For Quick Alerts
ALLOW NOTIFICATIONS  
For Daily Alerts

ಮಗುವಿನ ಬೇಧಿ ಹೋಗಲಾಡಿಸಲು ಮನೆ ಮದ್ದು

|

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲಿ ಬೇಧಿ ಕೂಡ ಒಂದು. ತಿಂದದ್ದು ಅಜೀರ್ಣವಾದರೆ ಬೇಧಿ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಬೇಧಿ ಕಾಣಿಸಿದರೆ ನಿರ್ಲಕ್ಷ್ಯ ಮಾಡಬಾರದು, ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಚಿಕ್ಕ ಮಕ್ಕಳಿಗೆ 2-3 ಸಲ ಬೇಧಿಯಾದರೆ ಸಾಕು ಸುಸ್ತು ಆಗಿ ಬಿಡುತ್ತಾರೆ. ತಕ್ಷಣ ಔಷಧಿ ಕೊಡದಿದ್ದರೆ ಪ್ರಾಣಕ್ಕೂ ಅಪಾಯ ಉಂಟಾಗಬಹುದು.

ಕೆಲವೊಂದು ಮನೆ ಮದ್ದುಗಳು ಕೂಡ ಮಗುವಿನ ಬೇಧಿ ತಡೆಗಟ್ಟುವಲ್ಲಿ ಸಹಕಾರಿಯಾಗಿವೆ. ಅವುಗಳ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ:

Home Remedies To Cure Diarrhoea In Babies

* ಮಗುವಿಗೆ ಬೇಧಿ ಕಾಣಿಸಿದರೆ ಕುಡಿಯಲು ಏನೂ ಕೊಡದೆ ಇರಬಾರದು. ನೀರು, ಹಾಲು ಕುಡಿಸಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.

* ಒಂದು ಗ್ಲಾಸ್ ಹದ ಬಿಸಿ ನೀರು ತೆಗೆದುಕೊಂಡು ಅದರಲ್ಲಿ 1/2 ಚಮಚ ಉಪ್ಪು ಮತ್ತು 1/2 ಚಮಚ ಸಕ್ಕರೆ ಹಾಕಿ ಕಲೆಸಿ ಕುಡಿಯಲು ಕೊಡಿ. ಇದರಿಂದ ಬೇಧಿ ತಕ್ಷಣ ನಿಲ್ಲುತ್ತದೆ.

* ಸುಲಭವಾಗಿ ಜೀರ್ಣವಾಗುವ ಆಹಾರ ವಸ್ತುಗಳನ್ನು ಮಾತ್ರ ತಿನ್ನಲು ಕೊಡಿ.

* ಮಗುವಿಗೆ ಹಲ್ಲು ಹುಟ್ಟಿ ಬರುವಾಗ ಬೇಧಿ ಕಾಣಿಸಿಕೊಳ್ಳುವುದು ಸಹಜ. ಆಗ ನೀವು ನಿಮ್ಮ ಕೈ ಬೆರಳನ್ನು ಮಗುವಿನ ಬಾಯಿಯೊಳಗೆ ಹಾಕಿ ವಸಡುಗಳನ್ನು ಮೆಲ್ಲನೆ ಮಸಾಜ್ ಮಾಡಿ. ಇದರಿಂದ ಮಕ್ಕಳಿಗೆ ಹಲ್ಲು ಹುಟ್ಟಿ ಬರುವಾಗ ಕಾಣಿಸುವ ನೋವು ಕಮ್ಮಿಯಾಗುವುದು.

* ಮಕ್ಕಳಿಗೆ ಗ್ರೈಪ್ ವಾಟರ್ ಕೊಟ್ಟರೆ ಇದು ಹೊಟ್ಟೆಯಲ್ಲಿರುವ ಗ್ಯಾಸ್ ಅನ್ನು ಹೊರಕ್ಕೆ ಹಾಕುತ್ತದೆ.

English summary

Home Remedies To Cure Diarrhoea In Babies | Tips For Parents | ಮಕ್ಕಳ ಬೇಧಿ ಹೋಗಲಾಡಿಸಲು ಮನೆ ಮದ್ದು | ಪೋಷಕರಿಗೆ ಕೆಲ ಸಲಹೆಗಳು

If you are a well-informed mother, then you must know that diarrhoea in babies can be life threatening. Unfortunately, it is also one of the most common health problems for babies.
X
Desktop Bottom Promotion