For Quick Alerts
ALLOW NOTIFICATIONS  
For Daily Alerts

ಈತ ಕತ್ತರಿಯ ಬದಲು ಬೆಂಕಿಹಚ್ಚಿ ತಲೆಕೂದಲು ಕತ್ತರಿಸುತ್ತಾನೆ!

ಕತ್ತರಿಯ ಬದಲು ಬೆಂಕಿಯನ್ನು ಬಳಸಿ ಕೇಶ ಕತ್ತರಿಸುವ ಇದೊಂದು ವಿನೂತನ ವಿಧಾನ...ವಿಡಿಯೋ ವೈರಲ್ ಮುಂದೆ ಓದಿ..

By Manu
|

ಕೇಶವನ್ನು ಸುಂದರವಾಗಿ ಕಾಣುವಂತೆ ಕತ್ತರಿಸುವುದೇ ಕ್ಷೌರಿಕನ ಕೆಲಸ. ಇದಕ್ಕೆ ಅಗತ್ಯವಾಗಿ ಬೇಕಾಗಿರುವ ಸಲಕರಣೆಗಳೆಂದರೆ ಕತ್ತರಿ ಮತ್ತು ಬಾಚಣಿಗೆ. ಕ್ಷೌರಿಕನ ಕಲಾತ್ಮಕತೆಯಿಂದಲೇ ಸುಂದರ ಕೇಶವಿನ್ಯಾಸ ಮೂಡಲು ಸಾಧ್ಯ. ಕೇಶವಿನ್ಯಾಸ ಚೆನ್ನಾಗಿದೆ ಎಂದು ನೋಡಿದವರು ಹೇಳಿದರೆ ಮಾಡಿಸಿಕೊಂಡವನಿಗೇನೋ ಸಂತೋಷ, ತೃಪ್ತಿ. ಮಂಗಳವಾರ ಕೂದಲು ಕತ್ತರಿಸುವುದು ಅಪಶಕುನವೇ?

ಈಗ ಭಿನ್ನ ವಿಭಿನ್ನ ಕೇಶವಿನ್ಯಾಸಗಳು ಗಮನ ಸೆಳೆಯುತ್ತಿದ್ದು ಇತ್ತೀಚೆಗೆ ಕತ್ತರಿಯ ಬದಲು ಬೆಂಕಿಯನ್ನು ಬಳಸಿ ಕೂದಲನ್ನು ವಿನ್ಯಾಸಗೊಳಿಸುವ ನೂತನ ವಿಧಾನ ಬಂದಿದ್ದು ನೋಡುವವರ ಎದೆ ಝಲ್ಲೆನಿಸುತ್ತದೆ. ಅಷ್ಟಕ್ಕೂ ಈ ಕೇಶವಿನ್ಯಾಸ ಪ್ರಾರಂಭವಾಗಿದ್ದು ಖ್ಯಾತ ಪಟ್ಟಣವಾದ ಗಾಝಾದಲ್ಲಿ. ಯಾವಾಗ ಈ ಪರಿಯ ಕೇಶಮುಂಡನ ನಗರದಲ್ಲಿ ಲಭ್ಯವಿದೆ ಎಂದು ಗೊತ್ತಾಯಿತೋ, ಆಗಲೇ ನಗರದ ಯುವಕರು, ಹುಡುಗರೆಲ್ಲಾ ಈ ಕ್ಷೌರಿಕನ ಅಂಗಡಿಗೆ ಜಮಾಯಿಸಿಬಿಟ್ಟಿದ್ದಾರೆ. ಬನ್ನಿ, ಬೆಂಕಿಯಿಂದ ಈತ ಹೇಗೆ ಕ್ಷೌರ ಮಾಡ್ತುತಾನೆ ನೋಡೋಣ...

ಈ ತಂತ್ರಕ್ಕೇನು ಹೆಸರು?

ಈ ತಂತ್ರಕ್ಕೇನು ಹೆಸರು?

ಯಾವುದೇ ಹೊಸತು ಬಂದರೂ ಅದಕ್ಕೊಂದು ಹೆಸರಿಡಬೇಕಲ್ಲಾ, ನಮ್ಮಲ್ಲಾದರೆ ಅಗ್ನಿಕ್ಷೌರ ಎಂದು ಕರೆಯಬಹುದಾಗಿತ್ತು. ಆದರೆ ಇದಕ್ಕೆ ಇವರು ಬ್ಲೋ ಟಾರ್ಚ್ (Blowtorch) ಎಂದು ಹೆಸರಿಟ್ಟಿದ್ದಾರೆ.

ಗಾಝಾದಲ್ಲಿ ಬ್ಲೋಟಾರ್ಚ್ ನದ್ದೇ ಈಗ ಬೋಲ್ ಬಾಲಾ

ಗಾಝಾದಲ್ಲಿ ಬ್ಲೋಟಾರ್ಚ್ ನದ್ದೇ ಈಗ ಬೋಲ್ ಬಾಲಾ

ಈ ಪರಿಯ ಕ್ಷೌರ ಮಾಡಿಸಿಕೊಳ್ಳಲು ಯುವಕರೆಲ್ಲಾ ಮುಗಿಬಿದ್ದಿದ್ದು ಹೆಚ್ಚಿನವರು ಇದನ್ನು ಕೇವಲ ಕುತೂಹಲಕ್ಕಾಗಿ ಮಾಡಿಸಿಕೊಳ್ಳುತ್ತಿದ್ದಾರೆ. ಗಾಝಾ ಪಟ್ಟಣದಲ್ಲಿ ಈ ಪರಿಯ ಕ್ಷೌರ ಮಾಡಿಸಿಕೊಳ್ಳದಿರುವುದೇ ಒಂದು ಬಗೆಯ ಕೀಳರಿಮೆಯ ವಿಷಯವಾಗಿಬಿಟ್ಟಿದೆ.

ಬೆಂಕಿ ಹತ್ತಿಕೊಳ್ಳುವ ದ್ರವರೂಪದ ಲೇಪನ!

ಬೆಂಕಿ ಹತ್ತಿಕೊಳ್ಳುವ ದ್ರವರೂಪದ ಲೇಪನ!

ಕ್ಷೌರಿಕ ಈ ವಿಧಾನಕ್ಕಾಗಿ ಇದುವರೆಗೆ ಯಾವುದೆಂದು ಪ್ರಕಟಿಸದ ದ್ರವರೂಪದ ಲೇಪನವನ್ನು ಕೂದಲ ಮೇಲೆ ಚಿಮುಕಿಸುತ್ತಾನೆ. ಬಳಿಕ ಬಾಚಣಿಗೆಯಲ್ಲಿ ತನಗೆ ಬೇಕಿದ್ದಂತೆ ಬಾಚಿ ಬಳಿಕ ಲೈಟರ್ ಒಂದರಿಂದ ಅಗ್ನಿಸ್ಪರ್ಶ ಮಾಡುತ್ತಾನೆ. ನಂತರ ಬೆಂಕಿ ಕೂದಲನ್ನು ಹೆಚ್ಚು ಸುಡಲು ಬಿಡದೇ ಚಕಚಕನೇ ಬಾಚಣಿಗೆ ಕತ್ತರಿ ಬಳಸಿ ಕತ್ತರಿಸುತ್ತಾನೆ.

ಈ ಪರಿಯ ಅಪಾಯಕ್ಕೆ ಏನು ಪ್ರೇರಣೆ?

ಈ ಪರಿಯ ಅಪಾಯಕ್ಕೆ ಏನು ಪ್ರೇರಣೆ?

ಗಾಝಾ ಪಟ್ಟಣದ ಕ್ಷೌರಿಕರು ವಿಶ್ವದ ಇತರ ವೃತ್ತಿಪರ ಕ್ಷೌರಿಕರಿಗೇನೂ ಕಡಿಮೆಯಿಲ್ಲ ಎಂದು ಜಗತ್ತಿಗೆ ತೋರಿಸುವುದೇ ಇದರ ಉದ್ದೇಶ ಎಂದು ಈ ನಾಪಿತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬನ್ನಿ, ಈ ಅಗ್ನಿ ಕ್ಷೌರದ ಪರಿ ಹೇಗಿರುತ್ತದೆ ಎಂಬುದನ್ನು ಕೆಳಗಿನ ವೀಡಿಯೋ ಮೂಲಕ ನೋಡೋಣ:

English summary

This Is The Most Unique Way To Get A Haircut!

Getting a haircut done is like getting a completely new look. This not only boosts our self-confidence, but it also gives us a new positive energy about our ownself. There is a new technique of getting a haircut done and it is not done using a pair of scissors. This form of haircutting not only raises the concern for safety, but also for the hair!
X
Desktop Bottom Promotion