For Quick Alerts
ALLOW NOTIFICATIONS  
For Daily Alerts

ಮಗುವಿಗೆ ಸಾಸಿವೆ ದಿಂಬನ್ನೇ ಬಳಸಿ

|

ಕೆಲವೊಂದು ಮಕ್ಕಳ ತಲೆಯ ಶೇಪ್ ನೀವು ಗಮನಿಸಿರಬಹುದು ಒಂದು ಕಡೆ ಸ್ವಲ್ಪ ಚಪ್ಪಟೆಯಾಗಿರುತ್ತದೆ. ಆ ಶೇಪ್ ಅವರು ದೊಡ್ಡವರು ಆದ ಮೇಲೂ ಹಾಗೇ ಇರುತ್ತದೆ, ಅದಕ್ಕೆ ಪ್ರಮುಖ ಕಾರಣವೇನೆಂದು ಗೊತ್ತೇ? ಚಿಕ್ಕದಿರುವಾಗ ಮಗುವನ್ನು ಮಲಗಿಸಿದ ಭಂಗಿ ಸರಿಯಾಗಿ ಇಲ್ಲದಿದ್ದದು.

ಹೆಚ್ಚಿನ ತಾಯಿಂದಿರಿಗೆ ಮಗುವನ್ನು ಹೇಗೆ ಮಲಗಿಸಬೇಕೆಂದು ಗೊತ್ತಿರುವುದಿಲ್ಲ, ಮಗು ಒಂದು ಕಡೆ ತಲೆ ವಾರೆ ಮಾಡಿ ಮಲಗಿದರೆ ಏನೂ ಆಗುವುದಿಲ್ಲ ಎಂದು ಭಾವಿಸುತ್ತಾರೆ. ಮಗು ವಾರೆಯಾಗಿ ಮಲಗಿ ನಿದ್ರೆಸುತ್ತಿದ್ದರೆ ನೀವು ತಲೆಯನ್ನು ಸರಿಯಾಗಿ ಇಡದಿದ್ದರೆ ತಲೆ ಒಂದು ಕಡೆ ಚಪ್ಪಟೆಯಾಗುವುದು, ಆದ್ದರಿಂದ ಮಗು ನಿದ್ರಿಸುವಾಗ ಮಗುವಿನ ಮಲಗಿದ ಭಂಗಿಯನ್ನು ಗಮನಿಸಲು ಮರೆಯಬೇಡಿ.

Benefits Of Mustard Pillow For Newborn

ಮಗುವಿನ ತಲೆ ಒಂದು ಕಡೆ ಚಪ್ಪಟೆಯಾಗದೆ ಸರಿಯಾದ ಶೇಪ್ ನಲ್ಲಿ ಇಡುವಲ್ಲಿ ಸಾಸಿವೆಯ ದಿಂಬು ತುಂಬಾ ಸಹಕಾರಿ.

ಕೆಲವೊಂದು ಮಕ್ಕಳ ತಲೆ ಹುಟ್ಟುವಾಗ ಸ್ವಲ್ಪ ಉದ್ದವಿರುತ್ತದೆ. ಈ ರೀತಿಯ ತಲೆಯನ್ನು ಮಸಾಜ್ ಮಾಡಿ, ಸರಿಯಾದ ತಲೆ ದಿಂಬು ಇಟ್ಟು ರೌಂಡ್ ಶೇಪ್ ಗೆ ತರಬಹುದು. ಸಾಸಿವೆಯ ದಿಂಬು ಇಟ್ಟು ಮಲಗಿಸಿದರಂತೂ ತಲೆ ಬೇಗನೆ ಸರಿಯಾದ ಶೇಪ್ ಬರುವುದು.

ಸಾಸಿವೆ ದಿಂಬನ್ನು ಮಗುವಿನ ತಲೆ ಅಡಿಗೆ ಇಡುವುದರಿಂದ ಮಗುವಿಗೆ ಈ ಕೆಳಗಿನಂತೆ ಸಹಕಾರಿಯಾಗಿದೆ:

* ಸಾಸಿವೆ ದಿಂಬು ತುಂಬಾ ಮೃದುವಾಗಿರುವುದರಿಂದ ಮಗುವಿಗೆ ಮಲಗಲು ತುಂಬಾ ಕಂಫರ್ಟ್ ಅನಿಸುವುದು. ತಲೆ ಅತ್ತಿತ್ತ ಸರಿಸದೆ ಸರಿಯಾದ ಭಂಗಿಯಲ್ಲಿ ನಿದ್ದೆ ಮಾಡುತ್ತದೆ.

* ಒಂದು ವೇಳೆ ಮಗು ನಿದ್ದೆಯಲ್ಲಿ ಅತ್ತಿತ್ತ ತಿರುಗಿದಾಗ ಈ ದಿಂಬು ಬಳಸಿದರೆ ಮಗುವಿಗೆ ಕುತ್ತಿಗೆ ನೋವು ಬರುವುದಿಲ್ಲ.

* ಸಾಸಿವೆ ದಿಂಬು ಬಳಸಿದರೆ ಮಗುವಿನ ತಲೆಯ ಶೇಪ್ ಹಾಳಾಗುವುದಿಲ್ಲ.

ಆದ್ದರಿಂದ ನಿಮ್ಮ ಮಗುವಿನ ತಲೆ ಕೆಳಗೆ ಹತ್ತಿಯ ದಿಂಬು ಇಡುವ ಬದಲು ಸಾಸಿವೆ ದಿಂಬು ಇಡಿ.

English summary

Benefits Of Mustard Pillow For Newborn

Now many babies are born with minor birth defects. Some babies have a missing finger or a fused toe or a dented head. Alas all birth defects cannot be corrected. However, you can correct defects associated with your newborn baby's head by using mustard Pillow.
X
Desktop Bottom Promotion