ವ್ಯಕ್ತಿಯ 'ಕೈ ಬರಹ' ಕೂಡ ಆತನ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ!

ವ್ಯಕ್ತಿಯ ನಡವಳಿಕೆಯ, ಮಾಡಿದ ಕೆಲಸಗಳ ಮೂಲಕವೇ ವ್ಯಕ್ತಿತ್ವ ಅರಿಯಲು ಸಾಧ್ಯ. ಆದರೆ ಇದಕ್ಕೆ ಸಮಯಾವಕಾಶದ ಅಗತ್ಯವಿದೆ. ಆದರೆ ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಸ್ಥೂಲವಾಗಿ ಅವಲೋಕಿಸಲು ಒಂದು ಸುಲಭ ವಿಧಾನವಿದೆ, ಅದೇ, ಅವರ ಕೈಬರಹ ಗಮನಿಸುವುದು

By: Arshad
Subscribe to Boldsky

ಲೇಖನಿ ಕತ್ತಿಗಿಂತ ಹರಿತ ಎಂಬ ನಾಣ್ಣುಡಿಗೆ ಬಹಳ ಆಳವಾದ ಮತ್ತು ವಿಶಾಲವಾದ ಅರ್ಥವಿದೆ. ಒಬ್ಬರು ತಮ್ಮ ವಿಚಾರವನ್ನು ಮಾತುಗಳಲ್ಲಿ ಹೇಳುವುದಕ್ಕಿಂತಲೂ ಸಮರ್ಥವಾಗಿ ತಮ್ಮ ಬರವಣಿಗೆಯಲ್ಲಿ ತೋರಿಸಿಕೊಳ್ಳುತ್ತಾರೆ. ಏಕೆಂದರೆ ಮಾತು ಆಡುವಾಗ ಮತ್ತು ಬರೆಯುವ ವೇಗದಲ್ಲಿ ಕನಿಷ್ಠ ಐದು ಪಟ್ಟು ವ್ಯತ್ಯಾಸವಿದೆ. ನಿಮ್ಮ ವಸ್ತುಗಳೇ ನಿಮ್ಮ ವ್ಯಕ್ತಿತ್ವ ಹೇಳುತ್ತದೆ, ಹುಷಾರ್!

ಅಂದರೆ ಬರೆಯುವಾಗ ನಮಗೆ ಯೋಚಿಸಲು ಹೆಚ್ಚು ಸಮಯ ಸಿಗುತ್ತದೆ. ಆಗ ವಿವೇಚನೆ ಮತ್ತು ಸರಿ ತಪ್ಪುಗಳನ್ನು ತಾಳೆಹಾಕಲು ಹೆಚ್ಚಿನ ಸಮಯಾವಕಾಶ ಹಾಗೂ ಹೆಚ್ಚು ನಿಖರವಾದ ಮಾಹಿತಿ ಹೊರಬರಲು ನೆರವಾಗುತ್ತದೆ. ಅಂತೆಯೇ ಕೈಬರವಣಿಗೆಯಲ್ಲಿಯೂ ಬರೆಯುವವರ ವ್ಯಕ್ತಿತ್ವ ಪ್ರಕಟವಾಗುತ್ತದೆ. ಹೇಗೆ ಎಂಬ ಕುತೂಹಲ ಮೂಡಿತೇ? ಮುಂದೆ ಓದಿ....  


ನಿಮ್ಮ ಕೈಬರಹದ ಅಕ್ಷರಗಳ ಗಾತ್ರ

ಚಿಕ್ಕವು: ನೀವು ಸೂಕ್ಷ್ಮಗ್ರಾಹಿಗಳು, ಏಕಾಗ್ರಚಿತ್ತರು ಮತ್ತು ನಿಮ್ಮ ಜೀವನದ ಗುರಿಗಳ ಬಗ್ಗೆ ಹೆಚ್ಚು ಗಮನ ನೀಡುವ ವ್ಯಕ್ತಿತ್ವ ಹೊಂದಿರುವಿರಿ.
ದೊಡ್ಡವು: ನೀವು ವಿಶಾಲ ಮನೋಭಾವದ ವ್ಯಕ್ತಿತ್ವದವರಾಗಿದ್ದು ನೀವು ಜೀವನದ ಪ್ರತಿ ಕ್ಷಣವನ್ನೂ ಆನಂದಿಸುವ ವ್ಯಕ್ತಿತ್ವ ಹೊಂದಿರುವಿರಿ. ನಿಮಗೆ ಇತರರು ನಿಮ್ಮನ್ನು ಗಮನಿಸಬೇಕೆಂಬ ಹಂಬಲ ಸದಾ ಇರುತ್ತದೆ.

ನಿಮ್ಮ ಕೈಬರಹಕ್ಕೆ ಬಳಸಲಾದ ಒತ್ತಡ

ಭಾರೀ ಒತ್ತಡ: ಒಂದು ವೇಳೆ ನೀವು ಪೆನ್ನನ್ನು ಹೆಚ್ಚಿನ ಒತ್ತಡದಿಂದ ಒತ್ತಿ ಬರೆಯುವ ವ್ಯಕ್ತಿಯಾಗಿದ್ದರೆ ನೀವು ಹೆಚ್ಚು ಭಾವಪರವಶೆಯುಳ್ಳ ವ್ಯಕ್ತಿಯಾಗಿದ್ದೀರಿ.
ಕಡಿಮೆ ಒತ್ತಡ: ನೀವು ಸುಲಭವಾಗಿ ಭಾವಪರವಶರಾಗುವವರಲ್ಲ.

ಎರಡು ಅಕ್ಷರಗಳ ನಡುವೆ ಬಿಡುವ ಸ್ಥಳ

ಕಡಿಮೆ: ನೀವು ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳುವ ಕಲೆಯನ್ನು ಕಲಿತಿಲ್ಲ
ಸರಿಯಾದ ಸ್ಥಳ: ನೀವು ನಿಮ್ಮ ಜೀವನದ ಎಲ್ಲಾ ವಿಷಯಗಳನ್ನು ಕ್ರಮಬದ್ಧವಾಗಿ ಕೈಗೊಳ್ಳುವ ವ್ಯಕ್ತಿತ್ವದವರಾಗಿದ್ದೀರಿ
ಹೆಚ್ಚು: ನೀವು ಸ್ವಾತಂತ್ರ್ಯವನ್ನು ಇಷ್ಟಪಡುವ ವ್ಯಕ್ತಿಯಾಗಿದ್ದು ನಿಮ್ಮ ಮೇಲೆ ಇತರರ ಯಜಮಾನಿಕೆಯನ್ನು ಸಹಿಸಲಾರಿರಿ. ನೀವು ನಿಮ್ಮ ಏಕಾಂತ ಮತ್ತು ನಿಮ್ಮ ಸ್ಥಳಾವಕಾಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೀರಿ.

ನಿಮ್ಮ ಅಕ್ಷರಗಳು ಓರೆಯಾಗಿರುವ ಬಗೆ

ಎಡಕ್ಕೆ: ನೀವು ಸಾಮಾನ್ಯವಾಗಿ ಏಕಾಂತಪ್ರಿಯರಾಗಿದ್ದು ಸ್ವತಂತ್ರರಾಗಿರಲು ಇಚ್ಛಿಸುತ್ತೀರಿ
ಬಲಕ್ಕೆ: ನೀವು ಸುತ್ತಮುತ್ತಲಿನವರೊಂದಿಗೆ ಸುಲಭವಾಗಿ ಬೆರೆಯುವ ವ್ಯಕ್ತಿತ್ವದವರಾಗಿದ್ದೀರಿ. ಆದರೆ ಪರಿಸ್ಥಿತಿಗನುಸಾರವಾಗಿ ನಿಮ್ಮ ಮನಃಸ್ಥಿತಿಯೂ ಬದಲಾಗುತ್ತದೆ.
ನೇರ: ನೀವು ನಿಮ್ಮ ಮನದ ಬೇಗುದಿಯನ್ನು ಸುಲಭವಾಗಿ ಎದುರಿಸುವ ವ್ಯಕ್ತಿತ್ವದವರಾಗಿದ್ದು ತಲ್ಲಣಗಳನ್ನು ಸುಲಭವಾಗಿ ಪ್ರಕಟಿಸುವುದಿಲ್ಲ. ದುಃಖ ಅಥವಾ ಕಷ್ಟಕರ ಸನ್ನಿವೇಶಗಳಲ್ಲಿ ನೀವು ವ್ಯತಿರಿಕ್ತವಾಗಿ ಯೋಚಿಸುವ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತೀರಿ.

ಖಾಲಿ ಹಾಳೆಯಲ್ಲಿ ಬರೆಯುವಾಗ ಎದುರಾಗುವ ಇಳಿಜಾರು

ಏರುಮುಖವಿದ್ದರೆ: ನೀವು ಸಾಮಾನ್ಯವಾಗಿ ಧನಾತ್ಮಕವಾಗಿ ಯೋಚಿಸುವ ವ್ಯಕ್ತಿಯಾಗಿದ್ದು ಕ್ರೀಡೆಯನ್ನು ಮತ್ತು ಸದಾ ಸಂತೋಷವಾಗಿರುವುದನ್ನು ಇಷ್ಟಪಡುತ್ತೀರಿ.
ಇಳಿಮುಖ: ಇದು ನಿಮ್ಮ ಜೀವನದಲ್ಲಿರುವ ದುಃಖ, ಹತಾಶೆ, ಬಳಲಿಕೆಯ ಸ್ಪಷ್ಟ ಸಂಕೇತವಾಗಿದೆ.
ಅಲೆಅಲೆಯಾಗಿದ್ದರೆ: ಹೀಗೆ ಬರೆಯುವವರ ಮನ ಚಂಚಲವಾಗಿದ್ದು ಯಾವುದೇ ವಿಷಯದಲ್ಲಿ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗಿರುತ್ತಾರೆ.

ಪಕ್ಕದ ಅಕ್ಷರಗಳನ್ನು ಹೇಗೆ ಕೂಡಿಸುತ್ತೀರಿ?

ಕನ್ನಡದಲ್ಲಿ ಅಕ್ಷರಗಳನ್ನು ಕೂಡಿಸಲು ಅಸಾಧ್ಯವಾದರೂ ಇಂಗ್ಲಿಷ್ ಅಕ್ಷರಗಳಿಗೆ ಸಾಧ್ಯ.
ಜೋಡಿಸಿದ್ದರೆ: ನೀವು ತಾರ್ಕಿಕವಾಗಿ ಹಾಗೂ ತರ್ಕಬದ್ದವಾಗಿ ಯೋಚಿಸುವ ವ್ಯಕ್ತಿಯಾಗಿದ್ದು ಈ ಮೂಲಕ ದಿಟ್ಟ ನಿರ್ಧಾರವನ್ನು ಕೈಗೊಳ್ಳಲು ಸಮರ್ಥರಿದ್ದೀರಿ.
ಬಿಡಿ ಅಕ್ಷರಗಳಿದ್ದರೆ: ನಿಮ್ಮ ಅಕ್ಷರಗಳು ಬಿಡಿಯಾಗಿದ್ದರೂ ಸ್ಪಷ್ಟವಾಗಿದ್ದರೆ ನೀವು ಬುದ್ದಿವಂತರೆಂದೂ ವಿಷಯಾಸಕ್ತರೆಂದೂ ತೀರ್ಮಾನಿಸಬಹುದು.

ನೀವು ಇಂಗ್ಲಿಷಿನ “i” ಅಕ್ಷರವನ್ನು ಹೇಗೆ ಬರೆಯುತ್ತೀರ್?

ವಿನೋದಕರವಾಗಿ: ಇದು ನೀವು ಜೀವನದಲ್ಲಿ ಸಂತೋಷವನ್ನು ಬಯಸುವವರೂ, ಕ್ರಿಯಾತ್ಮಕರೂ ಮತ್ತು ಇತರರು ಯೋಚಿಸದ ನಿಟ್ಟಿನಲ್ಲಿ ಯೋಚಿಸುವವರೂ ಆಗಿದ್ದೀರಿ.
ಅತಿ ಕಡಿಮೆ ಗೆರೆಯಲ್ಲಿ: ನೀವು ಅಸ್ತವ್ಯಸ್ತತೆಯನ್ನು ಸಹಿಸದ ವ್ಯಕ್ತಿಯಾಗಿದ್ದು ವಿಷಯದ ಎಲ್ಲಾ ವಿವರಗಳನ್ನು ಗಮನಿಸುವವರಾಗಿದ್ದೀರಿ.

ಇಂಗ್ಲಿಷಿನ “t” ಅಕ್ಷರದ ಅಡ್ಡಗೆರೆಯನ್ನು ಹೇಗೆ ಎಳೆಯುತ್ತೀರಿ?

ತುದಿಭಾಗದಲ್ಲಿ: ನೀವು ಆತ್ಮಾಭಿಮಾನವುಳ್ಳ ವ್ಯಕ್ತಿಯಾಗಿದ್ದು ನಿಮ್ಮ ಸುತ್ತಮುತ್ತಲಿನವರಿಗಿಂತ ಹೆಚ್ಚಿನದನ್ನು ಸಾಧಿಸಲು ಯತ್ನಿಸುತ್ತೀರಿ.
ಕೆಳಭಾಗದಲ್ಲಿ: ಇದು ನಿಮ್ಮಲ್ಲಿರುವ ಆತ್ಮವಿಶ್ವಾಸದ ಕೊರತೆಯನ್ನು ಬಿಂಬಿಸುತ್ತದೆ ಹಾಗೂ ನಿಮ್ಮ ಸಾಮರ್ಥ್ಯಕ್ಕಿಂತಲೂ ಕಡಿಮೆಯಾದ ಗುರಿ ಮತ್ತು ನಿರ್ಧಾರಗಳನ್ನು ಕೈಗೊಳ್ಳುವುದನ್ನು ಸೂಚಿಸುತ್ತದೆ.

 

Story first published: Tuesday, January 17, 2017, 16:21 [IST]
English summary

What Does Your Handwriting Reveal About You!

Check out as to how easily you can judge a person's personality and their character based on their writing style. We bet, most of the readers can easily relate to the descriptions provided below, as they seem to be quite accurate, at least when we checked. Read on.
Please Wait while comments are loading...
Subscribe Newsletter