For Quick Alerts
ALLOW NOTIFICATIONS  
For Daily Alerts

ಪಾಪ ಈ ಬಾಲಕ ಮಾಡಿದ ತಪ್ಪಾದರೂ ಏನು? ಯಾಕೆ ಇಂತಹ ಶಿಕ್ಷೆ

ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಈತನನ್ನು ಅನಿವಾರ್ಯವಾಗಿ ನಾಲ್ಕು ಜನರ ಮಧ್ಯೆ ಬರದಂತೆ ನಾಲ್ಕು ಗೋಡೆಗಳ ನಡುವೆ ಬಂಧಿಸಿಡಲಾಗಿದೆ. ಈತನೊಂದಿಗೆ ಯಾರೂ ಸ್ನೇಹ ಮಾಡಲೂ ಮುಂದೆ ಬರದೇ ಇರುವ ಕಾರಣ ಈತನಿಗೆ ಮನೆಯವರ ಹೊರತಾಗಿ ಬೇರೆ ಯಾರ ಪರಿಚಯವೂ ಇಲ್ಲ.

By Arshad
|

ನಮ್ಮ ಮುಖದ ಮೇಲೆ ಒಂದು ಪುಟ್ಟ ಮೊಡವೆ ಮೂಡಿದರೂ ಚಿಂತಾಕ್ರಾಂತರಾಗುವ ನಾವು ಈ ಬಾಲಕನ ಚಿತ್ರವನ್ನು ನೋಡಿದರೆ ಮನ ಕಲಕುತ್ತದೆ. ಏಕೆಂದರೆ ಅತ್ಯಪರೂಪದಲ್ಲಿ ಅತ್ಯಪರೂಪ ಪ್ರಕರಣದಲ್ಲಿ ಒಂದಾದ Neurofibromatosis ಎಂಬ ಹೆಸರಿನ ಈ ತೊಂದರೆಗೆ ಒಳಗಾದ ವ್ಯಕ್ತಿಯ ಮುಖ ಸಹಿತ ಇಡಿಯ ದೇಹದ ಚರ್ಮದ ಅಡಿಯಿಂದ ದೊಡ್ಡ ದೊಡ್ಡ ಗಡ್ಡೆಗಳು ಎದ್ದು ಆಕಾರವನ್ನೇ ವಿರೂಪಗೊಳಿಸುತ್ತವೆ. ವಿಚಿತ್ರ ಕಾಯಿಲೆ: ಬಾಲಕನ ಕಣ್ಣಿನಿಂದ ಬರುತ್ತಿದೆ ರಕ್ತ ಕಣ್ಣೀರು!

ಈ ತೊಂದರೆಗೆ ಒಳಗಾದ ಮಿಲನ್ ಎಂಬ ಬಾಲಕ ಬಿಹಾರ ರಾಜ್ಯಕ್ಕೆ ಸೇರಿದ್ದು ಈ ಗಂಟುಗಳಿಂದಾಗಿಯೇ ಸಾಮಾನ್ಯ ಜೀವನ ನಡೆಸಲು ಅಸಮರ್ಥನಾಗಿದ್ದಾನೆ. ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಈತನನ್ನು ಅನಿವಾರ್ಯವಾಗಿ ನಾಲ್ಕು ಜನರ ಮಧ್ಯೆ ಬರದಂತೆ ನಾಲ್ಕು ಗೋಡೆಗಳ ನಡುವೆ ಬಂಧಿಸಿಡಲಾಗಿದೆ. ಈ ಗ್ರಾಮದಲ್ಲಿದೆ ವಿಚಿತ್ರ ಕಾಯಿಲೆ-ಇಲ್ಲಿನ ಜನ ವಾರಗಟ್ಟಲೇ ಮಲಗಿರುತ್ತಾರೆ!!

ಈತನೊಂದಿಗೆ ಯಾರೂ ಸ್ನೇಹ ಮಾಡಲೂ ಮುಂದೆ ಬರದೇ ಇರುವ ಕಾರಣ ಈತನಿಗೆ ಮನೆಯವರ ಹೊರತಾಗಿ ಬೇರೆ ಯಾರ ಪರಿಚಯವೂ ಇಲ್ಲ. ಬನ್ನಿ, ಈ ಬಾಲಕನ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ....

ಈತನ ವಯಸ್ಸು ಈಗ ಹದಿನಾರು ವರ್ಷ

ಈತನ ವಯಸ್ಸು ಈಗ ಹದಿನಾರು ವರ್ಷ

ಬಿಹಾರದ ನವಾಡಾ ಜಿಲ್ಲೆಯ ನಿವಾಸಿಯಾಗಿರುವ ಮಿಲನ್ ಗೆ ಈಗ ಹದಿನಾರು ವರ್ಷವಾಗಿದ್ದು ಅನುವಂಶೀಯ ತೊಂದರೆಯ ಪರಿಣಾಮವಾಗಿ Neurofibromatosis ಎಂಬ ಕಾಯಿಲೆ ಈತನನ್ನು ಆವರಿಸಿದೆ. ಈ ಕಾಯಿಲೆಯಿಂದಾಗಿ ಇಡಿಯ ದೇಹದ ಚರ್ಮದಡಿಯಲ್ಲಿ ದೊಡ್ದ ದೊಡ್ಡ ಗಂಟುಗಳು ಮೂಡಿವೆ.

ಈತನ ರೂಪದ ಕಾರಣ ’ದೆವ್ವದ ಬಾಲಕ’ ಎಂಬ ವಿಶೇಷಣ ದೊರಕಿದೆ

ಈತನ ರೂಪದ ಕಾರಣ ’ದೆವ್ವದ ಬಾಲಕ’ ಎಂಬ ವಿಶೇಷಣ ದೊರಕಿದೆ

ಭಾರತದಲ್ಲಿ ಕೊಂಚವೇ ಐಬು ಕಂಡುಬಂದರೂ ಇದನ್ನೇ ದೊಡ್ಡದಾಗಿಸಿ ಅಡ್ಡಹೆಸರು ಇಟ್ಟುಬಿಡುವ ಪರಿಪಾಠವಿದೆ. ಹೀಗಿರುವಾಗ ನೋಡಲು ಭೀಕರವಾಗಿ ಕಾಣುವ ಈ ಬಾಲಕನನ್ನು ಬಿಟ್ಟಾರೆಯೇ? ಸ್ಥಳೀಯರು ಈತನನ್ನು ದೆವ್ವದ ಬಾಲಕ ಎಂದು ಕರೆದು ತಮ್ಮ ಮಕ್ಕಳನ್ನು ಈತನ ಹತ್ತಿರ ಸುಳಿಯಲೂ ಬಿಡುವುದಿಲ್ಲ. ಈತನ ನೋಟ ಇತರರಿಗೆ ಹೆದರಿಕೆ ಹುಟ್ಟಿಸುವಂತಿದ್ದು ಇದೇ ಕಾರಣಕ್ಕೆ ಈತ ಜನರ ನಡುವೆ ಬರುವುದೇ ಇಲ್ಲ.

ಈತನನ್ನು ನೋಡಿದ ಮಕ್ಕಳು ಓಡಿಹೋಗುತ್ತಾರೆ!

ಈತನನ್ನು ನೋಡಿದ ಮಕ್ಕಳು ಓಡಿಹೋಗುತ್ತಾರೆ!

ಈತನ ಮುಖದ ಗಡ್ಡೆಗಳು ಎಷ್ಟು ದೊಡ್ಡದಾಗಿವೆ ಎಂದರೆ ಮೂಗು, ಕಣ್ಣು, ತುಟಿಗಳೇ ಕಾಣದಂತೆ ಮುಚ್ಚಿಹೋಗಿವೆ. ಇದರಿಂದಾಗಿ ಈತ ಮಾತನಾಡಲು, ಸರಾಗವಾಗಿ ಉಸಿರಾಡಲು ಅಷ್ಟೇ ಏಕೆ, ಸರಿಯಾಗಿ ನೋಡಲೂ ಅಸಮರ್ಥನಾಗಿದ್ದಾನೆ. ಚಿಕ್ಕಂದಿನಲ್ಲಿ ಕೆಲದಿನ ಶಾಲೆಗೆ ಹೋಗಿದ್ದರೂ ಈತನ ಮುಖದ ಗಡ್ಡೆಗಳು ಚಿಕ್ಕದಿದ್ದರೂ ಭೀಕರತೆಯನ್ನು ಸೂಸುತ್ತಿದ್ದ ಕಾರಣ ಇತರ ಮಕ್ಕಳು ಈತನನ್ನು ನೋಡಲೂ ಭಯಪಟ್ಟು ಓಡಿಹೋಗುತ್ತಿದ್ದರು.

ಈತನ ಈ ಸ್ಥಿತಿ ಹುಟ್ಟುವಾಗಿನಿಂದಲೇನೂ ಇರಲಿಲ್ಲ

ಈತನ ಈ ಸ್ಥಿತಿ ಹುಟ್ಟುವಾಗಿನಿಂದಲೇನೂ ಇರಲಿಲ್ಲ

ಈ ಬಾಲಕ ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಸಹಜ ಆರೋಗ್ಯವನ್ನೇ ಹೊಂದಿದ್ದ. ಆದರೆ ಯಾವುದೋ ಚಿಕ್ಕ ಪುಟ್ಟ ಕಾಯಿಲೆಗೆ ಬಿಹಾರದ ನಕಲಿ ವೈದ್ಯನೊಬ್ಬ ನೀಡಿದ ತಪ್ಪು ತಪ್ಪಾದ ಔಷಧಿಯನ್ನು ಸೇವಿಸಿದ ಬಳಿಕ ಈತನಿಗೆ neurofibroma ಎಂಬ ಕಾಯಿಲೆ ಅಂಟಿಕೊಂಡಿತು. ಈತನ ಮುಖದ ಮೇಲೆ ಮೂಡಿದ್ದ ಮೊಡವೆಯೊಂದರ ಚಿಕಿತ್ಸೆಗಾಗಿ ನೀಡಿದ ಈ ತಪ್ಪು ಔಷಧಿ ಈತನ ಆನುವಂಶಿಕ ಸಂಕೇತ ಭಾಷೆಯನ್ನೇ ಬದಲಿಸಿ ದೇಹವಿಡೀ ಗಡ್ಡೆಗಳು ಮೂಡಲು ಆರಂಭವಾದವು.

ಈತನ ತಂದೆಯ ಸಂಪಾದನೆ ದಿನಕ್ಕೆ ಕೇವಲ 250ರೂ

ಈತನ ತಂದೆಯ ಸಂಪಾದನೆ ದಿನಕ್ಕೆ ಕೇವಲ 250ರೂ

ಬಿಹಾರದಲ್ಲಿ ದಿನಗೂಲಿಯಾಗಿ ದುಡಿಯುತ್ತಿರುವ ಈತನ ತಂದೆ ಗಳಿಸುವುದು ದಿನಕ್ಕೆ ಕೇವಲ ಇನ್ನೂರೈವತ್ತು ರುಪಾಯಿಯಾಗಿದ್ದು ಇವರ ಆಹಾರಕ್ಕೇ ತಾತ್ವಾರವಾಗಿರುವಾಗ ವೈದ್ಯಕೀಯ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಪರದಾಡುತ್ತಿದ್ದಾರೆ.

ಈ ವ್ಯಾಧಿಗೆ ಚಿಕಿತ್ಸೆಯಿಲ್ಲ

ಈ ವ್ಯಾಧಿಗೆ ಚಿಕಿತ್ಸೆಯಿಲ್ಲ

ಈತನ ಸ್ಥಿತಿಯನ್ನು ಪರಿಶೀಲಿಸಿದ ವೈದ್ಯರು Neurofibromatosis ತೊಂದರೆ ಅನುವಂಶಿಕವಾಗಿರುವ ಕಾರಣ ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಹಾಗೂ ವಿಶ್ವದ 33,000 ಜನರಲ್ಲೊಬ್ಬರಿಗೆ ಬಾಧಿಸಬಹುದು ಎಂದು ತಿಳಿಸುತ್ತಾರೆ. ಆದರೆ ಮಿಲನ್ ನ ಸ್ಥಿತಿ ಇದು ಹುಟ್ಟುವಾಗ ಬರದೇ ಬಾಹ್ಯ ಕಾರಣಗಳಿಂದ ಬಂದಿರುವ ಕಾರಣ ಇದು ಗುಣವಾಗಲೂಬಹುದು ಎಂಬ ಆಶಾವಾದವನ್ನು ವೈದ್ಯರು ಹೊಂದಿದ್ದಾರೆ.

ಚಿಕಿತ್ಸೆಗೆ ಅಗತ್ಯವಿರುವ ಮೊತ್ತ ಮೂರು ಲಕ್ಷ

ಚಿಕಿತ್ಸೆಗೆ ಅಗತ್ಯವಿರುವ ಮೊತ್ತ ಮೂರು ಲಕ್ಷ

ಈತನ ಸ್ಥಿತಿಯನ್ನು ಅಭ್ಯಸಿಸಿದ ತಜ್ಞರು ಈತನಿಗೆ ಸೂಕ್ತ ಚಿಕಿತ್ಸೆ ದೊರಕಿದರೆ ಹಂತಹಂತವಾಗಿ ಪೂರ್ಣವಾಗಿ ಗುಣವಾಗಬಹುದು, ಇದಕ್ಕಾಗಿ ಒಂದೆರಡು ಶಸ್ತ್ರಚಿಕಿತ್ಸೆಗಳನ್ನೂ ಮಾಡಬೇಕಾಗಿ ಬರಬಹುದು ಎಂದು ತಿಳಿಸಿದ್ದಾರೆ. ಆದರೆ ಇದಕ್ಕೆ ತಲಗುವ ವೆಚ್ಚ ರೂ. ಮೂರು ಲಕ್ಷದಷ್ಟು ಬರಬಹುದು ಎಂದು ತಿಳಿಸಿದ್ದಾರೆ. ಈ ನೆರವನ್ನು ನೀಡುವ ದಾನಿಗಳಿಗಾಗಿ ಈಗ ಎದುರುನೋಡುತ್ತಿದ್ದಾನೆ ಮಿಲನ್.AllImage Courtesy

English summary

Tragic Story Of A Boy Who Suffers From Tumours On His Face & Body

He is 16 years old and suffers from a rare genetic disorder due to which he is unable to lead a normal life. Instead of spending time with his friends in the school, he is bound to a 4-walled room, as nobody wishes to be his friend. Check out the story of this teen.
X
Desktop Bottom Promotion