಗೆ ಅವರು ಬಾಯಿಯ ಸ್ವಚ್ಛತೆ ಮತ್ತು ಮಗುವಿಗೆ ಹಾಲೂಡಿಸುವ ಕ್ರಮಗಳ ಬಗೆಗೆ ತಿಳಿಹೇಳುತ್ತಾರೆ. ಇವು ಬಾಲ್ಯದ ಹಲ್ಲುನೋವಿನ ಸಮಸ್ಯೆಗಳಿಂದ ಮುಕ್ತರಾಗಲು ನೆರವು ನೀಡುತ್ತದೆ.

ಸತ್ಯ 4

ಸತ್ಯ 4

ಹಾಲುಹಲ್ಲುಗಳು ಮೂಡುತ್ತಿರುವ ಸಮಯದಲ್ಲಿ ಮಕ್ಕಳಿಗೆ ಒಸಡಿನಲ್ಲಿ ತುರಿಕೆ, ಹಸಿವು ಕಡಿಮೆಯಾಗುವುದು ಮತ್ತು ಗಾಢ ನಿದ್ದೆಯನ್ನು ಮಾಡಲು ಸಾಧ್ಯವಾಗದೇ ಹೋಗಬಹುದು. ಅವರು ಕೈಗೆ ಸಿಕ್ಕ ಬೊಂಬೆಯನ್ನೋ ಅಥವ ತಮ್ಮ ಬೆರಳುಗಳನ್ನೊ ಬಾಯಲಿಟ್ಟು ಕಚ್ಚಿಕೊಳ್ಳುತ್ತಾ ತುರಿಕೆಯಿಂದ ಮುಕ್ತರಾಗಲು ಪ್ರಯತ್ನಿಸಬಹುದು. ಈ ಸಮಯದಲ್ಲಿ ಮಗು ಅಸ್ವಸ್ಥಗೊಂಡರೆ ಅದಕ್ಕೆ ಕಾರಣ ಹಲ್ಲುಗಳಲ್ಲ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಸತ್ಯ 5

ಸತ್ಯ 5

ನೀವು ಎಷ್ಟು ಬೇಗ ನಿಮ್ಮ ಮಗುವಿನ ಹಲ್ಲನ್ನು ಸ್ವಚ್ಛಗೊಳಿಸಲು ಆರಂಭಿಸಿದರೆ ಅಷ್ಟು ಒಳ್ಳೆಯದು! ಹುಟ್ಟಿದಾಗಿನಿಂದ ಒಂದು ವರ್ಷದವರೆಗೆ ಒಸಡುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸುವುದು ಉತ್ತಮ. ಒಂದನೇ ವರ್ಷದಿಂದ ಮೃದುವಾದ ಮಕ್ಕಳ ಬ್ರಶ್ ಬಳಸಲು ಆರಂಭಿಸಿ.

ಸತ್ಯ 6

ಸತ್ಯ 6

ಮಕ್ಕಳಿಗಾಗಿ ಬಳಸುವ ಫ್ಲೋರೇಡ್ ಟೂತ್ಪೇಸ್ಟ್(500 ppm) 2ನೆಯ ವರ್ಷದಿಂದ ಬಳಸಲಾರಂಭಿಸಬಹುದು. 1000 ppm ಹೊಂದಿರುವ ಪೇಸ್ಟನ್ನು ನಿಮ್ಮ ಮಗು ಮುಕ್ಕುಳಿಸಿ ಉಗಿಯುವುದನ್ನು ಕಲಿತಾಗ ಬಳಸಲಾರಂಭಿಸಿ. ಫ್ಲೋರೇಡ್ ರಹಿತ ನೀರನ್ನು ಬಳಸುತ್ತಿದ್ದಲ್ಲಿ ಈ ಸಲಹೆಗಳನ್ನು ಪಾಲಿಸಬಹುದು. ದೇಶದ ಬಹುಭಾಗಗಳಲ್ಲಿ ನೈಸರ್ಗಿಕ ಫ್ಲೋರೈಡ್ಯುಕ್ತ ಕುಡಿಯುವ ನೀರು ಸಿಗುವುದಿಲ್ಲ. ಭಾರತದಲ್ಲಿ ಸರಬರಾಜಾಗುವ ಮುನಿಸಿಪಲ್ ನೀರಿನಲ್ಲಿ ಸಹ ಫ್ಲೋರೈಡಿಲ್ಲ. ನೀವು ವಾಸಿಸುವ ಪ್ರದೇಶದಲ್ಲಿ ಫ್ಲೋರೈಡ್ಯುಕ್ತ ನೀರು ಸಿಗುತ್ತಿದ್ದಲ್ಲಿ ಮಕ್ಕಳಿಗೆ 6 ನೆಯ ವರ್ಷದಿಂದ ಟೂತ್ಪೇಸ್ಟ್ ಅಭ್ಯಾಸ ಮಾಡಿಸಿ.

ಸತ್ಯ 7

ಸತ್ಯ 7

ಮಗು ಹಾಲು ಕುಡಿಯುವಾಗಲೇ ನಿದ್ದೆ ಮಾಡಿ ಬಿಟ್ಟರೆ ಕಟ್ಟಕಡೆಯಲ್ಲಿ ಅದು ಹೀರಿಕೊಂಡ (ಮೊಲೆ ಹಾಲು ಅಥವ ಬಾಟಲಿನ ಹಾಲು) ಹಾಲನ್ನು ಅದು ನುಂಗಿರುವುದಿಲ್ಲ. ಈ ಹಾಲು ಹಲ್ಲಿನ ಬಳಿ ನಿಂತು ಹಲ್ಲು ಕೊಳೆಯಲು ಕಾರಣವಾಗುತ್ತದೆ. ಇದರಿಂದಾಗಿ ಮೇಲಿನ ಹಲ್ಲು ಮತ್ತು ಒಸಡುಗಳಿಗೆ ತೊಂದರೆಯಾಗುತ್ತದೆ.

ಸತ್ಯ 8

ಸತ್ಯ 8

ಮಕ್ಕಳಿಗೆ ವರ್ಷದಲ್ಲಿ 2 ಬಾರಿ ಪರೀಕ್ಷೆ ಮಾಡಿಸುವುದು ಅತ್ಯಗತ್ಯ. ನಿಯಮಿತವಾಗಿ ದಂತ ವೈದ್ಯರಲ್ಲಿ ಪರೀಕ್ಷೆ ಮಾಡಿಸುತ್ತಿದ್ದರೆ ಮಕ್ಕಳನ್ನು ಹುಳುಕು ಹಲ್ಲುಗಳಿಂದ ದೂರವಿಡಬಹುದು. ಕೆಲವು ಮಕ್ಕಳು ಹುಳುಕು ಹಲ್ಲು, ಸೊಟ್ಟ ಹಲ್ಲುಗಳು ಅಥವ ಒಸಡಿನ ಸಮಸ್ಯೆಗಳಿಂದಾಗಿ ಹೆಚ್ಚು ಬಾರಿ ದಂತ ಪರೀಕ್ಷೆಗೆ ಒಳಗಾಗಬೇಕಾಗಬಹುದು.

English summary

Milk Teeth – Eight Facts You Should Know

Milk teeth are often neglected by parents who think that they are not ‘permanent’ and will ‘fall off anyway’. So, here are some facts about milk teeth which will hopefully increase awareness among the parents of young children:
Story first published: Tuesday, October 1, 2013, 17:56 [IST]
X
Desktop Bottom Promotion