For Quick Alerts
ALLOW NOTIFICATIONS  
For Daily Alerts

ಜನ್ಮದಿನಾಂಕದ ರಹಸ್ಯ: ಸಂಖ್ಯೆ ಹೇಳಿ, ಭವಿಷ್ಯ ಕೇಳಿ...!

ಸಂಖ್ಯಾಶಾಸ್ತ್ರವನ್ನು ಆಧರಿಸಿ ನಿಮ್ಮ ಜನ್ಮರಹಸ್ಯವನ್ನು ನಿಮ್ಮ ಸ್ವಭಾವವನ್ನು ಅರಿತುಕೊಳ್ಳುವ ವಿಧವನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ....

By Jayasubramanya
|

ತಮ್ಮ ವ್ಯಕ್ತಿತ್ವವನ್ನು ಅರಿತುಕೊಳ್ಳುವ ಸದಾವಕಾಶ ದೊರೆತಲ್ಲಿ ಅದನ್ನು ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಉಳ್ಳವರು ತಮ್ಮ ಗುಣ ಸ್ವಭಾವ ಮತ್ತು ಮುಂದಿನ ಭವಿಷ್ಯ ಯೋಜನೆಗಳನ್ನು ಕುರಿತು ಅರಿತುಕೊಳ್ಳಲು ಹೆಚ್ಚು ಉತ್ಸುಕರಾಗಿರುತ್ತಾರೆ. ಅದಕ್ಕಾಗಿಯೇ ಗಿಣಿ ಶಾಸ್ತ್ರದವರು ಇಲ್ಲಾ ಹಸ್ತರೇಖಾ ಶಾಸ್ತ್ರಜ್ಞರು ಮನೆಗೆ ಬಂದಾಗ ಅವರನ್ನು ಆದರಿಸಿ ಅವರಲ್ಲಿ ತಮ್ಮ ಭವಿಷ್ಯ ಮತ್ತು ಗುಣ ಸ್ವಭಾವಗಳನ್ನು ಕುರಿತು ಜನರು ತಿಳಿದುಕೊಳ್ಳುತ್ತಾರೆ. ಅಕ್ಷರದಲ್ಲಿದೆ ಸ್ವಭಾವದ ಮಹಿಮೆ...ನೀವೂ ತಿಳಿಯಿರಿ ಇವುಗಳನ್ನೊಮ್ಮೆ

ಜಗತ್ತು ಎಷ್ಟೇ ಆಧುನಿಕವಾಗಿದ್ದರೂ ಇಂತಹ ವಿಚಾರಗಳು ಇಂದಿಗೂ ನಂಬಿಕೆಯನ್ನು ಉಳಿಸಿಕೊಂಡಿವೆ ಮತ್ತು ಎಷ್ಟೇ ಆಧುನಿಕ ಮನೋಭಾವ ಉಳ್ಳಂತಹ ವ್ಯಕ್ತಿಗಳೂ ಕೂಡ ಇಂತಹ ವಿಚಾರಗಳಲ್ಲಿ ನಂಬಿಕೆಯನ್ನಿಟ್ಟುಕೊಂಡಿರುತ್ತಾರೆ. ಸಂಖ್ಯಾಶಾಸ್ತ್ರವನ್ನು ಆಧರಿಸಿ ನಿಮ್ಮ ಜನ್ಮರಹಸ್ಯವನ್ನು ನಿಮ್ಮ ಸ್ವಭಾವವನ್ನು ಅರಿತುಕೊಳ್ಳುವ ವಿಧವನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಕುತೂಹಲದ ರಹಸ್ಯಗಳನ್ನು ಬಿಚ್ಚಿಡುವ 'ಹಸ್ತ ರೇಖೆಗಳು'

ತಿಂಗಳ ಬೇರೆ ಬೇರೆ ದಿನಾಂಕಗಳನ್ನು ನಾವು ಇಂದಿಲ್ಲಿ ನೀಡಿದ್ದು ಇದಕ್ಕೆ ಅನುಸಾರವಾಗಿ ನಿಮ್ಮ ವ್ಯಕ್ತಿತ್ವ ಮತ್ತು ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಸುತ್ತಿದ್ದೇವೆ. ಈ ದಿನಾಂಕಕ್ಕೆ ಅನುಗುಣವಾಗಿ ವ್ಯಕ್ತಿಯ ಗುಣ ಸ್ವಭಾವ ಇದ್ದು ಇದರ ಮೂಲಕ ನೀವು ಎಂತಹ ವ್ಯಕ್ತಿತ್ವ ಉಳ್ಳವರು ಮತ್ತು ನಿಮ್ಮ ವಿಶೇಷತೆಗಳೇನು ಎಂಬುದನ್ನು ಅರಿತುಕೊಳ್ಳಬಹುದು. ಹಾಗಿದ್ದರೆ ಬನ್ನಿ ಈ ಕೆಳಗೆ ನಾವು ನೀಡಿರುವ ಸಂಖ್ಯಾ ಶಾಸ್ತ್ರ ವಿಶೇಷತೆಗಳನ್ನು ಅರಿತುಕೊಳ್ಳಿ....

1 ನೇ ತಾರೀಕು

1 ನೇ ತಾರೀಕು

ಈ ಜನ್ಮ ದಿನಾಂಕದಂದು ಜನಿಸಿದವರು ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ಇವರದು ಹೆಚ್ಚು ಕ್ರಿಯಾತ್ಮಕ ಮನಸ್ಸಾಗಿದ್ದು ಯಾವುದೇ ಕೆಲಸಗಳನ್ನು ಚಟುವಟಿಕೆಯಿಂದ ನಡೆಸುವವರಾಗಿದ್ದಾರೆ. ತಮ್ಮತನದಲ್ಲಿ ಇವರು ನಂಬಿಕೆಯನ್ನು ಇರಿಸಿಕೊಂಡಿದ್ದು ಸ್ವತಂತ್ರರಾಗಿರುತ್ತಾರೆ.

2 ನೇ ತಾರೀಕು

2 ನೇ ತಾರೀಕು

ಈ ದಿನಾಂಕದಂದು ಜನಿಸಿದವರು ತಮ್ಮ ಜೀವನದಲ್ಲಿ ನಡೆಯುವ ಏರು ತಗ್ಗುಗಳನ್ನು ಸಮಾನವಾಗಿ ನಿಭಾಯಿಸುವ ಗುಣವನ್ನು ಹೊಂದಿದವರಾಗಿದ್ದಾರೆ. ಇತರರ ಸಮಸ್ಯೆಗಳನ್ನು ಅರಿಯುವ ಹೃದಯ ವೈಶಾಲ್ಯ ಇವರಿಗಿರುತ್ತದೆ. ಇತರರೊಂದಿಗೆ ಇವರು ಕೆಲಸವನ್ನು ಮಾಡಿದರೂ ಆತ್ಮಸ್ಥೈರ್ಯ ಇವರ ಕೀಲಿಕೈಯಾಗಿದೆ. ಪ್ರೀತಿ ಮತ್ತು ಪಾಲುದಾರತ್ವ ಇವರಿಗೆ ಹೆಚ್ಚು ಮುಖ್ಯವಾಗಿರುತ್ತದೆ.

3 ನೆಯ ತಾರೀಕು

3 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಹಾಸ್ಯ ಪ್ರವೃತ್ತಿಯವರಾಗಿರುತ್ತಾರೆ. ಇತರರೊಂದಿಗೆ ಸಂವಹಿಸುವ ಗುಣ ಇವರಿಗಿದೆ. ಇವರಲ್ಲಿ ಹೆಚ್ಚು ಕ್ರಿಯಾತ್ಮಕ ಮತ್ತು ರಚನಾತ್ಮಕ ಗುಣವಿದೆ. ಇವರ ಆಕರ್ಷಕ ವ್ಯಕ್ತಿತ್ವ ಇತರರನ್ನು ಇವರತ್ತ ಸೆಳೆಯುತ್ತದೆ.

4 ನೆಯ ತಾರೀಕು

4 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಹೆಚ್ಚು ದೃಢ ಸ್ವಭಾವದವರಾಗಿದ್ದಾರೆ. ತಮಗೆ ಮತ್ತು ಇತರರಿಗೆ ಅವರು ಹೆಚ್ಚು ಪ್ರಮಾಣ ಅಂಶಗಳನ್ನು ನಿರ್ಧರಿಸುತ್ತಾರೆ. ನಿಷ್ಟೆ ಅವರಿಗೆ ಮುಖ್ಯವಾಗಿರುತ್ತದೆ. ಹೆಚ್ಚು ಕ್ರಿಯಾಶೀಲರಾಗಿ ಮತ್ತು ನಿಷ್ಟೆಯಿಂದ ಕಾರ್ಯನಿರ್ವಹಿಸುವವರು ಇವರಾಗಿದ್ದು ತಮ್ಮ ಕೆಲಸದ ಗುಣಮಟ್ಟವನ್ನು ಇವರು ಕಾಯ್ದುಕೊಳ್ಳುತ್ತಾರೆ. ಇತರರು ಹೆಚ್ಚು ನಂಬಿಕೆಯನ್ನು ಇವರ ಮೇಲೆ ಹೊಂದಿರುತ್ತಾರೆ.

5 ನೆಯ ತಾರೀಕು

5 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಉತ್ತಮ ಸಂವಾದಕರು ಎಂದೆನಿಸುತ್ತಾರೆ. ಇತರರೊಂದಿಗೆ ಯಾವುದೇ ವಿಷಯದ ಕುರಿತಾಗಿ ಸಲೀಸಾಗಿ ಮಾತನಾಡುವ ಕಲೆ ಇವರಿಗೆ ಸಿದ್ಧಿಸಿರುತ್ತದೆ. ಇವರು ಹೆಚ್ಚು ಬುದ್ಧಿವಂತಾಗಿದ್ದು ಅಧಿಕ ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ.

6 ನೆ ತಾರೀಕು

6 ನೆ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಹೆಚ್ಚು ನಂಬಿಕಸ್ಥರು ಮತ್ತು ದೃಢಚಿತ್ತರು ಎಂದೆನಿಸಿರುತ್ತಾರೆ. ಇತರರ ಬಗ್ಗೆ ಹೆಚ್ಚು ಕಾಳಜಿಯನ್ನು ಇವರು ಹೊಂದಿರುತ್ತಾರೆ. ಇವರಿಂದ ಉಪದೇಶವನ್ನು ಸಲಹೆಯನ್ನು ಕೇಳಲು ಜನರು ಉತ್ಸುಕರಾಗಿರುತ್ತಾರೆ. ಕುಟುಂಬ ಸ್ನೇಹಿ ಜನರು ಇವರು ಎಂದೆನಿಸಿದ್ದು ಪ್ರೀತಿ ಎಂಬುದು ಇವರಿಗೆ ಮುಖ್ಯವಾದ ಅಂಶವಾಗಿದೆ.

7 ನೆಯ ತಾರೀಕು

7 ನೆಯ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಆಳವಾದ ಮತ್ತು ಹೆಚ್ಚು ಚಿಂತನೆಯುಳ್ಳವರಾಗಿದ್ದಾರೆ. ಇವರಿಗೆ ಆಜ್ಞೆ ಮಾಡುವುದು ಎಂದರೆ ಇಷ್ಟವಾಗದೇ ಇರುವಂತಹ ಅಂಶವಾಗಿದೆ. ವಿಷಯದ ಆಚೆ ಕಡೆ ಹೋಗಿ ಇವರು ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಜೀವನದ ತೊಡಕುಗಳ ಮಧ್ಯೆ ಕೂಡ ಸಮಯ ಮಾಡಿಕೊಂಡು ಶಾಂತಿಯನ್ನು ಬಯಸುವುದು ಇವರ ಜಾಯಮಾನವಾಗಿದೆ. ತಮ್ಮದೇ ನಿರ್ಧಾರಗಳನ್ನು ತೆಗೆದುಕೊಂಡು ಆ ಮೂಲಕ ಇವರು ಜೀವನದಲ್ಲಿ ಮುಂದುವರೆಯುತ್ತಾರೆ.

8 ನೆಯ ತಾರೀಕು

8 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ನಾಯಕತ್ವ ಗುಣವನ್ನು ಹೊಂದಿದವರು. ಇವರು ತಾರ್ಕಿಕ ಮನೋಭಾವ ಉಳ್ಳವರು ಎಂದೆನಿಸಿದ್ದಾರೆ. ಇವರು ಉತ್ತಮ ನಿರ್ದೇಶಕರು ಎಂದೆನಿಸಿದ್ದಾರೆ. ಇವರಿಗೆ ಪ್ರಶಂಸೆ ಮತ್ತು ಸಾಧನೆ ಅತಿ ಮುಖ್ಯವಾಗಿರುತ್ತದೆ.

9 ನೆಯ ತಾರೀಕು

9 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ವಿಶಾಲ ಮನೋಭಾವದವರಾಗಿದ್ದಾರೆ. ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಮುನ್ನುಗ್ಗುವ ಪ್ರವೃತ್ತಿ ಇವರದ್ದಾಗಿದೆ. ಇವರು ಹೆಚ್ಚಿನ ವಿಷಯಗಳಲ್ಲಿ ಬುದ್ಧಿವಂತರಾಗಿರುತ್ತಾರೆ.

10 ನೆಯ ತಾರೀಕು

10 ನೆಯ ತಾರೀಕು

ಇವರು ಹುಟ್ಟುತ್ತಲೇ ನಾಯಕತ್ವ ಗುಣಗಳನ್ನು ಹೊಂದಿದವರು ಎಂಬುದು 10 ನೆಯ ತಾರೀಕಿನಿಂದ ಜನಿಸಿದವರ ಗುಣ ಸ್ವಭಾವವಾಗಿದೆ. ತಮ್ಮದೇ ಆದ ವ್ಯಕ್ತಿತ್ವ ಮತ್ತು ಸನ್ನಡತೆ ಇವರದ್ದಾಗಿದೆ. ಇವರ ಯಶಸ್ಸಿನ ಕೀಲಿ ಕೈ ಇದಾಗಿದೆ. ಇವರು ಹೆಚ್ಚು ಸ್ಪರ್ಧಾತ್ಮಕ ಸ್ವಭಾವವನ್ನು ಪಡೆದವರಾಗಿದ್ದಾರೆ.

11 ನೆಯ ತಾರೀಕು

11 ನೆಯ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಹೆಚ್ಚು ಸೂಕ್ಷ್ಮ ಮನಸ್ಸಿನವರಾಗಿದ್ದಾರೆ. ಇತರರ ಬಗ್ಗೆ ಹೆಚ್ಚು ಕಾಳಜಿಯನ್ನು ಇವರು ಹೊಂದಿರುತ್ತಾರೆ ಆದರೆ ಇವರುಗಳು ಬೇಗನೇ ನೋವಿಗೆ ಒಳಗಾಗುತ್ತಾರೆ ಮತ್ತು ಇತರರು ಇವರನ್ನು ಬಳಸಿಕೊಳ್ಳುತ್ತಾರೆ.

12 ನೆಯ ತಾರೀಕು

12 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಹೆಚ್ಚು ಸಾಮಾಜಿಕ ಕಳಕಳಿ ಮತ್ತು ಸಹಾಯ ಹಸ್ತರಾಗಿದ್ದಾರೆ. ಸುತ್ತಲೂ ಸೇರಿರುವ ಜನರ ಸಾಂಗತ್ಯವನ್ನು ಇವರು ಆನಂದಿಸುತ್ತಾರೆ. ನೈಸರ್ಗಿಕವಾಗಿ ಮನರಂಜನಾ ಅಂಶಗಳನ್ನು ಈ ವ್ಯಕ್ತಿಗಳು ಪಡೆದುಕೊಂಡಿದ್ದು ಇತರರನ್ನು ಆನಂದಿಸುವ ಮನರಂಜಿಸುವ ಸ್ವಭಾವ ಇವರದ್ದಾಗಿದೆ. ಇವರು ಹೆಚ್ಚು ಸ್ವತಂತ್ರರಾಗಿದ್ದಾರೆ.

13 ನೆಯ ತಾರೀಕು

13 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಹೆಚ್ಚು ಸ್ಥಿತಪ್ರಜ್ಞರಾಗಿ ಮತ್ತು ಹೆಚ್ಚು ನಿಷ್ಟೆಯಿಂದ ಕಾರ್ಯನಿರ್ವಹಿಸುತ್ತಾರೆ. ಇವರು ನಿಷ್ಟೆಯನ್ನು ಮೈಗೂಡಿಸಿಕೊಂಡವರಾಗಿದ್ದಾರೆ. ಸಮಸ್ಯೆಯನ್ನು ಪರಿಹರಿಸುವ ಜಾಣ್ಮೆ ಇವರಲ್ಲಿದೆ.

14 ನೆಯ ತಾರೀಕು

14 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ನೈಸರ್ಗಿಕವಾಗಿ ಉತ್ತಮ ಸಂವಾದಕರು ಎಂದೆನಿಸಿದ್ದಾರೆ. ಇವರಿಗೆ ಜೀವನದಲ್ಲಿರುವ ಒಂದು ತೊಡಕೆಂದರೆ ಬದ್ಧತೆಯನ್ನು ರೂಪಿಸಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದಾಗಿದೆ.

15 ನೆಯ ತಾರೀಕು

15 ನೆಯ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಹೆಚ್ಚು ನಂಬಿಕಸ್ಥರು ಎಂದೆನಿಸಿದ್ದಾರೆ. ಇತರರನ್ನು ಇವರು ಶೀಘ್ರವಾಗಿ ನಂಬುತ್ತಾರೆ. ತಮ್ಮ ಸ್ವಭಾವದಲ್ಲಿ ಕೂಡ ವಿಶೇಷತೆಯನ್ನು ಇವರು ಹೊಂದಿದವರಾಗಿದ್ದಾರೆ. ವೈಯಕ್ತಿಕ ಅಭಿವೃದ್ಧಿಗೆ ಹೆಚ್ಚು ಗಮನವನ್ನು ಇವರು ನೀಡುತ್ತಾರೆ.

16 ನೆಯ ತಾರೀಕು

16 ನೆಯ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಇತರರಿಗೆ ಸಹಾಯ ಮಾಡುವ ಗುಣವನ್ನು ಹೊಂದಿದವರಾಗಿದ್ದಾರೆ. ಅಂತೆಯೇ ಆಕರ್ಷಕ ಸ್ವಭಾವ ಇವರದ್ದಾಗಿದೆ. ಸಂಬಂಧಗಳಲ್ಲಿ ಅಂತರವನ್ನು ಕಾಪಾಡಿಕೊಳ್ಳುವುದು ಇವರ ಗುಣವಾಗಿದೆ. ಪ್ರೀತಿ ಮತ್ತು ಕುಟುಂಬ ಇವರಿಗೆ ಮುಖ್ಯವಾಗಿರುತ್ತದೆ.

17 ನೆಯ ತಾರೀಕು

17 ನೆಯ ತಾರೀಕು

ಅಧಿಕಾರ ಸ್ವಭಾವದಲ್ಲಿ ಕಾರ್ಯಪ್ರವೃತ್ತರಾಗುವ ಸ್ವಭಾವ ಇವರದ್ದಾಗಿದೆ. ತಮ್ಮ ನಾಯಕತ್ವ ಗುಣಗಳಿಂದ ಇವರು ಪ್ರಸಿದ್ಧಿಯನ್ನು ಪಡೆದುಕೊಂಡಿರುತ್ತಾರೆ. ಇವರು ಉತ್ತಮ ನಿರ್ಧಾರವನ್ನು ತಾಳುವವರು ಎಂದೆನಿಸಿದ್ದು ಹೆಚ್ಚಿನವರು ಇವರಿಂದ ಮಾರ್ಗದರ್ಶನವನ್ನು ಪಡೆಯಲು ಕಾತತರಾಗಿರುತ್ತಾರೆ.

18 ನೆಯ ತಾರೀಕು

18 ನೆಯ ತಾರೀಕು

ಇವರು ತಮ್ಮ ವ್ಯಕ್ತಿತ್ವದಲ್ಲಿ ನಂಬಿಕೆಯನ್ನು ಹೊಂದಿದವರಾಗಿದ್ದಾರೆ. ಅಂತೆಯೇ ಕೆಲಸದ ಮೇಲೆ ವಿಶ್ವಾಸವನ್ನು ಇರಿಸಿಕೊಂಡವರು ಎಂದೆನಿಸಿದ್ದಾರೆ. ಜನರನ್ನು ಅರ್ಥಮಾಡಿಕೊಳ್ಳುವ ಗುಣ ಇವರಲ್ಲಿದ್ದು ಇವರ ತಾಳ್ಮೆ ಮತ್ತು ಸಹನೆ ಇವರಿಗೆ ಕೆಲಸದಲ್ಲಿ ಯಶಸ್ಸನ್ನು ತಂದುಕೊಡುತ್ತದೆ.

19 ನೆಯ ತಾರೀಕು

19 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಉತ್ತಮ ಸಾಮರ್ಥ್ಯಗಳನ್ನು ಹೊಂದಿದವರಾಗಿದ್ದಾರೆ ಮತ್ತು ತಮ್ಮ ಗುರಿಗಳನ್ನು ಸಾಧಿಸುವ ಸ್ವಭಾವವನ್ನು ಪಡೆದುಕೊಂಡವರಾಗಿದ್ದಾರೆ. ತಮ್ಮ ತಪ್ಪುಗಳಿಂದ ಕಲಿತುಕೊಂಡು ಇತರರಿಂದ ಸಲಹೆಗಳನ್ನು ಪಡೆದುಕೊಂಡು ಮುನ್ನುಗ್ಗುವುದು ಇವರ ಸ್ವಭಾವವಾಗಿದೆ.

20 ನೆಯ ತಾರೀಕು

20 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಹೆಚ್ಚು ಶಾಂತಿಪ್ರಿಯರು ಮತ್ತು ತಾಳ್ಮೆಯುಳ್ಳವರು ಎಂದೆನಿಸಿದ್ದಾರೆ. ಇತರರ ಮೇಲೆ ಸಹಾನುಭೂತಿಯನ್ನು ಇವರು ಹೊಂದಿದ್ದು ಉತ್ತಮ ಕೌನ್ಸೆಲರ್ ಎಂದೆನಿಸಿದ್ದಾರೆ.

21 ನೆಯ ತಾರೀಕು

21 ನೆಯ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಹೆಚ್ಚು ಚಾಣಾಕ್ಷರು ಮತ್ತು ಬುದ್ಧಿವಂತರು ಎಂದೆನಿಸಿದ್ದಾರೆ. ಅಂತೆಯೇ ಪ್ರತಿಯೊಂದು ವಿಷಯದಲ್ಲೂ ಆಸಕ್ತಿಯನ್ನು ಇವರು ಹೊಂದಿದವರು. ಇವರಿಗೆ ಕೊಡುಗೆಯಾಗಿ ಸಂವಹನ ಬಂದಿರುತ್ತದೆ ಮತ್ತು ಉತ್ತಮ ವಾಗ್ಮಿಗಳು ಎಂದೆನಿಸಿದ್ದಾರೆ.

22 ನೆಯ ತಾರೀಕು

22 ನೆಯ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಹೆಚ್ಚು ಸೂಕ್ಷ್ಮ ಮನಸ್ಸಿನವರಾಗಿದ್ದಾರೆ ಮತ್ತು ಆಸಕ್ತಿಯನ್ನು ಮೈಗೂಡಿಸಿಕೊಂಡವರಾಗಿದ್ದಾರೆ. ಅಂತೆಯೇ ಇತರರೊಂದಿಗೆ ಸಹೃದಯತೆಯಿಂದ ಕಾರ್ಯನಿರ್ವಹಿಸುವ ಚಾಕಚಕ್ಯತೆ ಇವರದ್ದಾಗಿದೆ.

23 ನೆಯ ತಾರೀಕು

23 ನೆಯ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಹೆಚ್ಚು ಚಲನಶೀಲರು ಮತ್ತು ಉತ್ತಮ ಗುಣಸ್ವಭಾವದರು ಎಂದೆನಿಸಿದ್ದಾರೆ. ಅಂತೆಯೇ ಇತತರೊಂದಿಗೆ ಬೆರೆತುಕೊಂಡು ಕೆಲಸ ಮಾಡುವುದು ಇವರ ಇಷ್ಟದ ವಿಷಯವಾಗಿದೆ.

24 ನೆಯ ತಾರೀಕು

24 ನೆಯ ತಾರೀಕು

ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಕುಟುಂಬವನ್ನು ಆಧರಿಸುವವರಾಗಿದ್ದಾರೆ ಮತ್ತು ಎಲ್ಲಾ ಸಮಯಗಳಲ್ಲೂ ಇವರನ್ನು ಜನರು ಮೆಚ್ಚುತ್ತಾರೆ ಇವರಿಂದ ಸಹಾಯವನ್ನು ಪಡೆದುಕೊಳ್ಳುತ್ತಾರೆ. ಇವರು ಸ್ವಾಭಾವಿಕವಾಗಿ ಪ್ರೀತಿಯುಳ್ಳವರು ಮತ್ತು ಸ್ನೇಹಿ ಮನಸ್ಸಿನವರಾಗಿದ್ದಾರೆ.

25 ನೆಯ ತಾರೀಕು

25 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಮನಃಶಾಸ್ತ್ರ ಮತ್ತು ಆಧ್ಯಾತ್ಮ ತತ್ವಗಳಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ತಮ್ಮಷ್ಟಕ್ಕೇ ಏಕಾಂಗಿಯಾಗಿ ಇವರು ಯೋಚನೆಗಳನ್ನು ಮಾಡುವವರಾಗಿದ್ದು, ಜೀವನದಲ್ಲಿ ಏನಾದರೂ ಸಾಧನೆಯನ್ನು ನಡೆಸುವ ಗುರಿಯನ್ನು ಇರಿಸಿಕೊಂಡವರಾಗಿದ್ದಾರೆ.

26 ನೆಯ ತಾರೀಕು

26 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಉತ್ತಮ ನಾಯಕರು ಎಂದೆನೆಸಿದ್ದಾರೆ. ಸ್ನೇಹಪರರಾಗಿ ಇತರರನ್ನು ಮುನ್ನುಗ್ಗಿಸುವ ಛಾತಿ ಇವರಲ್ಲಿದೆ. ಇವರು ಹೆಚ್ಚು ಬಲಶಾಲಿ ಮನಸ್ಸಿನವರಾಗಿದ್ದು ಬೇರೆಯವರಿಂದ ಹೇಳಿಸದೆಯೇ ಕಾರ್ಯಪ್ರವೃತ್ತರಾಗುತ್ತಾರೆ. ವ್ಯವಹಾರದಲ್ಲಿ ಬುದ್ಧಿವಂತಿಕೆಯನ್ನು ಇವರು ಪಡೆದುಕೊಂಡಿದ್ದು ಸ್ವಯಂ - ಉದ್ಯೋಗದಲ್ಲಿ ನಂಬಿಕೆಯನ್ನು ಇವರು ಇರಿಸಿಕೊಂಡವರಾಗಿದ್ದಾರೆ.

27 ನೆಯ ತಾರೀಕು

27 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಕಲಾವಿದರು ಮತ್ತು ಹೆಚ್ಚು ಕ್ರಿಯಾತ್ಮಕ ಸ್ವಭಾವದವರಾಗಿದ್ದಾರೆ. ಹೋರಾಡುವ ಗುಣವನ್ನು ಇವರು ಹೊಂದಿದ್ದು ನ್ಯಾಯದ ಉತ್ತಮ ಬುದ್ಧಿವಂತಿಕೆಯನ್ನು ಇವರು ಪಡೆದುಕೊಂಡಿದ್ದಾರೆ.

28 ನೆಯ ತಾರೀಕು

28 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಹೆಚ್ಚು ಮನರಂಜನಾ ಗುಣವನ್ನು ಹೊಂದಿದವರಾಗಿದ್ದು ಪ್ರತಿಯೊಬ್ಬರ ಆಸಕ್ತಿಯ ಕೇಂದ್ರಬಿಂದು ಎಂದೆನಿಸಿದ್ದಾರೆ. ಇವರು ಕೊಡುಗೆಯಾಗಿ ಕೆಲವು ಉತ್ತಮ ಬುದ್ಧಿವಂತಿಕೆಯ ಗುಣಗಳನ್ನು ಪಡೆದುಕೊಂಡಿದ್ದಾರೆ.

29 ನೆಯ ತಾರೀಕು

29 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಆಳವಾಗಿ ಮತ್ತು ಸ್ಥಿತಪ್ರಜ್ಞರಾಗಿ ತಮ್ಮ ಕಾರ್ಯವನ್ನು ನಿರ್ವಹಿಸುವವರು ಎಂದೆನಿಸಿದ್ದಾರೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಪೂರ್ಣವಾಗಿ ಯಶಸ್ವಿಯಾಗಿ ಮುಗಿಸುವ ಏಕಾಗ್ರತೆ ಇವರದ್ದಾಗಿದೆ.

30 ನೆಯ ತಾರೀಕು

30 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಯಾವುದೇ ಕಾರ್ಯಕ್ಕೂ ಇಲ್ಲವೆಂದು ಹೇಳುವುದಿಲ್ಲ. ಅವರಿಗೆ ದೊರೆಯುವ ಯಾವುದೇ ಕೆಲಸವನ್ನು ಪೂರ್ಣವಾಗಿ ಸಿದ್ಧಹಸ್ತರಾಗಿ ನಿರ್ವಹಿಸುವ ಕಲೆ ಇವರಿಗೆ ಒಲಿದಿದೆ. ಇವರು ಸ್ಪರ್ಧಾತ್ಮಕ ಕೌಶಲ್ಯಗಳನ್ನು ಪಡೆದುಕೊಂಡವರಾಗಿದ್ದು ಮತ್ತು ಗುಂಪಿನಿಂದ ಎದ್ದುಗಾಣುವಂತಹ ಗುಣವನ್ನು ಮೈಗೂಡಿಸಿಕೊಂಡವರಾಗಿದ್ದಾರೆ.

31 ನೆಯ ತಾರೀಕು

31 ನೆಯ ತಾರೀಕು

ಈ ದಿನಾಂಕದಂದು ಜನಿಸಿದವರು ಹೆಚ್ಚು ಕ್ರಿಯಾಶೀಲರು ಮತ್ತು ಬುದ್ಧಿವಂತರು ಎಂದೆನಿಸಿದ್ದಾರೆ. ಇವರು ತಮ್ಮ ಕೆಲಸದಲ್ಲಿ ಹೆಚ್ಚು ನಿಷ್ಟೆಯುಳ್ಳವರಾಗಿದ್ದು ಉತ್ತಮ ಫಲಿತಾಂಶಗಳನ್ನು ಪಡೆಯುವಲ್ಲಿ ನಂಬಿಕೆಯನ್ನು ಹೊಂದಿದವರಾಗಿದ್ದಾರೆ.ನಿಮ್ಮ ಜನ್ಮದಿನಾಂಕ ಕೂಡ ಇದಕ್ಕೆ ತಕ್ಕಂತೆ ಇದೆಯೇ ಎಂಬುದನ್ನು ಕಂಡುಕೊಳ್ಳಿ ಮತ್ತು ನಿಮ್ಮ ಸ್ವಂತ ಅಭಿಪ್ರಾಯಗಳನ್ನು ನಮಗೆ ತಿಳಿಸಿ.

Read more about: life facts ಜೀವನ
English summary

Your Birthday Date Reveals This About You!

This article is all about the different dates of the month in which people are born in and how it influences the personality of that person.Check out on the different dates and how these can have an impact or how they define the personality of a person. Experts reveal as to how the day we are born reflects our character and personality. So, read on to know about the particular traits of each based on the dates.
X
Desktop Bottom Promotion