For Quick Alerts
ALLOW NOTIFICATIONS  
For Daily Alerts

ಅಂಡೋತ್ಪತ್ತಿಯ ವೇಳೆ ಆರೋಗ್ಯದ ಕಾಳಜಿ

By Hemanth P
|

ಬೆಳೆದ ಅಂಡಾಶಯದ ಕೋಶ ಛಿದ್ರಗೊಂಡು ಋತುಚಕ್ರದ ಸಮಯದಲ್ಲಿ ಒಂದು ಬೀಜಾಣುವನ್ನು ವಿಸರ್ಜಿಸುವ ಜೈವಿಕ ಪ್ರಕ್ರಿಯೆಯೇ ಅಂಡೋತ್ಪತ್ತಿ. ಅಂಡೋತ್ಪತ್ತಿಯು ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ 28 ದಿನಗಳ ಋತುಚಕ್ರದಲ್ಲಿ 14ನೇ ದಿನ. ಆದರೆ ಅಂಡೋತ್ಪತ್ತಿಯು 10 ಮತ್ತು 19ನೇ ದಿನದ ಮಧ್ಯೆ ಯಾವಾಗ ಬೇಕಾದರೂ ಆಗಬಹುದು. ಬೀಜಾಣುವು ವೀರ್ಯಾಣುವಿನೊಂದಿಗೆ ಬೆಸೆದುಕೊಂಡು ಫಲವತ್ತತೆ ಉಂಟಾಗುತ್ತದೆ. ಗರ್ಭಧಾರಣೆಗೆ ಅಂಡೋತ್ಪತ್ತಿಯ ಸಮಯ ಸರಿಯಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ.

ಅಂಡೋತ್ಪತ್ತಿಯ ಸಮಯದ ವೇಳೆ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಧಾರಣೆ ಆಗಬಹುದು. ಅಂಡೋತ್ಪತ್ತಿಯ ಸಮಯ ಲೆಕ್ಕ ಹಾಕಿಕೊಂಡು ಫಲವತ್ತತೆಗೆ ಚಿಕಿತ್ಸೆ ನೀಡಲಾಗುತ್ತದೆ. ಯಶಸ್ವಿಯಾಗಿ ಗರ್ಭಧಾರಣೆ ಮಾಡಲು ಅಂಡೋತ್ಪತ್ತಿಯ ವೇಳೆ ಆರೋಗ್ಯದ ಬಗ್ಗೆ ಹೆಚ್ಚಿನ ಆರೈಕೆ ಮಾಡಿಕೊಳ್ಳಬೇಕು. ನೀವು ಗರ್ಭಧಾರಣೆಗೆ ಟಿಪ್ಸ್ ಪಡೆಯಲು ಬಯಸಿದರೆ ಅಂಡೋತ್ಪತ್ತಿ ವೇಳೆ ಆರೋಗ್ಯದ ಆರೈಕೆಗೆ ಪ್ರಾಮುಖ್ಯತೆ ನೀಡಬೇಕು. ಅಂಡೋತ್ಪತ್ತಿ ವೇಳೆ ಆರೋಗ್ಯದ ಆರೈಕೆಯಿಂದ ನೀವು ಆ ಮಹತ್ವದ ದಿನ ಕಳಕೊಳ್ಳದಂತೆ ನೆರವಾಗುತ್ತದೆ.

ನಿಮ್ಮ ದೇಹದ ಉಷ್ಣತೆ ಲೆಕ್ಕಹಾಕಿ, ಗರ್ಭಕಂಠದ ಲೋಳೆಯ ಬದಲಾವಣೆ ಗಮನಿಸಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಗೆ ಒಳಗಾಗಿ ಅಥವಾ ಅಂಡೋತ್ಪತ್ತಿ ಸೂಚಕ ಕಿಟ್ ನ್ನು ಬಳಸಿಕೊಂಡು ನಿಮ್ಮ ಅಂಡೋತ್ಪತ್ತಿ ದಿನ ತಿಳಿದುಕೊಳ್ಳಬಹುದು. ಅಂಡೋತ್ಪತ್ತಿ ವೇಳೆ ಆರೋಗ್ಯದ ಆರೈಕೆ ಮಾಡಿಕೊಂಡು ಗರ್ಭಧರಿಸಲು ಕೆಲವೊಂದು ಗರ್ಭಧಾರಣೆಯ ಟಿಪ್ಸ್ ಗಳು ಇಲ್ಲಿವೆ. ಇದರಿಂದ ನಿಮಗೆ ಆರೋಗ್ಯಕರ ಅಂಡೋತ್ಪತ್ತಿ ಮತ್ತು ಸಂತಸದ ಗರ್ಭಧಾರಣೆಗೆ ನೆರವಾಗಬಹುದು.

ಜಂಕ್ ಫುಡ್ ಕಡೆಗಣಿಸಿ

ಜಂಕ್ ಫುಡ್ ಕಡೆಗಣಿಸಿ

ಜಂಕ್ ಫುಡ್, ಪ್ಯಾಕೆಟ್ ಆಹಾರ ಮತ್ತು ಫಾಸ್ಟ್ ಫುಡ್ ನ್ನು ಅಂಡೋತ್ಪತ್ತಿ ವೇಳೆ ಕಡೆಗಣಿಸಿ. ಟ್ರಾನ್ಸ್ ಕೊಬ್ಬು ಒಳಗೊಂಡಿರುವ ಜಂಕ್ ಫುಡ್ ಅಂಡೋತ್ಪತ್ತಿ ವೇಳೆ ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಟ್ರಾನ್ಸ್ ಕೊಬ್ಬು ಅಂಡೋತ್ಪತ್ತಿ ಸಾಮರ್ಥ್ಯ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ವಿಶೇಷವಾಗಿ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಉಂಟು ಮಾಡುತ್ತದೆ.

ವ್ಯಾಯಾಮ

ವ್ಯಾಯಾಮ

ಹಾರ್ಮೋನ್ ಮಟ್ಟ ಸಮತೋಲನದಲ್ಲಿ ಇರಿಸಿಕೊಳ್ಳಲು ವ್ಯಾಯಾಮ ಅತೀ ಮುಖ್ಯ. ಅಂಡೋತ್ಪತ್ತಿಯು ಅದರಲ್ಲಿ ಒಳಗೊಂಡಿರುವ ಹಾರ್ಮೋನ್ ಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾರ್ಮೋನ್ ಅಸಮತೋಲನವು ಅಂಡೋತ್ಪತ್ತಿಯ ಪ್ರಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ವ್ಯಾಯಾಮ ಮಾಡುವುದು ಗರ್ಭಧಾರಣೆಗೆ ಒಂದು ಅತೀ ಮುಖ್ಯ ಟಿಪ್ಸ್.

ಮೊಳಕೆಯೊಡೆದ ಅವರೆಕಾಳು

ಮೊಳಕೆಯೊಡೆದ ಅವರೆಕಾಳು

ಸರಿಯಾದ ಅಂಡೋತ್ಪತ್ತಿಗೆ ಪ್ರೋಟೀನ್ ಅತಿ ಮುಖ್ಯ. ಮೊಳಕೆಯೊಡೆದ ಅವರೆಕಾಳಿನಲ್ಲಿ ಪ್ರೋಟೀನ್ ಅಂಶ ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಋತುಚಕ್ರದ ಪ್ರಕ್ರಿಯೆ ಸಾಮಾನ್ಯವಾಗಿಟ್ಟುಕೊಳ್ಳಲು ನೆರವಾಗುತ್ತದೆ. ಗರ್ಭಧಾರಣೆ ವೇಳೆ ಆರೋಗ್ಯದ ಆರೈಕೆಗೆ ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವನೆ ಗರ್ಭಧಾರಣೆಯ ಟಿಪ್ಸ್ ಗಳಲ್ಲಿ ಒಂದಾಗಿದೆ.

ಪರಿಪೂರ್ಣ ತೂಕ

ಪರಿಪೂರ್ಣ ತೂಕ

ಸಾಮಾನ್ಯ ಋತುಚಕ್ರದ ಪ್ರಕ್ರಿಯೆಗೆ ದೇಹದ ತೂಕ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹಾರ್ಮೋನುಗಳ ಸಮತೋಲನ ಕಾಯ್ದುಕೊಂಡು ಆರೋಗ್ಯಕರ ಅಂಡೋತ್ಪತ್ತಿಗೆ ನೆರವಾಗುತ್ತದೆ. ದೇಹದಲ್ಲಿರುವ ಅತಿಯಾದ ಕೊಬ್ಬಿನಿಂದ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಉಂಟಾಗುತ್ತದೆ.

ಆರೋಗ್ಯ ತಪಾಸಣೆ

ಆರೋಗ್ಯ ತಪಾಸಣೆ

ನಿಮ್ಮ ಋತುಚಕ್ರವು ಸರಿಯಾದ ರೀತಿಯಲ್ಲಿ ಆಗದಿದ್ದರೆ ನೀವು ವೈದ್ಯಕೀಯ ತಪಾಸಣೆಗೆ ಒಳಗಾಗಿ ಇದಕ್ಕೆ ಕಾರಣ ಕಂಡುಹಿಡಿಯಬೇಕು. ಆರಂಭದ ಹಂತದಲ್ಲಿ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಅಂಡೋತ್ಪತ್ತಿಯ ಪ್ರಕ್ರಿಯೆಗೆ ವೈದ್ಯಕೀಯ ಪರಿಸ್ಥಿತಿ ಕಾರಣವಾಗಬಹುದು. ಇದಕ್ಕೆ ಆದಷ್ಟು ಬೇಗ ಚಿಕಿತ್ಸೆ ನೀಡಬೇಕು.

ಕೆಫಿನ್ ಕಡಿಮೆ ಸೇವಿಸಿ

ಕೆಫಿನ್ ಕಡಿಮೆ ಸೇವಿಸಿ

ಅಂಡೋತ್ಪತ್ತಿಯ ಪ್ರಕ್ರಿಯೆ ಉತ್ತಮಪಡಿಸಲು ನೀವು ಕೆಫಿನ್ ಸೇವನೆಯನ್ನು ಕಡಿಮೆ ಮಾಡಬೇಕು. ಕೆಫಿನ್ ಸಂಪೂರ್ಣ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಅಂಡೋತ್ಪತ್ತಿ ವೇಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಾಗ ಕೆಫಿನ್ ಸೇವನೆ ಕಡಿಮೆ ಮಾಡಬೇಕು ಎನ್ನುವುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.

ಒಳ್ಳೆಯ ಅಭ್ಯಾಸಗಳು

ಒಳ್ಳೆಯ ಅಭ್ಯಾಸಗಳು

ನಿಮ್ಮಲ್ಲಿರುವ ಎಲ್ಲಾ ರೀತಿಯ ಕೆಟ್ಟ ಮತ್ತು ಅಪಾಯಕಾರಿ ಅಭ್ಯಾಸಗಳನ್ನು ತ್ಯಜಿಸುವುದು ಅಂಡೋತ್ಪತ್ತಿಯ ವೇಳೆ ಆರೋಗ್ಯದ ಕಾಳಜಿಗೆ ಪ್ರಮುಖ ಟಿಪ್ಸ್. ಆಲ್ಕೋಹಾಲ್ ಸೇವನೆ ಮತ್ತು ಧೂಮಪಾನ ಅಂಡೋತ್ಪತ್ತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಅಂಡೋತ್ಪತ್ತಿಯ ಗುಣಮಟ್ಟ ಉತ್ತಮಪಡಿಸಲು ನೀವು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿ.

English summary

Health Care During Ovulation

Ovulation is the biological process by which a mature ovarian follicle ruptures and discharges an ovum during a menstrual cycle. The time of ovulation differs from woman to woman.
Story first published: Wednesday, December 11, 2013, 9:49 [IST]
X
Desktop Bottom Promotion