For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಫರ್ಟಿಲಿಟಿ ಹೆಚ್ಚಿಸುವ ತರಕಾರಿಗಳು

By Poornima Hegde
|

ಬೆಳೆಯುತ್ತಿರುವ ನಗರಗಳು ಇಂದು ಹಲವು ಹೊಸ ಹೊಸ ಅನಾರೋಗ್ಯಗಳಿಗೂ ಕಾರಣವಾಗಿವೆ. ಫಾಸ್ಟ್ ಜಗತ್ತಿನ ಫಾಸ್ಟ್ ಫುಡ್ ಗಳು, ಓಡುತ್ತಿರುವ ಜಗತ್ತಿನ ಒತ್ತಡಗಳು ಇಂದಿನ ಯುವಜನತೆಯ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಪರಿಣಾಮ ಬೀರುತ್ತಿದೆ. ಇಂದಿನ ಯುವಜನತೆ ಬದುಕುತ್ತಿರುವ ಜೀವನ ವಿಧಾನ ಕೆಲವೊಮ್ಮೆ ಅಗತ್ಯವಾದರೆ ಇನ್ನೂ ಕೆಲವು ಬಾರಿ ಅವರದೇ ಆಯ್ಕೆಯೂ ಆಗಿರುತ್ತದೆ.

ಕೆಲಸದ ಒತ್ತಡದಲ್ಲಿ ಬಿಡುವಿಲ್ಲದ ಕೆಲಸದಲ್ಲಿ ಸರಿಯಾಗಿ ಆಹಾರ ಸೇವಿಸಲೂ ಸಮಯ ಸಿಗದೇ ಇರುವುದು ಸುಳ್ಳಲ್ಲ. ಇಡಿ ದಿನ ಒತ್ತಡವನ್ನು ಸಹಿಸಿ ನಮ್ಮ ದೇಹ ವ್ಯವಸ್ಥೆ ಬಹಳವೇ ಹದಗೆಟ್ಟಿರುತ್ತದೆ. ಪುರುಷರಲ್ಲಿ ಇದರ ಬಹಳ ಋಣಾತ್ಮಕ ಪರಿಣಾಮ ಅವರ ಫಲವಂತಿಕೆ (ಫರ್ಟಿಲಿಟಿ) ಯ ಮೇಲೆ ಬೀರುತ್ತದೆ. ತಮ್ಮ ಕೆರಿಯರ್ ಗಾಗಿ ಹೀಗೆ ಒತ್ತಡದಲ್ಲಿ ಹಾಗೂ ಬಿಡುವಿಲ್ಲದೆ ಕೆಲಸ ಮಾಡುವ ಯುವಕರಿಗೆ ಇದು ಅವರ ಫರ್ಟಿಲಿಟಿ ಮೇಲೆ ಹಾಗೂ ಅವರ ಸಂಗಾತಿಯ ಜೊತೆಗೆ ಅವರ ದೈಹಿಕ ಸಂಪರ್ಕದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಲ್ಪನೆಯೂ ಇರುವುದಿಲ್ಲ.

ಸರಿಯಾದ ಪೋಷಕಾಂಶಗಳಿರುವ ಆಹಾರ ಸೇವನೆಯ ಮೂಲಕ ಬಂಜೆತನವನ್ನು ನಿವಾರಿಸಲು ಸಾಧ್ಯ. ಪ್ರತಿದಿನ ದೈಹಿಕ ಚಟುವಟಿಕೆಗಳು ಹಾಗೂ ಸರಿಯಾದ ಆಹಾರ ಕ್ರಮ ನಿಮ್ಮನ್ನು ಜೀವನದ್ದುದ್ದಕ್ಕೂ ಆರೋಗ್ಯಕರವಾಗಿ ಇಡುವುದರಲ್ಲಿ ಅನುಮಾನವಿಲ್ಲ. ಕೇವಲ ಆಹಾರ ಕ್ರಮದಿಂದ ಮಾತ್ರವಲ್ಲದೇ ಧೂಮಪಾನ ಸೇವನೆಯೂ ಫರ್ಟಿಲಿಟಿಯ ಮೇಲೆ ಪ್ರಭಾವ ಬೀರುತ್ತದೆ. ಧೂಮಪಾನದಿಂದ ನಪುಂಸಕತ್ವ ಬರುತ್ತದೆ ಎಂದು ಸಂಶೋಧನೆಗಳೇ ಹೇಳಿವೆ. ಇದೇ ರೀತಿ ಅತಿಯಾದ ಪ್ರಮಾಣದ ಮದ್ಯಪಾನವೂ ಆರೋಗ್ಯಕ್ಕೆ ಹಾನಿಕರವಾಗಿದೆ.

ಸರಿಯಾದ ಪೋಷಕಾಂಶಗಳಿರುವ ಆಹಾರ ಹಾಗೂ ವಿಟಮಿನ್ ಸಿ ಯಿಂದ ಸಮೃದ್ಧ ಆಹಾರ ಸೇವನೆ ನಿಮ್ಮಲ್ಲಿ ಬಂಜೆತನ ಬಾರದಂತೆ ತಡೆಯುತ್ತದೆ. ವಿಟಮಿನ್ ಎ, ಸಿ ಮತ್ತು ಇ ಗಳು ಮತ್ತು ಫಾಲಿಕ್ ಆಸಿಡ್ ವೀರ್ಯಾಣುಗಳ ವೃದ್ಧಿಯಲ್ಲಿ ಸಹಕಾರಿ. ಇವುಗಳು ಹಸಿರು ತರಕಾರಿಗಳಲ್ಲಿ, ಟೊಮೆಟೊ, ಕಿತ್ತಳೆ, ಬೀನ್ಸ್ ಗಳಲ್ಲಿ ಹೇರಳವಾಗಿ ದೊರೆಯುತ್ತದೆ. ಪ್ರತಿ ದಿನ ಹಸಿರು ತರಕಾರಿಗಳ ಸೇವನೆ ಬಂಜೆತನ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

1 ಹಸಿರು ತರಕಾರಿ

1 ಹಸಿರು ತರಕಾರಿ

ಹಸಿರು ತರಕಾರಿಗಳು ಎಲ್ಲಾ ತರಹದ ಪೋಷಕಾಂಶಗಳು, ವಿಟಮಿನ್ ಗಳು ಮತ್ತು ಖನಿಜ ಲವಣಾಂಶಗಳ ಆಗರವಾಗಿವೆ. ಕೇಲ್, ಸ್ವಿಸ್ ಕಾರ್ಡ್, ಪಾಲಕ್ ಮುಂತಾದ ತರಕಾರಿಗಳು ನಮ್ಮ ಆರೋಗ್ಯಕ್ಕೆ ಬಹಳ ಸಹಕಾರಿ. ಇವು ನಮ್ಮ ಆರೋಗ್ಯದ ಜೊತೆಗೆ ವೀರ್ಯಾಣುಗಳ ವೃದ್ಧಿಯಲ್ಲೂ ಬಹಳ ನೆರವಾಗುತ್ತವೆ.

2 ಕ್ಯಾರೆಟ್

2 ಕ್ಯಾರೆಟ್

ಕ್ಯಾರೆಟ್ ಗಳು ನಮ್ಮ ದೃಷ್ಟಿಯನ್ನು ಉತ್ತಮಗೊಳಿಸುವಲ್ಲಿ ಸಹಕಾರಿ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ ಆದರೆ ಅದರ ಜೊತೆಗೆ ಇವು ನಮ್ಮ ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸುವಲ್ಲಿಯೂ ಬಹಳ ಅಗತ್ಯ. ಹರ್ವಾರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆಗಳು ಹೇಳುವಂತೆ ಹೆಚ್ಚಾದ ಕ್ಯಾರೆಟ್ ಸೇವನೆಯಿಂದ ವೀರ್ಯಾಣುಗಳು ಅಂಡಾಣುಗಳ ಕಡೆಗೆ ಆಕರ್ಷಣೆ ಆಗುವ ಕ್ಷಮತೆ ಹೆಚ್ಚಾಗುತ್ತದೆ.

3 ಕಿತ್ತಳೆಗಳು

3 ಕಿತ್ತಳೆಗಳು

ತರಕಾರಿ ಹಣ್ಣುಗಳು ವಿವಿಧ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ನೆರವಾಗುತ್ತವೆ. ಪ್ರತಿ ತರಕಾರಿ ಮತ್ತು ಹಣ್ಣಿನ ಬಣ್ಣವೂ ಒಂದೊಂದು ರೀತಿಯಲ್ಲಿ ನಮ್ಮ ನೆರವಿಗೆ ಬರುತ್ತದೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಇದ್ದು ಇದು ನಮ್ಮ ದೇಹದಲ್ಲಿ ಆಮ್ಲಜನಕದ ಸಾಗಾಣಿಕೆಗೆ ಅಗತ್ಯ. ಇದು ನಮ್ಮ ಫರ್ಟಿಲಿಟಿ ಯನ್ನು ಹೆಚ್ಚಿಸುತ್ತದೆ.

4 ಇಡಿ ಧಾನ್ಯಗಳು

4 ಇಡಿ ಧಾನ್ಯಗಳು

ಬಿಳಿ ಬ್ರೆಡ್ ಮತ್ತು ಬಿಳಿ ಅಕ್ಕಿಯನ್ನು ಸೇವಿಸುವ ಬದಲಾಗಿ ಇಡಿಯಾದ ಧಾನ್ಯಗಳ ಆಹಾರ ಸೇವನೆ ಮಾಡುವುದರಿಂದಾಗಿ ನಮ್ಮ ದೇಹದ ಸಕ್ಕರೆಯ ಅಂಶ ಮತ್ತು ದೇಹದ ಇನ್ಸುಲಿನ್ ಪ್ರಮಾಣದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ನಮ್ಮ ದೇಹದ ಇನ್ಸುಲಿನ್ ಪ್ರಮಾಣ ಸರಿಯಾಗಿದ್ದರೆ ಹಾರ್ಮೋನ್ ಗಳ ಪ್ರಮಾಣವೂ ಸರಿಯಾಗಿರುತ್ತದೆ. ಇದು ಕೂಡ ನಮ್ಮ ಫರ್ಟಿಲಿಟಿಯ ಮೇಲೆ ಪ್ರಭಾವ ಬೀರುತ್ತದೆ.

5 ಬಾದಾಮಿ ಮತ್ತು ಅವಕಾಡೊಗಳು

5 ಬಾದಾಮಿ ಮತ್ತು ಅವಕಾಡೊಗಳು

ನಿಮ್ಮ ದೈನಂದಿನ ಆಹಾರದ ಜೊತೆಗೆ ಅವಕಾಡೊ ಮತ್ತು ಬಾದಾಮಿಯನ್ನು ಸೇವಿಸುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಇವು ನಮ್ಮ ದೇಹಕ್ಕೆ ಬೇಕಾದ ಕೊಬ್ಬಿನ ಅಂಶಗಳಾಗಿವೆ. ಇದು ಇನ್ಸುಲಿನ್ ಪ್ರಮಾಣದವನ್ನು ಬೆಳೆಸುವಲ್ಲಿ ಹಾಗೂ ಹಾರ್ಮೋನ್ ಗಳ ಸರಿಯಾದ ಬಿಡುಗಡೆಯಲ್ಲೂ ಸಹಾಯಕ.

6 ಬೀನ್ಸ್ ಮತ್ತು ಪಾಲಕ್

6 ಬೀನ್ಸ್ ಮತ್ತು ಪಾಲಕ್

ಬೀನ್ಸ್ ಮತ್ತು ಪಾಲಕ್ ಸೊಪ್ಪಿನಲ್ಲಿಯೂ ನಮ್ಮ ಫರ್ಟಿಲಿಟಿಯನ್ನು ವೃದ್ಧಿಸುವ ಹಲವು ಅಂಶಗಳಿವೆ. ಫಾಲಿಕ್ ಆಸಿಡ್ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಬಹಳ ಅಗತ್ಯ. ಫಾಲಿಕ್ ಆಸಿಡ್ ಹೆಚ್ಚಿರುವ ಆಹಾರವನ್ನು ಸೇವಿಸುವುದು ಇದಕ್ಕೆ ಸಹಕಾರಿ.

7 ಮೊಳಕೆಯೊಡೆದ ಕಾಳುಗಳು ಮತ್ತು ದ್ವಿದಳ ಧಾನ್ಯಗಳು

7 ಮೊಳಕೆಯೊಡೆದ ಕಾಳುಗಳು ಮತ್ತು ದ್ವಿದಳ ಧಾನ್ಯಗಳು

ಬೇಯಿಸದ ಮತ್ತು ಮೊಳಕೆಯೊಡದ ಧಾನ್ಯಗಳಲ್ಲಿ ಬೇಯಿಸಿದ ಧಾನ್ಯಗಳಿಗಿಂತ ನೂರು ಪಟ್ಟು ಹೆಚ್ಚಿನ ಪೋಶಕಾಂಶಗಳು ಇರುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಇದು ನಮ್ಮ ದೇಹದಲ್ಲಿ ಆಮ್ಲಜನಕೀಕರಣಕ್ಕೆ ಬಹಳ ಸಹಕಾರಿಯಾದ ಅಂಶಗಳಾಗಿವೆ.

8 ಸ್ಟ್ರಾಬೆರಿ

8 ಸ್ಟ್ರಾಬೆರಿ

ಸ್ಟ್ರಾಬೆರಿ ವಿಟಮಿನ್ ಸಿ ಯನ್ನು ಹೊಂದಿರುವ ಜೊತೆಗೆ ಪುರುಷರಲ್ಲಿ ಫರ್ಟಿಲಿಟಿಯನ್ನು ಹೆಚ್ಚಿಸಲು ಸಹಾಯಕವೂ ಹೌದು. ವಿಟಮಿನ್ ಸಿ ಪ್ರತಿ ದಿನಕ್ಕೆ 90 ಮಿಲಿ.ಗ್ರಾಂ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಸಿಗಬೇಕು.

English summary

Vegetables To Cure Male Infertility

Male infertility is a growing trend among urban youth who tend to be ignorant to some extant and follow stressfully unhealthy lifestyle.
Story first published: Friday, December 13, 2013, 9:50 [IST]
X
Desktop Bottom Promotion