For Quick Alerts
ALLOW NOTIFICATIONS  
For Daily Alerts

ಏನಿದು ಗೆಸ್ಟೇಶನಲ್ ಮಧುಮೇಹ..? ಇದರ ಲಕ್ಷಣಗಳೇನು?

By Deepak
|

ಗೆಸ್ಟೇಶನಲ್ ಎಂಬುದು ಬಾಣಂತಿಯರ ಅವಧಿ ಎಂಬರ್ಥವನ್ನು ಸೂಚಿಸುವ ಪದ. ಕೆಲವು ಸಂದರ್ಭಗಳಲ್ಲಿ ಇದನ್ನು ತುಂಬಿದ ಬಸುರಿ ಮತ್ತು ಬಾಣಂತಿಯರ ಅವಧಿ ಎಂಬುದಾಗಿ ಸಹ ಬಳಸುತ್ತಾರೆ. ಇವರಲ್ಲಿ ಒಂದು ಸಮಯದಲ್ಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದನ್ನು ಗೆಸ್ಟೇಶನಲ್ ಮಧುಮೇಹ ಎಂದು ಕರೆಯಲಾಗುತ್ತದೆ. ಈ ಮಧುಮೇಹ ಬಂದರೆ ತಾಯಿಯು ಮಕ್ಕಳಿಗೆ ಹಾಲು ಕುಡಿಸುವುದಕ್ಕೆ ತೊಂದರೆಯಾಗುತ್ತದೆ ಎಂದು ಒಂದು ಹೊಸ ಅಧ್ಯಯನವೊಂದು ತಿಳಿಸಿದೆ.

Does Gestational Diabetes Affect Lactation?

ಅಧ್ಯಯನಕಾರರು ಇಂದಿಗೂ ಗ್ಲೂಕೋಸ್ ಮಟ್ಟಗಳು ಮತ್ತು ಲ್ಯಾಕ್ಟೇಶನ್ ನಡುವಿನ ಸಂಬಂಧದ ಮತ್ತು ಅವುಗಳು ಹೇಗೆ ಒಂದಕ್ಕೊಂದರ ಮೇಲೆ ಪ್ರಭಾವ ಬೀರುತ್ತವೆ ಎಂಬುದರ ಕುರಿತಾಗಿ ಅಧ್ಯಯನ ನಡೆಸುತ್ತಿದ್ದಾರೆ.

ಜೊತೆಗೆ ಹಾಲಿನ ಪ್ರಮಾಣವನ್ನು ಏರಿಸುವ ನಿಟ್ಟಿನಲ್ಲಿ ಸಹ ಇವರು ಸಂಶೋಧನೆ ಮಾಡುತ್ತಿದ್ದಾರೆ. ಬಹುಶಃ ಅಧ್ಯಯನದ ಮುಂದಿನ ಫಲಿತಾಂಶಗಳು ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಬಹುದು. ಅಧ್ಯಯನದ ಭಾಗವಾಗಿ ಅಧ್ಯಯನಕಾರರು ಸುಮಾರು 600 ಜನರ ವೈದ್ಯಕೀಯ ಅಂಕಿ-ಅಂಶಗಳನ್ನು ಅಧ್ಯಯನ ಮಾಡಿದ್ದಾರೆ.

ಈ ಗುಂಪಿನಲ್ಲಿ ಸುಮಾರು 16% ಮಹಿಳೆಯರು ಈ ಅವಧಿಯಲ್ಲಿ ಕಡಿಮೆ ಹಾಲನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ. ಅವರ ಹಾಲಿನ ಉತ್ಪಾದನೆ ಪ್ರಮಾಣ, ಕುಸಿದಿತ್ತು. ಜೊತೆಗೆ ಹಲವಾರು ಮಹಿಳೆಯರು ಗೆಸ್ಟೇಶನಲ್ (ಗರ್ಭಿಣಿಯಾಗಿರುವ ಸಂದರ್ಭದಲ್ಲಿ ರಕ್ತದಲ್ಲಿ ಹೆಚ್ಚುವ ಗ್ಲೂಕೋಸ್ ಪ್ರಮಾಣ)ಮಧುಮೇಹದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಹೀಗೆ ಅಧ್ಯಯನಕಾರರು ಗೆಸ್ಟೇಶನಲ್ ಮಧುಮೇಹದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುತ್ತಾರೆ. ಪ್ರಸ್ತುತ ಅಧ್ಯಯನಕಾರರು, ಗೆಸ್ಟೇಶನಲ್ ಮಧುಮೇಹದಿಂದ ಬಳಲುತ್ತಿರುವ ತಾಯಂದಿರಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧ್ಯಯನದಲ್ಲಿ ತೊಡಗಿದ್ದಾರೆ.

ಯಾವಾಗ ಗೆಸ್ಟೇಶನಲ್ ಮಧುಮೇಹವನ್ನು ಹುಷಾರಾಗಿ ನಿರ್ವಹಣೆ ಮಾಡಲಾಗುತ್ತದೆಯೋ, ಆಗ ಮಹಿಳೆಯರು ಆರೋಗ್ಯಕರವಾದ ಮಗುವಿಗೆ ಜನ್ಮ ನೀಡುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಇವರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಅಧಿಕ ಮಟ್ಟಕ್ಕೆ ಹೋಗುತ್ತದೆ, ಆಗ ವೈದ್ಯರು ಇವರಿಗೆ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡುತ್ತಾರೆ.

ಗೆಸ್ಟೇಶನಲ್ ಮಧುಮೇಹದಿಂದ ಇನ್ನಿತರ ಸಮಸ್ಯೆಗಳು ಸಹ ಬರಬಹುದು. ಅವುಗಳೆಂದರೆ ಅಧಿಕ ತೂಕ, ಅವಧಿ ಪೂರ್ವ ಜನನ, ರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣ ಮತ್ತು ಟೈಪ್ 2 ಮಧುಮೇಹ ಸಹ ಕಾಣಿಸಿಕೊಳ್ಳಬಹುದು

English summary

Does Gestational Diabetes Affect Lactation?

Gestational diabetes may affect the milk supply of mothers according to a new study. Gestational diabetes implies diabetes during pregnancy.Researchers are still studying the link between the glucose levels and lactation. How does one affect the other? Is there a way to increase the milk supply? Future studies have to find out the solution.
Story first published: Friday, February 19, 2016, 10:27 [IST]
X
Desktop Bottom Promotion