For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ ಯಾವ ಬೆರಳಿಗೆ 'ರತ್ನದ ಉಂಗುರ' ಧರಿಸಬೇಕು?

By Deepu
|

ರಾಶಿ ಹಾಗೂ ನಕ್ಷತ್ರಗಳನ್ನು ನಂಬುವವರಿಗೆ ಪ್ರತಿಯೊಂದು ರಾಶಿಗೆ ಒಂದು ಹರಳುಗಳು ಇರುತ್ತದೆ. ಆ ಹರಳುಗಳನ್ನು ಧರಿಸಿದರೆ ಒಳ್ಳೆಯದು ಎನ್ನುವ ಅಭಿಪ್ರಾಯ ಜ್ಯೋತಿಷಿಗಳಿಂದ ಬರುತ್ತದೆ. ಜ್ಯೋತಿಷ್ಯ: ಚಿನ್ನ, ಬೆಳ್ಳಿಗಿಂತಲೂ 'ತಾಮ್ರದ ಉಂಗುರ' ಶ್ರೇಷ್ಠ!

ಈ ಹರಳುಗಳು ದೇಹದಲ್ಲಿರುವ ನಕಾರಾತ್ಮಕ ಅಂಶಗಳನ್ನು ಹೊರಹಾಕಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಕೆಲವರು ತಮ್ಮ ರಾಶಿಗೆ ತಕ್ಕುದಾದ ಹರಳನ್ನು ಹಾಕಿಕೊಂಡು ಉಂಗುರ ಮಾಡಿಕೊಳ್ಳುತ್ತಾರೆ. ಉಂಗುರ ಯಾವತ್ತೂ ಉಂಗುರ ಬೆರಳಿಗೇ ಮೀಸಲು! ಏನಿದರ ರಹಸ್ಯ?
ಆದರೆ ಯಾವ ಬೆರಳಿಗೆ ಈ ಉಂಗುರವನ್ನು ಧರಿಸಬೇಕು ಎನ್ನುವ ಬಗ್ಗೆ ಅವರಿಗೆ ಸರಿಯಾಗಿ ತಿಳಿದಿರುವುದಿಲ್ಲ. ಇಂತಹ ಯಾವುದೇ ಸಮಸ್ಯೆಗಳು ಇದ್ದರೂ ಬೋಲ್ಡ್ ಸ್ಕೈ ಓದುತ್ತಾ ಇರಬೇಕು. ಯಾಕೆಂದರೆ ಬೋಲ್ಡ್ ಸ್ಕೈ ಮಾತ್ರ ಪ್ರತಿಯೊಂದು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಯಾವ ಬೆರಳಿಗೆ ಹರಳಿರುವ ಉಂಗುರ ಧರಿಸಬಹುದು ಎಂದು ಈ ಲೇಖನ ಓದುತ್ತಾ ನೀವು ತಿಳಿಯಿರಿ....

ಪುರುಷ ಹಾಗೂ ಮಹಿಳೆ

ಪುರುಷ ಹಾಗೂ ಮಹಿಳೆ

ಹಿಂದೂ ಧರ್ಮದ ಪ್ರಕಾರ ಭಗವಂತ ಶಿವನನ್ನು ಅರ್ಧನಾರೀಶ್ವರ ಎಂದು ಕರೆಯಲಾಗುತ್ತದೆ. ಶಿವನ ಬಲಭಾಗವು ಪುರುಷನಾಗಿದ್ದರೆ ಎಡ ಭಾಗವು ಮಹಿಳೆ(ಪಾರ್ವತಿ)ಯದ್ದಾಗಿದೆ.

ಪುರುಷ ಮತ್ತು ಮಹಿಳೆಯ ಪರಿಕಲ್ಪನೆ ಮುಂದುವರಿಯುವುದು

ಪುರುಷ ಮತ್ತು ಮಹಿಳೆಯ ಪರಿಕಲ್ಪನೆ ಮುಂದುವರಿಯುವುದು

ಮಹಿಳೆಯರು ಹಾಗೂ ಪುರುಷರು ವಜ್ರದ ಉಂಗುರವನ್ನು ಧರಿಸುವಂತಹ ನಿಯಮವು ತುಂಬಾ ಭಿನ್ನವಾಗಿದೆ. ಯಾಕೆಂದರೆ ಪುರುಷರು ಬಲದ ಕೈಗೆ ವಜ್ರದ ಉಂಗುರವನ್ನು ಧರಿಸಬೇಕು ಮತ್ತು ಮಹಿಳೆಯರು ಎಡದ ಕೈಗೆ ಧರಿಸಬೇಕು.

ಸರಿಯಾದ ಬೆರಳಿಗೆ ಯಾಕೆ ಧರಿಸಬೇಕು?

ಸರಿಯಾದ ಬೆರಳಿಗೆ ಯಾಕೆ ಧರಿಸಬೇಕು?

ಹರಳುಗಳು ಸಾಮಾನ್ಯವಾಗಿ ಭೂಮಿಗೆ ಸಂಬಂಧಪಟ್ಟದ್ದಾಗಿರುತ್ತದೆ. ಇದರಿಂದ ಸರಿಯಾದ ಬೆರಳಿಗೆ ಧರಿಸಿದ ಫಲಿತಾಂಶ ಸಿಗುವುದು. ಬೇರೆ ಬೆರಳಿಗೆ ಇದನ್ನು ಧರಿಸಿದರೆ ಆಗ ನಕಾರಾತ್ಮಕ ಫಲಿತಾಂಶ ಬರಬಹುದು. ಇದರಿಂದ ಹರಳಿನ ಉಂಗುರ ಧರಿಸುವಾಗ ಎಚ್ಚರ ಅಗತ್ಯ.

ತೋರು ಬೆರಳು

ತೋರು ಬೆರಳು

ತೋರು ಬೆರಳಿಗೆ ಉಂಗುರವನ್ನು ಧರಿಸುವುದರಿಂದ ಧರಿಸಿದ ವ್ಯಕ್ತಿಯ ಮಹಾತ್ವಾಕಾಂಕ್ಷೆ, ಅಧಿಕಾರ, ಸ್ವಾಭಿಮಾನ ಮತ್ತು ಮುನ್ನಡೆಯುವ ಗುಣವು ಸಿಗುವುದು. ಈ ಬೆರಳು ವ್ಯಕ್ತಿಯನ್ನು ಅಥವಾ ಅಹಂನ್ನು ಗುರುತಿಸುತ್ತದೆ.

ನಡು ಬೆರಳು

ನಡು ಬೆರಳು

ಹೆಚ್ಚಾಗಿ ನಡು ಬೆರಳನ್ನು ಶನಿಯ ಬೆರಳು ಎಂದು ಕರೆಯಲಾಗುತ್ತದೆ. ಇದಕ್ಕೆ ಕೂಡ ತನ್ನದೇ ಆದ ಲಕ್ಷಣಗಳು ಇದೆ. ಈ ಬೆರಳಿಗೆ ಉಂಗುರುವನ್ನು ಧರಿಸುವುದರಿಂದ ಜೀವನದಲ್ಲಿ ನಮ್ಮ ಪಾತ್ರ, ನಮ್ಮ ಸುತ್ತಲು ಹಾಗೂ ವೈಯಕ್ತಿಕ ಜಗತ್ತಿನ ಸುತ್ತಲಿನ ಪಾತ್ರವನ್ನು ಬಿಂಬಿಸುತ್ತದೆ.

ಉಂಗುರದ ಬೆರಳು

ಉಂಗುರದ ಬೆರಳು

ಈ ಬೆರಳು ವ್ಯಕ್ತಿಯ ಸೃಜನಶೀಲತೆ ಮತ್ತು ಕಲಾತ್ಮಕತೆಯನ್ನು ಬಿಂಬಿಸುತ್ತದೆ. ಆದರೆ ವೇದಗಳ ಪ್ರಕಾರ ವ್ಯಕ್ತಿಯ ರಾಶಿಯನ್ನು ನೋಡಿದ ಬಳಿಕ ಉಂಗುರ ಧರಿಸುವ ಬೆರಳನ್ನು ಸೂಚಿಸಬೇಕು. ಯಾಕೆಂದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಇರುತ್ತದೆ.

English summary

Which Finger Should You Wear Your Gemstone Ring On?

Here, in this article, we've shared some of the details as to which finger is considered the best for wearing a gemstone ring. Find out more about the aspects that play a major role in signifying the importance of placing a gemstone on the right finger...
X
Desktop Bottom Promotion