For Quick Alerts
ALLOW NOTIFICATIONS  
For Daily Alerts

ಮಗುವಿಗೆ ಮಸಾಜ್ ಗೆ ಸೂಕ್ತವಾದ ಎಣ್ಣೆ ಯಾವುದು?

|

ಮಗುವಿಗೆ ಪ್ರತೀದಿನ ಎಣ್ಣೆ ಮಸಾಜ್ ಮಾಡಬೇಕು. ಈ ಮಸಾಜ್ ಮಗು ಬೆಳೆದಾಗ ಸುಂದರ ದೇಹದಾಕಾರ ಪಡೆಯಲು ಮತ್ತು ಮಗುವಿನ ಬೆಳವಣಿಗೆಗೆ ಸಹಕಾರಿ.

ಮಕ್ಕಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಲು ಎಲ್ಲರಿಂದ ಸಾಧ್ಯವಾಗುವುದಿಲ್ಲ, ಎಣ್ಣೆ ಮಸಾಜ್ ಮಾಡುವ ವಿಧಾನ ಗೊತ್ತಿರಬೇಕು. ಮನೆಯಲ್ಲಿ ಹಿರಿಯರಿದ್ದರೆ ಅವರು ಮಾಡುತ್ತಾರೆ, ಇಲ್ಲದಿದ್ದರೆ ಮಗುವನ್ನು ಸ್ನಾನ ಮಾಡಿಸಲು ಗೊತ್ತಿರುವವರನ್ನು ನೇಮಕ ಮಾಡುವುದು ಒಳ್ಳೆಯದು. ಮಾಡರ್ನ್ ತಾಯಿಂದಿರು ತಮ್ಮ ಮಗುವಿಗೆ ಲೋಷನ್ ಹಚ್ಚಿ ಮಸಾಜ್ ಮಾಡಿದರೆ ಸಾಕೆಂದು ಭಾವಿಸುತ್ತಾರೆ. ಆದರೆ ಮಗುವಿಗೆ ಎಣ್ಣೆ ಮಸಾಜ್ ನಿಂದ ದೊರೆಯುವ ಪ್ರಯೋಜನ ಲೋಷನ್ ನಿಂದ ಸಿಗಲು ಸಾಧ್ಯವಿಲ್ಲ.

Best Massage Oils For Your Baby

ಇಲ್ಲಿ ಕೆಲವು ಎಣ್ಣೆಗಳ ಬಗ್ಗೆ ಹೇಳಲಾಗಿದೆ, ಅವುಗಳು ಮಗುವಿಗೆ ಎಣ್ಣೆ ಮಸಾಜ್ ಮಾಡಲು ಸೂಕ್ತವಾದ ಎಣ್ಣೆಗಳಾಗಿವೆ:

ಗಿಡ ಮೂಲಿಕೆಗಳ ಎಣ್ಣೆ
ಈ ಎಣ್ಣೆ ಆರ್ಯುವೇದ ಅಂಗಡಿಗಳಲ್ಲಿ ದೊರೆಯುತ್ತದೆ. ಕೆಲವರು ತೆಂಗಿನೆಣ್ಣೆಗೆ ಕೆಲವು ಹರ್ಬ್ಸ್ ಸೇರಿಸಿ ಎಣ್ಣೆ ಮಾಡಿ ಮಕ್ಕಳಿಗೆ ಹಚ್ಚುತ್ತಾರೆ.

ಶುದ್ದ ತೆಂಗಿನೆಣ್ಣೆ
ಶುದ್ಧ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಒಂದು ಪಾತ್ರೆಯಲ್ಲಿ ಹಾಕಿಡಿ, ಪ್ರತೀದಿನ ಮಸಾಜ್ ಗೆ ಈ ಎಣ್ಣೆಯನ್ನು ಬಳಸಬಹುದು.

ಸಾಸಿವೆ ಎಣ್ಣೆ
ಮಗುವಿನ ದೇಹದಲ್ಲಿ ತುಂಬಾ ಕೂದಲಿದ್ದರೆ ಅದನ್ನು ಹೋಗಲಾಡಿಸಲು ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು.

ಆಲೀವ್ ಎಣ್ಣೆ

ಆಲೀವ್ ಎಣ್ಣೆ ಮಕ್ಕಳ ತಲೆಯಲ್ಲಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಸಲಹೆ: ಮಗುವಿಗೆ ಮಸಾಜ್ ಮಾಡುವಾಗ ಮಸಾಜ್ ಮಾಡುವವರು ಯಾವುದೇ ಉಂಗುರ, ಬಳೆ ಧರಿಸಬೇಡಿ. ಅವುಗಳು ಮಗುವಿನ ದೇಹಕ್ಕೆ ತಾಗಿದರೆ ಮಗುವಿಗೆ ನೋವಾಗುವುದು.
ಮಕ್ಕಳ ಆರೈಕೆಗೆ ನೈಸರ್ಗಿಕವಾದ ವಸ್ತುಗಳನ್ನು ಬಳಸುವುದು ಒಳ್ಳೆಯದು.

English summary

Best Massage Oils For Your Baby | Tips For Parents | ಮಗುವಿಗೆ ಮಸಾಜ್ ಮಾಡಲು ಸೂಕ್ತವಾದ ಎಣ್ಣೆ ಯಾವುದು | ಪೋಷಕರಿಗೆ ಕೆಲ ಸಲಹೆಗಳು

This traditional practice of massaging the baby with oil before bath has been practiced since decades. However, in this generation, new mothers have replaced oils with baby lotions and creams. Well the fact is, nothing can beat the power of an oil massage
X
Desktop Bottom Promotion